For Quick Alerts
ALLOW NOTIFICATIONS  
For Daily Alerts

ಕನಸಿನ ಕೈ ತೋಟದಲ್ಲಿ ಹೂವಿನ ಅರಮನೆ....

By Deepak m
|

ಹೂವು ಚೆಲುವೆಲ್ಲ ತನ್ನದೆನ್ನಿತು, ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು - ಎಂಬ ಹಾಡನ್ನು ನಾವೆಲ್ಲರು ಗುನುಗುನಿಸಿರುತ್ತೇವೆ. ದೇವರು ನಮ್ಮ ಭೂಮಿಯ ಮೇಲೆ ಸೃಷ್ಟಿಸಿದ ಸೌಂದರ್ಯ ರಾಶಿಗಳಲ್ಲಿ ಹೂವಿಗೆ ಅಗ್ರ ಸ್ಥಾನ ನೀಡಬೇಕು. ಇಂತಹ ಹೂವಿನ ಮೋಹದ ಪಾಶಕ್ಕೆ ಸಿಲುಕದವರು ಯಾರಿದ್ದಾರೆ ಹೇಳಿ. ಅಂತಹ ಹೂವುಗಳನ್ನು ಅದರಲ್ಲು ನಮ್ಮ ಪ್ರೀತಿ ಪಾತ್ರ ಹೂವುಗಳನ್ನು ನಮ್ಮದೇ ಆದ ಗಾರ್ಡನ್‌ನಲ್ಲಿ ಬೆಳೆಯಲು ಅವಕಾಶ ಸಿಕ್ಕುತ್ತದೆ ಎಂದರೆ ಯಾರು ತಾನೆ ಬೇಡ ಎನ್ನುತ್ತಾರೆ.

ಹೀಗೆ ಮಾಡುವುದು ಒಂದು ಒಳ್ಳೆಯ ಹವ್ಯಾಸ, ಇದರಿಂದ ನಿಮ್ಮನ್ನು ನೀವು ಚಟುವಟಿಕೆಯಿಂದ ಇರಿಸಿಕೊಳ್ಳಬಹುದು. ಜೊತೆಗೆ ಹೆಚ್ಚಾಗಿ ಬೆಳೆದಲ್ಲಿ ಅದರಿಂದ ಸ್ವಲ್ಪ ಹಣವನ್ನು ಸಹ ಸಂಪಾದಿಸಬಹುದು. ನಿಮಗೆ ಹೂವುಗಳನ್ನು ಬೆಳೆಯಲು ಸ್ಥಳಾವಕಾಶ ಎಷ್ಟಿದೆ ಎಂಬುದು ಇಲ್ಲಿ ಪ್ರಶ್ನೆಯೇ ಅಲ್ಲ. ಇರುವುದನ್ನೇ ಸೃಜನಶೀಲತೆಯಿಂದ ಬಳಸಿಕೊಳ್ಳಿ. ಅನುಭವಿ ಗಾರ್ಡನ್ ಪರಿಣತರು ಇರುವ ಸ್ಥಳದಲ್ಲಿಯೇ ತಮ್ಮ ಲಾಭವನ್ನು ಕಾಣುತ್ತಿದ್ದಾರೆ. ಜೊತೆಗೆ ತಮ್ಮ ಗಾರ್ಡನ್ ಅನ್ನು ಸರಿಯಾಗಿ ನಿರ್ವಹಣೆ ಸಹ ಮಾಡುತ್ತಾರೆ.

ಆದರೆ ಇದೀಗ ತಾನೆ ಈ ಹವ್ಯಾಸದ ಕ್ಷೇತ್ರಕ್ಕೆ ಕಾಲಿರಿಸಿತ್ತಿರುವ ನಿಮಗೆ ಕೆಲವೊಂದು ಮೂಲ ಮತ್ತು ಆರಂಭಿಕ ಪಾಠಗಳ ಅಗತ್ಯವಿದೆ. ಏಕೆಂದರೆ ಈ ಆರಂಭಿಕ ವಿಷಯಗಳೆ ನಿಮ್ಮ ಮುಂದಿನ ಯಶಸ್ಸಿಗೆ ದಾರಿ ದೀಪವಾಗುತ್ತವೆ. ಈ ಪಾಠಗಳು ನಿಮ್ಮ ಲ್ಯಾಂಡ್ ಸ್ಕೇಪ್ ಹೇಗಿರಬೇಕು ಎಂಬುದರಿಂದ ಹಿಡಿದು ಯಾವ ಯಾವ ಋತುಗಳಲ್ಲಿ ಹೂವುಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ವರೆಗೆ ವ್ಯಾಪಿಸಿರುತ್ತವೆ. ಇದರ ಜೊತೆಗೆ ನೀವು ನಿಮ್ಮ ಕನಸಿನ ಗಾರ್ಡನ್ ಅನ್ನು ಸಾಕಾರ ಮಾಡಿಕೊಳ್ಳಲು ಬಹಳಷ್ಟು ವೈಜ್ಞಾನಿಕ ಜ್ಞಾನವನ್ನು ಮತ್ತು ಸೃಜನಶೀಲತೆಯನ್ನು ಬಳಸಬೇಕಾಗುತ್ತದೆ. ಕಾಸು ಖರ್ಚಿಲ್ಲದೆ ಕೈತೋಟದಲ್ಲಿಯೇ ಬೆಳೆಸಿ ಕೊತ್ತಂಬರಿ ಗಿಡ!

Simple Gardening Tips and Tricks

ದೊಡ್ಡ ಮಟ್ಟದಲ್ಲಿ ಹೂವುಗಳನ್ನು ಬೆಳೆಯಲು ಆರಂಭಿಸುವ ಮೊದಲು ಸಣ್ಣ ಮಟ್ಟದ ಪ್ರಯತ್ನವನ್ನು ಮಾಡಿ, ಅದರಲ್ಲಿ ಸಾಧಾಕ ಭಾದಕಗಳ ಅರಿವು ನಿಮಗೆ ಲಭಿಸಿದ ನಂತರ, ಹಂತ ಹಂತವಾಗಿ ಹೂವುಗಳ ಬೆಳೆಯನ್ನು ಹೆಚ್ಚಿಸಿ. ಇದರಿಂದ ಪ್ರಕೃತಿಯು ನಿಮ್ಮ ಮನೆಯಲ್ಲಿ ಸುಂದರವಾಗಿ ನೆಲೆಸಿದಂತೆ ಕಾಣುವುದರ ಜೊತೆಗೆ, ಸಂಪಾದನೆಯು ಸಹ ಲಭಿಸಬಹುದು. ಈ ಅಂಕಣದಲ್ಲಿ ನಿಮ್ಮ ಹಾಗೆ ಹೂವುಗಳನ್ನು ಬೆಳೆಯಲು ಆರಂಭಿಸುತ್ತಿರುವವರಿಗಾಗಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ. ಇದನ್ನು ಓದಿ ನಿಮ್ಮ ಹವ್ಯಾಸವನ್ನು ಆರಂಭಿಸಿ, ಸಂಭವನೀಯ ತಪ್ಪುಗಳಾಗುವುದನ್ನು ತಪ್ಪಿಸಿ. ಬನ್ನಿ ಆ ಸಲಹೆಗಳು ಯಾವುವು ಎಂದು ನೋಡೋಣ...

ಗಾರ್ಡನ್ ಮಾಡುವ ಸ್ಥಳದ ಆಯ್ಕೆ
ಗಾರ್ಡನ್ ಮಾಡಲು ಉತ್ತಮವಾದ ಸ್ಥಳದ ಆಯ್ಕೆ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ. ಈ ಸ್ಥಳದಲ್ಲಿ ಹೂ ಗಿಡಗಳು ಬೆಳೆಯಲು, ಅವಶ್ಯಕವಾದ ಮಣ್ಣು, ನೀರು, ಬೆಳಕು ಎಲ್ಲವೂ ಸಹ ಲಭ್ಯವಿರಬೇಕು. ಹೂಗಿಡಗಳು ಕೆಲವೊಂದು ಎತ್ತರವಾಗಿ ಬೆಳೆಯುತ್ತವೆ, ಆ ಎತ್ತರಕ್ಕೆ ಧಕ್ಕೆ ಬರದಂತೆ ಇರುವ ಸ್ಥಳವು ಇದ್ದಲ್ಲಿ ಒಳ್ಳೆಯದು. ಅಷ್ಟೇ ಅಲ್ಲ, ಇಲ್ಲಿ ಬೆಳದ ಹೂವುಗಳು ನಿಮಗೆ ಸುಂದರವಾಗಿ ಕಾಣಬೇಕು ಎಂಬುದನ್ನು ಮರೆಯಬೇಡಿ. ಏಕೆಂದರೆ ಈ ಸೌಂದರ್ಯವೆ ನಿಮ್ಮ ಪ್ರೇರೇಪಣೆಯಾಗಿ ಅವುಗಳ ಹಾರೈಕೆಯನ್ನು ಇನ್ನಷ್ಟು ಚೆನ್ನಾಗಿ ಮಾಡುತ್ತೀರಿ ಅದಕ್ಕೆ.

ಕುಂಡಗಳ ಆಯ್ಕೆ
ಕುಂಡಗಳ ಆಯ್ಕೆ ಮಾಡಿಕೊಳ್ಳುವುದು ಹೂವುಗಳನ್ನು ಬೆಳೆಯಲು ಹೋಗುವವರು ಗಮನಿಸಬೇಕಾದ ಪ್ರಮುಖ ಅಂಶ. ಇವುಗಳು ನಿಮ್ಮ ಗಾರ್ಡನ್ ಅನ್ನು ಸುಂದರವಾಗಿ ಕಾಣಿಸುವುದರ ಜೊತೆಗೆ, ಹೂ ಗಿಡಗಳ ಆರೋಗ್ಯ ಮತ್ತು ಬೆಳವಣಿಗೆಗೆ ಅತ್ಯಂತ ಅವಶ್ಯಕವಾಗಿರುತ್ತವೆ. ನೀವು ಯಾವ ಬಗೆಯ ಗಿಡವನ್ನು ಬೆಳೆಸುತ್ತೀರಿ ಎಂಬುದರ ಮೇಲೆ, ಈ ಹೂ ಕುಂಡಗಳನ್ನು ಆರಿಸಿಕೊಳ್ಳಬೇಕಾಗುತ್ತದೆ. ಆ ಗಿಡವು ಸಂಪೂರ್ಣವಾಗಿ ಬೆಳೆದಾಗ ಹೇಗಿರುತ್ತವೆ ಎಂಬುದನ್ನು ನಿರ್ಧರಿಸಿಕೊಂಡು ಮೊದಲೆ ಅದಕ್ಕೆ ತಕ್ಕನಾದ ಕುಂಡವನ್ನು ಆಯ್ಕೆ ಮಾಡಿಕೊಳ್ಳಿ. ಸೊ೦ಪಾಗಿ ಬೆಳೆಯುತ್ತಿರುವ ಗಿಡ ಅನಿರೀಕ್ಷಿತವಾಗಿ ಬಾಡಿ ಹೋಗುವುದೇಕೆ?

ಗಿಡಗಳ ಆಯ್ಕೆ
ಸಾಮಾನ್ಯವಾಗಿ ಹೂ ಗಿಡಗಳನ್ನು ಬೆಳೆಯಲು ಆರಂಭಿಸುವವರಿಗೆ ಯಾವ ಗಿಡಗಳನ್ನು ಬೆಳೆಯಬೇಕು ಎಂಬ ಗೊಂದಲ ಕಾಡುವುದು ಸತ್ಯ. ನಿಮ್ಮ ಸ್ಥಳದ ಹವಾಮಾನ, ಋತು, ನಿಮ್ಮ ಗಾರ್ಡನ್‌ನಲ್ಲಿರುವ ನೀರಿನ ಲಭ್ಯತೆ ಮತ್ತು ಮಣ್ಣಿನ ಗುಣಗಳನ್ನು ಆಧರಿಸಿ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಿ. ಜೊತೆಗೆ ಕೀಟಗಳ ಭಾದೆಯನ್ನು ಮತ್ತು ನಿಮಗೆ ಇಷ್ಟವಾಗುವ ಬಣ್ಣಗಳ ಹೂವುಗಳನ್ನು ಸಹ ಪರಿಗಣಿಸಿ.

ಮಣ್ಣನ್ನು ಸಿದ್ಧಗೊಳಿಸುವುದು
ನಿಮ್ಮ ಗಾರ್ಡನ್ ಮಾಡಬೇಕಾದಲ್ಲಿ ಮೊದಲು ಅದಕ್ಕೆ ಅವಶ್ಯಕವಾದ ಮಣ್ಣನ್ನು ಸಿದ್ಧಪಡಿಸಿಕೊಳ್ಳಲು ಮರೆಯಬೇಡಿ. ಇದನ್ನು ಮಾಡಲು ನೀವು ವಿಫಲವಾದಲ್ಲಿ, ನಿಮ್ಮ ಗಾರ್ಡನ್ ಸಹ ವಿಫಲವಾಗುತ್ತದೆ ಎಂಬುದನ್ನು ಮರೆಯಬೇಡಿ. ಅದಕ್ಕಾಗಿ ಮಣ್ಣು ಮತ್ತು ಸರಿಯಾದ ಪ್ರಮಾಣದ ಸಾವಯವ ಅಥವಾ ಕಾಂಪೊಸ್ಟ್ ಗೊಬ್ಬರವನ್ನು ಬೆರೆಸಿ ಮಣ್ಣನ್ನು ಸಿದ್ಧಪಡಿಸಿಕೊಳ್ಳಿ. ಇದರ ಜೊತೆಗೆ ನೀವು ಸಿದ್ಧಪಡಿಸಿದ ಮಣ್ಣಿಗೆ ನೀರನ್ನು ಹಿಡಿದಿಡುವ ಶಕ್ತಿ ಇದೆಯೇ ಎಂಬುದನ್ನು ಪರೀಕ್ಷಿಸಿ. ಮಣ್ಣಿಗೆ ಈ ಗುಣವನ್ನು ನೀಡುವ ಅಂಶಗಳನ್ನು ಸೇರಿಸಿ. ಆಗ ಈ ಮಣ್ಣು ಪರಿಪೂರ್ಣವಾದ ಮಣ್ಣಾಗಿ ಹೂವುಗಳು ಬೆಳೆಯಲು ಯೋಗ್ಯವಾಗುತ್ತದೆ.

ಗೊಬ್ಬರ
ನಿಮ್ಮ ಗಾರ್ಡನ್‌ನಲ್ಲಿರುವ ಹೂ ಗಿಡಗಳು ಆರೋಗ್ಯಕರವಾಗಿ ಇರಬೇಕು ಎಂದಲ್ಲಿ, ಅದಕ್ಕೆ ತಕ್ಕನಾದ ಮಣ್ಣು, ನೀರು ಇತರೆ ಅಂಶಗಳ ಜೊತೆಗೆ ಗೊಬ್ಬರವು ಸಹ ಅಗತ್ಯವಾಗಿ ಬೇಕು. ಗೊಬ್ಬರವನ್ನು ನಿಯಮಿತವಾಗಿ ಮತ್ತು ಅಗತ್ಯ ಪ್ರಮಾಣಕ್ಕೆ ತಕ್ಕಂತೆ ಹಾಕಿ. ಹಾಗಾಗಿ ಯಾವ ಯಾವ ಗಿಡಗಳಿಗೆ ಎಷ್ಟು ಗೊಬ್ಬರವನ್ನು ಹಾಕಬೇಕು ಎಂದು ತಿಳಿದುಕೊಳ್ಳಿ. ಆದಷ್ಟು ಸಾವಯವ ಗೊಬ್ಬರವನ್ನು ಹಾಕುವುದು ಒಳ್ಳೆಯದು.

ನೀರು
ಗಿಡಗಳನ್ನು ಬೆಳೆಸುವಾಗ ನೀರು ಹೆಚ್ಚು-ಕಡಿಮೆ ಆದರೆ ಕಷ್ಟ. ಅದಕ್ಕಾಗಿ ಎಷ್ಟು ನೀರನ್ನು ಹಾಕಬೇಕೊ ಅದನ್ನು ತಿಳಿದುಕೊಂಡು ಗಿಡಗಳಿಗೆ ನೀರನ್ನು ಸಿಂಪಡಿಸಿ. ನೀರು ಅಗತ್ಯ ಪ್ರಮಾಣದಲ್ಲಿ ದೊರೆತರೆ ಗಿಡಗಳು ನಳನಳಿಸುತ್ತವೆ. ಇದನ್ನು ಗಾರ್ಡೆನಿಂಗ್ ಮಾಡಲು ಆರಂಭಿಸುವ ಪ್ರತಿಯೊಬ್ಬರು ತಿಳಿದುಕೊಂಡಿರಬೇಕು. ನಿಮ್ಮ ತೋಟದ ವರ್ಗಾವಣೆ ಪ್ರಕ್ರಿಯೆಯನ್ನು ಮಾಡುವುದು ಹೇಗೆ?

ಆನ್‌ಲೈನ್ ಫೋರಂ ಸೇರಿಕೊಳ್ಳಿ
ಹೂ ಗಿಡಗಳ ಗಾರ್ಡೆನಿಂಗ್ ಮಾಡಲು ಆರಂಭಿಸುವವರು ಅನುಭವಿಗಳ ಬಳಿ ಸಲಹೆ ಕೇಳುವುದು ಈಗ ಸುಲಭ. ಅದಕ್ಕಾಗಿ ಆನ್‌ಲೈನ್ ಫೋರಂಗಳು ಲಭ್ಯವಿವೆ. ಇಲ್ಲಿ ನಿಮಗೆ ಅನುಭವಿಗಳು ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಾರೆ. ನಿಮ್ಮ ಸಂಶಯಗಳನ್ನು ಪರಿಹರಿಸುತ್ತಾರೆ. ನಿಮ್ಮ ಬಳಿ ಹೂ ಗಿಡಗಳನ್ನು ಬೆಳೆಸಲು ಬೇಕಾದ ಮತ್ತಷ್ಟು ಸಲಹೆಗಳು ಮತ್ತು ಸೂಚನೆಗಳು ಇದ್ದಲ್ಲಿ, ಅದನ್ನು ಇಲ್ಲಿ ಹಂಚಿಕೊಳ್ಳಿ.

English summary

Flower Gardening Tips For Beginners

Gardening is a good hobby to keep you engaged and active. Also, if you take a professional approach towards gardening, you can make it a good source of income too. No matter how big or small your yard is, making a flower garden is an easy task when you think creatively. An experienced garden lover should only focus on maintaining a garden well.
Story first published: Wednesday, January 6, 2016, 15:28 [IST]
X
Desktop Bottom Promotion