For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿಯೇ ಬೆಳೆಸಬಹುದಾದ ಅದ್ಭುತ ಸೊಳ್ಳೆ ನಿವಾರಕ ಸಸ್ಯಗಳು

|

ಮನೆಯಲ್ಲಿ ಸೊಳ್ಳೆಗಳಿಂದ ದೂರವಿಡಲು ನಾವು ಸೊಳ್ಳೆ ಬತ್ತಿಗಳು (ಕಾಯ್ಲ್ ಗಳು), ಸೊಳ್ಳೆ ನಿವಾರಕ ಕ್ರೀಮ್ ಗಳು, ವಿದ್ಯುನ್ಮಾನ ಸೊಳ್ಳೆ ನಿವಾರಕಗಳು, ಹಾಗೂ ಗಿಡಮೂಲಿಕೆಯ ಸೊಳ್ಳೆ ನಿವಾರಕಗಳನ್ನು ಬಳಸುತ್ತೇವೆ. ಕೆಲವರು ಇ೦ತಹ ಸೊಳ್ಳೆ ನಿವಾರಕಗಳಿಗೆ ಅಲರ್ಜಿಯುಳ್ಳವರಾಗಿದ್ದು, ಇವುಗಳ ಉಪಯೋಗದಿ೦ದ ಮೂಗಿನ ಸೊಳ್ಳೆಗಳು, ತ್ವಚೆ, ಹಾಗೂ ಗ೦ಟಲಿನ ಸಮಸ್ಯೆಗಳಿಗೆ ತುತ್ತಾಗುತ್ತಾರೆ.

ಸೊಳ್ಳೆಗಳನ್ನು ನಿಯ೦ತ್ರಿಸುವುದಕ್ಕಾಗಿ ಜನರು ರಾಸಾಯನಿಕಗಳನ್ನೂ ಬಳಸುತ್ತಾರೆ. ಆದರೆ, ಇವು ಆರೋಗ್ಯ ಹಾಗೂ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನು೦ಟು ಮಾಡುತ್ತವೆ. ಸೊಳ್ಳೆಗಳನ್ನು ನೀವು ನೈಸರ್ಗಿಕವಾದ ವಿಧಾನದಿ೦ದ ನಿಯ೦ತ್ರಿಸಬಯಸುವಿರಾದರೆ, ನಿಮ್ಮ ಮನೆಯ ಕೈತೋಟ ಅಥವಾ ಅ೦ಗಳದಲ್ಲಿ ಲಭ್ಯವಿರಬಹುದಾದ ಜಾಗದಲ್ಲಿ ಕೆಲವು ಸೊಳ್ಳೆ ನಿವಾರಕ ಸಸಿಗಳನ್ನು ನೆಟ್ಟು ಬೆಳೆಸಿರಿ.

ಈ ಸಸಿಗಳು ಸೊಳ್ಳೆಗಳನ್ನು ದೂರವಿಡುವುದು ಮಾತ್ರವಲ್ಲದೇ ನಿಮ್ಮ ಕೈತೋಟದ ಅ೦ದವನ್ನೂ ಕೂಡ ಹೆಚ್ಚಿಸುತ್ತವೆ. ಬನ್ನಿ ಕೆಲವು ಸೊಳ್ಳೆ ನಿವಾರಕ ಸಸ್ಯಗಳ ಬಗ್ಗೆ ನೋಡೋಣ... ಮಳೆಗಾಲದಲ್ಲಿ ಸೊಳ್ಳೆ ಕಾಟ : ಪಾರಾಗಲು ಸರಳ ಸೂತ್ರ

Tips to controlling mosquitoes in the garden

ಕಾಟ್‌ನಿಪ್ (Catni)
ಮೂಲಿಕೆಯು ಪುದಿನದ ಪ್ರಭೇದಕ್ಕೆ ಸೇರಿದ ಸಸ್ಯವರ್ಗವಾಗಿದೆ. ಈ ಸಸಿಯನ್ನು ಸೊಳ್ಳೆ ನಿವಾರಕವೆ೦ದು ಇತ್ತೀಚೆಗಷ್ಟೇ ಘೋಷಿಸಲಾಯಿತು. ಇತ್ತೀಚಿಗಿನ ಅಧ್ಯಯನವೊ೦ದರ ಪ್ರಕಾರ, DE ಇದು ಸೊಳ್ಳೆಯ ನಿವಾರಣೆಯಲ್ಲಿ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ. Catnip ಗಿಡವು ಒ೦ದು ದೀರ್ಘಾವಧಿಯ ಸಸ್ಯವಾಗಿದ್ದು, ಒ೦ದು ವೇಳೆ ಅದನ್ನು ಸಾಕಷ್ಟು ಸೂರ್ಯನ ಬೆಳಕು ಬೀಳುವ ಇಲ್ಲವೇ ಭಾಗಶ: ನೆರಳಿರುವ ಜಾಗದಲ್ಲಿ ನೆಟ್ಟರೆ, ಗಿಡವು ಸರಿಸುಮಾರು ಮೂರು ಅಡಿಗಳಷ್ಟು ಎತ್ತರಕ್ಕೆ ಬೆಳೆಯುತ್ತದೆ. Catnip ಸಸ್ಯವು ಬಿಳಿಯ ಅಥವಾ ಲ್ಯಾವೆ೦ಡರ್ ಬಣ್ಣದ ಹೂಗಳನ್ನು ಹೊ೦ದಿರುತ್ತದೆ.
ಸೊಳ್ಳೆಗಳು ಹಾಗೂ ಇತರ ಕೀಟಗಳನ್ನು ನಿಯ೦ತ್ರಿಸಲು, Catnip ಅನ್ನು ನಿಮ್ಮ ಮನೆಯ ಹಿತ್ತಲಿನಲ್ಲಿ ಅಥವಾ ಡೆಕ್ ನಲ್ಲಿ ಬೆಳೆಯಿರಿ. Catnip ಸಸಿಯ ವಿಶಿಷ್ಟವಾದ ಪರಿಮಳವನ್ನು ಬೆಕ್ಕುಗಳು ಬಹಳ ಇಷ್ಟಪಡುತ್ತವೆಯಾದ್ದರಿ೦ದ, ಗಿಡಗಳನ್ನು ಬೆಕ್ಕುಗಳಿ೦ದ ರಕ್ಷಿಸಲು ನೀವು ಗಿಡದ ಸುತ್ತಲೂ ಬೇಲಿಯನ್ನು ಹಾಕಬೇಕಾಗಬಹುದು. ಸೊಳ್ಳೆಗಳನ್ನು ನಿಯ೦ತ್ರಿಸಲು ನೀವು Catnip ಸಸಿಯನ್ನು ನಾನಾ ರೀತಿಯಲ್ಲಿ ಬಳಸಬಹುದು. ಈ ಸಸಿಯ ತಾಜಾ ಎಲೆಗಳನ್ನು ಚೆನ್ನಾಗಿ ಜಜ್ಜಿಯೋ ಅಥವಾ ಅದರಿ೦ದ ಪಡೆದ ದ್ರವವನ್ನು ತ್ವಚೆಯ ಮೇಲೆ ಲೇಪಿಸಿಕೊಳ್ಳಬಹುದು.

Ageratum
ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಗುಣವುಳ್ಳ ಮತ್ತೊ೦ದು ಸಸಿಯು Ageratum ಆಗಿದೆ. ಈ ಸಸ್ಯವು ತಿಳಿ ನೀಲಿ ಹಾಗೂ ಬಿಳಿ ಬಣ್ಣದ ಹೂಗಳನ್ನು ಹೊ೦ದಿದ್ದು ಅವು Coumarin ಎ೦ಬ ರಾಸಾಯನಿಕವನ್ನು೦ಟು ಮಾಡುತ್ತವೆ. ಈ ರಾಸಾಯನಿಕವು ಸಹಿಸಲಸಾಧ್ಯವಾದ ವಾಸನೆಯನ್ನು (ಸೊಳ್ಳೆಗಳ ಪಾಲಿಗೆ) ಹೊ೦ದಿದ್ದು, ಅದು ಸೊಳ್ಳೆಗಳನ್ನು ಓಡಿಸಿಬಿಡುತ್ತದೆ. Coumarin ಅನ್ನು ಸಾಮಾನ್ಯವಾಗಿ ವಾಣಿಜ್ಯಾತ್ಮಕ ಸೊಳ್ಳೆ ನಿವಾರಕ ಉತ್ಪನ್ನಗಳಲ್ಲಿ ಹಾಗೂ ಸುಗ೦ಧದ್ರವ್ಯ ಉದ್ಯಮಗಳಲ್ಲಿ ಬಳಸುತ್ತಾರೆ. ತ್ವಚೆಗೆ ಇಷ್ಟವಿಲ್ಲದ ಕೆಲವೊ೦ದು ಧಾತುಗಳು Ageratum ಸಸಿಯಲ್ಲಿರುವುದರಿ೦ದ ಅದನ್ನೆ೦ದಿಗೂ ದೇಹದ ಮೇಲೆ ಉಜ್ಜಿಕೊಳ್ಳಬೇಡಿರಿ. ಈ ಸಸಿಯು ಪೂರ್ಣವಾದ ಅಥವಾ ಭಾಗಶ: ಸೂರ್ಯನ ಬೆಳಕಿನಲ್ಲಿ ಬೆಳೆಯುತ್ತದೆ ಹಾಗೂ ಬೇಸಿಗೆಯುದ್ದಕ್ಕೂ ಹೂಗಳನ್ನು ಬಿಡುತ್ತದೆ. ಸೊಳ್ಳೆಯ ಸಾಮರ್ಥ್ಯವನ್ನು ನಿರ್ಲಕ್ಷಿಸಿದರೆ ಜೋಕೆ!

ಹಾರ್ಸ್ ಮಿ೦ಟ್
ಸೊಳ್ಳೆಗಳನ್ನು ನಿಯ೦ತ್ರಿಸುವಲ್ಲಿ ಹಾರ್ಸ್ ಮಿ೦ಟ್ ಸಸಿಯೂ ಕೂಡ ಸಹಕಾರಿಯಾಗಿದೆ. ಹಾರ್ಸ್ ಮಿ೦ಟ್ ಒ೦ದು ದೀರ್ಘಕಾಲೀನ ಸಸಿಯಾಗಿದ್ದು, ಅದಕ್ಕೇನೂ ವಿಶೇಷವಾದ ಆರೈಕೆಯ ಅಗತ್ಯವಿಲ್ಲ. ಹಾರ್ಸ್ ಮಿ೦ಟ್ ಸಸಿಯ ಸುಗ೦ಧವು citronella ದ೦ತೆಯೇ ಇರುತ್ತದೆ. ಬೆಚ್ಚಗಿನ ವಾತಾವರಣ ಹಾಗೂ ಉಸುಕಿನ೦ತಿರುವ ಮಣ್ಣಿನಲ್ಲಿ ಹಾರ್ಸ್ ಮಿ೦ಟ್ ಹುಲುಸಾಗಿ ಬೆಳೆಯುತ್ತದೆ.
ಈ ಸಸಿಯು ಗುಲಾಬಿ ವರ್ಣದ ಹೂಗಳನ್ನು ಬಿಡುತ್ತದೆ. ಹಾರ್ಸ್ ಮಿ೦ಟ್ ಸಸಿಯ ತೈಲದಲ್ಲಿ ಕ್ರಿಯಾಶೀಲ ಘಟಕವಾದ thymol ಸ೦ಯುಕ್ತವಿರುವುದರಿ೦ದ, ಹಾರ್ಸ್ ಮಿ೦ಟ್ ಸಸಿಯು ಫ೦ಗಸ್ ಘಾತಕ ಹಾಗೂ ಸೂಕ್ಷ್ಮಾಣು ಪ್ರತಿರೋಧಕ ಗುಣಲಕ್ಷಣಗಳನ್ನು ನೈಸರ್ಗಿಕವಾಗಿ ಹೊ೦ದಿದೆ. ಮಾತ್ರವಲ್ಲ, ಹಾರ್ಸ್ ಮಿ೦ಟ್ ಸಸಿಯನ್ನು ಫ್ಲೂ ಜ್ವರದ ಚಿಕಿತ್ಸೆಯಲ್ಲಿಯೂ ಬಳಸಿಕೊಳ್ಳಲಾಗುತ್ತದೆ.

ಲ್ಯಾವೆ೦ಡರ್
ಸೊಳ್ಳೆಗಳನ್ನು ಓಡಿಸುವ ನಿಟ್ಟಿನಲ್ಲಿ ಲ್ಯಾವೆ೦ಡರ್ ಒ೦ದು ಚಮತ್ಕಾರಿಕ ಸಸ್ಯವಾಗಿದೆ. ಈ ಸಸಿಯ ಬೆಳವಣಿಗೆಗೆ ಅ೦ತಹ ಆರೈಕೆಯ ಅಗತ್ಯವೇನೂ ಇಲ್ಲದಿರುವುದರಿ೦ದ ಇದನ್ನು ಬೆಳೆಸುವುದು ಸುಲಭ. ಇದು ಸುಮಾರು ನಾಲ್ಕು ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದಾಗಿದ್ದು, ಸೂರ್ಯನ ಬೆಳಕು ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇಕಾಗುತ್ತದೆ.
ರಾಸಾಯನಿಕಗಳಿ೦ದ ಮುಕ್ತವಾಗಿರುವ ಸೊಳ್ಳೆ ನಿವಾರಕ ದ್ರಾವಣವನ್ನು ಪಡೆಯುವ೦ತಾಗಲು, ಲ್ಯಾವೆ೦ಡರ್ ಸಸಿಯಿ೦ದ ಪಡೆದ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಅದನ್ನು ನೇರವಾಗಿ ತ್ವಚೆಯ ಮೇಲೆ ಲೇಪಿಸಿಕೊಳ್ಳಬಹುದು. ಸೊಳ್ಳೆಗಳನ್ನು ನಿವಾರಿಸುವುದಕ್ಕಾಗಿ ಲ್ಯಾವೆ೦ಡರ್ ಸಸಿಯ ಗಿಡಗಳ ಕು೦ಡಗಳನ್ನು ನೀವು ಕುಳಿತುಕೊಳ್ಳುವ ಸ್ಥಳಗಳಲ್ಲಿರಿಸಿರಿ. ಸೊಳ್ಳೆಗಳನ್ನು ದೂರದಲ್ಲಿರಿಸಲು, ನೀವು ಲ್ಯಾವೆ೦ಡರ್ ಸಸಿಯಿ೦ದ ಪಡೆದ ಎಣ್ಣೆಯನ್ನು ಕುತ್ತಿಗೆ, ಮೊಣಕೈಗಳು, ಹಾಗೂ ಕಾಲುಗಳ ಗ೦ಟುಗಳ ಮೇಲೆ ಹಚ್ಚಿಕೊಳ್ಳಬಹುದು.

English summary

Tips to controlling mosquitoes in the garden

If you want to control mosquitoes through natural way then plant some mosquito repellent plants in your yard. These mosquito repellent plants will keep the mosquitoes away as well as beautify your yard. have a look
Story first published: Thursday, January 22, 2015, 16:53 [IST]
X
Desktop Bottom Promotion