For Quick Alerts
ALLOW NOTIFICATIONS  
For Daily Alerts

ಮದುವೆ ಖರ್ಚಿನ ಪಟ್ಟಿ ತುಂಬಾ ದೊಡ್ಡದಾಯಿತೇ?

By Arshad
|

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬುದೊಂದು ಗಾದೆ. ಅದರಲ್ಲೂ ಮದುವೆ ಎಂದರಂತೂ ಖರ್ಚಿಗೆ ಎಣೆಯೇ ಇಲ್ಲದ, ಎಷ್ಟೋ ಅನಾವಶ್ಯಕ ಖರ್ಚುಗಳನ್ನು ಅನಿವಾರ್ಯವಾಗಿ ಭರಿಸಲೇಬೇಕಾದ, ಹಿರಿಯರಿಗೆ ತಲೆಬಿಸಿ ತರುವ ವಿಷಯ. ಇತ್ತ ಮನೆಯ ಘನತೆಯನ್ನೂ ಉಳಿಸಿಕೊಳ್ಳಬೇಕು, ಅತ್ತ ಖರ್ಚನ್ನೂ ನಿಭಾಯಿಸಬೇಕು.

ಏಕೆಂದರೆ ನಮ್ಮ ದೇಶದಲ್ಲಿ ಮದುವೆಯ ವಿಷಯ ಬಂದರೆ ಇಡಿಯ ಜೀವಮಾನ ಉಳಿಸಿದಗಳಿಕೆಯನ್ನು ಒಂದೇ ದಿನದಲ್ಲಿ ಖರ್ಚು ಮಾಡಿಸದಿದ್ದರೆ ಅದು ಮದುವೆಯೇ ಅಲ್ಲ. ಇದಕ್ಕೆಂದೇ ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಮದುವೆಗಾಗಿ ಹಣವನ್ನು ಉಳಿಸುತ್ತಾ ಬರುವುದೇ ಹೆಚ್ಚಿನವರು ಅನುಸರಿಸುವ ಮಾರ್ಗ. ಸರಳವಾಗಿ ಮದುವೆ ಮಾಡೋಣ ಎಂದು ಯಾರಾದರೂ ಸಲಹೆ ಮಾಡಿದರೆ ಎಲ್ಲಾ ಕಡೆಗಳಿಂದ ಇದಕ್ಕೆ ವಿರೋಧ ಎದುರಾಗುತ್ತದೆ.

ನಮಗಿಂತಲೂ ಆರ್ಥಿಕವಾಗಿ ಹಿಂದುಳಿದ ಇನ್ನಾರೋ ಮಾಡಿದ ಮದುವೆಯನ್ನು ಉದಾಹರಿಸಿ ಅವರಿಗಿಂತ ನಾವೇನು ಕಡಿಮೆ ಎಂಬ ಧೋರಣೆ ಅನುಸರಿಸಲಾಗುತ್ತದೆ. ಉದಾಹರಣೆಗೆ ಅವರು ತಮ್ಮ ಮನೆಯ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದಾಗ ಪ್ರತಿ ಪತ್ರಿಕೆಗೆ ಐವತ್ತು ರೂಪಾಯಿ ಖರ್ಚಾಯಿತಂತೆ, ಹಾಗಾದರೆ ನಮ್ಮ ಪತ್ರಿಕೆ ಕನಿಷ್ಠ ಅರವತ್ತು ರೂಪಾಯಿ ಇರಲೇ ಬೇಕು.

ಇಂತಹ ಧೋರಣೆಯಿಂದ ಇಂದು ನಮಗೆ ಲಭ್ಯವಾಗುತ್ತಿರುವ ಮದುವೆಯ ಆಮಂತ್ರಣ ಪತ್ರಿಕೆಗಳೇ ನೂರಾರು ರೂಪಾಯಿ ಬೆಲೆಬಾಳುವಂತಹದ್ದಿರುತ್ತವೆ. ಈಗೆ ಸಣ್ಣ ಪುಟ್ಟ ದುಂದು ವೆಚ್ಚ ನಮ್ಮನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತದೆ, ಹಾಗಾದರೆ ಇವುಗಳಿಂದೆಲ್ಲಾ ಪಾರಾಗುವುದು ಹೇಗೆ? ಬನ್ನಿ ಮುಂದೆ ಓದಿ... ಮದುವೆಯ ಬಳಿಕ ಹುಡುಗಿಯರು ಏಕೆ ಇಷ್ಟೊಂದು ಬದಲಾಗಿ ಬಿಡುತ್ತಾರೆ?

Ways to Cut Your Wedding Costs

ಮದುವೆಯ ದಿನಾಂಕವನ್ನು ತುಂಬಾ ದೂರ ಇಟ್ಟುಕೊಳ್ಳಬೇಡಿ
ಮದುವೆಯ ದಿನಾಂಕ ಗೊತ್ತುಮಾಡಿಕೊಳ್ಳಲು ಇಂದು ಮುಖ್ಯವಾಗಿ ಬೇಕಾಗಿರುವುದು ಕಲ್ಯಾಣ ಮಂಟಪ ಅಥವಾ ಮದುವೆ ಹಾಲ್‌ನ ಲಭ್ಯತೆ. ನಿಮಗೆ ಸೂಕ್ತವಾದ ಮಂಟಪ ಯಾವ ದಿನಾಂಕದಲ್ಲಿ ಲಭ್ಯವಿದೆ ಎಂದು ನೋಡಿಕೊಂಡು ಹತ್ತಿರವಿರುವ ಮತ್ತು ಸೂಕ್ತ ದಿನಾಂಕವನ್ನು ಆಯ್ಕೆಮಾಡಿಕೊಳ್ಳಿ. ಯಾವುದೇ ದಿನಾಂಕವಾದರೂ ಅದು ನಿಮ್ಮ ಆಪ್ತರಲ್ಲಿ ಒಂದಿಬ್ಬರಿಗಾದರೂ ಅನಾನುಕೂಲತೆಯಾಗಿ ಇದ್ದೇ ಇರುತ್ತದೆ. ಈ ಬಗ್ಗೆ ತಲೆಬಿಸಿಮಾಡಿಕೊಳ್ಳದೇ ಹತ್ತಿರದ ದಿನಾಂಕವನ್ನೇ ಆರಿಸಿಕೊಳ್ಳಿ.

ಸ್ಥಳೀಯವಾಗಿ ಮತ್ತು ಆಯಾ ಋತುಗಳಲ್ಲಿ ದೊರಕುವ ಹೂವುಗಳನ್ನೇ ಆಯ್ಕೆ ಮಾಡಿ
ಯಾರೋ ಶ್ರೀಮಂತರು ಯಾವುದೋ ದೂರದ ಊರಿನಿಂದ ವಿಶೇಷ ಹೂವುಗಳನ್ನು ತರಿಸಿ ಅಲಂಕಾರ ಮಾಡಿದ್ದಂತೆ, ವೇದಿಕೆ ಬಹಳ ಸುಂದರವಾಗಿತ್ತು ಎಂಬೆಲ್ಲಾ ಮಾತಿಗೆ ಮರುಳಾಗಬೇಡಿ. ಯಾವುದೇ ಹೂವಾದರೂ ಒಂದು ದಿನದ ಬಳಿಕ ಬಾಡಿ ಕಸದ ಬುಟ್ಟಿ ಸೇರುವುದೇ ಸರಿ. ನಿಮ್ಮ ಊರಿನಲ್ಲಿಯೇ ಸುಲಭವಾಗಿ ಸಿಗಬಹುದಾದ ಮತ್ತು ಆಯಾ ಋತುಗಳಲ್ಲಿ ಯಥೇಚ್ಛವಾಗಿರುವ ಹೂವುಗಳನ್ನೇ ಆಯ್ದುಕೊಳ್ಳಿ. ಹೊರಗಿನಿಂದ ತರಿಸುವ ಹೂವಿಗೆ ನಿಮ್ಮ ಹೂವಾಡಿಗ ಬಹಳ ಬೆಲೆ ವಿಧಿಸಬಹುದು. ಮುರಿದು ಹೋದ ನಿಶ್ಚಿತಾರ್ಥ ಕಹಿ ನೆನಪನ್ನು ಮರೆಯಿರಿ

ಮದುವೆಯ ಆಮಂತ್ರಣ ಪತ್ರಿಕೆ ಸರಳವಾಗಿರಲಿ
ಇಂದು ಮದುವೆಯ ಭವ್ಯತೆಯನ್ನು ಆಮಂತ್ರಣ ಪತ್ರಿಕೆಯಲ್ಲಿಯೇ ಮನವರಿಕೆ ಮಾಡಿಕೊಡುತ್ತಿದ್ದೇವೆ ಎಂಬು ಸಾರುವ ಭಾರೀ ಮತ್ತು ಅತಿ ದುಬಾರಿ ಪತ್ರಿಕೆಗಳು ಬಳಕೆಯಲ್ಲಿವೆ. ಇದನ್ನು ಸ್ವೀಕರಿಸಿದವರಲ್ಲಿ ಮಾನವೀಯ ಕಾಳಜಿ ಇರುವ ಯಾರಾದರೂ 'ಬರೆಯ ಒಂದು ಪತ್ರಿಕೆಗೆ ಏಕಿಷ್ಟು ಆಡಂಬರ?' ಎಂದೇ ಪ್ರತಿಕ್ರಿಯಿಸುತ್ತಾರೆ.


ಅಷ್ಟಕ್ಕೂ ಆಮಂತ್ರಣ ಪತ್ರಿಕೆ ಅತಿ ಶ್ರೀಮಂತರ ಮದುವೆಯ ಹಾಲ್‌ನ ಒಳಹೋಗಲು ಒಂದು ಟಿಕೆಟ್ ಇದ್ದಂತಿದ್ದಾಗ ಮಾತ್ರ ಜನರು ಜೋಪಾನವಾಗಿಟ್ಟುಕೊಳ್ಳುತ್ತಾರೆಯೇ ಹೊರತು ಮಧ್ಯಮವರ್ಗದ ಮದುವೆಯಲ್ಲಂತೂ ಯಾರೂ ಪತ್ರಿಕೆಗಳನ್ನು ತೆಗೆದಿಡುವ ಗೋಜಿಗೇ ಹೋಗುವುದಿಲ್ಲ. ಹೆಚ್ಚಿನ ಪಕ್ಷ ಪತ್ರಿಕೆ ನೀಡಿದ್ದ ಮರುದಿನದಲ್ಲಿಯೇ ಎಲ್ಲೋ ಕಾಣೆಯಾಗಿರುತ್ತದೆ. ಹೀಗೆ ಕಾಣೆಯಾಗುವ ಪತ್ರಿಕೆಗೆ ಹಣ ಸುರಿಯುವುದು ಅವಶ್ಯವೇ? ಬದಲಿಗೆ ಇಂದು ಸಿದ್ಧ ರೂಪದಲ್ಲಿಯೇ ಅಗ್ಗವಾಗಿ ಪತ್ರಿಕೆಗಳು ದೊರಕುತ್ತಿವೆ. ಇದರಲ್ಲಿ ಸರಳವಾಗಿ, ಒಂದೇ ಬಣ್ಣದ ಶಾಯಿಯಲ್ಲಿ ವಿವರಗಳನ್ನು ಮುದ್ರಿಸಿದರೆ ಸಾಕು. ಇದು ನಿಮ್ಮ ಮದುವೆಯ ಖರ್ಚನ್ನು ಆಗಾಧವಾಗಿ ಉಳಿಸುತ್ತದೆ.

ಉದಯೋನ್ಮುಖರಿಗೆ ಅವಕಾಶ ಕೊಡಿ
ಎಷ್ಟೋ ಮದುವೆಗಳಲ್ಲಿ ಬ್ಯಾಂಡ್ ಅಥವಾ ಆರ್ಕೆಸ್ಟ್ರಾ ತಂಡಗಳನ್ನು ಕರೆಸುವುದು ಅನಿವಾರ್ಯವಾಗುತ್ತದೆ. ಈ ಅಗತ್ಯತೆಯನ್ನು ಪೂರೈಸಲು ಈಗತಾನೇ ಈ ಕ್ಷೇತ್ರದಲ್ಲಿ ಕಾಲಿಡುತ್ತಿರುವವರಿಗೆ ಅವಕಾಶ ಮಾಡಿಕೊಡಿ. ಇವರಿಗೆ ಕಡಿಮೆ ಖರ್ಚು ನೀಡಿದರೆ ಸಾಕಾಗುತ್ತದೆ. ಭಾರೀ ಬೆಲೆಯ ಬ್ಯಾಂಡ್‌ನಿಂದ ಅತ್ಯುತ್ತಮವಾದ 'ಅಬ್ಬರ' ದೊರೆತರೂ ಇಂದಿನ ಉದಯೋನ್ಮುಖರು ಅವರಷ್ಟೇ ಉತ್ತಮವಾಗಿ ಸೇವೆ ನೀಡಬಲ್ಲರು. ಆದರೆ ಇವರ ಸೇವೆ ನಿಮಗೆ ಸೂಕ್ತವೋ ಅಥವಾ ನಿಜವಾಗಿಯೂ ಇವರ ಸಂಗೀತ ಉತ್ತಮ ಗುಣಮಟ್ಟದ್ದೋ ಎಂಬುದನ್ನು ಮೊದಲೇ ನೋಡಿಕೊಳ್ಳುವುದು ಅಗತ್ಯ. ಇಲ್ಲದಿದ್ದರೆ ಹಣ ಉಳಿಸಲು ಹೋಗಿ ಮಾನ ಕಳೆದುಕೊಳ್ಳಬೇಕಾದೀತು!

ಮದುವೆಯನ್ನು ಹಗಲಿನಲ್ಲಿಯೇ ಇಟ್ಟುಕೊಳ್ಳಿ
ಮದುವೆಗೆ ಹೋಗುವುದು ಎಂದರೆ ಮದುವೆ ಊಟಕ್ಕೆ ಎಂದೇ ನಮ್ಮಲ್ಲಿ ಜನಜನಿತವಾಗಿದೆ. ಯಾವುದೇ ಊರಿನಲ್ಲಿ ಮದುವೆ ಇರಲಿ, ಮದುವೆ ಹಾಲ್ ನ ಅಕ್ಕಪಕ್ಕದ ಸ್ಥಳೀಯರು ಕರೆಯದೆಯೇ ಸುಮಾರು ಮುನ್ನೂರರಿಂದ ಐನೂರು ಜನರು ಬಂದೇ ಬರುತ್ತಾರೆ. ಅಲ್ಲದೇ ಮದುವೆಯ ಊಟದ ಖರ್ಚು ಮದ್ಯಾಹ್ನದಕ್ಕಿಂತಲೂ ರಾತ್ರಿಯದ್ದು ದುಬಾರಿ. ಅಲ್ಲದೇ ರಾತ್ರಿಯ ಊಟ ಎಂದರೆ ಮುನ್ನೂರರಿಂದ ಐನೂರು ಇದ್ದವರು ಎಂಟುನೂರರಿಂದ ಸಾವಿರವಾಗುತ್ತಾರೆ! ಇದನ್ನು ತಡೆಯಲು ಸಾಧ್ಯವಿಲ್ಲ.


ಅಲ್ಲದೇ ಪರವೂರುಗಳಿಂದ ಬರಬೇಕಾದವರು ಮಧ್ಯಾಹ್ನದ ಊಟ ಮಾಡಿ ಅಂದೇ ಹಿಂದಿರುಗುತ್ತಾರೆ. ರಾತ್ರಿ ಊಟ ಎಂದರೆ ಅವರಿಗೆಲ್ಲಾ ವಸತಿ ಏರ್ಪಾಡು ಮಾಡಿಕೊಡಬೇಕಾಗುತ್ತದೆ. ಆದ್ದರಿಂದ ಮಧ್ಯಾಹ್ನದ ಊಟ ಇರುವಂತೆ, ಮತ್ತು ಒಂದೇ ದಿನದಲ್ಲಿ ವಿವಾಹದ ಎಲ್ಲಾ ಕಾರ್ಯಗಳು ಮುಗಿದುಹೋಗುವಂತೆ ಏರ್ಪಾಡು ಮಾಡಿಕೊಂಡರೆ ಒಂದೇ ಖರ್ಚಿನಲ್ಲಿ ಎಲ್ಲವೂ ಮುಗಿದುಹೋಗುತ್ತದೆ.
English summary

Ways to Cut Your Wedding Costs

Weddings these days have become a costly affair. From the cost of invitation cards to cakes and everything in between pile up the cost. Here are few smart ways to cut your wedding costs. Spending your entire savings for your "D day" and then start saving again from the scratch makes no sense.
X
Desktop Bottom Promotion