For Quick Alerts
ALLOW NOTIFICATIONS  
For Daily Alerts

ನಗರದ ಮನೆಗಳಿಗೆ ತೋಟಗಾರಿಕೆಯ ರಹಸ್ಯಗಳು!

By Hemanth P
|

ತೋಟಗಾರಿಕೆಯನ್ನು ಹೆಚ್ಚಿನ ಜನರು ತುಂಬಾ ಇಷ್ಟಪಡುತ್ತಾರೆ. ಮನೆಗಳನ್ನು ಕೆಲವೊಂದು ಹೂಕುಂಡಗಳು ಅಲಂಕರಿಸುವುದು ಅವರು ತುಂಬಾ ಪ್ರೀತಿಸುತ್ತಾರೆ. ಅವರಿಗೆ ತೋಟಗಾರಿಕೆ ಎನ್ನುವುದು ಒಂದು ಮನೋರಂಜನಾ ಚಟುವಟಿಕೆ. ಕೆಲವೊಂದು ಸಲ ತೋಟಗಾರಿಕೆ ಕೇವಲ ಪ್ಯಾಶನ್ ಆಗಿರುತ್ತದೆ.

ನಿಮ್ಮ ಊಟದ ತಟ್ಟೆಗೆ ಏನಾದರೂ ಆರೋಗ್ಯಕರವಾಗಿರುವುದನ್ನು ಬೆಳೆಸುವುದು ನಿಮ್ಮ ಉದ್ದೇಶವಾಗಿರುತ್ತದೆ. ಆದರೆ ನಗರಪ್ರದೇಶದ ಮನೆಗಳು ತುಂಬಾ ಭಿನ್ನವಾಗಿರುತ್ತದೆ. ಕೆಲವೊಂದು ಮನೆಗಳಲ್ಲಿ ತೋಟಗಾರಿಕೆ ಮಾಡಲು ಸಮಯ ಕೂಡ ಇರುವುದಿಲ್ಲ. ನಿಮಗೆ ತೋಟಗಾರಿಕೆ ಬಗ್ಗೆ ಪ್ರೀತಿಯಿದ್ದು, ಜಾಗ ಸಿಗದಿದ್ದರೆ ಆಗ ತುಂಬಾ ನಿರಾಶೆಯಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೂ ಕುಂಡ ತೋಟಗಾರಿಕೆಗೆ ಕೆಲವು ಸಲಹೆಗಳು

ಆದರೆ ನೀವು ನಿರಾಶರಾಗಬೇಕೆಂದಿಲ್ಲ!. ತೋಟಗಾರಿಕೆಗೆ ಜಾಗವಿಲ್ಲದಿದ್ದರೆ ಏನಂತೆ. ನೀವು ಕೆಲವೊಂದು ಹೂಕುಂಡಗಳನ್ನು ಕಿಟಕಿಯ ಬದಿ ಅಥವಾ ಅಡುಗೆ ಮನೆಯ ಕಿಟಿಕಿಯ ಬದಿಯಲ್ಲಿಡಬಹುದು. ಪ್ಯಾಶನ್ ತುಂಬಾ ಮುಖ್ಯ ಮತ್ತು ಇದು ಇದ್ದರೆ ಎಲ್ಲವೂ ಸಾಧ್ಯ.

Gardening secrets for urban homes

ಯಾವುದೇ ಋತು ಹಾಗೂ ಪ್ರದೇಶದಲ್ಲಿ ನಿಮ್ಮ ತೋಟಗಾರಿಕೆ ಹವ್ಯಾಸವನ್ನು ಈಡೇರಿಸುವಂತಹ ಕೆಲವೊಂದು ಮೂಲ ವಿಷಯಗಳನ್ನು ನಾವು ನಿಮಗೆ ತಿಳಿಸುತ್ತೇವೆ. ನಿಮಗೆ ಕೆಲವು ಹೂಕುಂಡಗಳು ಬೇಕು. ಅದರಲ್ಲಿ ಏನು ಬೆಳೆಸಬೇಕು ಎಂದು ನಿಮಗೆ ತಿಳಿದಿರಬೇಕು. ನಗರ ಪ್ರದೇಶದ ಮನೆಗಳಲ್ಲಿ ವಾಸಿಸುತ್ತಿದ್ದರೂ ತೋಟಗಾರಿಕೆ ಮಾಡುವಂತಹ ಕೆಲವೊಂದು ರಹಸ್ಯಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ. ನಗರ ಪ್ರದೇಶದ ಮನೆಗಳಲ್ಲಿ ಕೂಡ ಸಾವಯವ ರೀತಿಯಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಸಬಹುದು. ಹಾಗಾದರೆ ಈಗ ತೋಟಗಾರಿಕೆ ರಹಸ್ಯವನ್ನು ತುಂಬಾ ಗಮನವಿರಿಸಿ ಕೇಳಿ...

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಕೆಂಪು ಹೂಗಳು ನಿಮ್ಮ ಗಾರ್ಡನ್ ನಲ್ಲಿ ಇದೆಯೇ?

ಲಭ್ಯವಿರುವ ಜಾಗ ಬಳಸಿಕೊಳ್ಳಿ:
ನಿಮ್ಮ ಮನೆಯ ಹೊರಗಡೆ ಆಸಕ್ತಿದಾಯಕ ಒಳಾಂಗಣ ಜಾಗವಿರುತ್ತದೆ. ಇದು ಎಷ್ಟು ದೊಡ್ಡದಿದೆ ಎಂದು ಪರೀಕ್ಷಿಸಿ. ಇದಕ್ಕೆ ಸರಿಯಾಗಿ ಸೂರ್ಯನ ಕಿರಣ ಬೀಳುತ್ತದೆಯಾ ಅಥವಾ ಇಲ್ಲವಾ ಎಂದು ನೋಡಿಕೊಳ್ಳಿ. ಇದರಲ್ಲಿ ಸರಿಯಾಗಿ ಮಣ್ಣಿರಬೇಕು. ಮಣ್ಣನ್ನು ಪರೀಕ್ಷಿಸಿ. ನೀವು ಈ ಪ್ರದೇಶದಲ್ಲಿ ಯಾವುದೇ ಸಾವಯವ ತರಕಾರಿ ಅಥವಾ ಹೂವಿನ ಗಿಡಗಳನ್ನು ಬೆಳೆಸುವ ಬದಲು ಒಳಾಂಗಣದ ಎಲ್ಲಾ ಪರಿಸ್ಥಿತಿ ಪರಿಶೀಲಿಸಬೇಕು. ಹೌದು, ನಿಮಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ತೋಟ ಬೇಕಾಗಿದೆ. ಆದರೆ ಮಿತವಾಗಿರುವ ಜಾಗವಿರುವ ಕಾರಣ ಚೆನ್ನಾಗಿ ಯೋಚಿಸಿ, ಕ್ರಿಯಾತ್ಮಕವಾಗಿ ತೋಟಗಾರಿಕೆ ಮಾಡಬೇಕು. ನೆರೆಮನೆಯವರೊಂದಿಗೆ ಜಾಗ ಹಂಚಿಕೊಂಡರೆ ತೋಟವನ್ನು ಸ್ವಲ್ಪ ಅಗಲಗೊಳಿಸಬಹುದು. ಇದರ ಬಗ್ಗೆ ಯೋಚಿಸಿ!

ನೀರಿನ ಲಭ್ಯತೆ:
ಅಲ್ಪಸ್ವಲ್ಪ ಜಾಗದಲ್ಲಿ ತೋಟಗಾರಿಕೆ ಮಾಡುವಾಗ ಈ ಅಂಶವನ್ನು ಅತೀ ಮುಖ್ಯವಾಗಿ ಪರಿಗಣಿಸಬೇಕು. ನೀವು ನೀರನ್ನು ಎಲ್ಲಿಂದ ಪಡೆಯಲು ಬಯಸಿದ್ದೀರಿ? ಪೈಪ್ ಅಳವಡಿಸುತ್ತೀರಾ ಅಥವಾ ಬಕೆಟ್ ನಲ್ಲಿ ನೀರು ತಂದು ಹಾಕುತ್ತೀರಾ? ಬಕೆಟ್ ನಲ್ಲಿ ನೀರು ತಂದು ಹಾಕುವುದು ತುಂಬಾ ಶ್ರಮದ ಕೆಲಸ. ಇದಕ್ಕೆ ಹೇಳಿರುವುದು ತೋಟಗಾರಿಕೆ ಮಾಡುವ ಮೊದಲು ಯೋಜನೆ ಹಾಕಿಕೊಳ್ಳಿ ಎಂದು. ನೀರಿನ ಲಭ್ಯತೆ ಬಗ್ಗೆ ಪರೀಕ್ಷಿಸಿ. ಬೇಸಿಗೆಯಲ್ಲಿ ನೀರಿಲ್ಲದೆ ಗಿಡಗಳು ಬಾಡಿ ಹೋಗಬಾರದು.

ತೋಟಗಾರಿಕೆಯ ಯೋಜನೆ ಹಾಕಿ:
ತೋಟಗಾರಿಕೆ ಮಾಡುವ ಮೊದಲು ನೀವು ತೋಟದಲ್ಲಿ ಏನು ಬೆಳೆಸಲು ಬಯಸಿದ್ದೀರಿ ಎನ್ನುವುದು ತುಂಬಾ ಮುಖ್ಯ. ನೀವು ಏನು ಬೆಳೆಸಲು ಬಯಸಿದ್ದೀರಿ ಎಂದು ತಿಳಿಯಿರಿ. ಗಿಡಮೂಲಿಕೆಗಳು, ತರಕಾರಿ, ಹೂವಿನ ಗಿಡಗಳು ಇತ್ಯಾದಿ. ಒಂದೇ ವಿಧದ ಅಥವಾ ವಿವಿಧ ಬಗೆಯ ಒಂದೊಂದು ಗಿಡಗಳನ್ನು ಬೆಳೆಸುತ್ತೀರಾ ಎಂದು ನಿರ್ಧರಿಸಿ. ಯಾವ ಗಿಡಗಳಿಗೆ ಸೂರ್ಯನ ಬೆಳಕು ಹೆಚ್ಚು ಬೇಕೆಂದು ನೀವು ನಿರ್ಧರಿಸಿ ಮತ್ತು ಸೂರ್ಯನಿಂದ ದೂರವಿದ್ದರೂ ಬದುಕುವ ಗಿಡಗಳನ್ನು ಪಟ್ಟಿ ಮಾಡಿ. ಜಾಗ ಕಡಿಮೆ ಇರುವಾಗ ಯೋಜನೆ ಹಾಕಿಕೊಳ್ಳುವುದು ತುಂಬಾ ಮುಖ್ಯ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಗಾರ್ಡನ್ ಬಗ್ಗೆ ಮಾತ್ರ ತಪ್ಪು ಕಲ್ಪನೆ ಏಕೆ?

ತೋಟಗಾರಿಕೆಯ ಕ್ರಿಯಾತ್ಮಕತೆ:
ಸಣ್ಣ ಜಾಗದಲ್ಲಿ ತೋಟಗಾರಿಕೆ ಮಾಡುವಾಗ ನೀವು ಕ್ರಿಯಾತ್ಮಕವಾಗಿರಬೇಕು. ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಸುವುದು ನಿಮಗೆ ಕಷ್ಟವಾಗಬಹುದು. ನಿಮ್ಮದೇ ಆದ ಸಂಶೋಧನೆ ಮಾಡಿ ಸ್ವಲ್ಪ ಭಿನ್ನವಾಗಿ ಯೋಜನೆ ಹಾಕಿಕೊಳ್ಳಿ. ಇಂತಹ ಪರಿಸ್ಥಿತಿಯಲ್ಲಿ ಕ್ರಿಯಾತ್ಮಕತೆ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಕೆಲವೊಂದು ಅದ್ಭುತ ಗಿಡಗಳನ್ನು ತೋಟದಲ್ಲಿ ಬೆಳೆಸಬಹುದು.

ಮೇಲ್ಭಾಗದ ತೋಟಗಾರಿಕೆ:
ನಗರದಲ್ಲಿ ತೋಟಗಾರಿಕೆ ಮಾಡುವ ಹೆಚ್ಚಿನವರು ಈ ಟ್ರೆಂಡ್ ನ್ನು ಪಾಲಿಸುತ್ತಾರೆ. ಇದು ತುಂಬಾ ಆಸಕ್ತಿದಾಯಕ ಟ್ರೆಂಡ್. ಇದು ನಿಮ್ಮ ತೋಟಗಾರಿಕೆಯನ್ನು ವ್ಯಾಪಿಸಲು ಮತ್ತು ಸಣ್ಣ ಜಾಗದ ಉಪಯೋಗ ಪಡೆದುಕೊಳ್ಳಲು ನೆರವಾಗುತ್ತದೆ. ದೊಡ್ಡ ಕಂಟೈನರ್ ನ್ನು ಬಳಸಿ ಮತ್ತು ಅದರಲ್ಲಿ ಗಿಡಗಳನ್ನು ನೆಡಿ. ನೀವು ಕಿಟಕಿ ಬಾಕ್ಸ್ ಗಳನ್ನು ಬಳಸಿಕೊಂಡು ಜಾಗದ ಸದುಪಯೋಗ ಮಾಡಿಕೊಳ್ಳಬಹುದು. ಸ್ವಲ್ಪ ಜಾಗ ಬಳಸಿಕೊಂಡು ಹೆಚ್ಚಿನ ಗಿಡಗಳನ್ನು ಬೆಳೆಸುವುದು ಇದರ ಐಡಿಯಾ. ಕೆಲವೊಂದು ಬಾಕ್ಸ್‌ಗಳನ್ನು ಬಳಸಿಕೊಂಡು ಜಾಗವನ್ನು ಸದುಪಯೋಗ ಮಾಡಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸೊಳ್ಳೆ ಕಡಿತದಿಂದ ಪಾರಾಗಬೇಕೆ?

ಒಳಾಂಗಣ ತೋಟಗಾರಿಕೆ:
ಒಳಾಂಗಣ ತೋಟಗಾರಿಕೆಯಲ್ಲಿ ಗಿಡಮೂಲಿಕೆ ಸಸ್ಯಗಳನ್ನು ಬೆಳೆಸಬಹುದು. ಹಸಿರನ್ನು ಬೆಳೆಸಬಹುದು. ಇದಕ್ಕೆ ಕಿಟಕಿಯಿಂದ ಸರಿಯಾಗಿ ಸೂರ್ಯನ ಬೆಳಕು ಬೀಳುವಂತಿರಬೇಕು. ಸೂರ್ಯನ ಬೆಳಕು ಹೆಚ್ಚಿರುವ ಸಸ್ಯಗಳನ್ನು ಹೊರಗಡೆ ಬೆಳೆಸಬೇಕು.

English summary

Gardening secrets for urban homes

There’s this unsaid passion for gardening that exists in many people. They just love to have their own flower pots decorating their homes. For them gardening is more like a recreational activity. Sometimes gardening is more than just a passion.
Story first published: Friday, March 7, 2014, 15:13 [IST]
X
Desktop Bottom Promotion