For Quick Alerts
ALLOW NOTIFICATIONS  
For Daily Alerts

ಗೋಡೆಗೆ ಚಿತ್ರ ತೂಗುಹಾಕುವ ಸುಲಭವಾದ ಹಂತಗಳು

By ಲೇಖಕ
|

ನಿಮಗೆ ಒಂದು ಛಾಯಾಚಿತ್ರವನ್ನು ಗೋಡೆಗೆ ತೂಗುಹಾಕಬೇಕೆ? ಆದರೆ ನೇರವಾಗಿ ತೂಗುಹಾಕಲು ಕಷ್ಟವಾಗುತ್ತಿದೆಯೇ? ಈ ಕೆಳಗಿನ ಹಂತಗಳನ್ನು ಅನುಸರಿಸಿ ಮತ್ತು ಸುಲಭದಲ್ಲಿ ಮಾಡಿ.

ಹಂತಗಳು:

1. ಚಿತ್ರವನ್ನು ಗೋಡೆಗೆ ಸರಿಯಾಗಿ ಹಿಡಿದಿಡಲು ಒಬ್ಬ ಸಹಾಯಕ ಜೊತೆಗಿರಲಿ. ಸುತ್ತಣ ವಸ್ತುಗಳು, ಬೆಳಕು ಮತ್ತಿತರ ವಿಷಯಗಳನ್ನು ಸರಿಯಾಗಿ ನಿರ್ಧರಿಸಲು ಸ್ವಲ್ಪ ಸಮಯ ವ್ಯಯಿಸಿದರೂ ಸರಿಯೇ ಸರಿಯಾದ ಜಾಗವನ್ನು ನಿರ್ಧರಿಸುವ ವರೆಗೆ ಬೇರೆ ಬೇರೆ ಸ್ಥಳಗಳನ್ನು ನೋಡುತ್ತೀರಿ. ಇನ್ನು ಎತ್ತರದ ವಿಷಯ ಬಂದಾಗ ಕಣ್ಣಿನ ನೇರಕ್ಕಿಂತ ಸ್ವಲ್ಪ ಹೆಚ್ಚಿರಲಿ. ಇದೇ ಸರಿ ಎಂದಲ್ಲ ಇದು ಹೆಚ್ಚಾಗಿ ಜನರ ಅಭಿರುಚಿಯನ್ನು ಅವಲಂಬಿಸಿರುತ್ತದೆ. ಇನ್ನಷ್ಟು ಸಲಹೆಗಳಿಗೆ ಕೆಳಗಿನ ಅಂಶಗಳನ್ನು ನೋಡಿ.

How to Hang a Picture

2. ಒಂದು ಪೆನ್ಸಿಲಿನ ಸಹಾಯದಿಂದ ಚಿತ್ರ ತೂಗುಹಾಕಬೇಕಾದ ಚಿತ್ರದ ಮಧ್ಯದ ಪ್ರದೇಶವನ್ನು ಗುರುತುಮಾಡಿ. ಇದನ್ನು ಕಣ್ಣಳತೆಯಲ್ಲಿ ಮಾಡಲು ಕಷ್ಟವಾದರೆ ಒಂದು ಅಳತೆ ಕೋಲು ಅಥವಾ ಅಳತೆ ಪಟ್ಟಿಯನ್ನು ಬಳಸಿ.

3. ಚಿತ್ರವನ್ನು ಕೆಳಮುಖವಾಗಿ ಒಂದು ಸಮತಟ್ಟಾದ ಜಾಗದಲ್ಲಿ ಇಡಿ. ಚಿತ್ರದ ಮೇಲಿನ ಭಾಗ ಮತ್ತು ಅದನ್ನು ತೂಗುಹಾಕುವ ಸಲಕರಣೆಯ ನಡುವಿನ ವ್ಯತ್ಯಾಸವನ್ನು ಗಮನಿಸಿ. ಇದು ಚಿತ್ರದ ಅಡ್ಡಪಟ್ಟಿ ಆಗಿರಬಹುದು ಅಥವಾ ಬಿಗಿ ಮಾಡಿದಾಗ ಚಿತ್ರದ ವಯರಿನ ಅಂತರವಾಗಿರಬಹುದು.

4. ಅಷ್ಟೇ ಅಂತರವನ್ನು ಗೋಡೆಯಲ್ಲಿ ನೀವು ಮೊದಲು ಮಾಡಿದ ಗುರುತಿನಿಂದ ಮೇಲಕ್ಕೆ ಅಳೆಯಿರಿ. ನೀವು ಈ ಅಳತೆಯನ್ನು ಮಾಡುವಾಗ ಎಷ್ಟು ಸಾಧ್ಯವೋ ಅಷ್ಟು ನೇರವಾಗಿರಲು ಪ್ರಯತ್ನಿಸಿ. ಈಗ ನೀವು ತೂಗುಹಾಕುವ ಚಿತ್ರಕ್ಕೆ ಒಂದೇ ಸಾಮಗ್ರಿಯ ಅವಶ್ಯಕತೆ ಇದ್ದರೆ ಈಗ ಆ ಚಿತ್ರ ಹೇಗೆ ನಿಲ್ಲುತ್ತದೆ ಎಂದು ನಿಮಗೆ ಅಂದಾಜು ಬರುತ್ತದೆ.

5. ನಿಗದಿತ ಜಾಗದಲ್ಲಿ ಸರಿಯಾಗಿ ತೂತು ಕೊರೆಯಿರಿ ಮತ್ತು ತಿರುಪನ್ನು (ಸ್ಕ್ರೂ) ಹಾಕಿ. ನೀವು ಮೊಳೆಯನ್ನು ಬಳಸುವುದಿದ್ದರೆ ಸರಿಯಾದ ಸ್ಥಳದಲ್ಲಿ ಸರಿಯಾಗಿ ಸುತ್ತಿಗೆ ಸಹಾಯದಿಂದ ಹೊಡೆಯಿರಿ. ತೂಗುಹಾಕುವ ಸಾಧನ ಹೊಡೆದ ನಂತರ ಚಿತ್ರ ಸರಿಯಾಗಿ ಗೋಡೆಗೆ ತೂಗುಹಾಕಲು ಆಗುತ್ತದೆ ಎಂದು ಖಾತರಿ ಮಾಡಿಕೊಳ್ಳಿ. ಮೊಳೆ ಅಥವಾ ತಿರುಪು ಬಹಳ ಉದ್ದ ಅಥವಾ ಬಹಳ ಗಿಡ್ಡವಾಗಬಾರದು.

6. ಹೀಗೂ ಮಾಡಬಹುದು: ಚಿತ್ರವೇನಾದರೂ ಬಾಗಿದ್ದಲ್ಲಿ ನೀವು ವೆಲ್ಕ್ರೋ ವನ್ನು ಚಿತ್ರ ನೇರವಾಗಿ ನಿಲ್ಲಲ್ಲು ಬಳಸಬಹುದು. ಮೃದುವಾದ ಭಾಗವನ್ನು ಚಿತ್ರಕ್ಕೆ ಅಂಟಿಸಿ ಆಗ ಅದೇನಾದರೂ ಇನ್ನೊಂದು ಚಿತ್ರಕ್ಕೆ ತಾಗಿದರೂ ಹೆದರಿಕೆಯಿಲ್ಲ. ಅಗತ್ಯವಿದ್ದರೆ ಸ್ಟಾಪಲ್ ಗನ್ ಅನ್ನು ಬಳಸಿ. ಈಗ ವೆಲ್ಕ್ರೋ ದ ಗಟ್ಟಿಯಾದ ಭಾಗವನ್ನು ಮೃದುವಾದ ಭಾಗಕ್ಕೆ ಹೊಂದಿಕೊಂಡು ಅಂಟಿಸಿ ಆದರೆ ಅದರ ಅಂಟಿನ ಮೇಲಿರುವ ಕಾಗದವನ್ನು ಹಾಗೆಯೇ ಬಿಡಿ. ನೀವು ವೆಲ್ಕ್ರೋ ದ ಬದಲು ಕನ್ನಡಿಯ ತುಣುಕುಗಳನ್ನು ಬಳಸುತ್ತಿದ್ದರೆ ಚಿತ್ರವನ್ನು ಗೋಡೆಗೆ ಇಡುವ ಮುನ್ನವೇ ಅವುಗಳನ್ನು ವ್ಯವಸ್ಥಿತವಾಗಿಡಿ.

7. ಇನ್ನು ಜಾಗೃತೆಯಿಂದ ಚಿತ್ರವನ್ನು ಮೊಳೆ ಅಥವಾ ತಿರುಪಿನ ಮೇಲಿಡಿ. ನೀವು ವೆಲ್ಕ್ರೋವನ್ನು ಬಳಸುತ್ತಿದ್ದರೆ ಅಂಟಿನ ಮೇಲಿರುವ ಕಾಗದವನ್ನು ನಿಧಾನಕ್ಕೆ ತೆಗೆಯಿರಿ. ಕನ್ನಡಿಯನ್ನು ತುಣುಕುಗಳನ್ನು ಬಳಸುತ್ತಿದ್ದರೆ ಚಿತ್ರವನ್ನು ಗೋಡೆಗೆ ಇಡುವ ಮುನ್ನ ಸರಿಯಾದ ರಂಧ್ರಗಳನ್ನು ನೋಡಿಕೊಳ್ಳಿ.

8. ಕನ್ನಡಿಯ ತುಣುಕುಗಳಿಗೆ ಜಾಗೃತೆಯಿಂದ ಬಣ್ಣ ಹಚ್ಚಿ ಅಥವಾ ಮುಚ್ಚಿ.

ಎಚ್ಚರಿಕೆಗಳು:

ತಿರುಪುಗಳನ್ನು ಜೋಡಿಸುವಾಗ ಅಥವಾ ಮೊಳೆಗಳನ್ನು ಹೊಡೆಯುವಾಗ ಎಚ್ಚರ ವಹಿಸಿ. ನೀವು ರಂಧ್ರ ಕೊರೆಯುವ ಸ್ಥಳದಲ್ಲಿ ಹಿಂದೆ ವಿದ್ಯುತ್ ವಯರುಗಳು ಇರಬಹುದು ಇದು ಬಹಳ ಅಪಾಯಕಾರಿಯಾಗಿದ್ದು ಪ್ರಾಣಾಪಾಯ ಕೂಡ ತಪ್ಪಿದ್ದಲ್ಲ.

ಗೋಡೆಗೆ ಮೊಳೆ ಹೊಡೆಯುವಾಗ ಅಥವಾ ರಂಧ್ರ ಕೊರೆಯುವಾಗ ಚಿತ್ರವನ್ನು ದೂರದಲ್ಲಿಡಿ. ಚಿತ್ರವನ್ನು ತೂಗುಹಾಕುವ ವರೆಗೆ ಅದರ ಮೇಲಿರುವ ಹೊದಿಕೆಯನ್ನು ಬಿಚ್ಚಬೇಕೆಂದಿಲ್ಲ.

ಈ ಸಲಹೆಗಳನ್ನು ಯಾವುದೇ ಗಾತ್ರದ ಅಥವಾ ಯಾವುದೇ ಭಾರದ ಚಿತ್ರಗಳನ್ನು ತೂಗುಹಾಕಲು ಬಳಸಬಹುದಾದರೂ ತೂಗುಹಾಕುವ ಸಲಕರಣೆಗಳಾದ ಮೊಳೆ ಮತ್ತು ತಿರುಪುಗಳು ನಿಮ್ಮ ಚಿತ್ರಕ್ಕೆ ಸಾಕಷ್ಟು ಬಲಶಾಲಿಯಾಗಿವೆ ಎಂದು ಖಾತರಿಪಡಿಸಿಕೊಳ್ಳಿ.

ನೀವು ತೂಗುಹಾಕುವ ಚಿತ್ರದ ಭಾರವನ್ನು ಗೋಡೆ ತಾಳಬಹುದೆಂದು ಖಾತರಿ ಪಡಿಸಿಕೊಳ್ಳಿ.

ಕಲಾಕೃತಿಗಳನ್ನು ತೂಗುಹಾಕುವಾಗ ಬಿಳಿಯ ಕೈಗವಚಗಳನ್ನೇ ತೊಡಿ.

English summary

How to Hang a Picture | ಗೋಡೆಗೆ ಚಿತ್ರ ತೂಗುಹಾಕುವ ಸುಲಭವಾದ ಹಂತಗಳು

Have you always had much difficulty getting that picture to hang straight? Follow these steps to get it just right, every time.
X
Desktop Bottom Promotion