For Quick Alerts
ALLOW NOTIFICATIONS  
For Daily Alerts

ಸಣ್ಣ ಕೊಠಡಿಯನ್ನು ದೊಡ್ಡದಾಗಿಸುವ 5 ಉಪಾಯಗಳು

|

ತಮ್ಮ ಬಜೆಟ್ ಗಳಿಗೆ ತಕ್ಕಂತೆ, ವಾಸಿಸಲು ಅನುಕೂಲವಾಗಿರುವಂತಹ ಸುಂದರವಾದ ಮನೆಯೊಂದನ್ನು ಹೊಂದುವುದು ಸಾಮಾನ್ಯವಾಗಿ ಎಲ್ಲರ ಕನಸು. ಅದಕ್ಕಾಗಿ ಹಗಲು ರಾತ್ರಿ ಕಷ್ಟ ಪಟ್ಟು ಕೆಲಸಮಾಡುವವರಿದ್ದಾರೆ. ಆದರೆ ಇಂತಹ ಕನಸುಗಳು ಮೆಲೇರುತ್ತಿದ್ದಂತೆ ಸ್ಥಿರಾಸ್ತಿಯ ಬೆಲೆಯೂ ಗಗನಕ್ಕೇರುತ್ತಿರುವುದರಿಂದ ದೊಡ್ದದಾದ ಮನೆಯನ್ನು ಕೊಂಡುಕೊಳ್ಳುವುದು ಸುಲಭದ ಮಾತಲ್ಲ. ಹಾಗಂತ ಮನೆಯ ಬಗೆಗೆ ಕನಸುಕಾಣುವುದನ್ನೇ ನಿಲ್ಲಿಸಲು ಸಾಧ್ಯವೇ?

ದೊಡ್ಡದಾದ ಮನೆಯನ್ನು ಕೊಂಡುಕೊಳ್ಳುವುದು ಕಷ್ಟವಾದರೂ ನಿಮ್ಮಲ್ಲಿ ಒಂದು ಸಣ್ಣ ಕೊಠಡಿಯಿದ್ದರೆ ಅದನ್ನು ದೊಡ್ಡದಾಗಿ ಕಾಣುವಂತೆ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ಅದು ಹೇಗೆ ಸಾಧ್ಯ ಎನ್ನುತ್ತೀರಾ? ಇಲ್ಲಿದೆ ಕೆಲವು ಟ್ರೀಕ್ಸ್ !

5 Tips to Make a Small Room Look Bigger

1. ಹೆಚ್ಚುವರಿ ಜಾಗವನ್ನು ಬಳಸಿಕೊಳ್ಳಿ

ನಿಮ್ಮ ಕೊಠಡಿಯ ಪಕ್ಕದಲ್ಲಿ ಲಾಬಿ ಅಥವಾ ಹೆಚ್ಚುವರಿ ಜಾಗವಿದ್ದರೆ ಅದನ್ನು ಬಳಸಿಕೊಳ್ಳಿ. ಈ ಎರಡು ಪ್ರದೇಶಗಳ ನಡುವೆ ಇರುವ ಗೋಡೆಯನ್ನು ತೆಗೆದರೆ ನಿಮ್ಮ ಕೊಠಡಿ ಮೊದಲಿರುವುದಕ್ಕಿಂತ ದೊಡ್ಡದಾಗಿ ಕಾಣಬಹುದು. ಅಥವಾ ಈ ಜಾಗಗಳ ನಡುವೆ ಕರ್ಟನ್ ಬಳಸಿ ನಿಮಗೆ ಬೇಕೆಂದಾಗ ಖಾಲಿ ಜಾಗವನ್ನು ಉಪಯೋಗಿಸಿಕೊಳ್ಳಬಹುದು.

2. ಸೂಕ್ತ ಪೀಠೋಪಕರಣಗಳ ಆಯ್ಕೆ

ನಿಮ್ಮ ರೂಮಿಗೆ ಅತ್ಯಂತ ವೆಚ್ಚದಾಯಕವಾದ ಬೃಹತ್ ಪೀಠೋಪಕರಣಗಳನ್ನು ತಂದು ಇರುವ ಜಾಗವನ್ನು ಇಲ್ಲದಾಗಿಸಿ ನಿಮ್ಮ ರೂಮ್ ನ್ನು ಇನ್ನಷ್ಟು ಚಿಕ್ಕದಾಗಿಸುವುದಕ್ಕಿಂತ, ಕೊಠಡಿಗೆ ಹೊಂದುವಂತಹ ಚಿಕ್ಕದಾದ ಕ್ರಿಯಾತ್ಮಕ ಪೀಠೋಪಕರಣಗಳನ್ನು ತರುವುದು ಅತ್ಯಂತ ಸೂಕ್ತ. ಇದರಿಂದ ನಿಮ್ಮ ಕೊಠಡಿ ಸುಂದರವಾಗಿ ಕಾಣುವುದಲ್ಲದೆ ದೊಡ್ದದಾಗಿ ಕೂಡ ಗೋಚರಿಸುತ್ತದೆ. ಅದರಲ್ಲೂ ಮಡಚಿಡಬಹುದಾದಂತಹ (ಫೋಲ್ಡೆಬಲ್) ಮಲ್ಟಿಪರ್ಪಸ್ ಪೀಠೋಪಕರಣಗಳನ್ನು ಬಳಸುವುದು ಇನ್ನೂ ಉತ್ತಮ.

3. ಚಲ್ಲಾಪಿಲ್ಲಿಯಾದ ವಸ್ತುಗಳು

ನೀವು ಹೊಸ ಕೊಠಡಿಗೆ ಹೋಗಿ ಕೆಲವು ವರ್ಷಗಳ ನಂತರ ಅಲ್ಲಿನ ಪ್ರತಿಯೊಂದು ಭಾಗವೂ ನಿಮಗೆ ಚಿರಪರಿಚಿತವಾಗಿರುತ್ತವೆ. ಆದರೆ ನಿಮ್ಮ ಕೊಠಡಿ ಮೊದಲಿನಂತೆಯೇ ಇದೆಯೇ ಎಂಬುದನ್ನು ಗಮನಿಸಿ. ನಿಮ್ಮ ಕೊಠಡಿ ಮೊದಲಿನಂತೆ ದೊಡ್ಡದಾಗಿ ಕಾಣಲು ಆಗಾಗ ಬೇಡವಾದ ಕಸವನ್ನು ಮಸ್ತುಗಳನ್ನು ತೆಗೆದುಹಾಕಿ. ಯಾವ ಕೊಠಡಿಯಲ್ಲಿ ಕಸಗಳು ಅನಗತ್ಯ ವಸ್ತುಗಳಿಲ್ಲವೋ ಆ ಕೊಠಡಿ ದೊಡ್ಡದಾಗಿಯೇ ಕಾಣಿಸುತ್ತದೆ.

4. ಬಣ್ಣಗಳ ಆಯ್ಕೆ

ಬಣ್ಣಗಳು ಹಲವು. ನೀವು ನಿಮ್ಮ ಕೊಠಡಿಗೆ ಆಯ್ಕೆಮಾಡಿಕೊಂಡ ಬಣ್ಣ ಅಂತಿಮವಾಗಿ ನಿಮ್ಮ ಕೊಠಡಿ ದೊಡ್ಡದೋ ಚಿಕ್ಕದೋ ಎಂಬುದನ್ನು ನಿರ್ಧರಿಸುತ್ತದೆ. ದಟ್ಟ ಛಾಯೆಯುಳ್ಳ ಬಣ್ಣಗಳನ್ನು ಸ್ವಂದನ ಎನ್ನುವ ಅರ್ಥದಲ್ಲಿ ಬಳಸಬಹುದು. ಆದರೆ ಸಾಕಷ್ಟು ಗಾಳಿಯ ಕೊರತೆಯ ಕಾರಣ ಇದು ನಿಮ್ಮ ಕೊಠಡಿಯನ್ನು ಸಣ್ಣದಾಗಿ ಕಾಣುವಂತೆ ಮಾಡಬಹುದು. ತೆಳುವಾದ ಬಣ್ಣವನ್ನು ಬಳಸಿದರೆ ಕೊಠಡಿ ಸಾಕಷ್ಟು ದೊಡ್ಡದಾಗಿ ಕಾಣಿಸುತ್ತದೆ.

5. ಕನ್ನಡಿಗಳು ಮತ್ತು ದೀಪಗಳು

ಆಳವಾದ ಪರಿಣಾಮವನ್ನು ಕಾಣಲು ದೊಡ್ಡದಾದ ಕನ್ನಡಿಗಳನ್ನು ಕೊಠಡಿಯಲ್ಲಿಡಿ. ಕನ್ನಡಿಯು ನೈಸರ್ಗಿಕ ಹಾಗೂ ಕೃತಕ ಬೆಳಕನ್ನು ಪ್ರತಿಬಿಂಬಿಸುವುದರಿಂದ ಕೊಠಡಿ ಸಹಜವಾಗಿಯೇ ಅದರಲ್ಲೂ ಹಗಲಿನಲ್ಲಿ ದೊಡ್ಡದಾಗಿ ಕಾಣಿಸುತ್ತದೆ. ನೈಸರ್ಗಿಕ ಬೆಳಕು ಹೆಚ್ಚಾಗಿ ಕೊಠಡಿಯನ್ನು ಪ್ರವೇಶಿಸುವಂತಿದ್ದರೆ ಹೆಚ್ಚು ಒಳ್ಳೆಯದು. ಇಲ್ಲವಾದಲ್ಲಿ ಕೃತಕ ಬೆಳಕನ್ನೇ ಆಯಕಟ್ಟಿನ ಸ್ಥಳದಲ್ಲಿ ನಿರ್ಮಿಸಿ. ಇದು ಕೊಠಡಿಯನ್ನು ದೊಡ್ಡದಾಗಿ ಕಾಣುವಂತೆ ಮಾಡಬಲ್ಲದು.

ಹಲವಾರು ಘಟಕಗಳು ಮತ್ತು ಅಂಶಗಳನ್ನು ಸೇರಿಸುವುದರಿಂದ ಅಥವಾ ತೆಗೆಯುವುದರಿಂದ ನಿಮ್ಮಕೊಠಡಿಗೆ ಅಪೇಕ್ಷಿತ ಮೆರುಗನ್ನು ನೀಡಬಹುದು. ಕೊಠಡಿಯ ಗಾತ್ರ ಚಿಕ್ಕದಾಗಿದ್ದರೂ ಪರವಾಗಿಲ್ಲ, ಆದರೆ ಕೊಠಡಿಯನ್ನು ಇರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಇಷ್ಟವಾಗುವಂತೆ ಕ್ರಿಯಾತ್ಮಕವಾಗಿ ರೂಪಿಸಿ. ಇದು ನಿಮಗೆ ಮಾತ್ರವಲ್ಲದೇ ಬೇರೆಯವರನ್ನೂ ಬೆರಗುಗೊಳಿಸುತ್ತದೆ!

English summary

5 Tips to Make a Small Room Look Bigger

If you have accommodated yourself in a small room but wish to be in a bigger one, you can actually do so by following the tips mentioned here to make small room bigger.
Story first published: Wednesday, July 17, 2013, 17:11 [IST]
X
Desktop Bottom Promotion