For Quick Alerts
ALLOW NOTIFICATIONS  
For Daily Alerts

ಉಪ್ಪು ಬಳಸಿ ಜೀನ್ಸ್ ಬಟ್ಟೆಯ ರಕ್ಷಣೆ ಹೇಗೆ?

|
Tips To Wash Jeans Using Salt
ಜೀನ್ಸ್ ಬಟ್ಟೆಗಳನ್ನು ಆಗಾಗ ಒಗೆಯಬಾರದು. ಆಗಾಗ ಒಗೆದರೆ ಬಣ್ಣ ಮಾಸುವುದು ಮತ್ತು ಸಡಿಲವಾದಂತೆ ಆಗುವುದು. ಅಲ್ಲದೆ ಅಪರೂಪಕ್ಕೆ ಒಗೆಯುವುದಾದರೆ ಬಿಸಿ ನೀರಿನಲ್ಲಿ ಹಾಕಿ ಒಗೆಯಬಾರದು, ತುಂಬಾ ಹೊತ್ತು ಸೋಪು ನೀರಿನಲಲ್ಲಿ ನೆನೆಹಾಕಬಾರದು.

ಜೀನ್ಸ್ ಒಗೆಯಲು ಕೆಲವೊಂದು ಉಪಾಯಗಳಿವೆ, ಅವುಗಳನ್ನು ಪಾಲಿಸಿದರೆ ಜೀನ್ಸ್ ಬಟ್ಟೆಯ ಬಣ್ಣ ಮಾಸದಂತೆ ಕಾಪಾಡಬಹುದು. ಆ ಉಪಾಯಗಳಲ್ಲಿ ಒಂದು ಉಪ್ಪನ್ನು ಬಳಸಿ ಜೀನ್ಸ್ ಬಟ್ಟೆ ತೊಳೆಯುವುದು! ಉಪ್ಪನ್ನು ಜೀನ್ಸ್ ತೊಳೆಯಲು ಬಳಸುವುದು ಹೇಗೆ ಎಂದು ಇಲ್ಲಿ ಹೇಳಲಾಗಿದೆ ನೋಡಿ:

1. ಬಕೇಟ್ ನಲ್ಲಿ ನೀರು ತುಂಬಿಸಿ ಆ ಉಪ್ಪು ನೀರಿನಲ್ಲಿ ಜೀನ್ಸ್ ಅನ್ನು ಒಂದು ಗಂಟೆ ನೆನಹಾಕಬೇಕು. ನಂತರ ಜೀನ್ಸ್ ಅನ್ನು ಕೈಯಿಂದ ತೊಳೆಯುವುದು ಒಳ್ಳೆಯದು. ಬ್ರೆಷ್ ಹಾಕಿ ಉಜ್ಜಬಾರದು. ವಾಷಿಂಗ್ ಮೆಷಿನ್ ನಲ್ಲಿ ಹಾಕಿಯೂ ತೊಳೆಯಬಹುದು.

2. ನಂತರ ಅದನ್ನು ಮೆಷಿನ್ ನಲ್ಲಿ ಒಣಗಿಸಬಹುದು ಅಥವಾ ಸೂರ್ಯನ ಬಿಸಿಲಿಗೆ ಹಾಕಿ ಒಣಗಿಸಬಹುದು. ನಂತರ ಅದನ್ನು ಇಸ್ತ್ರಿ ಹಾಕಿ ತೆಗೆದಿಡಬೇಕು.

3. ಜೀನ್ಸ್ ನೆನೆಹಾಕುವ ನೀರಿಗೆ ಉಪ್ಪಿನ ಜೊತೆ ಸ್ವಲ್ಪ ವಿನಿಗರ್ ಹಾಕಿದರೆ ತುಂಬಾ ಒಳ್ಳೆಯದು.

4. ಜೀನ್ಸ್ ಅನ್ನು ಕಲ್ಲಿನಲ್ಲಿ ಬಡೆಯುವುದು ಅಥವಾ ಬ್ಲೀಚ್ ಬಳಸಿ ತೊಳೆಯುವುದಾಗಲಿ ಮಾಡಬಾರದು.

ಜೀನ್ಸ್ ಬಟ್ಟೆಗಳನ್ನು ಒಗೆಯುವಾಗ ಈ ವಿಧಾನಗಳನ್ನು ಪಾಲಸಿದ್ದೇ ಆದರೆ ಜೀನ್ಸ್ ಬಟ್ಟೆ ತುಂಬಾ ಕಾಲ ಬಾಳಿಕೆ ಬರುತ್ತದೆ. ಜೀನ್ಸ್ ಬಟ್ಟೆಯ ಬಣ್ಣ ಮಸುಕಗಾದಂತೆ ತಡೆಯಲು ಬೇರೆ ಬೇರೆಯೇನಾದರೂ ಉಪಾಯಗಳು ನಿಮ್ಮಲ್ಲಿದ್ದರೆ ನಮ್ಮ ಜೊತೆ ಹಂಚಿಕೊಳ್ಳಿ.

English summary

Tips To Wash Jeans Using Salt | Home Improvenment | ಉಪ್ಪು ಹಾಕಿ ಜೀನ್ಸ್ ತೊಳೆಯುವ ವಿಧಾನ | ಮನೆ ನಿರ್ವಹಣೆ

Washing new jeans in salt is the best method to set the dye and also prevent the colour from fading away. This protects the jeans from fading and damaging.
X
Desktop Bottom Promotion