For Quick Alerts
ALLOW NOTIFICATIONS  
For Daily Alerts

ಗುಲಾಬಿ ಗಿಡಗಳ ನಿರ್ವಹಣೆಗೆ ಇಲ್ಲಿದೆ ಸುಲಭ ಟಿಪ್ಸ್

|

ಸಾಮಾನ್ಯವಾಗಿ ಬೇಸಿಗೆ ಕಾಲದ ಋತುವಿನಲ್ಲಿ ಗಿಡ, ಸಸ್ಯಗಳಿಗೆ ಹಾನಿಯುಂಟಾಗುವುದು ಸಹಜ. ಕೆಲವೊಂದು ಗಿಡಗಳಿಗೆ ಬೇಸಿಗೆ ಕಾಲದಲ್ಲಿ ತುಂಬಾ ಗ್ರಹಣಶಕ್ತಿ ಹೊಂದಿರುತ್ತದೆ. ಗುಲಾಬಿ, ಟೊಮೆಟೊ, ಮಲ್ಲಿಗೆ ಹಾಗೂ ವಿವಿಧ ರೀತಿಯ ಅಲಂಕಾರಿಕ ಸಸ್ಯಗಳು ಸಮಸ್ಯೆಗೆ ತುತ್ತಾಗುವ ಗಿಡಗಳು.

ಈ ಎಲ್ಲಾ ಗಿಡಗಳಿಗಿಂತಲೂ ಗುಲಾಬಿ ಸಸ್ಯಗಳಿಗೆ ಹೆಚ್ಚಿನ ಆರೈಕೆ ಮತ್ತು ರಕ್ಷಣೆ ಬೇಕಾಗುತ್ತದೆ. ಗುಲಾಬಿ ತುಂಬಾ ಸುಂದರ ಹೂ ಮತ್ತು ಇದು ಎಲ್ಲರಿಗೂ ಮೆಚ್ಚುಗೆಯ ಸಸ್ಯವಾಗಿದೆ. ಪ್ರತಿಯೊಂದು ಮನೆಯ ಹೂದೋಟದಲ್ಲಿ ಗುಲಾಬಿ ಗಿಡ ನೋಡಲು ಸಿಕ್ಕೇ ಸಿಗುತ್ತದೆ. ಗುಲಾಬಿ ಗಿಡಗಳು ತುಂಬಾ ಸುಕ್ಷ್ಮ ಹಾಗೂ ಹವಾಮಾನ ಮತ್ತು ಉಷ್ಣತೆ ಬದಲಾಗುವ ಕಾರಣ ಇದರ ಮೇಲೆ ಪರಿಣಾಮವಾಗಬಹುದು.

Gardening of rose flower: Summer Tips

ಬೇಸಿಗೆಗಾಲ ಬಂದಾಗ ನಿಮ್ಮ ಗುಲಾಬಿ ತೋಟವನ್ನು ರಕ್ಷಿಸುವುದು ತುಂಬಾ ಮುಖ್ಯ. ಹಾಗಾಗಿ ಗುಲಾಬಿ ತೋಟಗಾರಿಕೆಗೆ ಕೆಲವೊಂದು ಉಪಯುಕ್ತ ಟಿಪ್ಸ್‌ಗಳಿವೆ. ಈ ಟಿಪ್ಸ್‌ಗಳು ನಿಮ್ಮ ಹೂತೋಟದಲ್ಲಿ ಗುಲಾಬಿ ಗಿಡಗಳ ಆರೈಕೆ ಮಾಡಲು ಖಂಡಿತವಾಗಿಯೂ ನೆರವಾಗಲಿದೆ. ಗುಲಾಬಿ ತೋಟದ ಬಗ್ಗೆ ಇರುವ ಕೆಲವೊಂದು ಸರಳ ಟಿಪ್ಸ್‌ಗಳು ಖಂಡಿತವಾಗಿಯೂ ನಿಮಗೆ ನೆರವಾಗಲಿದೆ.

ಬೇವಿನ ಎಲೆಯ 7 ಹೂದೋಟ ಸಲಹೆಗಳನ್ನು ನಿಮ್ಮದಾಗಿಸಿಕೊಳ್ಳಿ!

ಸುತ್ತಲಿನ ಪ್ರದೇಶ ಸ್ವಚ್ಛವಾಗಿಡಿ:
ಸಾಮಾನ್ಯವಾಗಿ ತೋಟದಲ್ಲಿ ತುಂಬಾ ಒಣಗಿದ ಎಲೆಗಳು, ಮರದ ಕಾಂಡಗಳು ಬಿದ್ದಿರುವುದರಿಂದ, ಇದರಿಂದ ಗುಲಾಬಿ ಗಿಡಗಳಿಗೆ ಬೇಗನೆ ಸೋಂಕಿಗೆ ಗುರಿಯಾಗುತ್ತದೆ. ಒಣಗಿದ ಎಲೆಗಳು ಮತ್ತು ಕಾಂಡಗಳು ತಮ್ಮೊಳಗೆ ಇರುವ ಕೀಟಗಳನ್ನು ಹೊರಹಾಕುತ್ತದೆ. ಯಾವುದೇ ರೀತಿಯ ಸೋಂಕು ಅಥವಾ ಪರಾವಲಂಬಿ ಜೀವಿ ಬರದಂತೆ ಗುಲಾಬಿ ಗಿಡದ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ. ತೋಟವನ್ನು ಸ್ವಚ್ಛಗೊಳಿಸುವ ಮೂಲಕ ಅದು ಸುಂದರ ಹಾಗೂ ಕ್ರಮಬದ್ಧವಾಗಿ ಕಾಣುತ್ತದೆ.

ನೀರು:
ಗುಲಾಬಿ ಗಿಡಗಳು ಬೇಸಿಗೆಗಾಲದಲ್ಲಿ ಒಣ ಹಾಗೂ ತೇವಾಂಶರವಹಿತವಾಗುತ್ತದೆ. ಗಿಡಗಳನ್ನು ತಾಜಾ ಮತ್ತು ತೇವಾಂಶಭರಿತವಾಗಿಡಲು ನಿಯಮಿತವಾಗಿ ನೀರು ಹಾಕಿ. ನಿಯಮಿತವಾಗಿ ನೀರು ಹಾಕುವುದರಿಂದ ಗುಲಾಬಿ ಗಿಡದ ಬೇರುಗಳಿಗೆ ತಂಪಾಗಿರುವ ಮಣ್ಣಿನಲ್ಲಿ ನೀರು ಹುಡುಕುವ ಕೆಲಸ ಬೀಳುವುದಿಲ್ಲ. ಎಲ್ಲಾ ಚಟುವಟಿಕೆಗಳಿಗೆ ನೀರು ಪ್ರಮುಖವೆನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಗುಲಾಬಿ ಗಿಡಗಳ ಬೆಳವಣಿಗೆ ಮತ್ತು ಹೂ ಬಿಡಲು ಅವುಗಳಿಗೆ ಹೆಚ್ಚಿನ ನೀರು ಬೇಕಾಗಿದೆ.

ಗುಲಾಬಿ ಗಿಡದ ಬುಡವನ್ನು ಚೆನ್ನಾಗಿ ನೋಡಿಕೊಳ್ಳಿ:
ಗುಲಾಬಿ ಗಿಡಗಳಿಗೆ ಕೆಂಪು ಮಣ್ಣು ಮತ್ತು ಗೊಬ್ಬರ ಹಾಕಿ ರಕ್ಷಿಸಿ. ಇದು ಗಿಡಗಳಿಗೆ ಬಲ ಮತ್ತು ಬಿಸಿ ನೀಡುತ್ತದೆ. ಕಾಂಡದ ಆರಂಭಿಕ ಭಾಗವನ್ನು ಇದರ ಮೂಲಕ ರಕ್ಷಿಸುವುದು ತುಂಬಾ ಮುಖ್ಯ. ಇದು ಒಳ್ಳೆಯ ಗುಲಾಬಿ ತೋಟಗಾರಿಕೆಯ ಟಿಪ್ಸ್. ಆದರೆ ಇದಕ್ಕಾಗಿ ತುಂಬಾ ಶ್ರಮ ಬೇಕಾಗುತ್ತದೆ.

ಸರಳವಾಗಿ ಗಾರ್ಡನಿಂಗ್ ಮಾಡುವುದಕ್ಕೆ ಪರಿಣಾಮಕಾರಿ ಸಲಹೆಗಳು

ಒಳಾಂಗಣ ತೋಟಗಾರಿಕೆ:
ಬೇಸಿಗೆಗಾಲದ ಬಿಸಿಯನ್ನು ತಡೆಯಲು ಗುಲಾಬಿ ಗಿಡಗಳನ್ನು ಮನೆಯ ಒಳಗಡೆ ಕೊಂಡುಹೋಗಬಹುದು. ಮನೆಯ ಒಳಗಡೆ ಗುಲಾಬಿ ಗಿಡಗಳನ್ನು ಇಟ್ಟರೆ ಆಗ ಹೆಚ್ಚಿನ ನಿರ್ವಹಣೆ ಬೇಕಾಗುತ್ತದೆ. ಬಾಗಿಲು ಮತ್ತು ಕಿಟಕಿ ಗಿಡದ ಹತ್ತಿರ ಗುಲಾಬಿ ಗಿಡಗಳನ್ನು ಇಡಿ. ಇದಕ್ಕೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಿ.

Story first published: Wednesday, April 23, 2014, 10:59 [IST]
X
Desktop Bottom Promotion