For Quick Alerts
ALLOW NOTIFICATIONS  
For Daily Alerts

ಕಂಟೈನರ್ ಗಾರ್ಡನ್ ಗಾಗಿ ಈ ಟಾಪ್ 9 ಸಸ್ಯಗಳು

By Super
|

ನಿಮ್ಮ ಮನೆಯಲ್ಲಿ ಗಾರ್ಡನ್ ಮಾಡಲು ಸ್ಥಳಾವಕಾಶವಿಲ್ಲ ಅಂದರೆ ಸುಂದರ ಗಾರ್ಡನ್ ಮಾಡಲು ಸಾಧ್ಯವಿಲ್ಲ ಎಂದರ್ಥವಲ್ಲ.ಕಂಟೈನರ್ ಗಾರ್ಡನ್ ಅಪಾರ್ಟ್ಮೆಂಟ್ ಗಳಲ್ಲಿ ಇರುವವರಿಗೆ ಅಥವಾ ಮಣ್ಣಿನ ಫಲವತ್ತತೆ ಇಲ್ಲದ ಜಗದಲ್ಲಿರುವವರಿಗೆ ಸೂಕ್ತವಾದುದು.

ಈ ಕಂಟೈನರ್ ಗಳು ವಿವಿಧ ರೀತಿಯಲ್ಲಿ, ಬಣ್ಣಗಳಲ್ಲ , ಆಕೃತಿಗಳಲ್ಲಿ, ವಿವಿಧ ಮೆಟೀರಿಯಲ್ ಗಳಲ್ಲಿ ಹೀಗೆ ಯಾವ ಶೈಲಿಗೆ ಸೂಕ್ತವಾಗುವಂತೆ ಇರುತ್ತವೆ. ಹೂವಿನ ಕಂಟೈನರ್, ತರಕಾರಿಗಳ ಕಂಟೈನರ್, ಸಸ್ಯಗಳ ಕಂಟೈನರ್ ಈ ರೀತಿ ಬೇರೆ ಬೇರೆ ಕಂಟೈನರ್ ಗಾರ್ಡನ್ ಮಾಡಿ ಅಥವಾ ಇವೆಲ್ಲವುಗಳನ್ನು ಮಿಶ್ರ ಮಾಡಿ ಗಾರ್ಡನ್ ಮಾಡಿದರೂ ಸುಂದರವಾಗಿರುತ್ತದೆ.

ಇಂಪೇಟಿಯನ್ಸ್

ಇಂಪೇಟಿಯನ್ಸ್

ಇಂಪೇಟಿಯನ್ಸ್ ಜನಪ್ರಿಯ ಏಕೆಂದರೆ ಅದು ವಿವಿಧ ಬಣ್ಣಗಳಲ್ಲಿ ಬರುತ್ತವೆ ಮತ್ತು ಸುಲಭವಾಗಿ ಬೆಳೆಯಬಹುದು.ಇದನ್ನು ಕಂಟೈನರ್ನಲ್ಲಿ ಬೆಳೆಯುವಾಗ ಗಾರ್ಡನ್ ಮಣ್ಣಿನಲ್ಲಿ ಬೆಳೆಯುವುದಕ್ಕಿಂದ ಮಣ್ಣುರಹಿತ ಮಿಶ್ರಣಗಳಲ್ಲಿ ಬೆಳೆಯುವುದು ಹೆಚ್ಚು ಉತ್ತಮ. ಪ್ರತೀದಿನ ನೀರು ಹಾಕಿ ಮತ್ತು ವಾರಕ್ಕೊಮ್ಮೆ ಗೊಬ್ಬರ ಹಾಕಬೇಕು.

ಬೆಗೋನಿಯಾಸ್

ಬೆಗೋನಿಯಾಸ್

ಬೆಗೋನಿಯಾಸ್ ಸಾಮಾನ್ಯವಾಗಿ ಬಿಳಿ,ಗುಲಾಬಿ,ಹಳದಿ ಅಥವಾ ಕಡುಗೆಂಪು ಬಣ್ಣಗಳಲ್ಲಿ ದೊರೆಯುತ್ತವೆ,ಆದರೆ ಇದರ ಆಕರ್ಷಕ ಹೂವುಗಳು ಮತ್ತು ಎಲೆಗಳಿಗಾಗಿ ವಿವಿಧ ಮಿಶ್ರತಳಿಗಳನ್ನು ಉಪಯೋಗಿಸಿ ಬೆಳೆಯಲಾಗುತ್ತದೆ.ಬೆಗೋನಿಯಾಸ್ ಅನ್ನು ವರ್ಷಪೂರ್ತಿ ಉಷ್ಣ ಮತ್ತು ಅತಿ ಉಷ್ಣವಲಯದ ಹವಾಮಾನದಲ್ಲಿ ಬೆಳೆಯಬಹುದು ಆದರೆ ಸಮಶೀತೋಷ್ಣ ಪರಿಸರದಲ್ಲಿ ಮನೆಸಸ್ಯಗಳಾಗಿ ಬೆಳೆಯಲಾಗುತ್ತದೆ.

ಮಾರಿಗೋಲ್ಡ್ಸ್(ಚೆಂಡು ಹೂ)

ಮಾರಿಗೋಲ್ಡ್ಸ್(ಚೆಂಡು ಹೂ)

ಮಾರಿಗೋಲ್ಡ್ಸ್ ಬೀಜವನ್ನು ಹಾಕಿದ ನಂತರ ಹೂವು ಬಿಡಲು 40 ರಿಂದ 45 ದಿನಗಳನ್ನು ತೆಗೆದುಕೊಳ್ಳುತ್ತದೆ.ಮಾರ್ಚಿನ ಕೊನೆ ಮತ್ತು ಏಪ್ರಿಲ್ ಮೊದಲ ವಾರಗಳಲ್ಲಿ ಮನೆಯ ಒಳಾಂಗಣದಲ್ಲಿ ನೆಟ್ಟು ನಂತರ ಹೊರಾಂಗಣದಲ್ಲಿ ಇಡಿ.ಮಣ್ಣಿನ ತೇವ ಇರುವಂತೆ ನೋಡಿಕೊಳ್ಳಿ ಆದರೆ ಒದ್ದೆಯಾಗಿರಬೇಕಾಗಿಲ್ಲ ಮತ್ತು ನಿರಂತರ ಹೂವುಗಳಿಗಾಗಿ ಒಣಗಿದ ಎಲೆಗಳನ್ನು ತೆಗೆಯುತ್ತಿರಬೇಕು.

ಕ್ಯಾಕ್ಟಿ

ಕ್ಯಾಕ್ಟಿ

ವಿವಿಧ ರೀತಿಯ ಕ್ಯಾಕ್ಟಿ ಸಸ್ಯಗಳನ್ನು ನೆಡುವುದರ ಮೂಲಕ ಅಲಂಕೃತ ಕಂಟೈನರ್ ಗಾರ್ಡನ್ ಅನ್ನು ತಯಾರಿಸಿ. ಸುಲಭವಾಗಿ ರಕ್ಷಿಸಬಹುದಾದ ಈ ಸಸ್ಯಗಳು ಸುಂದರ.

ಲೆಟ್ಯುಸ್

ಲೆಟ್ಯುಸ್

ನಿಮ್ಮ ಕಂಟೈನರ್ ಗಾರ್ಡನ್ನಲ್ಲಿ ಲೆಟ್ಯುಸ್ ಅನ್ನು ಬೆಳೆದರೆ ಯಾವಾಗಲು ನಿಮಗೆ ತಾಜಾ ಹಸಿರು ಸಸ್ಯಗಳು ದೊರಕುತ್ತವೆ.ಇದಕ್ಕೆ ತಂಪು ವಾತಾವರಣ ಬೇಕು ಆದರೆ ಕೇವಲ 6 ರಿಂದ 8 ಇಂಚು ಮಣ್ಣು ಸಾಕು.

ಕ್ಯಾರೇಟು

ಕ್ಯಾರೇಟು

ಸಲಾಡ್, ಸೂಪು, ಕೇಕ್ ಹೀಗೆ ವಿವಿಧ ರೀತಿಯ ಖಾದ್ಯಗಳಿಗೆ ಕ್ಯಾರೆಟ್ ಬಳಸಲಾಗುತ್ತದೆ.ಬೇರಿರುವ ತರಕಾರಿಗಳು ಕಂಟೈನರ್ ಗಾರ್ಡನ್ ಗೆ ಸೂಕ್ತ ಏಕೆಂದರೆ ಇದಕ್ಕೆ ಕೇವಲ 10 ಇಂಚಿನಷ್ಟು ಮಣ್ಣು ಸಾಕು ಮತ್ತು 10 ಇಂಚಿನಷ್ಟು ಜಾಗ ಸಾಕು.

ಜಲಪೇನೋ ಪೆಪ್ಪರ್

ಜಲಪೇನೋ ಪೆಪ್ಪರ್

ಜಲಪೇನೋ ಪೆಪ್ಪರ್ ಎಂದರೆ ಮಧ್ಯಗಾತ್ರದಲ್ಲಿರುವ ಮೆಣಸು ಇದು 2 ಯಿಂದ 3 ವರೆ ಇಂಚಿನಷ್ಟು ಉದ್ದವಿರುತ್ತದೆ ಮತ್ತು ಸಾಮಾನ್ಯವಾಗಿ ಇದನ್ನು ಹಸಿರು ಇರುವಾಗಲೇ ತಿನ್ನಲಾಗುತ್ತದೆ.ಕೆಲವೊಮ್ಮೆ ಮಾತ್ರ ಇದನ್ನು ಕೆಂಪು ಬಣ್ಣ ಬಂದಾಗ ಬಳಸಲಾಗುತ್ತದೆ.ಸಾಮಾನ್ಯವಾಗಿ ಯಾವುದೇ ರೀತಿಯ ಕಾಳುಮೆಣಸನ್ನು ಬೆಳೆಯಲು 16 ಇಂಚಿನಷ್ಟು ಮಣ್ಣು ಬೇಕು.

ಟೊಮೆಟೊ

ಟೊಮೆಟೊ

ಸಣ್ಣ ಟೊಮೆಟೊ ಬೆಳೆಯಲು 12 ಇಂಚಿನಷ್ಟು ಮಣ್ಣು ಆಳ ಬೇಕು. ಸ್ಟ್ಯಾಂಡರ್ಡ್ ಟೊಮೇಟೊ ಬೆಳೆಯಲು 24 ಇಂಚಿನಷ್ಟು ಮಣ್ಣು ಬೇಕು. ಸಲಾಡ್ ಮಾಡಲು ನಿಮ್ಮ ನೆಚ್ಚಿನ ವಿಧದ ಟೊಮೆಟೊವನ್ನು ಆರಿಸಿಕೊಂಡು ಬೆಳೆಸಿ.

ತುಳಸಿ

ತುಳಸಿ

ತುಳಸಿಯ ಎಲೆ ಮತ್ತು ಕಾಂಡಗಳನ್ನು ಸಾಕಷ್ಟು ನೀರು ಹಾಕಿ ರಸವಾತ್ತಾಗಿ ಬೆಳೆಸಿ ಆದರೆ ಕೊಳೆಯದಂತೆ (ಶಿಲೀಂದ್ರ ಬರದಂತೆ)ನೋಡಿಕೊಳ್ಳಿ.ಈ ಸಸ್ಯ ಬೆಳೆಯಲು ಹೆಚ್ಚು ಗಾಳಿ ಬರುವ ಜಾಗವಾಗಿರಬೇಕು.

English summary

Top 10 Plants For A Container In Garden

Create separate container gardens of flowers, vegetables and herbs or mix them together for an eclectic look.
 
X
Desktop Bottom Promotion