ರಗ್ ಮ್ಯಾಟ್ ಗಳನ್ನು ಕೈಯಲ್ಲಿ ಮತ್ತು ಮೆಷಿನ್ ನಲ್ಲಿ ತಯಾರಿಸುತ್ತಾರೆ. ರಗ್ ಮ್ಯಾಟ್ ಗಳನ್ನು ಸರಿಯಾದ ರೀತಿಯಲ್ಲಿ ಇಟ್ಟುಕೊಂಡರೆ ವರ್ಷಗಟ್ಟಲೆ ಬಾಳಿಕೆ ಬರುತ್ತದೆ. ಇವುಗಳನ್ನು ಉಪಯೋಗಿಸಿದರೆ ನೆಲ ಕೊಳೆಯಾಗುವುದಿಲ್ಲ. ಆದರೆ ಈ ಮ್ಯಾಟ್ ಗಳು ಕೊಳೆಯಾದರೆ ಮನೆಯೇ ಗಲೀಜ್ ಆದಂತೆ ಕಾಣುತ್ತದೆ. ಆದ್ದರಿಂದ ಈಕೆಳಗಿನ ವಿಧಾನಗಳನ್ನು ಪಾಲಿಸಿ ರಗ್ ಶುಚಿಗೊಳಿಸಿ.
1. ರಗ್ ಮ್ಯಾಟ್ ಅನ್ನು ವಾರಕ್ಕೆ ಎರಡು ಬಾರಿ ವ್ಯಾಕ್ಯೂಮ್ ಕ್ಲೀನರ್ ನಿಂದ ಶುಚಿ ಮಾಡಿ. ಮ್ಯಾಟ್ ಅನ್ನು ವಾರಕ್ಕೊಮ್ಮೆ ಬಿಸಿಲಿನಲ್ಲಿ ಹಾಕಿ ಬ್ರಷ್ ನಿಂದ ಅದರ ದೂಳನ್ನು ತೆಗೆಯಿರಿ.
2. ರಗ್ ಅನ್ನು ಮನೆಯಲ್ಲಿಯೆ ಒಗೆಯಬಹುದು. ಆದರೆ ಬಿಸಿ ನೀರಿನಲ್ಲಿ ಒಗೆಯಬಾರದು.
3. ಬಕೆಟ್ ನಲ್ಲಿ ತಣ್ಣೀರು ಹಾಕಿ ಅದರಲ್ಲಿ ಡಿಟರ್ಜೆಂಟ್ ಹಾಕಿ ಅದರಲ್ಲಿ ರಗ್ ಅನ್ನು ಅರ್ಧ ಗಂಟೆ ಮುಳುಗಿಸಿಡಬೇಕು. ನಂತರ ಅದನ್ನು ಒಗೆಯುವಾಗ ಬ್ರಷ್ ಹಾಕಿ ತಿಕ್ಕಬಾರದು.
4. ರಗ್ ಮ್ಯಾಟ್ ಅನ್ನು ಡ್ರೈಯರ್ ನಲ್ಲಿ ಒಣಗಿಸಬೆಡಿ. ಹಾಗೇ ಮಾಡಿದರೆ ಬೇಗನೆ ಹರಿದು ಹೋಗುತ್ತದೆ. ರಗ್ ತೊಳೆದು ಹಾಗೇ ಬಿಸಿಲಿನಲ್ಲಿ ಒಣಗಲು ಹಾಕಿ.
5. ಏನಾದರೂ ಚೆಲ್ಲಿ ಸ್ವಲ್ಪ ಕೊಳೆಯಾದರೆ ಅದಕ್ಕೆ ವಿನಿಗರ್ ಹಾಕಿ ಬಟ್ಟೆಯನ್ನು ನೆನೆಸಿ ಆ ಭಾಗವನ್ನು ಉಜ್ಜಿ ತೊಳೆಯಬೇಕು.
6. ರಗ್ ನಲ್ಲಿರುವ ವಾಸನೆಯನ್ನು ಹೋಗಲಾಡಿಸಲು ರಗ್ ಒಗೆದು ಅದನ್ನು ಮತ್ತೊಂದು ಬಕೆಟ್ ನಲ್ಲಿ ನೀರಿಗೆ ಸ್ವಲ್ಪ ಅಡುಗೆ ಸೋಡಾ ಮತ್ತು ವಿನಿಗರ್ ಹಾಕಿ ಆ ನೀರಿನಲ್ಲಿ ಅದ್ದಿ ತೆಗೆಯಬೇಕು.