For Quick Alerts
ALLOW NOTIFICATIONS  
For Daily Alerts

ಕಬ್ಬಿಣದ ಸಾಧನಗಳ ತುಕ್ಕು ತೆಗೆಯುವುದು ಹೇಗೆ?

By Poornima Heggade
|

ಅದ್ಭುತವಾಗಿ ಸುರಿದ ಮಳೆ ಮತ್ತು ದೀರ್ಘ ಚಳಿಗಾಲದ ಶೀತದ ನಂತರ ನೀವು ಮತ್ತೆ ನಿಮ್ಮ ಅತ್ಯಂತ ಇಷ್ಟವಾದ ತೋಟಗಾರಿಕೆ ಹವ್ಯಾಸವನ್ನು ಮುಂದುವರೆಸಲು ಯೋಚಿಸಿದ್ದೀರಾ? ಹಾಗಾದರೆ ಮನೆಯ ಮುಂದೆ ಸಸ್ಯತೋಟವನ್ನು ಮಾಡಲು ನಿಮ್ಮ ಕೈಗಳಿಗೆ ಸಾಧನಗಳೇನಾದರೂ ಬೇಕು ಅಲ್ಲವೇ? ಅಯ್ಯೋ! ಸುಂದರ ಕೈತೋಟವನ್ನು ನಿರ್ಮಿಸಲು ಅಗತ್ಯವಾಗ ಸಾಧನಗಳೆಲ್ಲವೂ ಶೀತದಿಂದಾಗಿ ತುಕ್ಕು ಹಿಡಿದಿವೆ ಇದಕ್ಕೇನು ಪರಿಹಾರ?

ಈಗ ನೀವು ಇದರಿಂದ ಬೇಸರಕ್ಕೊಳಗಾಗಿ ಅಂತಹುದೇ ಹೊಸ ಉಪಕರಣಗಳನ್ನು ಖರೀದಿಸಲು ಹೊರಡುತ್ತೀರಿ. ನಿಮ್ಮಲ್ಲಿ ಮೊದಲಿದ್ದ ಅದನ್ನೇ ಹೋಲುವ ಉಪಕರಣಗಳೂ ಸಹ ನಿಮಗೆ ದೊರೆಯಬಹುದು. ಆದರೆ ಈ ಉಪಕರಣಕ್ಕೂ ಮೊದಲಿನ ಉಪಕರಣದಂತೆ ತುಕ್ಕು ಹಿಡಿಯಬಹುದು. ಅಂತೆಯೇ ಮರಳಿ ಹಾಳಾಗಬಹುದು!

How To Remove Rust From Garden Tools

ಇನ್ನಷ್ಟು ಲೇಖನಗಳಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: ಒಣಗಿದ ಗುಲಾಬಿಯ ದಳದಿಂದ ಮನೆಯ ಅಲಂಕಾರ!

ಗಾಳಿ ಮತ್ತು ನೀರಿಗೆ ಒಡ್ಡಲಾಗುವ ಕಬ್ಬಿಣಕ್ಕೆ ತುಕ್ಕು ಹಿಡಿಯುತ್ತದೆ. ಈ ಕಸ ಮತ್ತು ಧೂಳಿನ ಸಂಯೋಜನೆಯಿಂದ ತುಕ್ಕು ಉಂಟಾಗುತ್ತದೆ.

ಆದ್ದರಿಂದ, ಉಪಕರಣಗಳಿಗೆ ಹಿಡಿಯುವ ತುಕ್ಕನ್ನು ನಿವಾರಿಸುವ ಉಪಾಯಗಳನ್ನು ಇಲ್ಲಿ ಹೇಳಲಾಗಿದೆ. ಇದರಿಂದ ನೀವು ಹೊಸ ಕೈತೋಟ ನಿರ್ಮಾಣಕ್ಕೆ ಸಹಾಯಕವಾಗುವ ಉಪಕರಣಗಳನ್ನು ತರಲು ಮಾರುಕಟ್ಟೆಗೆ ಧಾವಿಸುವುದನ್ನು ತಪ್ಪಿಸಬಹುದು.

1)ಒರಟಾದ ಕಲ್ಲಿನ ಇಟ್ಟಿಗೆ /ಬ್ಲಾಕ್ ಗಳು ಗಾರ್ಡನ್ ಉಪಕರಣಗಳ ತುಕ್ಕನ್ನು ತೆಗೆದುಹಾಕಲು ಒಂದು ಉತ್ತಮ ವಿಧಾನವಾಗಿದೆ.

2)ಡಬ್ಲ್ಯೂ ಡಿ - 40 ಅಥವಾ ಹಿತ್ತಾಳೆ ಕೈತೋಟಗಳಿಗೆ ಬಳಸುವ ಉಪಕರಣಗಳ ತುಕ್ಕನ್ನು ತೆಗೆದುಹಾಕಲು ಸಹಾಯವಾಗುತ್ತದೆ. ತುಕ್ಕು ಹಿಡಿದ ಭಾಗಕ್ಕೆ ಹಿತ್ತಾಳೆ/ ಬ್ರಾಸ್ ನ್ನು ಅನ್ವಯಿಸಿ ನಂತರ ಮರಳು ಕಾಗದ (ಸ್ಯಾಂಡ್ ಪೇಪರ್) ಬಳಸು ಉಜ್ಜಬಹುದು.

3)ಸ್ಯಾಂಡ್ ಪೇಪರ್ ನಿಂದ ತುಕ್ಕು ತೆಗೆಯಲು ಸಾಧ್ಯವಾಗದಿದ್ದರೆ, ಸ್ಟೀಲ್ ವುಲ್ (ಉಕ್ಕಿನ ಉಣ್ಣೆ) ನ್ನು ಬಳಸಬಹುದು.

4)ಸಾರಗುಂದದ ಬಿಳಿ ವಿನೆಗರ್ ಬಳಸಿ - ನೀವು ಬಳಸುವ ಉಪಕರಣ ಚಿಕ್ಕದಾಗಿದ್ದರೆ, ವಿನೆಗರ್ ನ್ನು ಸ್ವಚ್ಛಗೊಳಿಸಲು ಬಳಸಿ. ಆದರೆ, ದೊಡ್ಡ ಸಾಧನವಾಗಿದ್ದರೆ, ವಿನೆಗರ್ ನ್ನು ಹತ್ತಿಯಲ್ಲಿ ಅದ್ದಿ ಅಥವಾ ಸ್ಪ್ರೇ ಬಾಟಲ್ ಗಳಲ್ಲಿ ವಿನೆಗರ್ ಹಾಕಿ ಬಳಸಿ. ವಿನೆಗರ್ ನ್ನು 30 ನಿಮಿಷಗಳ ಹಾಗೆಯೇ ಬಿಟ್ಟು ನಂತರ ಸ್ವಚ್ಛಗೊಳಿಸಿ.

ವಿನೆಗರ್ ನ್ನು ಬಳಸಿದ ನಂತರ ಉಪಕರಣವು ಕಪ್ಪಾಗಿ ಕಂಡರೆ, ಯೋಚಿಸಬೇಡಿ. ಉಪಕರಣವನ್ನು ನೀರಿನಿಂದ ಸ್ವಚ್ಛಗೊಳಿಸಿದ ನಂತರ ಅವು ಮೊದಲಿನಂತಾಗುತ್ತವೆ.
ಹಿತ್ತಾಳೆ ಜೊತೆಗೆ ವಿನೆಗರ್ ಮಿಶ್ರಣಮಾಡಿ ಬಳಸಬೇಡಿ.

5)ಅಡಿಗೆ ಸೋಡಾ ಮತ್ತು ನಿಂಬೆ ರಸ ಬಳಸಿ .

ಇವುಗಳನ್ನು ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿ ನಂತರ ಮಿಶ್ರಣವನ್ನು ತುಕ್ಕು ಹಿಡಿದ ಜಾಗಕ್ಕೆ ಲೇಪಿಸಿ ಕೆಲವು ನಿಮಿಷಗಳವರೆಗೆ ಹಾಗೆಯೇ ಬಿಟ್ಟು, ಒಣ ಟವೆಲ್ ನಿಂದ ಶುದ್ಧೀಕರಿಸಿ ನಂತರ ಒರೆಸಿ.

6)ನಿಂಬೆ ರಸ, ಬಿಳಿ ವಿನೆಗರ್ ಮತ್ತು ಉಪ್ಪು ಬಳಸಿ .

ತುಕ್ಕು ಹಿಡಿದಿರುವ ಪ್ರದೇಶಕ್ಕೆ ನಿಂಬೆ ರಸವನ್ನು ಹಚ್ಚಿ ಅದರ ಮೇಲೆ ಉಪ್ಪು ಸುರಿಯಿರಿ. ನಂತರ ಸಣ್ಣ ಬ್ರಷ್ ನಿಂದ ಉಜ್ಜಿ ತುಕ್ಕನ್ನು ತೆಗೆಯಿರಿ.

ನಂತರ ನೀರಿನಿಂದ ತೊಳೆದು ಒಣಗಲು ಬಿಡಿ.

7)ತೋಟದ ಉಪಕರಣಗಳ ತುಕ್ಕು ತೆಗೆಯಲು, ನೀವು ಮೊದಲು ಬ್ರಷ್ ನ್ನು ಬಳಸಿ ಸ್ವಚ್ಛಗೊಳಿಸಬಹುದು. ನಂತರ ತುಕ್ಕನ್ನು ತೆಗೆದು ಉಪಕರಣಕ್ಕೆ ಪೇಂಟ್ ನ್ನು ಹಚ್ಚಿ.

ಈಗ ನಾವು ಹೇಗೆ ತುಕ್ಕು ಬಂದ ಉಪಕರಣವನ್ನು ಸ್ವಚ್ಛಗೊಳಿಸುವುದು ಎಂಬುದರ ಬಗ್ಗೆ ಹಲವು ವಿಧಗಳನ್ನು ನೋಡಿದೆವು. ಈಗ ಕೈತೋಟವನ್ನು ನಿರ್ಮಿಸಲು ಸಹಾಯ ಮಾಡುವ ಉಪಕರಣಗಳನ್ನು ತುಕ್ಕು ಬರದಂತೆ ಹೇಗೆ ರಕ್ಷಿಸುವುದು ಎಂಬುದನ್ನು ತಿಳಿಯೋಣ :

1)ನಿಮ್ಮ ಗಾರ್ಡನ್ ನಿರ್ಮಿಸಲು ಬಳಸಲ್ಪಡುವ ಉಪಕರಣಗಳನ್ನು ಯಾವಾಗಲೂ ತುಕ್ಕು ಹಿಡಿಯುವುದರಿಂದ ತಡೆಯಲು ಅವು ಒಣ ಮತ್ತು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.

2)ನಿಮ್ಮ ಉಪಕರಣಗಳನ್ನು ಶೇಖರಿಸಿಡಲು ಒಣ ಸ್ಥಳವಿಲ್ಲದಿದ್ದರೆ, ಒಂದು ಎಣ್ಣೆಯುಕ್ತ ಚಿಂದಿ ಬಟ್ಟೆಯಿಂದ ಉಪಕರಣದ ತಲೆಯನ್ನು ಸುತ್ತಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಡಿ. ಮತ್ತು ಒಂದು ಟೇಪ್ ಮೂಲಕ ಅದನ್ನು ಸಂಪೂರ್ಣವಾಗಿ ಮುಚ್ಚಿಡಿ.

3)ಒಂದು ಬಕೆಟ್ ನಲ್ಲಿ , ಮೋಟಾರು ತೈಲ (ಪೆಟ್ರೋಲ್, ಡಿಸೇಲ್ ಅಥವಾ ಸೀಮೆ ಎಣ್ಣೆ) ಮತ್ತು ಮರಳನ್ನು ಒಗ್ಗೂಡಿಸಿ. ಉಪಕರಣವನ್ನು ಬಳಸಿದ ನಂತರ, ಈ ಬಕೆಟ್ ನಲ್ಲಿ ನಿಮ್ಮ ಉಪಕರಣಗಳನ್ನು ಇಡಿ ಮತ್ತು ತುಕ್ಕು ತಡೆಗಟ್ಟಲು ಒಂದು ಸ್ವಚ್ಛವಾದ ಮತ್ತು ಒಣ ಪ್ರದೇಶದಲ್ಲಿ ಬಕೆಟ್ ನ್ನು ಇಡಿ.

4)ನಿಮ್ಮ ಉಪಕರಣಗಳ ಪೆಟ್ಟಿಗೆಯಲ್ಲಿ ಕೆಲವು ಇದ್ದಿಲು ತುಂಡುಗಳನ್ನು ಹಾಕಿಟ್ಟರೆ ಗಾರ್ಡನ್ ಉಪಕರಣಗಳಲ್ಲಿ ತುಕ್ಕು ಹಿಡಿಯುವುದನ್ನು ತಡೆಯಲು ಸಾಧ್ಯ!

5)ಡಬ್ಲ್ಯೂಡಿ 40 (WD-40) ಯನ್ನು ತೆಳುವಾಗಿ ಉಪಕರಣಗಳಿಗೆ ಬಳಸುವುದರಿಂದ ತುಕ್ಕು ಹಿಡಿಯುವುದನ್ನು ತಡೆಯಬಹುದು.

ಅತ್ಯುತ್ತಮ ಸಲಹೆಯೆಂದರೆ, ಯಾವಾಗಲೂ ತೇವಾಂಶ, ಕೊಳಚೆ ಮತ್ತು ಧೂಳಿನಿಂದ ದೂರವಿರುವ ಸರಿಯಾದ ಸ್ಥಳದಲ್ಲಿ ನಿಮ್ಮ ಉಪಕರಣಗಳನ್ನು ಶೇಖರಣೆ ಮಾಡಿ. ಮಳೆ ಇಲ್ಲದೆ ಇದ್ದರೂ ಸಹ ಒದ್ದೆ ಹುಲ್ಲು ಮತ್ತು ತೇವಾಂಶಗಳಿಂದ ಉಪಕರಣಗಳ ಮೇಲೆ ಹಾನಿಗಳಾಗುವ ಸಂಭವವಿರುತ್ತದೆ. ಆದದ್ರಿಂದ ನಿಮ್ಮ ಗಾರ್ಡನ್ ನಿರ್ಮಿಸಲು ಅಗತ್ಯವಾಗ ಉಪಕರಣಗಳನ್ನು ಯಾವಾಗಲೂ ಶುದ್ಧ ಮತ್ತು ಶುಷ್ಕ ಸ್ಥಳಗಳಲ್ಲಿ ಸಂರಕ್ಷಿಸಿಡಿ.

ನಿಮ್ಮ ಸುಂದರ ಕೈತೋಟ ನಿರ್ಮಾಣಕ್ಕೆ ನಮ್ಮ ಶುಭ ಹಾರೈಕೆಗಳು!

English summary

How To Remove Rust From Garden Tools

After the incessant rains and the long cold wintery nights, you are super excited to get back to your favorite hobby of gardening, and, just can’t way to lay your hands on the tools.
X
Desktop Bottom Promotion