For Quick Alerts
ALLOW NOTIFICATIONS  
For Daily Alerts

ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಗೊಬ್ಬರದ ಬಳಕೆ ಹೇಗಿರಬೇಕು?

|

ಗಿಡಗಳಿಗೆ ಹಾಕುವ ಕೀಟನಾಶಕಗಳಿಂದ ಹಲವಾರು ಕಾಯಿಲೆಗಳು ಬರುತ್ತವೆ. ಆದ್ದರಿಂದ ನಮ್ಮ ಮನೆಯ ಕೈತೋಟದಲ್ಲಿ ಬೆಳೆಯುವ ಗಿಡಗಳಿಗೆ ನಾವೇ ತಯಾರಿಸಿಕೊಳ್ಳುವ ಗೊಬ್ಬರವನ್ನು ಬಳಸುವುದು ಒಳ್ಳೆಯದು.

ಈ ನಿಟ್ಟಿನಲ್ಲಿ ಆಲೋಚಿಸಿದರೆ ಪ್ರತಿಯೊಂದು ಕುಟುಂಬವು ಸಹ ಸ್ವಾವಲಂಬಿಯಾಗಬಲ್ಲದು. ಪ್ರತಿಯೊಬ್ಬರು ಸ್ವಲ್ಪ ಮಟ್ಟಿಗಿನ ಸ್ಥಳಾವಕಾಶ ದೊರೆತರೆ ತಮ್ಮ ಮನೆಗಳಿಗೆ ಬೇಕಾಗುವ ತರಕಾರಿಗಳನ್ನು ಬೆಳೆದುಕೊಳ್ಳಲು ಆಲೋಚಿಸುತ್ತಾರೆ. ಅಷ್ಟೇ ಅಲ್ಲ ಇಂತಹ ಕೈತೋಟಗಳಿಗೆ ಜೈವಿಕ ಗೊಬ್ಬರಗಳು ತುಂಬಾ ಒಳ್ಳೆಯದು ಎಂಬುದು ಎಲ್ಲರಿಗು ತಿಳಿದ ವಿಚಾರವೇ.

ಈ ಗೊಬ್ಬರಗಳು ಮಣ್ಣಿಗೆ ಪೋಷಕಾಂಶಗಳನ್ನು ಮತ್ತು ಸಾವಯವ ಅಂಶಗಳನ್ನು ತುಂಬುತ್ತವೆ. ಈ ಅಂಕಣದಲ್ಲಿ ನಾವು ನಮ್ಮ ಕೈತೋಟಕ್ಕೆ ಹೇಗೆ ಗೊಬ್ಬರವನ್ನು ಮಾಡುವುದು ಎಂಬುದನ್ನು ಕುರಿತು ತಿಳಿದುಕೊಳ್ಳೋಣ. ತರಕಾರಿಗಳನ್ನು ಬೆಳೆಯುವಾಗ ನಾವು ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿಡಬೇಕು. ಈ ತರಕಾರಿಗಳನ್ನು ಬೆಳೆಸಲು ನಾವು ಬಳಸುವ ಮಣ್ಣಿನಲ್ಲಿ ತರಕಾರಿಗೆ ಅಗತ್ಯವಾಗಿರುವ ಪೋಷಕಾಂಶಗಳು ಇಲ್ಲದೆ ಇರಬಹುದು. ಆದ್ದರಿಂದಲೆ ಈ ಮಣ್ಣಿಗೆ ನಾವು ಗೊಬ್ಬರದ ರೂಪದಲ್ಲಿ ಪೋಷಕಾಂಶಗಳನ್ನು ಒದಗಿಸಬೇಕಾಗಿ ಬರುತ್ತದೆ. ಅದರಲ್ಲೂ ಇದಕ್ಕೆ ಪ್ರಾಣಿಗಳ ಗೊಬ್ಬರವು ಅತ್ಯಂತ ಉತ್ತಮ.

ದುರದೃಷ್ಟವಶಾತ್ ಪ್ರಾಣಿಗಳ ಗೊಬ್ಬರದಲ್ಲಿ ಇ-ಕೊಲಿ ಎಂಬ ಬ್ಯಾಕ್ಟೀರಿಯಾಗಳು ಮತ್ತು ಎರೆಹುಳುಗಳು ಹಾಗು ಜಂತು ಹುಳುಗಳು ಮಣ್ಣಿನಲ್ಲಿ ಇರುತ್ತವೆ. ಈ ಸಣ್ಣದಾದ ಕೀಟಗಳು, ಮನುಷ್ಯರಿಗೆ ಗೊಬ್ಬರದ ಮೂಲಕ ನೇರವಾಗಿ ಸಂಪರ್ಕಗೊಳ್ಳುತ್ತವೆ. ಕೆಲವೊಂದು ಅವಶ್ಯಕ ಮುಂಜಾಗರೂಕತೆ ಕ್ರಮಗಳನ್ನು ತೆಗೆದುಕೊಂಡು ನೀವು ನಿಮ್ಮ ತರಕಾರಿಗಳನ್ನು ಬೆಳೆಯಲು ಗೊಬ್ಬರವನ್ನು ಬಳಸಿಕೊಳ್ಳಬಹುದು. ಇಲ್ಲಿ ನಾವು ನಿಮ್ಮ ಕೈತೋಟಕ್ಕಾಗಿ ಗೊಬ್ಬರವನ್ನು ಸಮರ್ಪಕವಾಗಿ ಬಳಸಲು ಕೆಲವೊಂದು ಮಾರ್ಗಗಳನ್ನು ನೀಡಿದ್ದೇವೆ. ಕೈತೋಟದಲ್ಲಿ ಪಪ್ಪಾಯಿಯ ಗಿಡವನ್ನು ನೆಡುವ ಸುಲಭ ಹ೦ತಗಳು

ತಾಜಾ ಗೊಬ್ಬರ ಬೇಕಾಗಿಲ್ಲ

Efficient Ways To Manure A Vegetable Garden

ಕೈತೋಟ ಮಾಡುವವರು ನೆನಪಿಡಬೇಕಾಗಿರುವ ಅಂಶವೇನೆಂದರೆ, ನಿಮ್ಮ ತರಕಾರಿಗಳಿಗೆ ಯಾವುದೇ ರೀತಿಯ ತಾಜಾ ಗೊಬ್ಬರ ಬೇಕಾಗಿಲ್ಲ. ಏಕೆಂದರೆ ತಾಜಾ ಗೊಬ್ಬರದಲ್ಲಿ ಸಾರಜನಕ ಮತ್ತು ಅಮೋನಿಯಾವು ಅತಿ ಹೆಚ್ಚು ಪ್ರಮಾಣದಲ್ಲಿರುತ್ತದೆ. ಇವುಗಳು ನಿಮ್ಮ ತರಕಾರಿಗಳನ್ನು ಸುಟ್ಟು ಹಾಕುತ್ತವೆ ಮತ್ತು ಬೀಜಗಳನ್ನು ಮೊಳಕೆಯೊಡೆಯಲು ಸಹ ಬಿಡುವುದಿಲ್ಲ. ಇದೆಲ್ಲದರ ಹೊರತಾಗಿಯೂ ನಿಮಗೆ ಹೊಸ ಗೊಬ್ಬರವನ್ನು ಬಳಸಲೇ ಬೇಕೆಂದಾದಲ್ಲಿ ಕೊಯ್ಲಿಗೆ 120 ದಿನ ಮೊದಲು ಬಳಸಿ. ಆಗ ಇದರಿಂದ ಯಾವುದೇ ಅಪಾಯವಿರುವುದಿಲ್ಲ.

ಕಾಂಪೋಸ್ಟ್ ಗೊಬ್ಬರ


ನಿಮ್ಮ ಕೈತೋಟದಲ್ಲಿರುವ ಗಿಡಗಳಿಗೆ ಗೊಬ್ಬರ ಹಾಕಲು ಇರುವ ಮತ್ತೊಂದು ಮಾರ್ಗವೆಂದರೆ ಅದು ಕಾಂಪೋಸ್ಟ್ ಗೊಬ್ಬರ. ಇದು ನೀವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಹಾಳು ಮಾಡುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಕಾಂಪೋಸ್ಟ್ ಗೊಬ್ಬರದ ರಾಶಿಯ ಉಷ್ಣಾಂಶವು 104F ಗೆ ತಲುಪಿದಾಗ, ಇದು ತನ್ನ ಅಪಾಯವನ್ನು ಮತ್ತೂ ಕಡಿಮೆ ಮಾಡುತ್ತದೆ. ವಾಣಿಜ್ಯ ಉದ್ದೇಶಗಳಿಗಾಗಿ ತಯಾರಿಸಲಾದ ಕಾಂಪೋಸ್ಟ್ ಗೊಬ್ಬರವು ಗಾರ್ಡನ್ ಸೆಂಟರ್‌ಗಳಲ್ಲಿ ದೊರೆಯುತ್ತದೆ. ಇದನು ಕೊಳ್ಳುವ ಮೊದಲು ಇದು ಶೇ. 100 ರಷ್ಟು ರೋಗ ಮುಕ್ತವಾಗಿದೆ ಎಂದು ಖಾತ್ರಿಪಡಿಸಿಕೊಳ್ಳಿ.

ತಾಜಾ ಗೊಬ್ಬರದ ವಿಧಗಳು


ಗೊಬ್ಬರಕ್ಕಾಗಿ ಯಾವ ಯಾವ ಪ್ರಾಣಿಗಳ ತ್ಯಾಜ್ಯಗಳನ್ನು ಬಳಸಲಾಗುತ್ತದೆ ಎಂಬುದನ್ನು ಮೊದಲು ನಾವು ಅರಿತಿರಬೇಕು. ಬೆಕ್ಕು, ನಾಯಿ ಮತ್ತು ಹಂದಿಗಳ ತ್ಯಾಜ್ಯಗಳನ್ನು ನಾವು ಗೊಬ್ಬರಕ್ಕಾಗಿ ಬಳಸಲೇಬಾರದು. ಈ ತ್ಯಾಜ್ಯಗಳನ್ನು ಕಾಂಪೋಸ್ಟ್ ಗೊಬ್ಬರಗಳಲ್ಲಿ ಸಹ ಬಳಸಬಾರದು. ಏಕೆಂದರೆ ಈ ಬಗೆಯ ಗೊಬ್ಬರಗಳಲ್ಲಿರುವ ಪರಾವಲಂಬಿಗಳು ತುಂಬಾ ಕಾಲ ಜೀವಿಸುತ್ತವೆ ಮತ್ತು ಮನುಷ್ಯರಿಗೆ ಇನ್‍ಫೆಕ್ಷನ್ ಉಂಟು ಮಾಡುತ್ತವೆ. ಕೋಳಿಯ ಹಿಕ್ಕೆಗಳು ತೋಟಕ್ಕೆ ಹೇಳಿ ಮಾಡಿಸಿದ ಗೊಬ್ಬರವಾಗಿರುತ್ತವೆ. ನಮ್ಮ ಕೈತೋಟಕ್ಕೆ ಬೇಕಾದ ಗೊಬ್ಬರವನ್ನು ಹೇಗೆ ತಯಾರಿಸಿಕೊಳ್ಳಬಹುದು ಎಂಬುದಕ್ಕೆ ಇದು ಒಂದು ಮಾರ್ಗವಾಗಿದೆ.

ಮಣ್ಣಿನ ಕಂಡೀಶನರ್
ಪ್ರಾಣಿಯ ತ್ಯಾಜ್ಯಗಳನ್ನು ಗೊಬ್ಬರವಾಗಿ ಬಳಸುವ ಬದಲು, ಮಣ್ಣಿನ ಕಂಡೀಶನರನ್ನು ಬಳಸಿಕೊಳ್ಳುವುದು ಉತ್ತಮ. ಚಳಿಗಾಲದ ಆರಂಭದಲ್ಲಿ ನೆಟ್ಟ ಗಿಡಗಳಿಗೆ ಬೇಸಿಗೆಯ ಆರಂಭಕ್ಕೆ ಮುನ್ನ ಗೊಬ್ಬರವನ್ನು ನೀಡಿ. ಇದು ಮಣ್ಣಿಗೆ ಗೊಬ್ಬರವನ್ನು ಹೀರಿಕೊಳ್ಳುವಂತಹ ಸಾಮರ್ಥ್ಯವನ್ನು ನೀಡುತ್ತದೆ. ಜೊತೆಗೆ ಗೊಬ್ಬರವು ಮಣ್ಣಿಗೆ ಫಲವತ್ತತೆಯನ್ನು ನೀಡಿ ಪೋಷಿಸುತ್ತದೆ. ಇದರಿಂದ ತರಕಾರಿಗಳು ಚೆನ್ನಾಗಿ ಬೆಳೆಯುತ್ತವೆ. ಮೈಕ್ರೋವೇವ್‌ನಿಂದ ಮಾಡಬಹುದಾದ ಅಚ್ಚರಿಯ ಸಂಗತಿಗಳು

ಗೊಬ್ಬರದ ಸ್ಥಿರತೆ
ನಿಮ್ಮ ಕೈತೋಟಕ್ಕೆ ಗೊಬ್ಬರವನ್ನು ಹೇಗೆ ಹಾಕಬೇಕೆಂಬುದನ್ನು ನಿರ್ಧರಿಸುವ ಮತ್ತೊಂದು ಮಾರ್ಗವೆಂದರೆ ಅದು ಸ್ಥಿರತೆ. ಪ್ರತಿ ಗೊಬ್ಬರವು ಮೂರು ಮುಖ್ಯ ಮೂಲಭೂತ ಅಂಶಗಳನ್ನು ಒಳಗೊಂಡಿರಬೇಕು. ಅವುಗಳೆಂದರೆ ಸಾರಜನಕ, ರಂಜಕ ಮತ್ತು ಪೊಟ್ಶಾಶಿಯಂ. ಸಾರಜನಕವು ಕೋಶಗಳನ್ನು ಬೆಳೆಸಲು ನೆರವಾಗುತ್ತದೆ. ಪೊಟ್ಶಾಶಿಯಂ ಸಕ್ಕರೆ ಅಂಶಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ ಮತ್ತು ರಂಜಕವು ಇಡೀ ಸಸ್ಯದಲ್ಲಿ ಶಕ್ತಿ ಸಂಚಯವಾಗಲು ನೆರವಾಗುತ್ತದೆ.

English summary

Efficient Ways To Manure A Vegetable Garden

A lot of diseases are caused due to the pesticides that are sprayed on the plants. It is natural that we all think of creating a vegetable garden in our home. Every house should be self-sufficient. It should grow vegetables in the small space around the house. It is a well-known fact that bio-manure is best for the growth of vegetables.
X
Desktop Bottom Promotion