For Quick Alerts
ALLOW NOTIFICATIONS  
For Daily Alerts

ಕೈ ತೋಟ ಮಾಡುವವರಿಗೆ ಟಿಪ್ಸ್

By ಲೇಖಕ
|

ಮನೆ ಮುಂದೆ ಯಾವಾಗಲೂ ಹಸಿರಾಗಿದ್ದರೆ ಎಷ್ಟು ಚೆಂದ. ಮನಸ್ಸಿಗೂ ಒಂದು ರೀತಿ ಹಾಯ್ ಎನ್ನುವ ಹಿತ ಹಾಗೂ ವಾತಾವರಣ ಕೂಡ ತಂಪಾಗಿಯೇ ಇರುತ್ತದೆ. ಹಾಗಾಗಿ ಮನೆಯ ಮುಂದೆ ಸ್ವಲ್ಪ ಜಾಗ ಇದ್ದರೂ ಅನೇಕರು ಲಾನ್ ಬೆಳೆಸುತ್ತಾರೆ.ಇನ್ನು ಮುಂಭಾಗದಲ್ಲಿ ಗಾರ್ಡನ್ ಇದ್ದರಂತೂ ಲಾನ್ ಅದಕ್ಕೆ ಸಕ್ಕತ್ ಮೆರಗು ಕೊಡುವುದಂತೂ ಗ್ಯಾರಂಟಿ.

ಗಿಡಗಳನ್ನು ಪ್ರೀತಿಸಿದವರೇ ಇಲ್ಲ.ಹಾಗಾಗಿ ಯಾರ ಮನೆಯ ಮುಂದೆಯಾದರೂ ಗಿಡಗಳು ಸೊಂಪಾಗಿ, ಹಸಿರಾಗಿ ಬೆಳೆದಿದ್ದರೆ ಅವರು ಪ್ಲ್ಯಾಂಟ್ ಲವರ್ಸ್ ಎಂದೇ ಹೇಳಬಹುದು. ನಿಮ್ಮ ಮನೆ ಮುಂದೆ ಹಸಿರಾದ ಲಾನ್ ಬೆಳೆಸ ಬೇಕೆಂದಿದ್ದರ ನಿಮಗೆ ಇಲ್ಲಿ ಕೆಲವು ಟಿಪ್ಸ್ ಕೊಡುತ್ತೇವೆ.

Tips for Seeding a Lawn

ಲಾನ್ ಬೆಳೆಸುವುದಕ್ಕಾಗಿ ಬೀಜ ಹಾಕುವುದು ಅಥವಾ ಈಗಾಗಲೇ ಇರುವ ಲಾನ್ ಡಟ್ಟವಾಗಿಲ್ಲ ಎನ್ನುವ ಕಾರಣಕ್ಕೆ ಮತ್ತಷ್ಟು ಬೀಜ ಎರಚುವುದರಿಂದ ದಟ್ಟವಾಗಿ ಹುಲ್ಲು ಬೆಳೆದುಕೊಳ್ಳ ಬಹುದು.ಬಳಸುವ ಬೀಜ, ಮಣ್ಣು ಹದಮಾಡುವ ವಿಧಾನ ಹಾಗೂ ಯಾವ ಸೀಜನ್ ನಲ್ಲಿ ನಾವು ಲಾನ್ ಮಾಡಲು ಹೊರಟಿದ್ದೇವೆ ಎನ್ನುವುದೂ ಮುಖ್ಯವಾಗುತ್ತದೆ.ಉತ್ತಮವಾದ ಬೀಜಗಳನ್ನು ಬಳಸುವುದರಿಂದ ಆಕರ್ಷಕ ಲಾನ್ ಬೆಳೆಸಬಹುದು.

ತಕ್ಕ ಕಾಲಮಾನ :-

ಹುಲ್ಲು ಬೆಳೆಯುವುದು ಒಂದು ಹಿಮದ ಕಾಲದಲ್ಲಿ ಅಥವಾ ಚಳಿಗಾಲದಲ್ಲ.ಇದನ್ನು ವಾರ್ಮ ಸೀಜನ್ ಗ್ರಾಸ್-ಕೂಲ್ ಸೀಜನ್ ಗ್ರಾಸ್ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಪ್ರಾದೇಶಿಕ ಹವಾಮಾನ ವಾತಾವರಣವೂ ಹುಲ್ಲು ಬೆಳೆಗೆ ಸಹಾಯಕವಾಗಿರುತ್ತದೆ.ಈಗಾಗಲೇ ಇರುವ ಲಾನ್ ಗೆ ಬಿತ್ತನೆ ಮಾಡುವುದು ಅಥವಾ ಹೊಸದಾಗಿ ಲಾನ್ ಬೆಳೆಸಲು ಬೀಜ ಬಿತ್ತನೆ ಮಾಡಲು ಕಾಲಮಾನ ಬಹಳ ಮುಖ್ಯವಾಗಿದೆ.

ವಸಂತಕಾಲ ತಂಪಾಗಿರುವುದರಿಂದ ಲಾನ್ ಬೆಳೆಗೆ ಬಹಳ ಅನುಕೂಲವಾಗಿದೆ.ಲಾನ್ ಬೀಜಗಳ ಜೊತೆಗೆ ಕಳೆ ಅಥವಾ ಮುಳ್ಳಿನ ಗಿಡಗಳೂ ಕೆಲವೊಮ್ಮೆ ಬೆಳೆಯುವುದರಿಂದ ಲಾನ್ ಸಮತಟ್ಟಾಗಿ ಹಾಸಿದಂತೆ ಇರುವುದಿಲ್ಲ. ಬೇಸಿಗೆಯಲ್ಲ ಕಳೆ ಗಿಡಗಳು ಬಣಗಿ ಅಲ್ಲಲ್ಲಿ ಹುಲ್ಲು ಒಣಗಿದಂತಾಗಿ ಲಾನ್ ಅಂದವೇ ಹಾಳಾಗುತ್ತದೆ.ಚಳಿಗಾಲದಲ್ಲಿ ಬಿತ್ತನೆಗೆ ಅನುಕೂಲವಾದ ಬೀಜಗಳನ್ನೇ ಬಳಸುವುದರಿಂದ ಕಳೆ ಬೀಜಗಳು ಬೆಳೆಯದೆ ಅವುಗಳಿಗೆ ತಡೆಯಾಗುತ್ತದೆ.ಲಾನ್ ಭೂಮಿಯಲ್ಲಿರುವ ತೇವಾಂಶ ಹಾವಿಯಾಗಿ ಹೋಗದಂತೆ ತಡೆಯುವುದರಿಂದ ಸುತ್ತಲೂ ತಂಪಾದ ವಾತಾವರಣ ಕಾಯ್ದುಕೊಳ್ಳಲು ಸಹಾಯವಾಗುತ್ತದೆ.

ವಾರ್ಮ ಸೀಜನ್ ಗ್ರಾಸ್ ವಸಂತ ಕಾಲದ ನಂತರ ಅಥವಾ ಬೇಸಿಗೆಗೂ ಮುಂಚೆ ಬಿತ್ತನೆ ಮಾಡಬಹುದು, ಬೇಸಿಗೆಯಲ್ಲಿ ಬೀಳುವ ಮಳೆಯ ಸಹಾಯದಿಂದ ಈ ಲಾನ್ ಕೆಲವೊಮ್ಮೆ ಚೆಂದವಾಗಿಯೂ ಬೆಳೆಯ ಬಹುದು.ಉತ್ತಮವಾದ ಲಾನ್ ಯಾವಾಗಲೂ ಗಟ್ಟಿಯಾದ ಬಿತ್ತನೆ ಬೀಜ, ಹದಮಾಡಿದ ಮಣ್ಣು, ಗೊಬ್ಬರವನ್ನು ಅವಲಂಬಿಸಿದ್ದು ಅದಕ್ಕೆ ಅನುಕೂಲವಾದ ಸೀಜನ್ ನಲ್ಲಿ ಬೆಳೆದರೆ ಒಳ್ಳೆ ಲಾನ್ ಆಗುವುದರಲ್ಲಿ ಅನುಮಾನವಿಲ್ಲ.

ಲಾನ್ ಬಿತ್ತನೆ ಮಾಡುವುದು :-

ಹೊಸ ಲಾನ್ ಹುಲ್ಲಿನ ಬೇರುಗಳು ಭೂಮಿಯಲ್ಲಿ ಬೆಳೆಯುವುದಕ್ಕಿಂತ ಮುಂಚೆ ಹಳೆ ಹುಲ್ಲುಗಳ ಬೇರುಗಳನ್ನು ಬೇರು ಸಮೇತ ಕಿತ್ತು ಮಣ್ಣನ್ನು ಹದ ಮಾಡಬೇಕು.ಹದಮಾಡಿದ ಕಾಲಿ ಭೂಮಿಯಲ್ಲಿ ಲಾನ್ ಬೆಳೆಸುವಾಗ,2 1/2 ಅಥವಾ 3 ಇಂಚಿನ ಗಾರ್ಡನ್ ಟಿಲ್ಲರ್ ತಂದು ಆ ಭೂಮಿಯನ್ನು ಮಟ್ಟ ಮಾಡಿಕೊಂಡು ಮಣ್ಣನ್ನು ಉಡಿಉಡಿ ಮಾಡಿಕೊಳ್ಳಿ.ಭೂಮಿಯ ಮೇಲ್ಭಾಗದಲ್ಲಿ ಮಣ್ಣನ್ನು ಸಮತಟ್ಟಾಗಿ ಮಾಡಿ ಮಧ್ಯದಲ್ಲೇಲ್ಲಾದರೂ ಕಲ್ಲು ದೊಡ್ಡ ಮರದ ಬೇರುಗಳಿದ್ದರೆ ಅದನ್ನು ತೆಗೆಯಿರಿ.

ಭೂಮಿಯ ಮೇಲ್ಪದರ ಸಮವಾಗಿ ಸಿದ್ದವಾದ ನಂತರ ನಿಮಗೆ ಕೊಟ್ಟಿರುವ ಸೂಚನೆಯಂತೆಯೇ ಬಿತ್ತನೆ ಮಾಡಿ.ಬಿತ್ತನೆ ಬೀಜಗಳನ್ನು ಸಮಾನವಾಗಿ ಹಾಕಬೇಕು.ಒಂದೇ ಜಾಗದಲ್ಲಿ ಎರಡು ಬಾರಿ ಬಿತ್ತನೆ ಮಾಡಿ ಎನ್ನುವುದು ಅನೇಕರ ಸಲಹೆಯೂ ಆಗಿದೆ.90 ಡಿಗ್ರಿ ಆ್ಯಂಗಲ್ ನಲ್ಲಿ ಬಿತ್ತನೆ ಮಾಡುವುದು ಒಳ್ಳೆಯದು.ಹೊಸದಾಗಿ ಲಾನ್ ಗಾಗಿ ಬಿತ್ತನೆ ಮಾಡಿದ ಭೂಮಿಯ ಮೇಲೆ ಒಣ ಹುಲ್ಲನ್ನು ಹಾಸಿ ಇದರಿಂದ ಹಕ್ಕಿಗಳು ಬೀಜಗಳನ್ನು ತಿನ್ನದಹಾಗೆ ಹಾಗೂ ಗಾಳಿಗೆ ಬೀಜಗಳು ತೂರಿಕೊಂಡು ಹೋಗದ ಹಾಗೆ ತಡೆಗಟ್ಟಬಹುದು.

ಮೊದಲ ಎರಡು ವಾರಗಳು ಪ್ರತಿ ನಿತ್ಯ 10 ರಿಂದ 15 ನಿಮಿಷಕ್ಕೊಮ್ಮೆ ನೀರು ಹಾಯಿಸಿ.ಲಾನ್ ಮೊಳಕೆ ಬಂದ ನಂತರ ದಿನ ಬಿಟ್ಟು ದಿನ ನೀರು ಹಾಕಿ. ಆರಂಭದಲ್ಲಿ ಲಾನ್ ಹುಲ್ಲಿ ಕತ್ತರಿಸುವುದರಿಂದ ಅದು ಆರೋಗ್ಯಕರವಾಗಿ ಬೆಳೆಯುವುದಿಲ್ಲ. ಸುಮಾರು 2-3 ಇಂಚು ಬೆಳೆದ ನಂತರ ಅದರ ಮಟ್ಟವನ್ನು ಕಾಪಾಡಲು ಯಂತ್ರದಿಂದ ಹುಲ್ಲನ್ನು ಕತ್ತರಿಸಿ ಮಟ್ಟ ಮಾಡ ಬಹುದು.

ಈಗಾಗಲೇ ಇರುವ ಲಾನ್ ಮೇಲೆ ಮತ್ತೆ ನೀವು ಬಿತ್ತನೆ ಮಾಡಿದ್ದರೆ.ಬೀಜ ಮೊಳಕೆ ಬರುವ ಮೊದಲೇ ಒಂದೇ ಕಡೆ ಗುಡ್ಡೆಯಂತೆ ಬೆಳೆದಿರುವ ಹಾಗೂ ಒಣಗಿದ ಲಾನ್ ಹುಲ್ಲನ್ನು ಮೊದಲು ಹೊಸ ಲಾನ್ ಬೆಳೆಯಲು ಸಹಾಯ ಮಾಡಿ. ಕೈಯಿಂದ ಅಥವಾ ಗುದ್ದಲಿ,ಪಿಕಾಸಿಯಿಂದ ಮಣ್ಣನ್ನು ಸಡಿಲ ಮಾಡಿ.ಎಲ್ಲಕ್ಕಿಂತಲೂ ಮುಖ್ಯವಾಗಿ ನೀವು ಲಾನ್ ಬಗ್ಗೆ ವೈಯಕ್ತಿವಾಗಿ ಕೇರ್ ತೆಗೆದುಕೊಳ್ಳಿ. ಗಿಡ ಬೆಳೆಸುವುದಕ್ಕೆ ಕೈಗುಣ ಬೇಕಾಗಿಲ್ಲ ಆದರೆ ಅವುಗಳನ್ನು ಪ್ರೀತಿಸುವ ಮನಸ್ಸು ಬೇಕು.

English summary

Tips for Seeding a Lawn | Tips For Gardening | ಕೈತೋಟದಲ್ಲಿ ಬೀಜ ಹಾಕುವಾಗ ಪಾಲಿಸಬೇಕಾದ ಟಿಪ್ಸ್ | ತೋಟಗಾರಿಕೆಗೆ ಕೆಲ ಸಲಹೆಗಳು

Seeding a new lawn or overseeding an existing lawn should result in lush, green grass. The type of seed used, season of planting and soil preparation all play an important role in determining the growth rate of new grass seed.
Story first published: Thursday, January 31, 2013, 16:26 [IST]
X
Desktop Bottom Promotion