For Quick Alerts
ALLOW NOTIFICATIONS  
For Daily Alerts

ಹೂ ಕುಂಡ ತೋಟಗಾರಿಕೆಗೆ ಕೆಲವು ಸಲಹೆಗಳು

|

ಸುಂದರವಾದ ಮನೆಗೆ ಅಂದವಾದ ತೋಟಗಾರಿಕೆಯ ಮೇರುಗು ಅತೀ ಆವಶ್ಯಕ. ಹೂತೋಟವಿಲ್ಲದ ಮನೆ ಪಾಳುಬಿದ್ದ ಅರಮನೆಯಂತೆ. ಹೂ ತೋಟ ಸಣ್ಣದಿರಲಿ ದೊಡ್ಡದಿರಲಿ ಅದರ ಆರೈಕೆ, ಉಸ್ತುವಾರಿ ಚೆನ್ನಾಗಿರಬೇಕು. ಪಟ್ಟಣಗಳಲ್ಲಿ ಹೂತೋಟ ಮಾಡುವುದು ಕಷ್ಟಕರವಾದ ಕೆಲಸ.

ಮನೆಗೆ ಅಂಟಿಕೊಂಡಂತಿರುವ ಹೂತೋಟವನ್ನೇ ಪೇಟೆಯವರು ಬಯಸುತ್ತಾರೆ. ಹೂ ತೋಟ ಚಿಕ್ಕದಾಗಿ ಚೊಕ್ಕದಾಗಿ ಇದ್ದಷ್ಟು ಅದನ್ನು ನೋಡಿಕೊಳ್ಳುವುದು ಸುಲಭವಾಗಿರುತ್ತದೆ ಎಂಬುದು ಇದರ ಹಿಂದಿನ ಉದ್ದೇಶ.

Pot Soil Gardening Tips

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕನ್ನಡಿಯನ್ನು ಎಲ್ಲಿ ಅಳವಡಿಸಬೇಕು: ವಾಸ್ತು ಟಿಪ್ಸ್‌ಗಳು

ಪೇಟೆಯಲ್ಲೂ ಕೆಲವೆಡೆ ಸ್ಥಳದ ಅಭಾವವಿರುವಲ್ಲಿ, ಉದ್ಯಾನವನ ಹೂ ತೋಟ ಮಾಡುವವರು ಹೆಚ್ಚು ನೆಚ್ಚಿಕೊಳ್ಳುವುದು ಹೂ ಕುಂಡ ತೋಟಗಾರಿಕೆಯನ್ನು. ಮೊದಲು ಹೂ ಕುಂಡವನ್ನು ಮನೆಯ ಅಲಂಕಾರಕ್ಕಾಗಿ ಬಳಸುತ್ತಿದ್ದರು.

ಹೂಗಳು ಮತ್ತು ಜೋತಾಡುವ ಗಿಡಗಳನ್ನು ಹೂಕುಂಡದಲ್ಲಿ ನೆಟ್ಟು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತಿದ್ದರು. ಆದರೆ ಇದೀಗ ಪೋಟ್ ಗಾರ್ಡನಿಂಗ್ (ಹೂ ಕುಂಡ ತೋಟಗಾರಿಕೆ) ಅನ್ನು ಮುಖ್ಯ ತೋಟಗಾರಿಕೆಗಾಗಿ ಬಳಸಲಾಗುತ್ತಿದೆ. ಇದನ್ನು ಸುಲಭವಾಗಿ ನಿರ್ವಹಿಸಬಹುದು ಮತ್ತು ಆರೈಕೆ ಕೂಡ ಮಾಡಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಿಟ್ರಸ್ ಹಣ್ಣುಗಳ ತೋಟಗಾರಿಕೆ ಈಗ ಮತ್ತಷ್ಟು ಸುಲಭ!

ಪೋಟ್ ಗಾರ್ಡನ್ಸ್‌ನಲ್ಲಿ, ಮುಖ್ಯವಾಗಿ ಮಣ್ಣನ್ನು, ನಂತರ ಸಸಿಯನ್ನು ಪುನಃ ಮಣ್ಣನ್ನು ಟೋಪಿಂಗ್‌ಗಾಗಿ ಬಳಸಿ. ನೀವು ಹೂಕುಂಡದಲ್ಲಿ ಸಸಿಯನ್ನು ನೆಡಲು ಉತ್ತಮ ಮಣ್ಣನ್ನು ಬಳಸಿ. ಪೋಟ್ ಗಾರ್ಡನ್ ಅಥವಾ ಹೂಕುಂಡ ತೋಟಗಾರಿಕೆಯನ್ನು ಮಾಡಲು ಇಲ್ಲಿ ಕೆಲವು ಸಲಹೆಗಳನ್ನು ನಾವು ನೀಡುತ್ತಿದ್ದೇವೆ.

ಗಾರ್ಡನ್ ಮಣ್ಣನ್ನು ಬಳಸದಿರಿ
ನಿಮ್ಮ ತೋಟದ ಮಣ್ಣನ್ನು ಹೂಕುಂಡಕ್ಕೆ ಬಳಸದಿರಿ. ತೋಟದ ಮಣ್ಣು ಬ್ಯಾಕ್ಟೀರಿಯಾ ಕೀಟಗಳಿಂದ ಕೊಳಕಾಗಿರುತ್ತದೆ. ಬದಲಾಗಿ ಹೂ ಕುಂಡದ ಮಣ್ಣು ಹಗುರವಾಗಿದ್ದು ಗಿಡದ ಆರೈಕೆಗೆ ಬೇಕಾದ ಪೀಟ್ ಮರಳುಯುಕ್ತವಾಗಿದೆ. ಹೂಕುಂಡದ ಮಣ್ಣು ಕೊಳಕಾಗಿರುವುದಿಲ್ಲ.

ಹೂ ಕುಂಡವನ್ನು ಪೂರ್ತಿಯಾಗಿ ಮುಚ್ಚಬೇಡಿ
ನೀವು ದೊಡ್ಡ ಪ್ರಮಾಣದ ಹೂಕುಂಡವನ್ನು ಬಳಸುತ್ತೀರೆಂದರೆ, ಇದಕ್ಕೆ ಇಷ್ಟೇ ಪ್ರಮಾಣದ ಪಾಟ್ ಮಣ್ಣು ಬೇಕೆಂದು ಚಿಂತಿಸದಿರಿ. ಹೂಕುಂಡವನ್ನು ಪೂರ್ತಿಯಾಗಿ ಮಣ್ಣಿನಿಂದ ತುಂಬಬೇಕಾಗಿಲ್ಲ. ಕೆಲವು ಸಸ್ಯಗಳ ಬೆಳೆಯುವಿಕೆ ಸರಿಯಾಗಿ ಹೂಕುಂಡವನ್ನು ತುಂಬಿ

ಡ್ರೈನೇಜ್
ಹೂಕುಂಡ ಡ್ರೈನೇಜ್ ವ್ಯವಸ್ಥೆ ಸರಿಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಹೂಕುಂಡದ ಒಳಗಡೆ ಸಣ್ಣ ತೂತು ಮಾಡಿ ಇದರಿಂದ ಹೆಚ್ಚುವರಿ ನೀರು ಹೊರಹೋಗುತ್ತದೆ. ಹೆಚ್ಚುವರಿ ನೀರು ಸಸ್ಯವನ್ನು ಕೊಲ್ಲುತ್ತದೆ ಮತ್ತು ಹೂಕುಂಡವನ್ನು ಕೊಳಕಾಗಿಸಬಹುದು.

ಒಂದೇ ಮಣ್ಣನ್ನು ಅನೇಕ ಬಾರಿ ಬಳಸದಿರಿ
ಮಣ್ಣು ಸವೆತಕ್ಕೆ ಒಳಗಾಗುವುದರಿಂದ ಅದೇ ಮಣ್ಣನ್ನು ಹೂಕುಂಡಕ್ಕೆ ಬಳಸಬಹುದು ಎಂಬ ನಿಮ್ಮ ಆಲೋಚನೆಯನ್ನು ತಲೆಯಿಂದ ಹೊರಹಾಕಿ. ಒಂದೇ ಮಣ್ಣನ್ನು ಬಾರಿ ಬಾರಿ ಬಳಸುವುದು ಸುಲಭವಾಗಿ ಬ್ಯಾಕ್ಟೀರಿಯಾ ಹಾಗೂ ಕೀಟಗಳನ್ನು ಆಹ್ವಾನಿಸುತ್ತದೆ. ಆದ್ದರಿಂದ ತಾಜಾ ಮಣ್ಣನ್ನು ಬಳಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲದಲ್ಲಿ ಮುದ್ದಿನ ಹಕ್ಕಿಗಳ ಆರೈಕೆ

ಮಣ್ಣನ್ನು ಚೆನ್ನಾಗಿ ತೊಳೆಯಿರಿ
ಉಪ್ಪು, ಕೊಳಕು ಮತ್ತು ಗೊಬ್ಬರಗಳಿಂದ ಮಣ್ಣು ಮಿಶ್ರವಾಗಿರುತ್ತದೆ. ಆದ್ದರಿಂದ ತಿಂಗಳಲ್ಲಿ ಒಂದು ಬಾರಿ, ಹರಿಯುವ ನೀರಿನಡಿಯಲ್ಲಿ ಸಿಂಕಿನಿಂದ ಹೂಕುಂಡವನ್ನು ತೊಳೆಯಿರಿ. ಇದು ಮೇಲಿನ ಮಣ್ಣನ್ನು ತೊಳೆಯುವುದರೊಂದಿಗೆ ಮಿಶ್ರಗೊಂಡಿರುವ ಉಪ್ಪು, ಗೊಬ್ಬರ ಮತ್ತು ಕೊಳಕನ್ನು ತೊಳೆಯುತ್ತದೆ. ಇದು ಆರೋಗ್ಯಕರ ಮತ್ತು ಸುಂದರ ಗಿಡಗಳಿಗಾಗಿ ಉತ್ತಮ.

English summary

Pot Soil Gardening Tips

Due to the lack of space, many people are opting for pot gardening. Earlier, pot gardens were mainly seen in balconies as a decor theme. Flowering and hanging plants were used to decorate the balcony an make it look colourful.
Story first published: Wednesday, January 29, 2014, 15:08 [IST]
X
Desktop Bottom Promotion