For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ 15 ಬಗೆಯ ಕಲೆ ಹೋಗಿಸಲು ಇಲ್ಲಿದೆ ಉಪಾಯ

By Super
|

ಗೋಡೆಯ ಮೇಲೆ ಮೂಡಿದ ಕಲೆಗಳು, ಕಟ್ಟಿಕೊಂಡ ಕಾಲುವೆಗಳು, ಕೊಳೆಗಟ್ಟಿದ ಬಚ್ಚಲು ಮನೆಯ ಬಾಗಿಲುಗಳು ಇತ್ಯಾದಿಗಳೆಲ್ಲವು ಸೇರಿ ನಿಮ್ಮ ಮನೆಯನ್ನು ದನದ ಕೊಟ್ಟಿಗೆಗಿಂತ ಕಡೆಯನ್ನಾಗಿ ಮಾಡುತ್ತವೆ. ಇವುಗಳೆಲ್ಲವನ್ನು ಹೋಗಲಾಡಿಸುವುದರ ಜೊತೆಗೆ ನಿಮ್ಮ ಮನೆಯಲ್ಲಿ ಪರಿಶುಭ್ರತೆ ಹಾಗು ಆರೋಗ್ಯಕಾರಿ ಪರಿಸರವನ್ನು ನಿರ್ಮಾಣ ಮಾಡುವುದು ಸ್ವಲ್ಪ ಕಷ್ಟವೇ. ಇಲ್ಲಿ ನಿಮಗಾಗಿ ಕೆಲವು ಮನೆಯಲ್ಲಿಯೇ ದೊರೆಯುವ ವಸ್ತುಗಳಿಂದ ಮನೆಯಲ್ಲಿ ಹೇಗೆ ಶುಭ್ರತೆಯನ್ನು ತರಬಹುದು ಎಂದು ನಾವು ತಿಳಿಸಿದ್ದೇವೆ ಓದಿ ನೋಡಿ.

ನಿಮ್ಮ ಮನೆಯಲ್ಲಿ ಪರಿಶುಭ್ರತೆಯನ್ನು ತಕ್ಷಣ ತರಲು ಇರುವ 14 ಉಪಾಯಗಳು

ಬಬ್ಬಲ್ ಗಮ್ ತೆಗೆಯಲು

ಬಬ್ಬಲ್ ಗಮ್ ತೆಗೆಯಲು

ಮನೆಯಲ್ಲಿ ಮಕ್ಕಳಿದ್ದರೆ ಬಬ್ಬಲ್ ಗಮ್ ತಿನ್ನುವುದು ಸಾಮಾನ್ಯ. ಹಾಗೆಯೇ ತಿಂದು ಮನೆಯಲ್ಲಿ ಗೋಡೆ ಅಥವಾ ನೆಲಕ್ಕೆ ಅಂಟಿಸಿ ಬಿಟ್ಟಿರುತ್ತಾರೆ. ಇದನ್ನು ತೆಗೆಯಲು ಸ್ವಲ್ಪ ಕಡಲೆ ಕಾಯಿ ಎಣ್ಣೆಯನ್ನು ಗಮ್ ಇರುವ ಭಾಗದಲ್ಲಿ ಹಚ್ಚಿ ನಂತರ ತೊಳೆಯಿರಿ. ಕಡಲೆ ಕಾಯಿ ಎಣ್ಣೆ ಈ ಗಮ್ ಅನ್ನು ಸುಲಭವಾಗಿ ತೆಗೆದು ಹಾಕುತ್ತದೆ.

ಪೀಠೋಪಕರಣದ ಮೇಲೆ ಇರುವ ಮೇಣವನ್ನು ತೆಗೆಯಲು

ಪೀಠೋಪಕರಣದ ಮೇಲೆ ಇರುವ ಮೇಣವನ್ನು ತೆಗೆಯಲು

ಮೇಣವನ್ನು ಹೇರ್ ಡ್ರೈಯರ್ ನಿಂದ ಬಿಸಿ ಮಾಡಿ ಮೆತ್ತಗೆ ಮಾಡಿ. ಪೇಪರ್ ಟವೆಲ್‍ನಿಂದ ಇದನ್ನು ತೆಗೆದು, ವಿನೆಗರ್ ಮತ್ತು ನೀರಿನ ಮಿಶ್ರಣದಿಂದ ಸ್ವಚ್ಛಗೊಳಿಸಿ.

ಕ್ರೋಮ್ ವಸ್ತುಗಳಿಗೆ ಹೊಳಪು ನೀಡಲು

ಕ್ರೋಮ್ ವಸ್ತುಗಳಿಗೆ ಹೊಳಪು ನೀಡಲು

ನಿಮ್ಮ ಮನೆಯ ಅಡುಗೆ ಮನೆ ಮತ್ತು ಶೌಚಾಲಯಗಳಲ್ಲಿ ಹೊಳಪು ಕಳೆದುಕೊಂಡ ಕ್ರೋಮ್ ಪ್ಲೇಟೆಡ್ ವಸ್ತುಗಳಿದ್ದರೆ ಬೇಸರಗೊಳ್ಳಬೇಡಿ. ಅದಕ್ಕೆ ನಿಮ್ಮ ಮನೆಯಲ್ಲಿ ಫ್ಯಾಬ್ರಿಕ್ ಸಾಫ್ಟನರ್ ಶೀಟ್ ಇದ್ದರೆ ಬಳಸಿ. ಈ ಫ್ಯಾಬ್ರಿಕ್ ಸಾಫ್ಟನರುಗಳು ಎಲ್ಲಾ ಪ್ರಾವಿಷನ್ ಸ್ಟೋರುಗಳಲ್ಲಿ ದೊರೆಯುತ್ತವೆ. ಇಲ್ಲವಾದಲ್ಲಿ ಒಂದು ನಿಂಬೆ ಹಣ್ಣಿನ ತುಂಡನ್ನು ತೆಗೆದುಕೊಂಡು ಅದನ್ನು ಈ ಕ್ರೋಮ್ ಪ್ಲೇಟೆಡ್ ವಸ್ತುಗಳ ಮೇಲೆ ಉಜ್ಜಿ. ಈಗ ನೋಡಿ ಆ ವಸ್ತುಗಳು ಫಳಫಳ ಹೊಳೆಯುತ್ತಿರುತ್ತದೆ.

ಡೈನ್ ಕಟ್ಟಿಕೊಂಡರೆ

ಡೈನ್ ಕಟ್ಟಿಕೊಂಡರೆ

ಅಡುಗೆ ಮನೆಯಲ್ಲಿನ ಸಿಂಕ್‍ನಲ್ಲಿರುವ ನೀರು ಬಸಿದು ಹೋಗಲು ಡ್ರೈನ್ ಪೈಪ್ ಇಟ್ಟಿರುತ್ತೇವೆ. ಆದರೆ ಕಾಲಾನುಕ್ರಮದಲ್ಲಿ ಏನಾದರು ಜಿಡ್ಡು ಅಥವಾ ಡಿಶ್ ವಾಶ್ ಪೌಡರ್ ಸೇರಿಕೊಂಡು ಇದು ಕಟ್ಟಿಕೊಳ್ಳುತ್ತದೆ. ಆಗ ಒಂದು ಕಪ್ ಉಪ್ಪು ಹಾಗು ಒಂದು ಕಪ್ ಬೇಕಿಂಗ್ ಸೋಡಾವನ್ನು ಆ ಪೈಪ್ ಒಳಗೆ ಹಾಕಿ, ನಂತರ ಒಂದು ಲೋಟ ಕುದಿಯುವ ನೀರನ್ನು ಅದಕ್ಕೆ ಸುರಿಯಿರಿ. ಈಗ ನೋಡಿ ಡ್ರೈನ್ ಪೈಪ್‍ನಲ್ಲಿ ನೀರು ಸರಾಗವಾಗಿ ಹರಿದುಹೋಗುತ್ತದೆ.

ಗೋಡೆಯಲ್ಲಿ ಉಂಟಾದ ಕ್ರಯನ್ ಕಲೆಗಳು

ಗೋಡೆಯಲ್ಲಿ ಉಂಟಾದ ಕ್ರಯನ್ ಕಲೆಗಳು

ಮನೆಯಲ್ಲಿ ಮಕ್ಕಳಿದ್ದರೆ ನಿಮಗೆ ಗೊತ್ತೇ ಇರುತ್ತದೆ. ಅವರ ಬರೆಯುವ ಉತ್ಸಾಹಕ್ಕೆ ಮೊದಲು ಸಿಕ್ಕುವುದು ಮನೆಯ ಗೋಡೆಗಳು ಎಂದು. ಮಕ್ಕಳು ಗೋಡೆಗಳಲ್ಲಿ ಕಂಡದ್ದನ್ನು ಗೀಚುತ್ತಿರುತ್ತಾರೆ. ಗೀಚಿದರೆ ಗೀಚಲಿ ಬಿಡಿ ಎಷ್ಟಾದರು ಅವರು ನಿಮ್ಮ ಮಕ್ಕಳಲ್ಲವೇ? ಅವರು ಬರೆದರೆ ಅದನ್ನು ಅಳಿಸಲು ಒಂದು ಎರೆಸರ್ ಬಳಸಿ ಅಳಿಸಿಹಾಕಿ ಅಷ್ಟೇ. ಇಲ್ಲವಾದಲ್ಲಿ ಒಂದು ಬ್ಲೋ ಡ್ರೈಯರ್ ತೆಗೆದುಕೊಂಡು ಅದನ್ನು ಕಲೆಗಳು ಇರುವ ಜಾಗದಲ್ಲಿ ಹತ್ತು ನಿಮಿಷ ಹಿಡಿದುಕೊಳ್ಳಿ. ನಂತರ ಅದನ್ನು ಒಣಗಿದ ಟವೆಲಿನಿಂದ ಒರೆಸಿ ಅಷ್ಟೇ. ಕಲೆಗಳು ಮಾಯವಾಗುತ್ತವೆ.

ಗಾಜಿನ ಶವರ್ ಬಾಗಿಲುಗಳು

ಗಾಜಿನ ಶವರ್ ಬಾಗಿಲುಗಳು

ನಿಮ್ಮ ಶವರಿನ ಬಾಗಿಲುಗಳು ಫಳ ಫಳ ಎಂದು ಹೊಳೆಯುತ್ತಿರಬೇಕೆ? ಹಾಗಾದರೆ ಒಂದು ಸ್ಪಾಂಜ್ ತೆಗೆದುಕೊಂಡು, ಸ್ವಲ್ಪ ವಿನೆಗರ್ ನಲ್ಲಿ ಅದ್ದಿ. ಅದನ್ನು ಬಾಗಿಲಿನ ಮೇಲೆ ಉಜ್ಜಿ. ಈಗ ನೋಡಿ ಆ ಬಾಗಿಲು ಶುಭ್ರವಾಗಿ ಫಳ ಫಳ ಎಂದು ಹೊಳೆಯುತ್ತಿರುತ್ತದೆ.

ಶಿಲೀಂಧ್ರಗಳನ್ನು ತೆಗೆದುಹಾಕಲು

ಶಿಲೀಂಧ್ರಗಳನ್ನು ತೆಗೆದುಹಾಕಲು

ನಿಮ್ಮ ಮನೆಯ ಶೌಚಾಲಯದಲ್ಲಿ ಕಟ್ಟಿಕೊಂಡಿರುವ ಶಿಲೀಂಧ್ರಗಳನ್ನು ತೆಗೆದುಹಾಕಲು ಹೈಡ್ರೋಜನ್ ಪೆರಾಕ್ಸಯಿಡ್ ಬಳಸಿ. ಇದನ್ನು ನೇರವಾಗಿ ಶಿಲೀಂಧ್ರ ಇರುವ ಭಾಗಕ್ಕೆ ಲೇಪಿಸಿ. ಇದು ತಕ್ಷಣ ಅವುಗಳನ್ನು ಮೃದುಗೊಳ್ಸಿಸುತ್ತದೆ. ನಂತರ ಅವುಗಳನ್ನು ಒಂದು ಬಟ್ಟೆಯಿಂದ ಒರೆಸಿ.

ಲ್ಯಾಂಪ್ ಶೇಡ್ಸ್

ಲ್ಯಾಂಪ್ ಶೇಡ್ಸ್

ನಿಮ್ಮ ಮನೆಯಲ್ಲಿರುವ ಲ್ಯಾಂಪ್ ಶೇಡ್‍ಗಳೇನಾದರು ಮಂಕಾಗಿದ್ದರೆ ರೋಲಿಂಗ್ ಲಿಂಟ್ ರಿಮೂವರ್ ಬಳಸಿ.

ಬಿಗಿಯಾದ ಜಾಡಿಗಳ ಮುಚ್ಚಳವನ್ನು ತೆಗೆಯಲು

ಬಿಗಿಯಾದ ಜಾಡಿಗಳ ಮುಚ್ಚಳವನ್ನು ತೆಗೆಯಲು

ಲೇಟೆಕ್ಸ್ ನಿಂದ ಮಾಡಲ್ಪಟ್ಟ ಕೈಗವಸುಗಳನ್ನು ಬಳಸಿ ಜಾಡಿಗಳ ಮುಚ್ಚಳ ತೆಗೆಯಿರಿ. ಇದರಿಂದ ನಿಮ್ಮ ಕೈ ಜಾರುವುದಿಲ್ಲ.

ಕತ್ತರಿಗಳನ್ನು ಹರಿತಗೊಳಿಸಲು

ಕತ್ತರಿಗಳನ್ನು ಹರಿತಗೊಳಿಸಲು

ನಿಮ್ಮ ಮನೆಯಲ್ಲಿರುವ ಮೊಂಡಾದ ಕತ್ತರಿಗಳನ್ನು ತೆಗೆದುಕೊಂಡು ಮೂರು ಪದರಗಳಾಗಿ ಜೋಡಿಸಿದ ಟಿನ್ ಫಾಯಿಲ್( ತಗಡು) ಅನ್ನು 10-12 ಬಾರಿ ಕತ್ತರಿಸಿ. ನಂತರ ಒಂದು ಕಾಗದವನ್ನು ಕತ್ತರಿಸಿ ಕತ್ತರಿಯ ಹರಿತವನ್ನು ಪರೀಕ್ಷಿಸಿ.

ಕಪ್ಪುಕಲೆಗಳು

ಕಪ್ಪುಕಲೆಗಳು

ನಿಮ್ಮ ಮನೆಯಲ್ಲಿನ ಸಿಂಕ್‍ನಲ್ಲಿ ತುಕ್ಕು, ಮುಂತಾದ ಕಲೆಗಳು ಇದ್ದಲ್ಲಿ, ಬೊರಾಕ್ಸ್ ಮತ್ತು ನಿಂಬೆರಸ ಬೆರೆಸಿ ಮಾಡಿದ ಫೇಸ್ಟ್ ನಿಂದ ಉಜ್ಜಿ. ಕಲೆ ಚಿಕ್ಕದಿದ್ದರೆ ನಿಂಬೆ ಹಣ್ಣಿನ ಚೂರು ಉಜ್ಜಿದರೆ ಹೋಗುತ್ತದೆ.

ಸ್ಟೈನ್ ಲೆಸ್ ಸ್ಟೀಲ್ ಸಿಂಕ್‍ಗಳು

ಸ್ಟೈನ್ ಲೆಸ್ ಸ್ಟೀಲ್ ಸಿಂಕ್‍ಗಳು

ಸ್ಟೈನ್ ಲೆಸ್ ಸ್ಟೀಲ್ ಸಿಂಕ್‍ಗಳು ಫಳ ಫಳ ಹೊಳೆಯಲು ಸ್ವಲ್ಪ ಹಿಟ್ಟನ್ನು ಅದರ ಮೇಲೆ ಹಾಕಿ ಉಜ್ಜಿ ಸಾಕು.

ಬೆಳ್ಳಿಗೆ ಮೆರಗು ನೀಡಲು

ಬೆಳ್ಳಿಗೆ ಮೆರಗು ನೀಡಲು

ಬೆಳ್ಳಿಯನ್ನು ಸ್ವಚ್ಛಗೊಳಿಸಲು ಬೆಳ್ಳನೆಯ ಟೂಥ್ ಪೇಸ್ಟ್ ಬಳಸಿ.ಟೂಥ್ ಫೇಸ್ಟನ್ನು ಸುಮ್ಮನೆ ಅದರ ಮೇಲೆ ಉಜ್ಜಿ ನಂತರ ತೊಳೆಯಿರಿ. ಈಗ ನೋಡಿ ಬೆಳ್ಳಿ ಹೊಳೆಯುತ್ತಿರುತ್ತದೆ.

ರೆಫ್ರಿಜಿರೇಟರ್ ದುರ್ವಾಸನೆ ಬೀರುತ್ತಿದ್ದರೆ

ರೆಫ್ರಿಜಿರೇಟರ್ ದುರ್ವಾಸನೆ ಬೀರುತ್ತಿದ್ದರೆ

ನಿಮ್ಮ ಫ್ರಿಡ್ಜ್ ಯಾವಾಗಲು ತಾಜಾತನದಿಂದ ಕೂಡಿರಬೇಕಾದಲ್ಲಿ , ಒಂದು ಹತ್ತಿಯ ಉಂಡೆಯಲ್ಲಿ ವೇನಿಲ್ಲಾ ಫ್ಲೇವರ್ ಅನ್ನು ನಿಮ್ಮ ಫ್ರಿಡ್ಜಿನ ಹಿಂಭಾಗದಲ್ಲಿ ಇಡಿ. ಇದು ನಿಮ್ಮ ಫ್ರಿಡ್ಜಿನ ದುರ್ವಾಸನೆಯನ್ನು ಹೀರಿಕೊಳ್ಳುತ್ತದೆ.

ನಿಮ್ಮ ಟವೆಲ್‍ಗಳು ಹೊಸತರಂತೆ ಕಾಣಲು

ನಿಮ್ಮ ಟವೆಲ್‍ಗಳು ಹೊಸತರಂತೆ ಕಾಣಲು

ನಿಮ್ಮ ಟವೆಲ್‍ಗಳನ್ನು ಒಗೆಯುವಾಗ ನೀರಿಗೆ ಒಂದು ಕಪ್ ಉಪ್ಪನ್ನು ಬೆರೆಸಿ. ಈ ಉಪ್ಪು ನಿಮ್ಮ ಟವೆಲಿನಲ್ಲಿರುವ ಬಣ್ಣವು ಕುಂದದಂತೆ ಕಾಪಾಡುತ್ತದೆ.

English summary

14 Quick Tips To Detox Your Home

Stains on the wall, clogged drains, dirty shower doors, etc., can make your house seem like a pig sty. But getting things in order and making your house look its best isn't as tough as it seems. Here are some simple household tips that will make your job easier.
Story first published: Wednesday, August 21, 2013, 17:04 [IST]
X
Desktop Bottom Promotion