For Quick Alerts
ALLOW NOTIFICATIONS  
For Daily Alerts

ಸಿಟ್ರಸ್ ಹಣ್ಣುಗಳ ತೋಟಗಾರಿಕೆ ಈಗ ಮತ್ತಷ್ಟು ಸುಲಭ!

By Poornima Heggade
|

ನಮ್ಮ ಪ್ರತಿದಿನದ ಅಡುಗೆಯಲ್ಲಿ ಅದಕ್ಕಿಂತ ಹೆಚ್ಚಾಗಿ ನಮ್ಮ ಜೀವನದಲ್ಲಿ ನಮ್ಮ ಸಹಭಾಗಿಯಂತೆ, ನಮ್ಮ ಜೊತೆಗಾರನಂತೆ ಸಿಟ್ರಸ್‌ನ್ನು ನೆಚ್ಚಿಕೊಂಡಿದ್ದೇವೆ. ಬಹುಶಃ ಸಿಟ್ರಸ್ ಇಲ್ಲದೆ ನಮ್ಮ ಜೀವನವನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲವೇನೋ! ಸಿಟ್ರಸ್ ಹಣ್ಣುಗಳು ನಮ್ಮ ಆಹಾರ ಮತ್ತು ಪಾನೀಯಗಳಲ್ಲಿ ಪರಿಪೂರ್ಣ ರುಚಿಯನ್ನು ನೀಡುವ ಕಾರಣಕ್ಕೆ ಮಾತ್ರವಲ್ಲ, ಇದರಲ್ಲಿರುವ ವಿಟಮಿನ್ ಸಿ ಅತ್ಯುತ್ತಮ ಮೂಲದಿಂದಾಗಿ ಇವು ಪರಿಣಾಮಕಾರಿ ಮನೆಯ ಮದ್ದುಗಳಾಗಿಯೂ ಕೆಲಸ ಮಾಡುತ್ತವೆ.

ಆಂಟಿ ಆಕ್ಸಿಡೆಂಟ್ಸ್ ವಾಹಕಗಳವಾಗಿರುವ ಸಿಟ್ರಸ್ ಹಣ್ಣುಗಳು ಸೂರ್ಯನ ಕಿರಣಗಳಿಂದ ಉಂಟಾಗುವ ಚರ್ಮದ ಹಾನಿ, ಇದರಿಂದ ಉಂಟಾಗಬಹುದಾದ ಕ್ಯಾನ್ಸರ್, ಹೃದಯ ರೋಗಗಳು ಹೀಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತವೆ.

Gardening Citrus Fruit Plants

ನಾವು ನಮ್ಮ ಮನೆಯ ಫ್ರಿಡ್ಜ್ ನ ಒಂದು ಭಾಗದಲ್ಲಿ ವರ್ಷವಿಡಿ ನಿಂಬೆ ಹಣ್ಣನ್ನು ತುಂಬಿಸಿಡುತ್ತೇವೆ ನಿಜ ತಾನೇ? ಸಿಟ್ರಸ್ ಹಣ್ಣುಗಳ ತಾಜಾರಸದಿಂದ ನಮ್ಮ ಪಾನೀಯಗಳು ಮತ್ತು ಆಹಾರ ವಸ್ತುಗಳನ್ನು ತಯಾರಿಸುತ್ತೇವೆ. ತಮ್ಮ ಆರೋಗ್ಯ ಪ್ರಯೋಜನಗಳು ಮತ್ತು ತಾಜಾ ಪರಿಮಳದಿಂದಾಗಿ ಸಿಟ್ರಸ್ ಹಣ್ಣುಗಳನ್ನು ಬಹುಮುಖ ಪ್ರತಿಭೆಯ ಹಣ್ಣುಗಳು ಎಂದು ಪರಿಗಣಿಸಲಾಗಿದೆ ಮತ್ತು ಹೀಗೆ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ!

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಕೆಂಪು ಹೂಗಳು ನಿಮ್ಮ ಗಾರ್ಡನ್ ನಲ್ಲಿ ಇದೆಯೇ?

ಕುತೂಹಲಕರ ವಿಷಯವೆಂದರೆ, ಕಿತ್ತಳೆ/ಸಿಟ್ರಸ್ ಮರಗಳು ಅವುಗಳ ಪ್ರಯೋಜನಗಳಿಂದ ಮಾತ್ರ ಜನಪ್ರಿಯವಾಗಿಲ್ಲ ಜೊತೆಗೆ ಸಿಟ್ರಸ್ ಮರ ಅಲಂಕಾರಿಕ ಮರವಾಗಿಯೂ ಕೂಡ ಜನಪ್ರಿಯವಾಗಿವೆ ! ಅಲ್ಲದೆ ಸಿಟ್ರಸ್ ಗಿಡಗಳನ್ನು ಬೆಳೆಸುವುದೂ ಸಹ ಕಷ್ಟವಲ್ಲ.

ಮನೆಯ ಉದ್ಯಾನಗಳಲ್ಲಿ ಕಿತ್ತಳೆ ಮರಗಳನ್ನು ಬೆಳೆಯಲು ಯಾರು ಯೋಚಿಸಿದ್ದಾರೋ, ಅಂತವರಿಗೆ ಸಿಟ್ರಸ್ ಮರಗಳನ್ನು ಬೆಳೆಯುವುದು ಹೇಗೆ ಎಂಬ ಈ ಲೇಖನದಲ್ಲಿ ಚರ್ಚಿಸಲಾಗಿರುವ ಕೆಲವು ಸಲಹೆಗಳು ಖಂಡಿತವಾಗಿಯೂ ಪ್ರಯೋಜನಕಾರಿಯಾಗಲಿದೆ.

ಸಿಟ್ರಸ್ ಹಣ್ಣುಗಳ ವೈವಿಧ್ಯಗಳು
ಸಿಟ್ರಸ್ ತೋಟಗಾರಿಕೆಯ ವಿಷಯದಲ್ಲಿ ಮುಂದುವರೆಯುವುದಕ್ಕಿಂತ ಮೊದಲು ನಮಗೆ ಸಿಟ್ರಸ್ ಹಣ್ಣುಗಳು ಪ್ರಭೇದಗಳ ಬಗ್ಗೆ ನಮ್ಮ ಶಾಲೆಗಳಲ್ಲಿ ವಿಜ್ಞಾನದಲ್ಲಿ ಕಲಿತ ವಿಷಯಗಳನ್ನು ನೆನಪಿಸಿಕೊಳ್ಳೋಣ. ಸಾಮಾನ್ಯವಾಗಿ ಹೆಚ್ಚು ತಿಳಿಯಲ್ಪಟ್ಟಿರುವ ಸಿಟ್ರಸ್ ಹಣ್ಣುಗಳೆಂದರೆ: ನಿಂಬೆ, ಕಿತ್ತಳೆ, ಟ್ಯಾಂಜೆಲೊ, ದ್ರಾಕ್ಷಿ.

ಸಿಟ್ರಸ್ ಹಣ್ಣುಗಳ ತೋಟಗಾರಿಕೆ - ಟಿಪ್ಸ್

ಗಿಡ ನೆಡುವುದು
ಸಿಟ್ರಸ್ ಮರಗಳು ಕನಿಷ್ಠ ಐದು ಗಂಟೆಗಳ ಕಾಲ ಸೂರ್ಯನ ಬೆಳಕನ್ನು ಪಡೆಯಬೇಕು. ಆದ್ದರಿಂದ ಕಿತ್ತಳೆ/ನಿಂಬೆ ಗಿಡದ ತೋಟಗಾರಿಕೆ ಮಾಡಬೇಕಾದರೆ, ನಿಮ್ಮ ಮರ ಯಶಸ್ವಿಯಾಗಿ ಬೆಳೆಯಲು ಒಂದು ಪ್ರಕಾಶಮಾನವಾದ ಬಿಸಿಲು ಬೀಳುವ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಿ. ವಸಂತ ಋತುವಿನಲ್ಲಿ ಸಾಮಾನ್ಯವಾಗಿ ಸಿಟ್ರಸ್ ಸಸ್ಯಗಳು ಬೆಳೆಯಲು ಆದ್ಯತೆ ನೀಡಲಾಗುತ್ತದೆ.

ಕಿತ್ತಳೆ ಮರಗಳನ್ನು ಬೆಳೆಯಲು ದೊಡ್ಡ ಹಿತ್ತಲಿನ ಅಗತ್ಯವಿಲ್ಲ ಎಂಬುದು ನಿಮಗೆ ತಿಳಿದಿದೆಯೇ? ಸಾಮಾನ್ಯವಾಗಿ 3 ರಿಂದ 5 ಅಡಿ ಎತ್ತರದಲ್ಲಿ ಕಿತ್ತಳೆ ಮರಗಳು ಬೆಳೆಯುತ್ತವೆ. ಕುಬ್ಜ ಜಾತಿಯ ಸಿಟ್ರಸ್ ಮರಗಳು ಸಾಮಾನ್ಯವಾಗಿ ಕುಂಡಗಳಲ್ಲಿಯೇ ಚೆನ್ನಾಗಿ ಬೆಳೆಯುತ್ತವೆ. ಚಳಿಗಾಲದ ರಾತ್ರಿ ಸಮಯದಲ್ಲಿ, ತೀವ್ರ ಶೀತ ಹವಾಮಾನದಿಂದ ಸಸ್ಯಕ್ಕೆ ಉಂಟಾಗುವ ಹಾನಿಯನ್ನು ತಪ್ಪಿಸಲು ಕುಂಡಗಳನ್ನು ಮನೆಯೊಳಗೆ ತಂದಿಡಿ.

ಕುಂಡದಲ್ಲಿ ಬೆಳೆಯುವ ಸಿಟ್ರಸ್ ಸಸ್ಯಗಳಿಗೆ ವಿಶೇಷ ಕಾಳಜಿ ಅಗತ್ಯ
ಒಂದು ಕುಂಡದಲ್ಲಿ ಕುಬ್ಜ ಸಿಟ್ರಸ್ ಸಸ್ಯವನ್ನು ಬೆಳೆಸಲು ಸೂರ್ಯನ ಪ್ರಕಾಶ ಬೀಳುವ ಸ್ಥಳದಲ್ಲಿಯೇ ಕುಂಡವನ್ನಿಟ್ಟರೆ ಸಸ್ಯ ಚೆನ್ನಾಗಿ ಬೆಳೆಯಲು ಸಾಧ್ಯ. ಆದಾಗ್ಯೂ, ಕುಂಡಗಳಲ್ಲಿ ಕಿತ್ತಳೆ ಗಿಡಗಳನ್ನು ಬೆಳೆಸುವಾಗ ನಿರಂತರ ಎಚ್ಚರಿಕೆ ಅಗತ್ಯ.

ಆರಂಭದಲ್ಲಿ, ನಿಮ್ಮ ಮಡಕೆ/ಕುಂಡ ಸಸ್ಯ ಸಮೃದ್ಧವಾಗಿ ಬೆಳೆಯಲು ಸಾಕಷ್ಟು ಜಾಗವನ್ನು ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಸರಿಯಾದ ಬಿಸಿಲು, ಮತ್ತು ಸ್ಥಿರವಾಗಿ ನೀರುಣಿಸುವುದು ಸಿಟ್ರಸ್ ಸಸ್ಯ ಬೆಳೆಯಲು ಅತ್ಯಗತ್ಯ.

ಸಸ್ಯೋದ್ಯಾನ (ಆರ್ಚರ್ಡ್) ನಲ್ಲಿ ಸಿಟ್ರಸ್ ಮರಗಳ ತೋಟಗಾರಿಕೆ

ಒಂದು ಸಣ್ಣ ಸಸ್ಯೋದ್ಯಾನವನ್ನು ಬೆಳೆಯಲು ಬಯಸುವವರು, ಸಿಟ್ರಸ್ ಸಸ್ಯಗಳನ್ನು ಅವುಗಳ ಕಾಂಡ ಕೊಳೆಯದಂತೆ ರಕ್ಷಿಸಲು ಇತರ ಸಸ್ಯಗಳಿಂದ ದೂರವಿರುವಂತೆ ನೋಡಿಕೊಳ್ಳಬೇಕು.ಜೊತೆಗೆ ಸಿಟ್ರಸ್ ಸಸ್ಯಗಳ ನಾಟಿ ಮಾಡುವಾಗ, ಸಸ್ಯಗಳ ನಡುವೆ ಕನಿಷ್ಠ ಎರಡು ಮೀಟರ್ ಅಂತರವಿರುವಂತೆ ನೋಡಿಕೊಳ್ಳಬೇಕು.

ಸಿಟ್ರಸ್ ಸಸ್ಯಗಳು ಸಾಯಲು ಸಾಮಾನ್ಯ ಕಾರಣಗಳು
ಹಿಮ, ಕಳಪೆ ಒಳಚರಂಡಿ, ಅತಿಯಾದ ನೀರು ಇತ್ಯಾದಿಗಳು ಎಳೆಯ ಸಿಟ್ರಸ್ ಸಸ್ಯಗಳ ಸಾವಿಗೆ ಹಾಗೂ ಹಳೆಯ ಮರಗಳ ಸಾವಿಗೆ ಕಾಲರ್ ಕೊಳೆತ ಕಾರಣವಾಗಬಹುದು.

ಕಟಾವು
ಒಮ್ಮೆ ಸಂಪೂರ್ಣವಾಗಿ ಬೆಳೆದ ನಂತರ, ಸಿಟ್ರಸ್ ಹಣ್ಣುಗಳು ರೋಮಾಂಚಕ ಬಣ್ಣವನ್ನು ಹೊಂದಿ, ಕಟಾವಿಗೆ ಸಿದ್ಧವಾಗುತ್ತವೆ! ಸಾಮಾನ್ಯವಾಗಿ ಸರಾಸರಿ 3 ಅಡಿ ಎತ್ತರದ ಮರ ಒಂದು ಸಮಯದಲ್ಲಿ 20 ಹಣ್ಣುಗಳಿಗಿಂತ ಅಧಿಕ ಭಾರವನ್ನು ತಡೆಯುವುದಿಲ್ಲ.

ನಿಮ್ಮ ತೋಟಗಾರಿಕೆಗೆ ನಮ್ಮ ಶುಭಾಷಯಗಳು!

English summary

Gardening Citrus Fruit Plants

It becomes a little hard to imagine life without citrus! Mainly because citrus fruits are not only seen as perfect taste providers to our food and drinks but being excellent sources of Vitamin C, they also work as effective home remedies.
Story first published: Wednesday, January 15, 2014, 11:09 [IST]
X
Desktop Bottom Promotion