For Quick Alerts
ALLOW NOTIFICATIONS  
For Daily Alerts

ಗಿಡ ಸೊಂಪಾಗಿ ಬೆಳೆಯುವಂತೆ ಮಾಡುವ ಜೌಗು ಮಣ್ಣಿನ ವೈಶಿಷ್ಟ್ಯವೇನು?

|

ಮನೆಯಲ್ಲಿ ತೋಟ ಮಾಡುವುದು ಅಥವಾ ಗಾರ್ಡೆನಿಂಗ್ ಮಾಡುವುದು ಹೇಳಲು ಮತ್ತು ಕೇಳಲು ಚೆನ್ನಾಗಿರುತ್ತದೆ. ಆದರೆ ಇದು ಹವ್ಯಾಸ ಅಥವಾ ವೃತ್ತಿಪರ ಎರಡರಲ್ಲಿಯೂ ಸಹ ಕೆಲವೊಂದು ತಾಂತ್ರಿಕ ನೈಪುಣ್ಯತೆಯನ್ನು ಬಯಸುತ್ತದೆ. ಒಂದು ವೇಳೆ ನೀವು ಸುಂದರವಾದ ತೋಟ ಮಾಡುವಲ್ಲಿ ಯಶಸ್ವಿಯಾಗಬೇಕೆಂದಲ್ಲಿ, ಮೊದಲು ನಿಮ್ಮ ತೋಟದಲ್ಲಿರುವ ಮಣ್ಣು ಎಂತಹುದು ಎಂಬುದನ್ನು ತಿಳಿದುಕೊಳ್ಳಬೇಕು.

ಅದಕ್ಕೆ ಸರಿಹೊಂದುವ ಗಿಡಗಳನ್ನು ಅದರಲ್ಲಿ ಬೆಳೆಯಬೇಕು. ಇದೆಲ್ಲದರ ಜೊತೆಗೆ ಅವುಗಳಿಗೆ ಬೇಕಾದ ಆರೈಕೆಯನ್ನು ಕಾಲಕಾಲಕ್ಕೆ ಮಾಡುತ್ತ ಇರಬೇಕು. ಅದಕ್ಕಾಗಿ ನಾವು ಇಲ್ಲಿ ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡಿದ್ದೇವೆ, ಅದನ್ನು ಪಾಲಿಸಿ ಒಳ್ಳೆಯ ಫಸಲನ್ನು ಪಡೆಯಿರಿ.

ಮೊಟ್ಟ ಮೊದಲಿಗೆ ನೀವು ತೋಟ ಮಾಡಬೇಕೆಂದಾದಲ್ಲಿ, ಅದು ಒದ್ದೆ ಅಥವಾ ಜೌಗು ನೆಲವೇ, ಅಲ್ಲವೇ? ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಿ. ಒಳ್ಳೆಯ ಫಸಲು ಬರಲು ಮಣ್ಣಿನಲ್ಲಿ 25% ಗಾಳಿ ಮತ್ತು 25% ನೀರು ಉಳಿಸಿಕೊಳ್ಳುವ ಶಕ್ತಿ ಇರಬೇಕು. ಜೌಗು ಮಣ್ಣಿನಲ್ಲಿ ಅಧಿಕ ನೀರಿನ ಧಾರಣ ಶಕ್ತಿ ಸಾಮರ್ಥ್ಯವು ಇರುತ್ತದೆ. ಈ ಅಂಶವು ತೋಟ ಮಾಡಲು ಸೂಕ್ತವಾಗಿರುವುದಿಲ್ಲ. ಹೆಚ್ಚುವರಿ ಇರುವ ನೀರು ಗಿಡಗಳಲ್ಲಿ ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

Gardening Tips For Wet Soil

ಉದಾ: ಈ ಬಗೆಯ ಮಣ್ಣು, ಜೇಡಿ ಮಣ್ಣಾಗಿದ್ದಲ್ಲಿ, ಅದು ನೀರನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಇಂತಹ ನೆಲವು ಸಸಿಗಳ ಬೆಳವಣಿಗೆಗೆ ಬೇಕಾದ ಪೂರಕ ವಾತಾವರಣವನ್ನು ನೀಡುವುದಿಲ್ಲ. ಹಾಗು ಗಿಡಗಳು ಸಹ ಇಂತಹ ನೆಲದಲ್ಲಿ ಸರಿಯಾಗಿ ಬೆಳವಣಿಗೆ ಹೊಂದುವುದಿಲ್ಲ. ಹಾಗಾದರೆ, ನೀವು ತೋಟ ಮಾಡಲು ಹೋಗುತ್ತಿರುವ ನೆಲ ಎಂತಹದು, ಜೌಗು ನೆಲವೋ, ಅಲ್ಲವೋ ಎಂಬುದನ್ನು ಹೇಗೆ ಪರೀಕ್ಷಿಸುವುದು? ಅದಕ್ಕೆ ಹೀಗೆ ಮಾಡಿ;- ನೀವು ತೋಟ ಮಾಡಬೇಕೆಂದುಕೊಂಡಿರುವ ನೆಲದಲ್ಲಿ ಒಂದು ಎರಡು ಅಡಿ ಆಳದ ಗುಂಡಿಯೊಂದನ್ನು ತೆಗೆಯಿರಿ. ಅದಕ್ಕೆ ರಾತ್ರಿ ನೀರನ್ನು ತುಂಬಿಸಿ, ಅದರ ಮೇಲೆ ಯಾವುದಾದರು ಶೀಟಿನಿಂದ ಮುಚ್ಚಿ.

ರಾತ್ರಿಯೆಲ್ಲ ಅದನ್ನು ಹಾಗೆಯೇ ಬಿಡಿ. ಬೆಳಗ್ಗೆ ಬಂದು ನೋಡಿ, ಒಂದು ವೇಳೆ ನೀರು ಹಿಂಗಿದ್ದರೆ ಆ ನೆಲ ತೋಟಕ್ಕೆ ಯೋಗ್ಯವಾದ ನೆಲವಾಗಿರುತ್ತದೆ. ಒಂದು ವೇಳೆ ಆ ಗುಂಡಿಯಲ್ಲಿ ಅರ್ಧ ಭಾಗದಷ್ಟು ನೀರು ನಿಂತಿದ್ದರೆ, ಅದು ನೀವು ಕೈಗೊಳ್ಳಲು ಹೋಗುತ್ತಿರುವ ವೃತ್ತಿ/ ಹವ್ಯಾಸಕ್ಕೆ ಪೂರಕವಲ್ಲ ಎಂದು ತಿಳಿದುಕೊಂಡು, ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಿ. ಬಹುಪಯೋಗಿ ಲಿಂಬೆಯನ್ನು ಕೈತೋಟದಲ್ಲಿ ಬೆಳೆಸುವುದು ಹೇಗೆ?

ಜೌಗು ಮಣ್ಣನ್ನು ಹೇಗೆ ನಿಭಾಯಿಸುವುದು?

ಸಾವಯವ ವಿಧಾನ
ಒಂದು ಕೈಗಾಡಿಯಷ್ಟು ಸಾವಯವ ಪದಾರ್ಥಗಳನ್ನು ಒಂದು ಚದರ ಮೀಟರ್ ಜಾಗದಲ್ಲಿ ಹಾಕಿ. ಇದರಿಂದ ಜೌಗು ಮಣ್ಣು, ಫಲವತ್ತಾದ ಮಣ್ಣಾಗಲು ಸಾಧ್ಯವಾಗುತ್ತದೆ.

ಕೃತಕ ಚರಂಡಿ
ನಿಮ್ಮ ಜಮೀನಿನಲ್ಲಿರುವ ಹೆಚ್ಚುವರಿ ನೀರನ್ನು ಹೊರಹಾಕಲು ನೀವು ಕೊಳವೆಗಳನ್ನು ಬೇಕಾದರೂ ಅಳವಡಿಸಬಹುದು.

ಮಣ್ಣು ಬೆರೆಸುವ ವಿಧಾನ
ಜೌಗು ಮಣ್ಣು ಎಷ್ಟು ಇದೆಯೋ, ಅದರ ಅರ್ಧ ಪ್ರಮಾಣದ ಒಣ ಮಣ್ಣನ್ನು ಬೆರೆಸುವುದರಿಂದ, ಆ ಮಣ್ಣನ್ನು ಫಲವತ್ತಾದ ಮಣ್ಣಾಗಿ ಮಾಡಬಹುದು.

ಜಿಪ್ಸಂ ಬೆರೆಸುವ ವಿಧಾನ
ಜಿಪ್ಸಂ ಅನ್ನು ನಿಮ್ಮ ಜೌಗು ಮಣ್ಣಿನ ಜಮೀನಿಗೆ ಹಾಕುವುದರಿಂದ ಅದರಲ್ಲಿರುವ ತೇವಾಂಶದ ಸಮಸ್ಯೆಯನ್ನು ನಿಭಾಯಿಸಬಹುದು. ಆರೋಗ್ಯ ರಕ್ಷಕ ಶುಂಠಿಯನ್ನು ಮನೆಯಲ್ಲಿ ಬೆಳೆಸುವುದು ಹೇಗೆ?

ಎತ್ತರವನ್ನು ಹೆಚ್ಚಿಸಿ
ಒಂದು ಅರ್ಥ್ ಮೂವರ್ ತಂದು ನಿಮ್ಮ ಜಮೀನಿನ ಎತ್ತರವನ್ನು ಹೆಚ್ಚಿಸಿ. ಆಗ ನೀರು ನಿಲ್ಲುವ ಸಮಸ್ಯೆ ಇಲ್ಲವಾಗುತ್ತದೆ. ಆಗ ನೀರು ಕಟ್ಟಿಕೊಳ್ಳುವುದು, ಜೌಗು ಮುಂತಾದ ಸಮಸ್ಯೆಗಳು ತನ್ನಷ್ಟಕ್ಕೆ ತಾನೇ ಇಲ್ಲವಾಗುತ್ತದೆ.

ಜೌಗು ನೆಲಕ್ಕೆ ಸರಿಹೊಂದುವ ಗಿಡಗಳನ್ನೆ ಬಳಸಿ
ಹೌದು ಇದು ಸಮಸ್ಯೆಗೆ ಎದುರಾಗಿ ಈಜುವ ಬದಲು, ಸಮಸ್ಯೆಯನ್ನೆ ಬಂಡವಾಳವನ್ನಾಗಿ ಮಾಡಿಕೊಳ್ಳುವ ಜಾಣತನವಾಗಿರುತ್ತದೆ. ಆಗ ನಿಮಗೆ ಮಣ್ಣಿನಿಂದ ಉಪಯೋಗವು ಸಹ ಆಗುತ್ತದೆ ಮತ್ತು ಫಸಲು ಸಹ ಅಧಿಕವಾಗಿ ಬರುತ್ತದೆ.

English summary

Gardening Tips For Wet Soil

Gardening though sounds very easy but it is a very technical and demanding hobby/profession. To be successful in doing up your garden beautifully,. Follow few tips for wet soil for a good harvest.
Story first published: Thursday, March 12, 2015, 20:14 [IST]
X
Desktop Bottom Promotion