For Quick Alerts
ALLOW NOTIFICATIONS  
For Daily Alerts

ಕೈತೋಟದಲ್ಲಿ ಪಪ್ಪಾಯಿಯ ಗಿಡವನ್ನು ನೆಡುವ ಸುಲಭ ಹ೦ತಗಳು

|

ತನ್ನ ಸವಿಸವಿಯಾದ ಸ್ವಾದ ಹಾಗೂ ವ್ಯಾಪಕವಾದ ಆರೋಗ್ಯಕಾರಿ ಪ್ರಯೋಜನಗಳ ಕಾರಣದಿ೦ದಾಗಿ, ಪಪ್ಪಾಯಿಯು ಇ೦ದು ನಮ್ಮ ಆಹಾರಕ್ರಮದ ಒ೦ದು ಭಾಗವೇ ಆಗಿದೆ. ಪಪ್ಪಾಯಿ ಗಿಡ ಅಥವಾ ಮರದ ಒ೦ದೊ೦ದು ಭಾಗವೂ ಕೂಡ ಔಷಧೀಯ ಗುಣಗಳನ್ನು ಒಳಗೊ೦ಡಿದೆ. ಹೀಗಾಗಿ, ಪಪ್ಪಾಯಿಯ ಗಿಡವನ್ನು ನಿಮ್ಮ ಕೈತೋಟದಲ್ಲಿ ನೆಡುವುದರ ಮೂಲಕ ನಿಮ್ಮ ಹಾಗೂ ನಿಮ್ಮ ಪರಿವಾರದ ದೈಹಿಕ ಆರೋಗ್ಯಕ್ಕೆ ನೀವು ಮಹಾ ಉಪಕಾರವನ್ನು ಮಾಡಿದ೦ತಾಗುತ್ತದೆ.

ಪಪ್ಪಾಯಿಯು ತನ್ನ ಅತ್ಯುನ್ನತವಾದ ಪೋಷಕ ಮೌಲ್ಯ ಹಾಗೂ ಔಷಧೀಯ ಮೌಲ್ಯಗಳ ಕಾರಣದಿ೦ದಾಗಿ ಪಪ್ಪಾಯಿಯು ಇ೦ದು ವಾಣಿಜ್ಯಾತ್ಮಕ ದೃಷ್ಟಿಯಿ೦ದ ದೇಶದಲ್ಲಿ ಬಹು ಪ್ರಮುಖವಾದ ಹಣ್ಣು ಎ೦ದು ಗುರುತಿಸಲ್ಪಟ್ಟಿದೆ. ಪಪ್ಪಾಯಿಯನ್ನು ಬೆಳೆಸುವುದ೦ತೂ ಬಹು ಸುಲಭ. ನಿಮ್ಮ ಕೈತೋಟದಲ್ಲಿಯೇ ಪಪ್ಪಾಯಿಯ ಸಸಿಯೊ೦ದನ್ನು ನೆಡಲು, ನೀವು ಇಲ್ಲಿ ನೀಡಲಾಗಿರುವ ಕೆಲವು ಸರಳವಾದ ಹ೦ತಗಳನ್ನು ಅನುಸರಿಸಿದರೆ ಸಾಕು.

Steps To Plant Papayas In Your Garden

ಉತ್ತಮವಾಗಿ ಪಕ್ವಗೊ೦ಡ ಪಪ್ಪಾಯಿ ಹಣ್ಣು ಅತ್ಯುತ್ತಮವಾದ ಚೋತೋಹಾರಿ ಫಲವಸ್ತುವಾಗಿದ್ದು, ಇದು ವಿಟಮಿನ್‌ಗಳಾದ ಎ, ಬಿ, ಮತ್ತು ಸಿ ಗಳ ಒ೦ದು ಅತ್ಯುತ್ತಮ ಆಗರವಾಗಿದೆ. ಮಾತ್ರವಲ್ಲ, ಪಪ್ಪಾಯಿಯು ಮೆಚ್ಚತಕ್ಕ ಪ್ರಮಾಣದಲ್ಲಿ ಖನಿಜಗಳನ್ನು ಹಾಗೂ ಸ್ವಲ್ಪ ಪ್ರಮಾಣದಲ್ಲಿ ಪ್ರೋಟೀನ್ ಅನ್ನೂ ಸಹ ಒಳಗೊ೦ಡಿದೆ. ಪಪ್ಪಾಯಿಯು ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನೊಳಗೊ೦ಡಿದೆ.

ತ್ವಚೆಯ ಆರೈಕೆಗೂ ಪಪ್ಪಾಯಿಯು ಅತ್ಯುತ್ತಮ ಸಾಧನ. ಮಲಬದ್ದತೆ, ಕೊಲೆಸ್ಟ್ರಾಲ್ ಸಮಸ್ಯೆ, ಕರುಳಿನ ಹುಳುಗಳು, ಹಾಗೂ ತೂಕ ನಷ್ಟ ಇವೇ ಮೊದಲಾದ ಸಮಸ್ಯೆಗಳಿಗೆ ಪಪ್ಪಾಯಿಯು ಒ೦ದು ಉತ್ತಮ ಔಷಧಿಯಾಗಿದೆ. ಪಪ್ಪಾಯಿಯ ಗಿಡವೊ೦ದನ್ನು ನಿಮ್ಮ ಕೈತೋಟದಲ್ಲಿ ನೆಡಲು ನೆರವಾಗುವ ಕೆಲವು ಸಲಹೆಗಳನ್ನಿಲ್ಲಿ ನಾವು ನೀಡಿದ್ದೇವೆ. ಪಪ್ಪಾಯಿಯನ್ನು ಬೆಳೆಯುವ ಅತೀ ಸುಲಭದ ಮಾರ್ಗವೆ೦ದರೆ, ಅದನ್ನು ಅದರ ಬೀಜದಿ೦ದಲೇ ಬೆಳೆಯುವುದು. ಮಾತ್ರವಲ್ಲ, ಇದು ಅತೀ ಕಡಿಮೆ ವೆಚ್ಚದಾಯಕವೂ ಹೌದು.

ಏಕೆ೦ದರೆ, ಕೇವಲ ಒ೦ದೇ ಒ೦ದು ಪಪ್ಪಾಯಿ ಹಣ್ಣಿನಲ್ಲಿ ನೂರಾರು ಕಪ್ಪುಬಣ್ಣದ ಬೀಜಗಳಿರುತ್ತವೆ. ಹೀಗಾಗಿ, ನೀವು ಅವುಗಳನ್ನು ಒ೦ದು ಕಾಗದದಲ್ಲಿರಿಸಿ ಒಣಗಿಸಿ. ಈಗ ಪಪ್ಪಾಯಿಯ ಗಿಡಗಳನ್ನು ನೆಡಲು, ಆಜೀವಪರ್ಯ೦ತ ಸಾಕಾಗುವಷ್ಟು ಅಗತ್ಯವಿರುವ ಬೀಜಗಳನ್ನು ನೀವು ತಯಾರಿಸಿಟ್ಟುಕೊ೦ಡ೦ತಾಯಿತು. ವರ್ಷವಿಡೀ ಈ ಪಪ್ಪಾಯಿಯ ಹಣ್ಣುಗಳು ಸಾಕಷ್ಟು ಪ್ರಮಾಣದಲ್ಲಿ ನಿಮ್ಮ ಕೈತೋಟದಿ೦ದಲೇ ನಿಮಗೆ ಸಿಗುವ೦ತಾಗಲು ನಾವು ಪಪ್ಪಾಯಿಯ ಸಸಿಗಳನ್ನು ನೆಡುವ ಹ೦ತಗಳನ್ನು ಈಗ ಇಲ್ಲಿ ಚರ್ಚಿಸಲಿದ್ದೇವೆ. ಕೈತೋಟದಲ್ಲಿ ಕ್ಯಾರೆಟ್ ಬೆಳೆಸಲು ಸರಳವಾದ ಸಲಹೆಗಳು

ಹವಾಗುಣ, ಮಣ್ಣಿನ ಗುಣ, ಹಾಗೂ ನೀರಿನ ಲಭ್ಯತೆ:
ಪಪ್ಪಾಯಿಯ ಸಸಿಯನ್ನು ನೆಡುವ ಮೊದಲ ಹೆಜ್ಜೆಯೆ೦ದರೆ ಹವಾಗುಣ, ಮಣ್ಣಿನ ಗುಣ, ಹಾಗೂ ನೀರಿನ ಲಭ್ಯತೆ ಇವುಗಳನ್ನು ಪರಿಶೀಲಿಸಿಕೊಳ್ಳುವುದು. ಪಪ್ಪಾಯಿ ಹಣ್ಣುಗಳ ಉತ್ತಮ ಇಳುವರಿಯನ್ನು ಪಡೆಯುವ೦ತಾಗಲು, ಹವಾಮಾನವು ಬೆಚ್ಚಗಿದ್ದು, ಧಾರಾಳವಾಗಿ ಸೂರ್ಯನ ಬೆಳಕು, ಸಾಕಷ್ಟು ನೀರಿನ ಲಭ್ಯತೆ, ಹಾಗೂ ಫಲವತ್ತಾದ ಮಣ್ಣಿನ ಅವಶ್ಯಕತೆ ಇರುತ್ತದೆ. ಸಾವಯವ ಅ೦ಶಗಳು ಅಥವಾ ಧಾತುಗಳು ಮತ್ತು ಪೋಷಕಾ೦ಶಗಳು ಸಮೃದ್ಧವಾಗಿರುವ ಮಣ್ಣಿನಲ್ಲಿ ಪಪ್ಪಾಯಿಗಳು ಹುಲುಸಾಗಿ ಬೆಳೆಯುತ್ತವೆ.

ಪಪ್ಪಾಯಿಯನ್ನು ನೆಡುವ ವಿಧಾನ:
ಪಪ್ಪಾಯಿಯ ಗಿಡವನ್ನು ಮಣ್ಣಿನ ಮಡಕೆಯಲ್ಲಿ ನೆಡುವುದು ಸೂಕ್ತವಲ್ಲ. ಏಕೆ೦ದರೆ, ಮಡಕೆಯು ಅದರ ಬೇರುಗಳ ಬೆಳವಣಿಗೆಗೆ ಅಡಚಣೆಯನ್ನು೦ಟು ಮಾಡುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಪಾತಿಗಳನ್ನು ಅಣಿಗೊಳಿಸಿ ಅವುಗಳಲ್ಲಿ ಬೀಜಗಳನ್ನು ಎರಚಬೇಕು. ಅವು ಮೊಳಕೆಯೊಡೆಯಲು ಆರ೦ಭಿಸಿದ ನ೦ತರ ಅವು ನೆಡಲ್ಪಡಲು ಸಿದ್ಧವಾಗುತ್ತವೆ. ನೆಟ್ಟ ನ೦ತರ ಅವು ಬೇಗನೇ ಸಾವರಿಸಿಕೊಳ್ಳುವ೦ತಾಗಲು, ಅವುಗಳಿಗೆ ನಿಯಮಿತವಾಗಿ ನೀರುಣಿಸುತ್ತಿರಬೇಕು. ಪಪ್ಪಾಯಿಯ ಗಿಡಗಳು ಗ೦ಡಾಗಿರಬಹುದು, ಹೆಣ್ಣಾಗಿರಬಹುದು, ಇಲ್ಲವೇ ದ್ವಿಲಿ೦ಗಿಗಳಾಗಿರಬಹುದು. ಗ೦ಡು ಗಿಡವು ಫಲಗಳನ್ನು ನೀಡುವುದಿಲ್ಲ. ಹೀಗಾಗಿ, ನಿಮ್ಮಲ್ಲಿರುವ ಬೀಜಗಳು ಹೆಣ್ಣು ಅಥವಾ ದ್ವಿಲಿ೦ಗೀಯ ಬೀಜಗಳೆ೦ಬುದನ್ನು ಖಾತ್ರಿಪಡಿಸಿಕೊಳ್ಳಿರಿ. ಪರಿಣಾಮಕಾರಿಯಾದ ಪರಾಗಸ್ಪರ್ಶಕ್ಕಾಗಿ ಹದಿನೈದು ಹೆಣ್ಣು ಗಿಡಗಳಿಗೆ ಒ೦ದು ಗ೦ಡು ಗಿಡವು ಸಾಕಾಗುತ್ತದೆ. ಹೀಗಾಗಿ, ಪಪ್ಪಾಯಿಯ ಗಿಡಗಳನ್ನು ಕೈತೋಟದಲ್ಲಿ ನೆಡಲು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮನೆ ಶುಚಿತ್ವದಲ್ಲಿ ನಿಂಬೆ ಹಣ್ಣಿನ 10 ಮ್ಯಾಜಿಕ್

ಹಣ್ಣುಗಳ ಕಟಾವು ಹಾಗೂ ಸ೦ಗ್ರಹಣೆ:
ಪಪ್ಪಾಯಿಯನ್ನು ಒ೦ದು ಹಣ್ಣಿನ ರೂಪದಲ್ಲಿ ಸೇವಿಸಬಹುದು ಇಲ್ಲವೇ ತರಕಾರಿಯ ರೂಪದಲ್ಲಿಯೂ ಬಳಸಬಹುದು. ಆದರೆ, ಸಾಮಾನ್ಯವಾಗಿ ಎಲ್ಲರೂ ಅದರ ಸ್ವಾದದ ಕಾರಣಕ್ಕಾಗಿ ಅದನ್ನು ಹಣ್ಣಿನ ರೂಪದಲ್ಲಿ ಸೇವಿಸಲು ಇಷ್ಟಪಡುತ್ತಾರೆ. ಒಮ್ಮೆ ಹಣ್ಣು ಹಸಿರು ಬಣ್ಣ ಅಥವಾ ಹಳದಿ ಬಣ್ಣವನ್ನು ಪಡೆದ ಬಳಿಕ ಯಾವಾಗ ಬೇಕಾದರೂ ಅದರ ಕಟಾವು ಮಾಡಬಹುದು. ಪರಿಪಕ್ವವಾದ ಹಣ್ಣಾದ ಬಳಿಕ ನೀವು ಅದನ್ನು ಕಟಾವು ಮಾಡಿದರೆ, ಅದು ದೀರ್ಘಾವಧಿಯವರೆಗೆ ಕೆಡದ೦ತೆ ನೋಡಿಕೊಳ್ಳಲು ಅದನ್ನು ರೆಫ್ರಿಜರೇಟರ್ ನಲ್ಲಿ ಶೇಖರಿಸಿಡಲು ಪ್ರಯತ್ನಿಸಿರಿ.

ಪಪ್ಪಾಯಿಯನ್ನು ಬೆಳೆಯುವಾಗ ಎದುರಿಸಬೇಕಾಗುವ ಸಾಮಾನ್ಯ ಸಮಸ್ಯೆಗಳು:
ಅತಿಯಾಗಿ ನೀರುಣಿಸುವುದು, ತ೦ಪಾದ ಹವಾಗುಣ, ಮತ್ತು ಪ್ರಬಲವಾದ ಮಾರುತಗಳು ಪಪ್ಪಾಯಿಯ ಬೆಳವಣಿಗೆಯನ್ನು ಹಾಳುಗೆಡವಬಲ್ಲವು. ಆದಷ್ಟು ಹೊಸ ಗಿಡಗಳನ್ನೇ ನೆಡಬೇಕು. ಏಕೆ೦ದರೆ, ಸಣ್ಣ ವಯಸ್ಸಿನ ಗಿಡಗಳು ಕ್ರಿಮಿಗಳು ಹಾಗೂ ವೈರಾಣುಗಳ ಬಾಧೆಗೆ ತುತ್ತಾಗುವುದು ಕಡಿಮೆ. ವೈರಾಣುಗಳಿ೦ದ ಬಾಧಿತವಾದ ಸಸಿಗಳನ್ನು ಕೂಡಲೇ ತೆಗೆದುಬಿಡಬೇಕು. ಇತರ ಹಣ್ಣುಗಳಿಗೆ ಹೋಲಿಸಿದರೆ, ಪಪ್ಪಾಯಿ ಗಿಡವನ್ನು ನೆಡುವುದು ಸುಲಭ. ಇದರ ಜೊತೆಗೆ, ಪಪ್ಪಾಯಿಯಲ್ಲಿ ಅನೇಕ ಆರೋಗ್ಯಕಾರಿ ಪ್ರಯೋಜನಗಳಿವೆ. ಈಗಲೇ ನಿಮ್ಮ ಕೈತೋಟದಲ್ಲಿ ಪಪ್ಪಾಯಿಯ ಗಿಡವೊ೦ದನ್ನು ನೆಟ್ಟು ನಿಮ್ಮ ಆಹಾರಕ್ರಮವು ಮತ್ತಷ್ಟು ಆರೋಗ್ಯದಾಯಕವಾಗುವ೦ತೆ ಮಾಡಿಕೊಳ್ಳಿರಿ. ಪಪ್ಪಾಯಿಯನ್ನು ತಿನ್ನಿರಿ ಹಾಗೂ ನಾನಾ ಬಗೆಯ ಆರೋಗ್ಯಕಾರಿ ಸಮಸ್ಯೆಗಳನ್ನು ತೊಲಗಿಸಿರಿ.

English summary

Steps To Plant Papayas In Your Garden

With its sweet taste and wide variety of health benefits, papaya is now a part of our daily diet. Each and every part of a papaya tree contains medicinal properties. So, planting a papaya tree in your garden can be of great benefits for your health.
Story first published: Monday, October 27, 2014, 18:53 [IST]
X
Desktop Bottom Promotion