For Quick Alerts
ALLOW NOTIFICATIONS  
For Daily Alerts

ಚಾಕು ಸ್ವಚ್ಛಗೊಳಿಸಲು ಕೆಲ ಸಲಹೆಗಳು

|

ದಿನಪೂರ್ತಿ ನಾವು ಚಾಕುವನ್ನು ಉಪಯೋಗಿಸುತ್ತೇವೆ. ಅಡುಗೆಮನೆಯಲ್ಲಿ ವಿವಿಧ ಬಗೆಯ ಚಾಕುಗಳನ್ನು ನಾವು ಬಳಸುತ್ತೇವೆ. ಚಾಕುವನ್ನು ಹೆಚ್ಚಾಗಿ ಬಳಸುವುದರಿಂದ ಅದರ ಮೇಲೆ ಬ್ಯಾಕ್ಟೀರಿಯಾ ಮತ್ತಿತರ ಕೀಟಾಣುಗಳ ಹಾವಳಿಯನ್ನು ಕಾಣಬಹುದು. ತುಕ್ಕು ಹಿಡಿಯುವುದು ಕೂಡ ಸಾಮಾನ್ಯವಾದ ಸಮಸ್ಯೆ.

ಚಾಕು ಬಳಸದೆ ತುಂಬ ಕಾಲ ಇಟ್ಟುಬಿಟ್ಟರೆ ಕೂಡ ತುಕ್ಕು ಹಿಡಿಯುವ ಸಂಭವವಿರುತ್ತದೆ. ಆದ್ದರಿಂದ ಚಾಕುವನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಇದರೊಂದಿಗೆ ಚಾಕುವಿನ ಹರಿತ ತುಕ್ಕು ಹಿಡಿದು ಹಾಳಾಗದಂತೆ ಕಾಪಾಡಿಕೊಳ್ಳಬೇಕಾದದ್ದು ಸಹ ಮುಖ್ಯ. ಪ್ರತಿ ಸಾರಿ ಚಾಕು ಬಳಸಿದ ನಂತರ ನಾವದನ್ನು ಸ್ವಚ್ಛ ಮಾಡುತ್ತೇವೆ. ಆದರೆ ಚಾಕುವಿನ ಹಿಡಿಗಳ ಸಮೀಪ ತುದಿಗಳಲ್ಲಿ ಬ್ಯಾಕ್ಟೀರಿಯಾ ಮತ್ತಿತರ ಕೀಟಾಣುಗಳು ಶೇಖರವಾಗುವುದರ ಬಗ್ಗೆ ನಮ್ಮಲ್ಲಿ ಹಲವರಿಗೆ ತಿಳಿದಿರುವುದಿಲ್ಲ. ಆದ್ದರಿಂದ ಚಾಕು ಸ್ವಚ್ಛತೆಗೆ ನಾವಿಲ್ಲಿ ಕೆಲ ಟಿಪ್ಸ್ ಗಳನ್ನು ನೀಡಿದ್ದೇವೆ

Best Ways To Clean A Kitchen Knife
ನೋಡಿ.

ಚಾಕುವನ್ನು ಹೀಗೆ ಸ್ವಚ್ಛ ಮಾಡಿ:

ಸೋಪು: ಪಾತ್ರೆ ತೊಳೆಯಲು ಬಳಸುವ ಸೋಪಿನಲ್ಲಿ ಚಾಕುವನ್ನು ಚೆನ್ನಾಗಿ ಉಜ್ಜಿ ಬಿಸಿ ನೀರಿನಲ್ಲಿ ತೊಳೆಯಿರಿ. ಬಿಸಿ ನೀರು ಬ್ಯಾಕ್ಟೀರಿಯಾ ಕೊಲ್ಲಲು ಹೆಚ್ಚು ಪರಿಣಾಮಕಾರಿ. ತಣ್ಣಗಿನ ನೀರು ಬ್ಯಾಕ್ಟೀರಿಯಾವನ್ನು ತೊಲಗಿಸದೆ ಇರಬಹುದು.

ಕುದಿಸುವಿಕೆ: ಒಂದು ವೇಳೆ ಚಾಕುವಿಗೆ ಪ್ಲಾಸ್ಟಿಕ್ ನ ಹಿಡಿ ಇಲ್ಲದಿದ್ದರೆ ಚಾಕುವನ್ನು ಕೆಲ ಕಾಲ ಬಿಸಿನೀರಿನಲ್ಲಿ ಕುದಿಸಬಹುದು. ಇದು ಕೀಟಾಣುಗಳನ್ನು ಕೊಲ್ಲುವುದಲ್ಲದೆ ಕಲೆಗಳನ್ನು ಕೂಡ ತೊಲಗಿಸುತ್ತದೆ. ಬಿಸಿ ನೀರು ಚಾಕುವಿಗೆ ಅಂಟಿರಬಹುದಾದ ಜಿಡ್ಡು, ಎಣ್ಣೆ ಇದನ್ನು ಕೂಡ ನಿವಾರಿಸುತ್ತದೆ. ಈರುಳ್ಳಿ ಅಥವ ಬೆಳ್ಳುಳ್ಳಿಯಂತಹ ವಾಸನೆ ಹೆಚ್ಚಿರುವ ತರಕಾರಿಗಳನ್ನು ಕತ್ತರಿಸಿದ್ದರೆ ಬಿಸಿ ನೀರಿನಿಂದ ತೊಳೆದಾಗ ವಾಸನೆ ಹೊರಟು ಹೋಗುತ್ತದೆ. ಆದರೆ ಬಿಸಿ ನೀರಿನಲ್ಲಿ ತೊಳೆದ ತಕ್ಷಣ ತಣ್ಣೀರಿನಲ್ಲಿ ಚಾಕುವನ್ನು ತೊಳೆಯಬೇಡಿ ಇದರಿಂದ ಚಾಕು ಹಾಳಾಗುವ ಸಾಧ್ಯತೆ ಇರುತ್ತದೆ.

ನಿಂಬೆ ಹಣ್ಣು: ತುಂಬಾ ಗಲೀಜಾಗಿರುವ ಚಾಕುವನ್ನು ನೀವು ನಿಂಬೆ ರಸದಿಂದ ಸ್ವಚ್ಛಗೊಳಿಸಬಹುದು. ನಿಂಬೆ ರಸದಲ್ಲಿ ಸಿಟ್ರಸ್ ಅಂಶವಿರುತ್ತದೆಯಾದ್ದರಿಂದ ಅದು ಸ್ವಚ್ಛತೆಗೆ ನೆರವಾಗುತ್ತದೆ. ಆದರೆ ಹೆಚ್ಚು ಸಮಯದವರೆಗೆ ನಿಂಬೆ ರಸದಲ್ಲೇ ಸ್ವಚ್ಛಗೊಳಿಸುವುದು ಒಳ್ಳೆಯದಲ್ಲ. ತಣ್ಣೀರಿನಲ್ಲಿ ತೊಳೆಯಿರಿ. ಬಿಸಿ ನೀರಿಗೆ ಕೆಲವು ಹನಿ ನಿಂಬೆರಸ ಹಾಕಿ ಕೂಡ ಚಾಕು ಸ್ವಚ್ಛಗೊಳಿಸಬಹುದು.

ವಿನಿಗರ್: ಕುದಿಯುವ ನೀರಿಗೆ ಒಂದೆರಡು ಹನಿ ವಿನಿಗರ್ ಹಾಕಿ ಚಾಕುವನ್ನು ತೊಳೆಯಬಹುದು. ಒಂದು ನಿಮಿಷ ಈ ನೀರಿನಲ್ಲಿ ಕುದಿಸಿದ ನಂತರ ಹಳೆಯ ಟೂತ್ ಬ್ರಷ್ ಬಳಸಿ ಮೆದುಗೊಂಡ ಕೊಳೆಯನ್ನು ಉಜ್ಜಿ ತೆಗೆಯಿರಿ. ಮತ್ತೆ ನೀರಿನಲ್ಲಿ ತೊಳೆದು ಒಣಗಿಸಿಡಿ.

ಇವು ಅಡುಗೆಮನೆಯಲ್ಲಿ ಬಳಸುವ ಚಾಕುವನ್ನು ಸ್ವಚ್ಛಗೊಳಿಸುವ ಕೆಲ ಉಪಾಯಗಳು. ಆದರೆ ಹೇಗೆ ಸ್ವಚ್ಛ ಮಾಡಿದರೂ ಚಾಕುವನ್ನು ಒಣಗಿಸಿಡುವುದನ್ನು ಮರೆಯದಿರಿ. ನಂತರ ಸ್ವಲ್ಪ ಎಣ್ಣೆಯನ್ನು ಅದಕ್ಕೆ ಹಚ್ಚಿಡಿ. ಹೆಚ್ಚಾದ ಎಣ್ಣೆಯನ್ನು ಪೇಪರ್ ಬಳಸಿ ಒರೆಸಿಬಿಡಿ.

English summary

Best Ways To Clean A Kitchen Knife

Knife is used throughout the day. There are different types of knives that are used in the kitchen. As knife is used extensively, it becomes prone to bacteria an germs. Even rust is one of the common problems seen in old knives.
Story first published: Saturday, November 23, 2013, 17:02 [IST]
X
Desktop Bottom Promotion