For Quick Alerts
ALLOW NOTIFICATIONS  
For Daily Alerts

ಈ ಬೇಸಿಗೆಗಾಗಿ ತೋಟಗಾರಿಕೆ ಸಲಹೆಗಳು

|

ಬಿರುಬೇಸಿಗೆ ಬಂದೇ ಬಿಟ್ಟಿದೆ. ಬಿಸಿಲಿನ ಝಳ ನಮಗಂತೂ ಸಹಿಸಲಾಗುತ್ತಿಲ್ಲ ಇನ್ನು ಮಾತು ಬಾರದ ಪ್ರಾಣಿ ಪಕ್ಷಿಗಳು ನೀರನ್ನರಸಿಕೊಂಡು ಪರದಾಡುತ್ತವೆ. ನಿಮ್ಮ ಮನೆಯ ಸಾಕುಪ್ರಾಣಿಗಳಿಗೆ ಸಾಧ್ಯವಾದಷ್ಟು ನೀರನ್ನು ನೀಡಿ. ಪ್ರಾಣಿ ಪಕ್ಷಿಗಳಂತೆ ಮರಗಿಡಗಳಿಗೂ ಬೇಸಿಗೆಯಲ್ಲಿ ಬೇಕಾದ ಆರೈಕೆಯನ್ನು ನಾವು ಮಾಡಬೇಕು ಅದೇ ರೀತಿ ನಿಮಗೆ ತೋಟಗಾರಿಕೆ ನೆಚ್ಚಿನ ಹವ್ಯಾಸವಾಗಿದ್ದರೆ ಗಿಡಗಳನ್ನು ಚೆನ್ನಾಗಿ ಆರೈಕೆ ಮಾಡಬೇಕಾಗುತ್ತದೆ.

ಇನ್ನಷ್ಟು ಮಾಹಿತಿಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೂ ಕುಂಡ ತೋಟಗಾರಿಕೆಗೆ ಕೆಲವು ಸಲಹೆಗಳು

ನೀವು ಗಾರ್ಡನಿಂಗ್ ವಿಷಯದಲ್ಲಿ ಹೊಸಬರಾಗಿದ್ದರೆ ನಿಮಗೆ ಸ್ವಲ್ಪ ಶ್ರಮವಾಗುವುದಂತೂ ಖಂಡಿತ. ಬಿಸಿಲಿನ ಝಳಕ್ಕೆ ಬಾಡಿ ಬಸವಳಿದಿರುವ ನಿಮ್ಮ ತೋಟದ ಗಿಡಗಳಿಗೆ ಹೊಸ ಜೀವ ನೀಡಲು ನೀವು ಪ್ರಯತ್ನಪಡಲೇಬೇಕು.

Gardening Tips For Summer

ಹೊಸದಾಗಿ ಗಾರ್ಡನಿಂಗ್ ಮಾಡವವರಿಗೆ ಈ ಲೇಖನದಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ನಿಮ್ಮ ಮನೆಯ ಸುಂದರ ಕೈದೋಟವನ್ನು ಸಸ್ಯಶ್ಯಾಮಲೆಯನ್ನಾಗಿಸಲು ಇಲ್ಲಿ ನೀಡಿರುವ ಕೆಲವೊಂದು ಸಲಹೆಗಳನ್ನು ಪಾಲಿಸಿ. ಹೊಸದಾಗಿ ತೋಟಗಾರಿಕೆ ಮಾಡುವವರಿಗೆ ಇದೊಂದು ಉಪಯುಕ್ತ ಲೇಖನವಾಗಿದೆ.

ಇನ್ನಷ್ಟು ಮಾಹಿತಿಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೂ ಗುಚ್ಛದ ಗುಲಾಬಿ ಬೇಗನೆ ಬಾಡಬಾರದೇ?

ನಿಮ್ಮ ತೋಟವನ್ನು ಅರಿತುಕೊಳ್ಳಿ:
ನಿಮ್ಮ ಕೈದೋಟದಲ್ಲಿ ನೀವೇನಾದರೂ ಹೊಸದನ್ನು ಮಾಡಬೇಕೆಂದು ಬಯಸುತ್ತೀರೆಂದರೆ ನಿಮ್ಮ ತೋಟದ ಮೂಲೆ ಮೂಲೆಯನ್ನು ನೀವು ಚೆನ್ನಾಗಿ ಅರಿತಿರಬೇಕು. ಅಲ್ಲಿ ಬೆಳೆದಿರುವ ಮರಗಳು, ನೀರಿನ ವ್ಯವಸ್ಥೆ ಮತ್ತು ನಿಮ್ಮ ತೋಟದ ಸಸ್ಯಗಳ ಗುಣಗಳು ಹೀಗೆ ಎಲ್ಲವನ್ನೂ ಅರಿತವರು ನೀವಾಗಿರಬೇಕು. ಇದೊಂದು ಸರಳ ಬೇಸಿಗೆ ತೋಟಗಾರಿಕೆ ಸಲಹೆಯಾಗಿದ್ದು ನಿಮ್ಮ ತೋಟವನ್ನು ಬೇಸಿಗೆಯಲ್ಲಿ ಹೇಗೆ ನಿರ್ವಹಿಸಬೇಕು ಎಂಬುದನ್ನು ತಿಳಿಸಿಕೊಡುತ್ತದೆ.

ನಿಮ್ಮೆಲ್ಲಾ ಸಸ್ಯಗಳಿಗೆ ನೀರುಣಿಸುತ್ತಿರಿ:
ನಿಮ್ಮ ಸಸ್ಯದ ವಿಧ ಸರಿಯಾಗಿರದಿದ್ದರೆ, ಬೇಸಿಗೆಯು ನಿಮ್ಮ ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸಿ ಅದು ಸಾಯುವಂತೆ ಮಾಡುತ್ತದೆ. ಮಣ್ಣು ಒಣವಾಗಿ ಸಸ್ಯಕ್ಕೆ ಅಗತ್ಯವಾಗಿರುವ ನೀರು ಲಭ್ಯವಾಗಲಿಕ್ಕಿಲ್ಲ. ಆದ್ದರಿಂದ ನಿಮ್ಮ ಸಸ್ಯಕ್ಕೆ ಆಗಾಗ್ಗೆ ನೀರು ಉಣಿಸುವುದನ್ನು ಹೊಸದಾಗಿ ತೋಟಗಾರಿಕೆ ಮಾಡಿದವರು ಮರೆಯದಿರಿ. ನೀರು ಸಸ್ಯಕ್ಕೆ ಬೇಕಾದ ನ್ಯೂಟ್ರೀನ್‌ಗಳನ್ನು ನೀಡಿ ಚೆನ್ನಾಗಿ ಬೆಳೆಯಲು ಸಹಕಾರಿ. ಗಿಡದ ಅಗತ್ಯಕ್ಕೆ ಅನುಗುಣವಾಗಿ ನೀರು ಉಣಿಸಿ. ಅಲೋವೇರಾಗಿಂತ ಗುಲಾಬಿ ಗಿಡಕ್ಕೆ ಹೆಚ್ಚು ನೀರು ಬೇಕು. ನಿತ್ಯವೂ ನೀರುಣಿಸುವುದು ಅತೀ ಅಗತ್ಯ.

ಕೀಟ ನಿಯಂತ್ರಣ:
ಸಸ್ಯಗಳಲ್ಲಿ ಕೀಟಗಳು ಕಂಡುಬರುವುದು ಬೇಸಿಗೆಯಲ್ಲಿ ತುಸು ಹೆಚ್ಚು. ಆದ್ದರಿಂದ ಕೀಟಗಳ ಬಗೆಗೆ ನಿಮ್ಮ ಗಮನವಿರಲಿ. ಕೀಟಗಳು ಮತ್ತು ಸೋಂಕುಗಳು ನಿಮ್ಮ ಗಿಡಗಳನ್ನು ಹಾಗೂ ತೋಟವನ್ನು ಹಾಳುಗೆಡವಬಹುದು. ನೈಸರ್ಗಿಕ ಸಿಂಪಡಿಕೆಗಳನ್ನು ಗಿಡಗಳಿಗೆ ಹಾಕಿ ಕೀಟಗಳನ್ನು ನಿಯಂತ್ರಿಸಿ. ಒಂದು ಹಾಳಾದ ಸೇಬು ಬುಟ್ಟಿಯಲ್ಲಿರುವ ಎಲ್ಲಾ ಸೇಬುಗಳನ್ನು ಹೇಗೆ ಹಾಳುಗೆಡವುತ್ತದೋ ಅಂತೆಯೇ ಒಂದು ಗಿಡದ ಕೀಟ ಎಲ್ಲಾ ಗಿಡಗಳಿಗೂ ಅಪಾಯಕಾರಿ.

ಇನ್ನಷ್ಟು ಮಾಹಿತಿಗಳಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೈ ತೋಟದ ಆರೈಕೆಯ 12 ಮಹಾನ್ ಸೂತ್ರಗಳು

ಸುಸಜ್ಜಿತ ಹೊಸ ಗಿಡಗಳನ್ನು ಬೆಳೆಸಿ:
ಹೊಸದಾಗಿ ಕೈದೋಟ ನಿರ್ಮಿಸುವವರಿಗೆ ಇದೊಂದು ಮುಖ್ಯವಾದ ಸಲಹೆಯಾಗಿದೆ. ನೀವು ಹೊಸ ಬೀಜವನ್ನು ಬಿತ್ತುತ್ತೀರೆಂದರೆ, ಹೆಚ್ಚು ನೀರು ಅಗತ್ಯವಾಗಿಲ್ಲದ ಮತ್ತು ನಿಮ್ಮ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳುವ ಸಸ್ಯ ಬೀಜವನ್ನು ಆಯ್ದುಕೊಳ್ಳಿ. ಬಲಹೀನ ಸಸ್ಯ ಬೀಜಗಳನ್ನು ಆಯ್ದುಕೊಳ್ಳದಿರಿ.

ನೆರಳು ಆಯೋಜಿಸಿ:
ಹೆಚ್ಚು ಬಿಸಿಯನ್ನು ತಾಳಲಾರದ ಕೆಲವೊಂದು ಸಸ್ಯಗಳಿವೆ. ಆದ್ದರಿಂದ ಅವುಗಳಿಗೆ ತಕ್ಕಂತಹ ನೆರಳನ್ನು ನೀವು ನಿರ್ಮಿಸಬೇಕು. ಬೇಸಿಗೆಯಲ್ಲಿ ಹೊಸದಾಗಿ ತೋಟಗಾರಿಕೆ ಮಾಡುವವರಿಗೆ ಇದೊಂದು ಬೇಸಿಗೆ ತೋಟಗಾರಿಕೆ ಸಲಹೆಯಾಗಿದೆ. ಇದು ತುಂಬಾ ಮುಖ್ಯವಾದ ತೋಟಗಾರಿಕೆ ಸಲಹೆಯಾಗಿದೆ.

English summary

Gardening Tips For Summer

The heat is setting in and it is now time for the garden lovers to start working for their plants. Summer gardening is a challenging task as summer heat can get harsh on plants. This is even more of a difficult task if you are a new gardener.
Story first published: Thursday, March 13, 2014, 17:19 [IST]
X
Desktop Bottom Promotion