For Quick Alerts
ALLOW NOTIFICATIONS  
For Daily Alerts

ಗ್ಯಾಸ್ ನ ಗ್ರಿಲ್ ಗಳನ್ನು ಸ್ವಚ್ಚಗೊಳಿಸುವುದು ಹೇಗೆ?

|

ನಿಮ್ಮ ಗ್ಯಾಸ್ ನ ಹೊರಾಂಗಣ ಗ್ರಿಲ್ಗಳು ಹೆಚ್ಚುಕಾಲ ಬಾಳಿಕೆಬರಬೇಕಾದರೆ ಅವುಗಳನ್ನು ಅಗಾಗ ಸ್ವಚ್ಛಗೊಳಿಸುತ್ತಿರಬೇಕು.

ಸ್ವಚ್ಛತೆಯ ಹಂತಗಳು

ಪ್ರತೀ ಬಳಕೆಯ ನಂತರ ನಿಮ್ಮ ಗ್ರಿಲ್ ನ್ನು ಕಾಯಿಸುವ ಮೊದಲು ಪೂರ್ವಭಾವಿಯಾಗಿ ಸಿದ್ಧತೆ ಮಾಡಿಕೊಳ್ಳಿ. ಯಾವುದೇ ರೀತಿಯ ಅಚಾತುರ್ಯ ಬೇಡ - ಹೀಗೆ ಕಾಯಿಸುವದರಿಂದ ಗ್ರಿಲ್ ಮೇಲೆ ಬಿದ್ದ ವಸ್ತುಗಳೂ ಸಹ ಸಟ್ಟುಹೋಗುವ ಸಂಭವವಿದೆ. ಹಾಗೇನಾದರೂ ಆದರೆ ಈ ವಿಧಾನ ನಿಜವಾಗಿಯೂ ಗ್ರಿಲ್ ನ್ನು ಸ್ವಚ್ಛಗೊಳಿಸುವಲ್ಲಿ ಸಹಕಾರಿಯಾಗಲಾರದು.

How to Clean an Outdoor Gas Grill

ಹಾಗೇ ಉಳಿದ ಅಡುಗೆ ಜಿಡ್ಡುಗಳು : ಬರ್ನರ್ಗಳ ಮೇಲಿರುವ ಪ್ರಬಂಧಕಗಳನ್ನು (ಕೊಳೆ) ಮೊದಲು ಸ್ವಚ್ಛಗೊಳಿಸಿ (ಅದು ಲಾವಾ ರಾಕ್, ಬ್ರಿಕ್ವಿಟೆಸ್ ಅಥವಾ ಲೋಹದ ತಟ್ಟೆಯ ವಿಧವಾಗಿರಬಹುದು). ಎಲ್ಲಾ ರೀತಿಯ ಜಿಡ್ಡಿನಂಶಗಳು ಮತ್ತು ಆಹಾರ ಕಣಗಳನ್ನು ತೆಗೆದುಹಾಕಲು ಒಂದು ಗಟ್ಟಿಮುಟ್ಟಾದ ಬ್ರಷ್ ಬಳಸಿರಿ.

ವರ್ಷಕ್ಕೊಮ್ಮೆ ಸಿಲೆಂಡರಿನ ಜೋಡಣೆಯನ್ನು ತೆಗೆದು ಗ್ರಿಲ್ ಭಾಗಗಳನ್ನು ಪದರ ಪದರವಾಗಿ ಮೇಲೆತ್ತಿ , ಬರ್ನರ್ಗಳನ್ನು ಸಂಪೂರ್ಣವಾಗಿ ಪರೀಕ್ಷಿಸಿರಿ . ಹಾಗೂ ಅಡುಗೆ ಮಾಡುವ ಮೊದಲು ಯಾವುದೇ ಅನಿಲ ತಡೆಗಲೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.ಅನಿಲ ತಡೆಗಳು ಕಂಡುಬಂದಲ್ಲಿ ನಿಮ್ಮ ಬರ್ನರ್ಗಳನ್ನು ಬದಲಾಯಿಸುವದೊಳಿತು.

ಲಾವಾ ರಾಕ್ / ಬ್ರಿಕ್ವಿಟೆಸ್ / ಲೋಹದ ತಟ್ಟೆಗಳನ್ನು ಯಾವುದೇ ಆಹಾರದ ಕಣಗಳಿಲ್ಲದಂತೆ ಸ್ವಚ್ಛಗೊಳಿಸಿರಿ.ಹಿಂದಿನ ಬಾರಿ ಹಾಗೇ ಉಳಿದ ಕಠಿಣ ಕಲೆಗಳನ್ನು ಈ ಬಾರಿ ಖಂಡಿತ ತೆಗೆದುಹಾಕಿ. ಆಹಾರದ ಕಲೆ ತುಂಬಾ ಕಠಿಣವಾಗಿ ಅಂಟಿಕೊಂಡಿದ್ದರೆ, ಹೊತ್ತಿದಂತಹ ಕೆಟ್ಟ ವಾಸನೆಯನ್ನು ತಪ್ಪಿಸಲು ಲಾವಾ / ಬ್ರಿಕ್ವಿಟೆಸ್ / ಲೋಹದ ತಟ್ಟೆಗಳನ್ನು ಬದಲಾಯಿಸುವುದೇ ಸೂಕ್ತ.

ಸಾಬೂನಿನ ನೀರಿನಿಂದ ಗ್ರಿಲ್ ನ್ನು ಸ್ವಚ್ಛಗೊಳಿಸಿರಿ.ಗ್ರಿಲ್ ನ ಮೇಲ್ಪದರ ಉದುರುತ್ತಿದ್ದರೆ ಅಥವಾ ಗ್ರಿಲ್ ತುಕ್ಕುಹಿಡಿಯುತ್ತಿದ್ದರೆ ಅದಕ್ಕೆ ಬಣ್ಣವನ್ನೂ ಹಚ್ಚಬಹುದು.

ಗ್ರಿಲ್ಲಿನ ಎಲ್ಲಾ ಭಾಗಗಳನ್ನು ಒಂದೆಡೆ ಇರಿಸಿ,ಎಲ್ಲವೂ ಒಳ್ಳೆಯ ರೀತಿಯಲ್ಲಿ ಜೋಡಣೆಗೊಂಡಿವೆಯೇ ಎಂದು ಪರಿಶೀಲಿಸಿ ಒಲೆ ಹೊತ್ತಿಸಿರಿ.ಹಾಗೆಯೇ ನೀವು ಅಡುಗೆ ಮಾಡುವ ಮುನ್ನ ಸಾಬೂನಿನ ನೀರಿನ ತೆವ ಸಂಪೂರ್ಣವಾಗಿ ಒಣಗಿರುವುದನ್ನು ಖಚಿತಪಡಿಸಿಕೊಳ್ಳುವದನ್ನು ಮರೆಯಬೇಡಿ.

English summary

How to Clean an Outdoor Gas Grill |Tips For Cleaning | ಗ್ಯಾಸ್ ನ ಹೊರಭಾಗದಲ್ಲಿರುವ ಗ್ರಿಲ್ ಸ್ವಚ್ಚಗೊಳಿಸುದು ಹೇಗೆ? | ಕ್ಲೀನಿಂಗ್ ಟಿಪ್ಸ್

Grilled food has a special taste and a unique look, and it can be hard to replicate when you are cooking indoors. Grilling indoors can be done when necessary.
Story first published: Wednesday, February 20, 2013, 17:32 [IST]
X
Desktop Bottom Promotion