For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಸಸ್ಯಗಳಿಗೆ ನೀರುಣಿಸುವುದು

By Hemanth P
|

ಚಳಿಗಾಲದ ಪ್ರಮುಖ ಅಂಶವೆಂದರೆ ಅದು ಶುಷ್ಕ ವಾತಾವರಣ ಉಂಟುಮಾಡುತ್ತದೆ. ಸಸ್ಯಗಳು ಚಳಿಗಾಲದಲ್ಲಿ ಬದುಕುಳಿಯಲು ತಮಗೆ ಬೇಕಾಗಿರುವ ಪ್ರಮುಖ ಪೋಷಕಾಂಶಗಳು, ಸಕ್ಕರೆಯನ್ನು ಬೇರಿನಲ್ಲಿ ಸಂಗ್ರಹಿಸಿಡುತ್ತದೆ. ಇದರಿಂದ ಬೇಸಿಗೆಯಂತೆ ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕಾಗಿಲ್ಲ. ಆದರೂ ಚಳಿಗಾಲದಲ್ಲಿ ಸಸ್ಯಗಳಿಗೆ ಸಂಪೂರ್ಣವಾಗಿ ನೀರುಣಿಸುವುದನ್ನು ಬಿಡಬಾರದು.

ಮನೆಯಲ್ಲಿ ಹೂದೋಟ ಹೊಂದಿರುವ ಪ್ರತಿಯೊಬ್ಬರು ಶುಷ್ಕ ಹವಾಮಾನದ ಬಗ್ಗೆ ದೂರು ನೀಡುತ್ತಲೇ ಇರುತ್ತಾರೆ. ಚಳಿಗಾಲವು ಸಸ್ಯಗಳು ಮತ್ತು ಪೊದೆಗಳ ಅಡಿಪಾಯಕ್ಕೆ ದಾಳಿ ಮಾಡುತ್ತದೆ. ಚಳಿಗಾಲದ ಸಮಯದಲ್ಲಿ ಶೀತ ಮತ್ತು ಮಂಜಿನ ಹವಾಮಾನವು ಬೇರುಗಳ ಸುರುಟುಗಟ್ಟುವಂತೆ ಮಾಡುತ್ತದೆ. ಇದರಿಂದಾಗಿ ನೀವು ಚಳಿಗಾಲದಲ್ಲಿ ಸಸ್ಯಗಳ ಬುಡಕ್ಕೆ ಹೆಚ್ಚಿನ ನೀರು ಹಾಕಿ ಅದು ತೇವಾಂಶದಿಂದ ಇರುವಂತೆ ಮಾಡಬೇಕು. ಚಳಿಗಾಲದ ಸಮಯದಲ್ಲಿ ಗಿಡಗಳು ಬದುಕುಳಿಯಲು ಹೆಚ್ಚಿನ ಆರೈಕೆ ತುಂಬಾ ಮುಖ್ಯ. ಸರಿಯಾದ ನೀರು ಪೂರೈಕೆಯಾಗದಿದ್ದರೆ ಶೀತ ಹವಾಮಾನದಲ್ಲಿ ಮರಗಳು, ಸಸ್ಯಗಳು ಮತ್ತು ಪೊದೆಗಳಿಗೆ ಹಾನಿಯಾಗಬಹುದು ಮತ್ತು ನಿರ್ಜಲೀಕರಣವಾಗಬಹುದು. ಚಳಿಗಾಲದಲ್ಲಿ ಸಸ್ಯಗಳು ಉಳಿಯಲು ಮತ್ತು ಮುಂದಿನ ಋತುವಿನಲ್ಲಿ ಚಿಗುರಿಕೊಳ್ಳಲು ಅದಕ್ಕೆ ಹೆಚ್ಚಿನ ಆರೈಕೆ ತುಂಬಾ ಮುಖ್ಯ. ಚಳಿಗಾಲದ ಬರಗಾಲವನ್ನು ತಡೆಯಲು ಸಸ್ಯಗಳಿಗೆ ನೀರುಣಿಸುವುದನ್ನು ಸಲಹೆ ಮಾಡಲಾಗುತ್ತದೆ. ನಿಮ್ಮ ಮರ ಮತ್ತು ಸಸ್ಯಗಳ ಆರೈಕೆ ಮತ್ತು ಅದನ್ನು ರಕ್ಷಿಸಲು ಚಳಿಗಾಲದ ಹೂದೋಟದ ಟಿಪ್ಸ್ ಗಳನ್ನು ಇಲ್ಲಿ ಕೊಡಲಾಗಿದೆ.

Watering your plant in winters

ಅಸಂಬದ್ಧ ನೀರುಣಿಸುವಿಕೆ
ಚಳಿಗಾಲದಲ್ಲಿ ಸಸ್ಯಗಳಿಗೆ ನೀರುಣಿಸುವಾಗ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ. ನಿಮ್ಮ ಸಸ್ಯಗಳು ಹೂಬಿಡದಿದ್ದರೆ ಅಥವಾ ಅದರ ಎಲೆಗಳು ಬಾಡಿ ಹೋಗಿದ್ದರೆ ನೀವು ಅಸಂಬದ್ಧ ರೀತಿಯಲ್ಲಿ ನೀರುಣಿಸುತ್ತಿದ್ದೀರಿ ಎಂದರ್ಥ. ಸಸ್ಯಗಳಿಗೆ ನೀರುಣಿಸಲು ಯಾವುದೇ ನಿಯಮಗಳಿಲ್ಲ. ನಿಮ್ಮ ಸಸ್ಯಗಳಿಗೆ ಬೇಕಾಗುವಷ್ಟು ನೀರುಣಿಸಬೇಕು. ಕೆಲವೊಂದು ಸಸ್ಯಗಳು ಕೊಳಚೆಗುಂಡಿಯಲ್ಲಿದ್ದರೆ ಸಮಸ್ಯೆ ಎದುರಿಸುತ್ತದೆ, ಮತ್ತೆ ಕೆಲವೊಂದು ಸಸ್ಯಗಳಿಗೆ ಅರಳಲು ಮತ್ತು ಬೆಳೆಯಲು ಹೆಚ್ಚಿನ ನೀರು ಬೇಕಾಗುತ್ತದೆ.

ಶರತ್ಕಾಲದಲ್ಲಿ ಸಸ್ಯಗಳಿಗೆ ನೀರುಣಿಸಿ
ಚಳಿಗಾಲದಲ್ಲಿ ನಿಮ್ಮ ಗಿಡಗಳಿಗೆ ನೀರುಣಿಸುವ ಮೊದಲು ಉದ್ಯಾನದಲ್ಲಿರುವ ಗಿಡಗಳಿಗೆ ಶರತ್ಕಾಲದಲ್ಲಿ ಹೆಚ್ಚಿನ ನೀರುಣಿಸಿ. ಹೊಸ ಸಸ್ಯಗಳು ಹಾಗೂ ಪೊದರುಗಳಿಗೆ ಹೆಚ್ಚಿನ ನೀರು ಬೇಕಾಗುತ್ತದೆ. ಚಳಿಗಾಲಕ್ಕೆ ಎರಡರಿಂದ ಮೂರು ವಾರಗಳ ಮೊದಲು ನಿಮ್ಮ ತೋಟದಲ್ಲಿರುವ ಗಿಡಗಳಿಗೆ ಸಾಕಷ್ಟು ನೀರುಣಿಸಿ.

ಸಾಕಷ್ಟು ನೀರುಣಿಸುವುದು
ದೊಡ್ಡ ಮತ್ತು ತುಂಬಾ ತೆಳುವಾಗಿರುವ ಎಲೆ ಹೊಂದಿರುವ ಸಸ್ಯಗಳಿಗೆ ಹೆಚ್ಚಿನ ನೀರು ಬೇಕಾಗುತ್ತದೆ. ಭೂಮಿ ಮೇಲೆ ಬೇರುಗಳಿರುವ ಗಿಡಗಳಿಗೆ ಕೂಡ ಸಾಕಷ್ಟು ನೀರು ಹಾಕಬೇಕು. ಎಲ್ಲಾ ಸಸ್ಯಗಳಿಗೆ ಒಂದೇ ರೀತಿಯ ತೇವಾಂಶ ಬೇಕೆಂದಿಲ್ಲ, ಕೆಲವು ಬೇಗನೆ ಒಣಗಿ ಹೋಗುತ್ತದೆ ಮತ್ತು ಕೆಲವು ಗಿಡಗಳಿಗೆ ನಿಯಮಿತವಾಗಿ ನೀರುಣಿಸಬೇಕು.

ಮಣ್ಣನ್ನು ನೀರಿನಲ್ಲಿ ಅದ್ದಿ
ಚಳಿಗಾಲದಲ್ಲಿ ಗಿಡಗಳಿಗೆ ನೀರುಣಿಸುವ ಪ್ರಮುಖ ಟಿಪ್ಸ್ ಎಂದರೆ ಸುಮಾರು 6ರಿಂದ 8 ಇಂಚುಗಳ ತನಕ ಮಣ್ಣನ್ನು ಸರಿಯಾಗಿ ನೀರಿನಲ್ಲಿ ಅದ್ದಬೇಕು. ಈ ವಿಧಾನ ಲಾನ್, ಕೆಲವು ಸಸ್ಯಗಳು ಹಾಗೂ ಪೊದರುಗಳಿಗೆ ಅನ್ವಯವಾಗುತ್ತದೆ. ಹೀಗೆ ತುಂಬಾ ಆಳವಾಗಿ ಮಣ್ಣನ್ನು ಒದ್ದೆ ಮಾಡುವುದರಿಂದ ಬೇರು ಮತ್ತು ಸಸ್ಯಕ್ಕೆ ತೇವಾಂಶ ಸಿಗುತ್ತದೆ. ಸಸ್ಯ, ಪೊದರುಗಳು ಮತ್ತು ಲಾನ್ ಗಳಿಗೆ ಸ್ಪ್ರಿಂಕ್ಲರ್ ಮತ್ತು ನೀರಿನ ಮೆದುಗೊಳವೆಗಳನ್ನು ಬಳಸಿ ನೀರುಣಿಸಿ. ಇದರಿಂದ ಮಣ್ಣು ನೀರನ್ನು ಹೀರಿಕೊಳ್ಳುವಂತಾಗಲಿ.

ಮೂರು ವಾರಗಳ ತನಕ ನೀರುಣಿಸಿ
ಸಸ್ಯಗಳ ಜಾತಿ ಮತ್ತು ಮಣ್ಣಿನ ಗುಣವನ್ನು ಅನುಸರಿಸಿ ನೀರುಣಿಸಬೇಕು. ಆದಾಗ್ಯೂ ಪ್ರತೀ ಎರಡು ಅಥವಾ ಮೂರು ವಾರಗಳಿಗೊಮ್ಮೆ ಸಾಕಷ್ಟು ನೀರುಣಿಸಿ. ನೀರು ಎಷ್ಟು ಆಳಕ್ಕೆ ಹೋಗಿದೆಯೆಂದು ನೋಡಲು ಒಂದು ಸ್ಕ್ರೂ ಡ್ರೈವರ್, ಕಬ್ಬಿಣದ ರಾಡ್, ಕೋಲು ಬಳಸಿ ಇದನ್ನು ಪರೀಕ್ಷಿಸಬಹುದು. ಇದರಿಂದ ಎಷ್ಟು ಇಂಚಿನವರೆಗೆ ನೀರು ಹೋಗಿದೆ ಎನ್ನುವುದು ತಿಳಿಯಬಹುದು. ಮಣ್ಣು ಒಣಗಿದ್ದರೆ ಮತ್ತಷ್ಟು ನೀರು ಹಾಕಿ.

ನೀರಿನ ಮೆದುಗೊಳವೆ
ನೀರಿನ ಮೆದುಗೊಳವೆ ಬಳಸಿಕೊಂಡು ಗಿಡ ಮತ್ತು ಪೊದರುಗಳ ಬುಡಕ್ಕೆ ನೀರು ಹೋಗುವಂತೆ ಸಣ್ಣ ತೊರೆಗಳನ್ನು ಮಾಡಿ, 30 ನಿಮಿಷ ನೀರು ಬಿಡಿ. ಈ ಸಣ್ಣ ತೊರೆಗಳು ಮಣ್ಣಿನಲ್ಲಿ ತೇವಾಂಶ ಉಳಿಸಲು ನೆರವಾಗಬಹುದು.

ಚಳಿಗಾಲದಲ್ಲಿ ಸಸ್ಯಗಳಿಗೆ ನಿರ್ಜಲೀಕರಣವಾಗದಂತೆ ತಡೆಯಲು ಈ ಮೇಲಿನ ಟಿಪ್ಸ್ ಗಳನ್ನು ಪಾಲಿಸಿ.

Read more about: gardening ಕೈತೋಟ
English summary

Watering your plant in winters

The one aspect about winters is that it brings with it dry conditions. However, plants usually try to stock up the essential nutrients and sugar in their roots during fall in order to survive and sustain during the winter months.
Story first published: Monday, December 9, 2013, 9:57 [IST]
X
Desktop Bottom Promotion