For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಬ್ಲ್ಯಾಂಕೆಟ್ ಶುಚಿಗೊಳಿಸುವ ಟಿಪ್ಸ್

By Hemanth P
|

ನಡುಗುವ ಚಳಿಗೆ ಬೆಚ್ಚಗಿನ ಹಾಸಿಗೆಯಿದ್ದರೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ ಇರಲ್ಲ. ಆದರೆ ಚಳಿಗಾಲದ ಬ್ಲ್ಯಾಂಕೆಟ್ ಗಳನ್ನು ಒಗೆಯುವುದು ಸವಾಲಿನ ಕೆಲಸ. ಚಳಿಗಾಲದಲ್ಲಿ ಬ್ಲ್ಯಾಂಕೆಟ್ ಗಳನ್ನು ಶುಚಿ ಹಾಗೂ ನಿರ್ಮಲವಾಗಿಟ್ಟುಕೊಳ್ಳಬೇಕು. ಚಳಿಗಾಲದ ಬ್ಲ್ಯಾಂಕೆಟ್ ಗಳನ್ನು ಒಗೆಯುವುದು ಹಾಸಿಗೆಯ ನೈರ್ಮಲ್ಯದ ಒಂದು ಭಾಗ ಮತ್ತು ಇದರಲ್ಲಿ ವಿಫಲವಾದರೆ ಕೆಲವೊಂದು ಸಮಸ್ಯೆ ಹಾಗೂ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಗಾಳಿಯಲ್ಲಿರುವ ತೇವಾಂಶವು ನಿಮ್ಮ ಬ್ಲ್ಯಾಂಕೆಟ್ ಕೆಟ್ಟ ವಾಸನೆ ಬೀರುವಂತೆ ಮಾಡಬಹುದು. ಈ ತೇವಾಂಶವು ಬ್ಲ್ಯಾಂಕೆಟ್ ನಲ್ಲಿ ಶಿಲೀಂಧ್ರ ಅಥವಾ ಬ್ಯಾಕ್ಟೀರಿಯಾ ಉಂಟುಮಾಡಬಹುದು. ಬ್ಲ್ಯಾಂಕೆಟ್ ನಲ್ಲಿ ಧೂಳು ಆವರಿಸಿಕೊಂಡಿದ್ದರೆ ಆಗ ಅಲರ್ಜಿ ಅಥವಾ ಅಸ್ತಮಾಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು.

ಮುಂದಿನ ಚಳಿಗಾಲಕ್ಕೆ ಬ್ಲ್ಯಾಂಕೆಟ್ ನ್ನು ಕಪಾಟಿನಲ್ಲಿ ಇಡುವ ಮೊದಲು ಇದನ್ನು ಚೆನ್ನಾಗಿ ಒಗೆಯಬೇಕು.. ಬ್ಲ್ಯಾಂಕೆಟ್ ನ ಗಾತ್ರ ಮತ್ತು ತೂಕದಿಂದಾಗಿ ಅದನ್ನು ಒಗೆಯಲು ತುಂಬಾ ತ್ರಾಸಪಡುವಂತಾಗುತ್ತದೆ. ಸರಿಯಾಗಿ ಒಗೆಯದಿದ್ದರೆ ಆಗ ಬ್ಲ್ಯಾಂಕೆಟ್ ನಲ್ಲಿ ಡಿಟರ್ಜೆಂಟ್ ಹಾಗೆ ಉಳಿದುಕೊಳ್ಳಬಹುದು. ನಿಮ್ಮ ವಾಷಿಂಗ್ ಮೆಷಿನ್ ನಲ್ಲಿ ಚಳಿಗಾಲದ ಬ್ಲ್ಯಾಂಕೆಟ್ ನ್ನು ಒಗೆಯುವ ವ್ಯವಸ್ಥೆ ಇಲ್ಲವೆಂದಾರೆ ಆಗ ಅದನ್ನು ಡ್ರೈ ಕ್ಲೀನರ್ ಗೆ ಕೊಡಿ.

How To Clean Winter Blankets At Home

ಚಳಿಗಾಲದ ಬ್ಲ್ಯಾಕೆಂಟ್ ಗಳನ್ನು ಒಗೆಯಲು ಸಾಂಪ್ರದಾಯಿಕ ಒಗೆಯುವ ತಂತ್ರಗಳು ಸಾಕಾಗುವುದಿಲ್ಲ. ಇದರಿಂದ ಬ್ಲ್ಯಾಂಕೆಟ್ ಸ್ವಚ್ಛಗೊಳಿಸಲು ಅತ್ಯಂತ ಉಪಯೋಗಿ ಟಿಪ್ಸ್ ಗಳನ್ನು ಬಳಸಿಕೊಳ್ಳಬೇಕು. ಚಳಿಗಾಲದ ಬ್ಲ್ಯಾಂಕೆಟ್ ಗಳನ್ನು ಒಗೆಯಲು ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.

ಸಲಹೆಗಳನ್ನು ಪಾಲಿಸಿ
ಚಳಿಗಾಲದ ಬ್ಲ್ಯಾಂಕೆಟ್ ಗಳನ್ನು ಒಗೆಯುವ ಮೊದಲು ಉತ್ಪಾದಕರು ನೀಡಿರುವಂತಹ ಸಲಹೆಗಳನ್ನು ಪಾಲಿಸಿ. ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಬ್ಲ್ಯಾಂಕೆಟ್ ಗೆ ಯಾವುದೇ ರೀತಿಯ ಹಾನಿಯಾಗದಂತೆ ಒಗೆಯಬಹುದು.

ಧೂಳನ್ನು ತೆಗೆಯಿರಿ
ಉಣ್ಣೆಯ ಬ್ಲ್ಯಾಂಕೆಟ್ ನಲ್ಲಿ ಧೂಳು ಹೆಚ್ಚಾಗಿ ಆವರಿಸುತ್ತದೆ. ಚಳಿಗಾಲದ ಬ್ಲ್ಯಾಂಕೆಟ್ ಒಗೆಯುವ ಮೊದಲು ಧೂಳನ್ನು ತೆಗೆಯುವುದು ಒಳ್ಳೆಯ ವಿಧಾನ. ಧೂಳು ತೆಗೆಯಲು ವಾಕ್ಯುಮ್ ಕ್ಲೀನರ್ ಬಳಸಬಹುದು. ಚಳಿಗಾಲದ ಬ್ಲ್ಯಾಂಕೆಟ್ ಶುಚಿಗೊಳಿಸಲು ಇದು ಅತೀ ಮುಖ್ಯ ಟಿಪ್ಸ್.

ಮೃದು ಡಿಟರ್ಜೆಂಟ್ ಬಳಸಿ
ಚಳಿಗಾಳಲದ ಬ್ಲ್ಯಾಂಕೆಟ್ ಒಗೆಯಲು ಪ್ರಬಲ ರಾಸಾಯನಿಕವಿರುವ ಡಿಟರ್ಜೆಂಟ್ ಬಳಸಬೇಡಿ. ಯಾವುದೇ ರೀತಿಯ ಕಲೆಗಳು ಇಲ್ಲದಿದ್ದರೆ ಆಗ ಮೃದು ಡಿಟರ್ಜೆಂಟ್ ಬಳಸಿ ಬ್ಲ್ಯಾಂಕೆಟ್ ಶುಚಿಗೊಳಿಸಿ. ಬ್ಲ್ಯಾಂಕೆಟ್ ತುಂಬಾ ಕೊಳೆಯಾಗಿದ್ದರೆ ಆಗ ಡ್ರೈ ಕ್ಲೀನಿಂಗ್ ನಂತಹ ಬೇರೆ ವಿಧಾನಗಳನ್ನು ಬಳಸಿ.

ಕಲೆ ತೆಗೆಯಿರಿ
ಬ್ಲ್ಯಾಂಕೆಟ್ ನ್ನು ಸಂಪೂರ್ಣವಾಗಿ ಒಗೆಯುವ ಮೊದಲು ಅದರಲ್ಲಿ ಎಲ್ಲೆಲ್ಲಿ ಕಲೆಗಳು ಇದೆ ಎಂದು ನೋಡಿಕೊಳ್ಳಿ. ಲಿಕ್ವಿಡ್ ಸೋಪ್ ಸೊಲ್ಯೂಷನ್ ಬಳಸಿ ಕಲೆ ತೆಗೆಯಿರಿ. ಬ್ಲ್ಯಾಂಕೆಟ್ ಶುಚಿಗೊಳಿಸಲು ಇದು ಅತೀ ಮುಖ್ಯ ಟಿಪ್ಸ್. ಗಾಢವಾದ ಕಲೆಯನ್ನು ಮೊದಲು ತೆಗೆದರೆ ಆಗ ಬ್ಲ್ಯಾಂಕೆಟ್ ಒಗೆಯಲು ಸುಲಭವಾಗುತ್ತದೆ.

ಎಲ್ಲವನ್ನು ಬೆರೆಸಬೇಡಿ
ಚಳಿಗಾಲದ ಬ್ಲ್ಯಾಂಕೆಟ್ ಮತ್ತು ಇತರ ಬಟ್ಟೆಗಳನ್ನು ಜತೆಯಾಗಿ ಬೆರೆಸಬೇಡಿ. ಇದರಿಂದ ಬಣ್ಣ ಬಿಟ್ಟು ಬೇರೆ ಬಟ್ಟೆಗಳಿಗೆ ಅಂಟಿಕೊಳ್ಳುವ ಸಾಧ್ಯತೆಯಿದೆ. ಚಳಿಗಾಲದ ಬ್ಲ್ಯಾಂಕೆಟ್ ನ್ನು ಪ್ರತ್ಯೇಕವಾಗಿ ಒಗೆಯುವುದು ಒಳ್ಳೆಯ ಟಿಪ್ಸ್.

ಬ್ಲೀಚ್ ಬಳಸಬೇಡಿ
ಚಳಿಗಾಲದ ಬ್ಲ್ಯಾಂಕೆಟ್ ಒಗೆಯುವಾಗ ನೀವು ಬ್ಲೀಚ್ ನ್ನು ಬಳಸಬಾರದು ಎಂದು ನೆನಪಿರಲಿ. ಬ್ಲೀಚ್ ಅಥವಾ ಫೆಬ್ರಿಕ್ ಸಾಫ್ಟನರ್ ಗಳನ್ನು ಬಳಸುವುದು ಕೆಲವೊಂದು ಬ್ಲ್ಯಾಂಕೆಟ್ ಗಳಿಗೆ ಸರಿಹೊಂದಲ್ಲ. ಚಳಿಗಾಲದ ಬ್ಲ್ಯಾಂಕೆಟ್ ಒಗೆಯಲು ಮೃದು ಡಿಟರ್ಜೆಂಟ್ ನ್ನು ಬಳಸಿ.

ಒಣಗಿಸುವುದು
ಚಳಿಗಾಲದ ಬ್ಲ್ಯಾಂಕೆಟ್ ತುಂಬಾ ಭಾರವಾಗಿದ್ದರೆ ಆಗ ಕೈಯಿಂದ ಹಿಂಡುವ ವಿಧಾನ ಕೆಲಸ ಮಾಡಲ್ಲ. ವಾಷಿಂಗ್ ಮೆಷಿನ್ ನ ಡ್ರೈಯರ್ ನಲ್ಲಿ ಇದನ್ನು ಒಣಗಿಸಲು ಪ್ರಯತ್ನಿಸಿ. ಈ ವೇಳೆ ಕಡಿಮೆ ಉಷ್ಣತೆಯನ್ನು ಇಡಬೇಕೆನ್ನುವುದು ಚಳಿಗಾಲದ ಬ್ಲ್ಯಾಂಕೆಟ್ ಶುಚಿಗೊಳಿಸಲು ಮುಖ್ಯ ಟಿಪ್ಸ್.

ವೃತ್ತಿಪರ ಡ್ರೈ ಕ್ಲೀನರ್ಸ್
ಚಳಿಗಾಲದ ಬ್ಲ್ಯಾಂಕೆಟ್ ಒಗೆಯಲು ನಿಮಗೆ ಕಷ್ಟವಾಗುತ್ತಿದ್ದರೆ ಇದಕ್ಕೆ ಒಳ್ಳೆಯ ಉಪಾಯವೆಂದರೆ ವೃತ್ತಿಪರ ಡ್ರೈ ಕ್ಲೀನಿಂಗ್ ಗೆ ಇದನ್ನು ನೀಡಿ. ಕೆಲವೊಂದು ಬ್ಲ್ಯಾಂಕೆಟ್ ಗಳನ್ನು ಡ್ರೈ ಕ್ಲೀನಿಂಗ್ ನಲ್ಲೇ ಒಗೆಯಬೇಕಾಗುತ್ತದೆ. ಡ್ರೈ ಕ್ಲೀನಿಂಗ್ ನಲ್ಲಿ ಚಳಿಗಾಲದ ಬ್ಲ್ಯಾಂಕೆಟ್ ಸಂಪೂರ್ಣವಾಗಿ ಸ್ವಚ್ಛಗೊಂಡಿರುತ್ತದೆ.

English summary

How To Clean Winter Blankets At Home

Nothing will be more comfortable in winter than a warm bed. But, when it comes to washing winter blankets, you have to put a little effort. Keeping winter blankets neat and clean is very important.
Story first published: Tuesday, January 7, 2014, 12:05 [IST]
X
Desktop Bottom Promotion