ಬ್ರೆಡ್ ಬೂಸ್ಟು ಹಿಡಿಯದಂತೆ ತಡೆಯುವುದು ಹೇಗೆ?

By:
Subscribe to Boldsky

How To Prevent Bread Mold
ಮನೆಯಲ್ಲಿ ಅಡುಗೆ ಮಾಡಲು ಪುರುಸೊತ್ತು ಇಲ್ಲ ಅಂದರೆ 2 ಬ್ರೆಡ್ ತಿಂದು ಹೋಗುತ್ತೇವೆ, ಅದೇ ಸ್ವಲ್ಪ ಟೈಮ್ ಇದ್ದರೆ ರುಚಿಕರವಾದ ಸ್ಯಾಂಡ್ ವಿಚ್ ಅಥವಾ ಬ್ರೆಡ್ ಆಮ್ಲೇಟ್ ಅಂತ ಮಾಡಿ ತಿನ್ನುತ್ತೇವೆ. ಆದರೆ ಈ ಬ್ರೆಡ್ ಪ್ಯಾಕೆಟ್ ಅನ್ನು ಸರಿಯಾಗಿ ಇಡದಿದ್ದರೆ ಎರಡೇ ದಿನದಲ್ಲಿ ಬೂಸ್ಟು ಹಿಡಿಯುತ್ತದೆ.

ಒಂದು ವೇಳೆ ಮನೆಯಲ್ಲಿ ಬ್ರೆಡ್ ತಂದಿಟ್ಟು ಅದರಿಂದ ಒಂದು ಅಥವಾ ಎರಡು ಪೀಸ್ ತಿಂದು ನಂತರ ಹಾಗೇ 2-3 ದಿನ ಇಟ್ಟರೆ ಮತ್ತೆ ಆ ಬ್ರೆಡ್ ಪ್ಯಾಕೆಟ್ ಬಿಸಾಡಬೇಕಾಗುತ್ತದೆ, ಅದರಲ್ಲೂ ತಂಪು ಹವಾಮಾನವಿದ್ದರಂತೂ ಆಹಾರಗಳಿಗೆ ಬೂಸ್ಟು ಹಿಡಿಯುವುದು ಬೇಗ, ಈ ಬ್ರೆಡ್ ಅಂತೂ ಬೇಗನೆ ಹಾಳಾಗುತ್ತದೆ. ಆದ್ದರಿಂದ ಬ್ರೆಡ್ ಹಾಳಾಗದಂತೆ ತಡೆಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.

1. ತಾಜಾ ಬ್ರೆಡ್ ಕೊಂಡು ತಂದಾಗ ಅದನ್ನು ಓಪನ್ ಮಾಡದೆ ಇದ್ದರೆ ಮನೆಯಲ್ಲಿ ಸ್ವಲ್ಪ ಕತ್ತಲಿರುವ ಕೋಣೆಯಲ್ಲಿ ಇಡುವುದು ಒಳ್ಳೆಯದು.

2. ತೇವ ಕೈಯಿಂದ ಬ್ರೆಡ್ ಪ್ಯಾಕೆಟ್ ನಿಂದ ಬ್ರೆಡ್ ಚೂರುಗಳನ್ನು ತೆಗೆಯಬೇಡಿ, ಅಲ್ಲದೆ ಬ್ರೆಡ್ ತೆಗೆದು ಬೇರೆ ಡಬ್ಬದಲ್ಲಿ ಹಾಕಿ ಮುಚ್ಚಿಡುವುದು ಮಾಡಬೇಡಿ. ಅದರ ಪ್ಲಾಸ್ಟಿಕ್ ನಲ್ಲಿಯೇ ಇರಲಿ.

3. ಈ ಸಮಯದಲ್ಲಿ ಬ್ರೆಡ್ ಪ್ಯಾಕೆಟ್ ಓಪನ್ ಮಾಡಿದರೆ ಅದನ್ನು ಆಗಲೇ ಮುಗಿಸುವುದು ಒಳ್ಳೆಯದು. ಒಂದು ವೇಳೆ ಉಳಿದ ಬ್ರೆಡ್ ಗಳನ್ನು ಇಡುವುದಾರೂ ತಾಮ್ರ, ಮರ ಅಥವಾ ಮಣ್ಣಿನಿಂದ ತಯಾರಿಸಿದ ಪಾತ್ರೆಗಳನ್ನು ಬಳಸುವುದು ಒಳ್ಳೆಯದು. ಪಾತ್ರೆಯಲ್ಲಿ ಯಾವುದೇ ತೇವಾಂಶವಿರುವುದಿಲ್ಲ.

4. ಗೋದಿ ಬ್ರೆಡ್ ಬಳಸುವುದು ಒಳ್ಳೆಯದು, ಏಕೆಂದರೆ ಈ ಬ್ರೆಡ್ ಆರೋಗ್ಯಕರ ಮಾತ್ರವಲ್ಲ ಬೇಗನೆ ಬೂಸ್ಟು ಹಿಡಿಯುವುದಿಲ್ಲ.

5. ಬ್ರೆಡ್ ಅನ್ನು ಫ್ರಿಜ್ ನಲ್ಲಿ ಇಡುವುದಾದರೆ ಅದರ ರುಚಿ ಹಾಳಾಗುವುದು, ಆದ್ದರಿಂದ ಫ್ರಿಜ್ ನಲ್ಲಿ ಇಡುವುದಾದರೂ ಅದನ್ನು ಪೇಪರ್ ನಿಂದ ಸುತ್ತಿ ಇಡುವುದು ಒಳ್ಳೆಯದು.

6. ಹೀಗೆ ಫ್ರಿಜ್ ನಲ್ಲಿ ಇಡುವಾಗ ಎರಡು ಬ್ರೆಡ್ ತುಂಡುಗಳು ನಡುವೆ ಪೇಪರ್ ಇಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಫ್ರಿಜ್ ನಲ್ಲಿ ಇಟ್ಟಾಗ ಬ್ರೆಡ್ ತುಂಡುಗಳು ಒಂದಕ್ಕೊಂದು ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು.

Story first published: Thursday, July 12, 2012, 11:25 [IST]
English summary

How To Prevent Bread Mold | Tips For Food Protection | ಬ್ರೆಡ್ ಬೂಸ್ಟು ಹಿಡಿಯುವುದು ತಪ್ಪಿಸುವುದು ಹೇಗೆ? | ಆಹಾರ ಸಂರಕ್ಷಣೆಗೆ ಕೆಲ ಸಲಹೆಗಳು

Keeping bread fresh in the monsoons is a challenge.The weather is most inducive to mold growth. During this season, storing bread correctly becomes very important.
Please Wait while comments are loading...
Subscribe Newsletter