For Quick Alerts
ALLOW NOTIFICATIONS  
For Daily Alerts

1BHK ಮನೆಗೆ ಕೂಲ್ ಇಂಟೀರಿಯರ್ ಐಡಿಯಾ

|

ಬೆಂಗಳೂರಿನಂತಹ ನಗರದಲ್ಲಿ 1BHK ಫ್ಲಾಟ್ ಕೊಂಡುಕೊಳ್ಳುವುದು ಮಧ್ಯಮ ವರ್ಗದವರಿಗೆ ದೊಡ್ಡ ಸವಾಲು. ಫ್ಲ್ಯಾಟ್ ಕೊಂಡು ಕೊಳ್ಳುವುದಿರಲಿ, ಬಾಡಿಗೆಗೆ ಹೋಗುವುದಾದರೂ ಕಮ್ಮಿಯೆಂದರೂ 7-8 ಸಾವಿರ ಬಾಡಿಗೆ ಪ್ರತೀ ತಿಂಗಳು ನೀಡಬೇಕಾಗುತ್ತದೆ. ಬಾಡಿಗೆ ಮನೆಯಾಗಿರಲಿ, ಸ್ವಂತದ್ದಾಗಿರಲಿ 1 BHK ಮನೆಯಲ್ಲಿ ಇದ್ದೇವೆ ಅಂದರೆ ಮನೆಗೆ ಕರ್ಚಿ, ಟೇಬಲ್ ಕೊಳ್ಳುವಾಗ ಕೊಳ್ಳಲು ಯೋಚಿಸುತ್ತೇವೆ!

ನಮಗೆ ಯಾವುದೋ ಫರ್ನಿಚರ್ ಇಷ್ಟವಾಯಿತೆಂದು ಕೊಂಡು ತರಲು ಸಾಧ್ಯವಿಲ್ಲ, ಏಕೆಂದರೆ ಮನೆಯಲ್ಲಿ ಸ್ಥಳಾವಕಾಶ ಕಮ್ಮಿಯಿರುವುದರಿಂದ ಯಾವುದೇ ಪೀಠೋಪಕರಣಗಳನ್ನು ಮನೆಗೆ ತರುವಾಗ ಬೇಕೆ, ಬೇಡ್ವೆ ಅಂತ 10 ಸಲ ಯೋಚಿಸಬೇಕಾಗುತ್ತದೆ, ತಿರುಗಾಡಲು ಸ್ಥಳವಿಲ್ಲದಂತೆ ಮನೆಯಲ್ಲಿ ಸಾಮಾನು ಜೋಡಿಸಿದರೆ ಮನೆ ಆಕರ್ಷಕವಾಗಿ ಕಾಣುವುದು.

1BHk ಮನೆ ಹೇಗಿರಬೇಕೆಂದರೆ ನೋಡಲು ತುಂಬಾ ಸಾಮಾನು ಇರುವಂತೆ ಇರಬೇಕು, ಆದರೆ ಸ್ಥಳಾವಕಾಶವೂ ಇರಬೇಕು, ಅದಕ್ಕಾಗಿ ಕೆಲ ಕೂಲ್ ಐಡಿಯಾ ನೀಡಿದ್ದೇವೆ ನೋಡಿ:

Cool Interior Ideas For A 1BHK Flat

ಮಿನಿಮಮ್ ಪೀಠೋಪಕರಣಗಳನ್ನು ಕೊಳ್ಳಿ
ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಪೀಠೋಪಕರಣಗಳನ್ನು ಕೊಳ್ಳಿ. ಪೀಠೋಪಕರಣಗಳನ್ನು ಇಕ್ಕಟ್ಟಾಗಿ ಜೋಡಿಸಬೇಡಿ. ತುಂಬಾ ಹತ್ತಿರ-ಹತ್ತಿರ ಜೋಡಿಸುವುದರಿಂದ ಮನೆಯಲ್ಲಿ ಸ್ಥಳಾವಕಾಶ ಇಲ್ಲದಂತೆ ತೋರುವುದು.

ಮಡಚುವ ಪೀಠೋಪಕರಣಗಳು
ಪೋಲ್ಡ್ ಮಾಡಿ ಇಡುವ ಪೀಠೋಪಕರಣಗಳನ್ನು ಕೊಳ್ಳುವುದು ಒಳ್ಳೆಯದು, ಇದರಿಂದ ಸ್ಥಳಾವಕಾಶವಾಗುವುದು. ಅಗತ್ಯ ಬಿದ್ದಾಗ ಬಳಸಿ, ಇಲ್ಲದಿದ್ದಾಗ ಮಡಚಿ ಇಡಬಹುದು.

ಅಲ್ಲದೆ ಟೇಬಲ್ ರೌಂಡ್ ರೀತಿಯಲ್ಲಿ ಇರುವ ಬದಲು ಆಯಾತಾಕಾರದಲ್ಲಿ ಇರುವುದು ಒಳ್ಳೆಯದು.

ಗಾಳಿಯಾಡುವಂತೆ ಇರಲಿ
ಮನೆ ಚಿಕ್ಕದಾದರೂ ಚೆನ್ನಾಗಿ ಗಾಳಿ, ಬೆಳಕು ಆಡುವಂತೆ ಇರಬೇಕು, ಇಲ್ಲದಿದ್ದರೆ ಮನೆ ತುಂಬಾ ಇಕ್ಕಟ್ಟಾಗಿ ಅನಿಸುವುದು.

ತುಂಬಾ ಕಬೋರ್ಡ್ ಗಳಿರಲಿ
1BHK ಮನೆಯ ಅಡುಗೆ ಮನೆ , ಬೆಡ್ ರೂಂ ಮತ್ತು ಹಾಲ್ ನಲ್ಲಿ ತುಂಬಾ ಕಬೋರ್ಡ್ ಗಳಿರಬೇಕು. ಕಬೋರ್ಡ್ ಗಳಿದ್ದರೆ ತುಂಬಾ ಸಾಮಾನು ಅದರಲ್ಲಿ ಇಡಿಸುವುದರಿಂದ ಓಡಾಡಲು ಸ್ಥಳಾವಕಾಶ ಹೆಚ್ಚು ದೊರೆಯುವುದು.

ಕಿಟಕಿಗೆ ಆಕರ್ಷಕವಾದ ಕರ್ಟನ್ ಹಾಕಿ, ಇಷ್ಟು ಮಾಡಿದರೆ ಮನೆ ಆಕರ್ಷಕವಾಗಿ ಕಾಣುವುದು.

English summary

Cool Interior Ideas For A 1BHK Flat

Decorating a small home is a much more challenging task. You have to take many difficulties but necessary decisions while doing the interior decoration. But with these interior ideas for 1BHK homes, you should be able to do up your house in style.
X
Desktop Bottom Promotion