For Quick Alerts
ALLOW NOTIFICATIONS  
For Daily Alerts

ಮನೆಯಲ್ಲೇ ಗ್ರಿಲ್‌ ತಯಾರಿಸುವುದು ಹೇಗೆ?

By ಲೇಖಕ
|

ರುಚಿ ಮತ್ತು ಅನನ್ಯ ಸ್ವಾದವನ್ನು ಹೊಂದಿದ ಗ್ರಿಲ್‌ಗಳು ನಿಮ್ಮ ಬಾಯಲ್ಲಿ ನೀರೂರಿಸುತ್ತದೆ. ನೀವು ಒಳಾಂಗಣದಲ್ಲಿ ಕೂಡ ಈ ತರದ ಅಡುಗೆ ಮಾಡಬಹುದು.ಆದರೆ ಒಳಾಂಗಣದಲ್ಲಿ ಮಾಡಲು ಸ್ವಲ್ಪ ಕಷ್ಟ. ಅಗತ್ಯ ಬಿದ್ದಾಗ ಮಾತ್ರ ಅವನ್ನು ಒಳಾಂಗಣದಲ್ಲಿ ಮಾಡಬಹುದು.

ಶೀತಲೀಕರಣ ವ್ಯವಸ್ಥೆ ಇದ್ದರೆ ಸೂಕ್ತ. ಅಥವಾ ನೀವು ಯಾವುದೇ ಹೊರಾಂಗಣ ಜಾಗವನ್ನು ಹೊಂದಿರುವ ಒಂದು ಅಪಾರ್ಟ್ಮೆಂಟ್ ನಲ್ಲಿ ವಾಸಿಸುತ್ತಿರುವವರಾದರೆ ಹೊರಾಂಗಣದಲ್ಲೇ ಮಾಡಬಹುದು. ನಿಮ್ಮ ಅಡುಗೆಮನೆಯಲ್ಲಿಯೇ ಮಾಡುವಿರಾದರೆ ವಿದ್ಯುತ್ ಗ್ರಿಲ್ ಅಥವಾ ಗ್ರಿಲ್ ಪ್ಯಾನ್ ಬಳಸುವುದು ಸೂಕ್ತ.

How to Grill Indoors

ಹಂತಗಳು

ಒಳಾಂಗಣ ಗ್ರಿಲ್ ಖರೀದಿ
ವಿದ್ಯುತ್ ಗ್ರಿಲ್ ಗಳನ್ನು ಪರಿಗಣಿಸಿದರೆ ಅನೇಕ ಗಾತ್ರ ಮತ್ತು ಆಕಾರಗಳಲ್ಲಿ ಲಭ್ಯವಿದೆ ಹಾಗೆಯೇ ಇದ್ದಿಲು ಅಥವಾ ಅನಿಲ ಗ್ರಿಲ್ಸ್ ಹೋಲುವ ದೊಡ್ಡ ಗ್ರಿಲ್ ಗಳು ಕೂಡ ಲಭ್ಯವಿವೆ. ನಿಮ್ಮ ಅಡುಗೆಮನೆಗೆ ಹೊಂದಿಕೊಳ್ಳುವ ವಿದ್ಯುತ್ ಗ್ರಿಲ್ ಗಳನ್ನು ಆರಿಸಿಕೊಳ್ಳಿ. ಒಳಾಂಗಣ ಗ್ರಿಲ್ ನ ಇನ್ನೊಂದು ವಿಶೇಷವೆಂದರೆ ಇದು ಆಹಾರದ ಎರಡೂ ಬದಿಯನ್ನು ಏಕಕಾಲದಲ್ಲಿ ಬೇಯಿಸುತ್ತದೆ. ನೀವು ಶಾಖ ನಿಯಂತ್ರಕ ಗ್ರಿಲ್ ಖರೀದಿಸುವಿರದರೆ ಇದರಲ್ಲಿ ಶಾಖವನ್ನು ನಮಗೆ ಬೇಕಾದಹಾಗೆ ಹೊಂದಾಣಿಕೆ ಮಾಡಿಕೊಳ್ಳಬಹುದು.ಶಾಖ ಹೆಚ್ಚಿಸುವ ಅಥವಾ ಕಡಿಮೆ ಮಾಡಿಕೊಳ್ಳುವ ಅವಕಾಶವಿದೆ.

ನೀವು ಸಾಂಪ್ರದಾಯಿಕವಾದ ಭಾವನೆಯನ್ನು ಹೊಂದಿದ್ದು ತೆರೆದ ಮುಖದ ಗ್ರಿಲ್ ಖರೀದಿಸಿದರೆ ಈ ಅವಕಾಶದಿಂದ ವಂಚಿತರಾಗುವಿರಿ. ಹಾಗೂ ಇದು ಆಹಾರವನ್ನು ಎರಡೂ ಬದಿಯಲ್ಲಿ ಏಕಕಾಲಕ್ಕೆ ಬೇಯಿಸಿವುದಿಲ್ಲ. ನೀವು ಕಾಂಟ್ಯಾಕ್ಟ್ ಗ್ರಿಲ್ ಖರೀದಿಸುವಿರಾದರೆ ಅದು ಇಳಿಜಾರದ ಹೊರಮೈ ಹೊಂದಿರುತ್ತದೆ. ಹಾಗೂ ಆಹಾರವನ್ನು ಏಕಕಾಲಕ್ಕೆ ಎರಡೂ ಕಡೆ ಬೇಯಿಸುತ್ತದೆ. ವಿದ್ಯುತ್ ಗ್ರಿಲ್ ಕಬ್ಬಿಣದ ಹಾಗೂ ನುಣುಪಾದ ಹೊರಮೈ ಹೊಂದಿದ್ದು ಅದಕ್ಕೆ ತಕ್ಕ ಗ್ರಿಲ್ ಪ್ಯಾನ್ ಬಳಸುವುದು ಉತ್ತಮ.

ಒಳಾಂಗಣ ಗ್ರಿಲ್ ಬಳಸುವ ವಿಧಾನ
ಒಳಾಂಗಣ ಗ್ರಿಲ್ ಬಳಸಿ ಆಹಾರ ಬೇಯಿಸುವಾಗ ದ್ರವ ಹೊಗೆ ಸೇರಿಸಿದರೆ ಅದುನಿಮ್ಮ ಆಹಾರಕ್ಕೆ ಹೊರಾಂಗಣ ಗ್ರಿಲ್ ಬಳಸಿ ಬೇಯಿಸಿದ ಆಹರದ್ದೇ ಪರಿಮಳವನ್ನು ನೀಡುತ್ತದೆ. ಚಿಕನ್, ಹಾಟ್ ಡಾಗ್ಸ್, ಬರ್ಗರ್ ಮತ್ತು ಜೋಳವನ್ನು ಈ ವಿಧಾನದಿಂದ ಸುಲಭವಾಗಿ ಬೇಯಿಸಬಹುದು. ಹಾಗೂ ಹೀಗೆ ಬೇಯಿಸುವಾಗ ಸಮಯದ ಮೇಲೆ ಗಮನವಿರಲಿ. ಉದ್ದವಾಗಿರುವ ಮಾಂಸವನ್ನು ಬೇಸಿಸುವಾಗ ಅಡುಗೆ ಬೆಂದಿದೆಯೆಂದು ಖಚಿತಪಡಿಸಿಕೊಳ್ಳಲು ಥರ್ಮಾಮೀಟರ್ ಬಳಸುವುದು ಸೂಕ್ತ. ನಿಯತಕಾಲಿಕೆಗಳು ಮತ್ತು ಪುಸ್ತಕಗಳಲ್ಲಿ, ವೆಬ್ ಸೈಟ್ ಗಳಲ್ಲಿ ಒಳಾಂಗಣ ಗ್ರಿಲ್ಸ್ ಬಳಸಿಯೇ ಮಾಡಲಾಗುವ ವಿಶೇಷವಾಗಿ ವಿನ್ಯಾಸಗೊಳಿಸಿದ ಪಾಕವಿಧಾನಗಳನ್ನು ಕಾಣಬಹುದು.

ಒಳಾಂಗಣ ಗ್ರಿಲ್ ಕಾಳಜಿ
ನುಣುಪಾದ ಮೇಲ್ಮೈ ಮೇಲೆ ಲೋಹದ ಪಾತ್ರೆಗಳನ್ನು ಬಳಸದಿರಿ ಹಾಗೂ ಕಬ್ಬಿಣದ ಗ್ರಿಲ್ ಹರಿವಾಣಗಳನ್ನು ಸ್ವಚ್ಛಗೊಳಿಸುವಾಗ ಜಾಗ್ರತೆ ವಹಿಸಿ. ತರಕಾರಿಗಳನ್ನು ಬೇಯಿಸಲು ತೆರೆದ ಮುಖದ ಗ್ರಿಲ್ ಗಳಿಗಿಂತ ಒಳಾಂಗಣ ಗ್ರಿಲ್ ಗಳು ಉತ್ತಮ. ಏಕೆಂದರೆ ತೆರೆದ ಮುಖದ ಗ್ರಿಲ್ ಗಳು ಶಾಖವನ್ನು ನಿಯಂತ್ರಿಸುವುದಿಲ್ಲ ಹಾಗೂ ಸಮಯವೂ ಕೂಡ ನಿರ್ದಿಷ್ಟವಾಗಿರುವುದಿಲ್ಲ. ಗ್ರಿಲ್ ನ ಮೇಲ್ಮೈ ಮೇಲೆ ನೇರವಾಗಿ ಎಣ್ಣೆ ಅಥವಾ ಬೆಣ್ಣೆಗಳಂತಹ ಪದಾರ್ಥಗಳನ್ನು ಇರಿಸಬೇಡಿ.

ಎಚ್ಚರಿಕೆ
ಗ್ರಿಲ್ ಗಳನ್ನು ನಿರ್ದಿಷ್ಟ ಜಾಗದಲ್ಲಿಡುವುದು ಸೂಕ್ತ. ಗ್ರಿಲ್ ಅನ್ನು ಚಾಲನೆಯಲ್ಲಿಟ್ಟು ಬೇರೆಡೆ ಗಮನಕೊಡಬೇಡಿ. ಸ್ವಚ್ಛಗೊಳಿಸುವ ಹಾಗೂ ಸ್ಥಳಾಂತರಿಸುವ ಮುನ್ನ ಯಂತ್ರದ ಶಾಖ ಇಳಿದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

Read more about: ಮನೆ ಆಹಾರ home food
English summary

How to Grill Indoors | Tips For Home Imrovements | ಮನೆಯಲ್ಲೇ ಗ್ರಿಲ್‌ ತಯಾರಿಸುವುದು ಹೇಗೆ? | ಮನೆ ಅಭಿವೃದ್ಧಿಗೆ ಕೆಲ ಸಲಹೆಗಳು

Grilled food has a special taste and a unique look, and it can be hard to replicate when you are cooking indoors. Grilling indoors can be done when necessary. Whether it is freezing cold outside, or you live in an apartment with no outdoor space for a grill, there are ways you can make a meal on the grill in
Story first published: Thursday, February 7, 2013, 16:36 [IST]
X
Desktop Bottom Promotion