For Quick Alerts
ALLOW NOTIFICATIONS  
For Daily Alerts

ಸಾವಯವ ಕೃಷಿಯಲ್ಲಿ ಚಳಿಗಾಲದ ತರಕಾರಿ ಬೆಳೆ

By Hemanth Amin
|

ಚಳಿಗಾಲದ ತರಕಾರಿಗಳಾದ ಕ್ಯಾರೆಟ್, ಶತಾವರಿ, ಮೊಳಕೆಯೊಡೆದ ಧಾನ್ಯಗಳು, ಪಾಲಕ್, ಲೆಟಿಸ್ ಇತ್ಯಾದಿ ಮಣ್ಣಿನೊಳಗೆ ಬೆಳೆಯುತ್ತದೆ ಅಥವಾ ಇದಕ್ಕೆ ಕಡಿಮೆ ಸೂರ್ಯನ ಬೆಳಕು ಬೇಕಾಗುತ್ತದೆ. ಮಾನ್ಸೂನ್ ಅಂತ್ಯದಲ್ಲಿ ಈ ತರಕಾರಿಗಳನ್ನು ಬಿತ್ತನೆ ಮಾಡಲಾಗುತ್ತದೆ ಮತ್ತು ಚಳಿಗಾಲದ ವೇಳೆ ಕೊಯ್ಲು ಮಾಡಲಾಗುತ್ತದೆ. ಈ ತರಕಾರಿಗಳನ್ನು ನಿಮ್ಮ ಮನೆಯ ಕೈದೋಟ ಅಥವಾ ಹಿತ್ತಿಲಿನಲ್ಲಿ ಬೆಳೆಯಬಹುದು.

ಚಳಿಗಾಲದ ತರಕಾರಿಗಳನ್ನು ಸಾವಯವ ಕೃಷಿಯ ಮೂಲಕ ಬೆಳೆಸಬಹುದು. ಸಾವಯವ ಕೃಷಿಯೆಂದರೆ ಯಾವುದೇ ರಾಸಾಯನಿಕ ಅಥವಾ ಕೃತಕ ಪದಾರ್ಥಗಳನ್ನು ಬಳಸದೆ ಬೇಸಾಯ ಮಾಡುವುದು. ನೈಸರ್ಗಿಕ ಮತ್ತು ಪರಿಸರ ಸ್ನೇಹಿ ಕೃಷಿ ವಿಧಾನಗಳಾದ ಸರದಿ ಬೆಳೆ, ನೈಸರ್ಗಿಕ ಗೊಬ್ಬರ ಬಳಕೆ ಮತ್ತು ಯಾವುದೇ ಕೃತಕ ಬೆಳವಣಿಗೆಯ ಕಾಯಿಲೆಗಳನ್ನು ತಪ್ಪಿಸುವುದು. ಪರಿಸರ ಮತ್ತು ಆರೋಗ್ಯದ ಬಗ್ಗೆ ಇಂದಿನ ದಿನಗಳಲ್ಲಿ ಕಾಳಜಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾವಯವ ಕೃಷಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆರೋಗ್ಯಕರವಾಗಿರಲು ಜನರು ಸಾವಯವ ಆಹಾರಗಳನ್ನೇ ಆಯ್ಕೆ ಮಾಡುತ್ತಿದ್ದಾರೆ.

Tips to grow winter vegetables organically

ಸಾವಯವ ಕೃಷಿ ಮೂಲಕ ಚಳಿಗಾಲದ ತರಕಾರಿ ಬೆಳೆಯಬಹುದು. ಸಾವಯವ ಕೃಷಿ ತುಂಬಾ ಸುಲಭ ಮತ್ತು ಇದನ್ನು ಸ್ವಲ್ಪ ಹಾಗೂ ದೊಡ್ಡ ಜಾಗದಲ್ಲಿ ಮಾಡಬಹುದು. ಸಾವಯವ ಕೃಷಿ ಮೂಲಕ ಬೆಳೆಯಬಹುದಾದ ಚಳಿಗಾಲದ ತರಕಾರಿಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

1. ಸೂಕ್ತ ಮತ್ತು ಆಯ್ಕೆಯ ಬೆಳೆ ಬಳಸಿ
ಚಳಿಗಾಲವು ವಿಶ್ವದ ಪ್ರತಿಯೊಂದು ಭಾಗದಲ್ಲಿ ಭಿನ್ನವಾಗಿರುತ್ತದೆ. ಕೆಲವು ಭಾಗದಲ್ಲಿ ಇದು ವಿಪರೀತವಾಗಿರಬಹುದು ಮತ್ತೆ ಕೆಲವು ಭಾಗದಲ್ಲಿ ಕಡಿಮೆ. ಸಾವಯವ ಕೃಷಿ ಮೂಲಕ ಚಳಿಗಾಲದ ಬೆಳೆ ಬೆಳೆಸುವಾಗ ಅದನ್ನು ಬೆಳೆಸುವ ಉಷ್ಣಾಂಶದಲ್ಲಿ ಅದು ಬದುಕಬಹುದೇ ಎನ್ನುವುದನ್ನು ಪರಿಶೀಲಿಸಬೇಕು. ಪ್ರತಿಯೊಂದು ತರಕಾರಿಯೂ ತನ್ನದೇ ಆದ ತಾಪಮಾನ ಸಹಿಷ್ಣುತೆ ಹೊಂದಿರುತ್ತದೆ. ಉದಾಹರಣೆಗೆ ಈರುಳ್ಳಿ ತಂಪಾದ ಹವಾಮಾನಕ್ಕೆ ಹೊಂದಿಕೊಳ್ಳಬಹುದು. ಇದನ್ನು 18 ಡಿಗ್ರಿ ಸೆಲ್ಸಿಯಸ್ ತನಕದ ತಾಪಮಾನದಲ್ಲೂ ಬೆಳೆಯಲಾಗುತ್ತದೆ.

2. ಬೆಳೆ ಸರದಿ ಪಾಲಿಸಿ
ಸಾವಯವ ಕೃಷಿಯ ಪ್ರಮುಖ ವಿಧಾನವೆಂದರೆ ತರಕಾರಿ ಮತ್ತು ಬೆಳೆಯನ್ನು ಬದಲಾಯಿಸುತ್ತಿರುವುದು. ಒಂದೇ ರೀತಿಯ ತರಕಾರಿ ಬೆಳೆಯುತ್ತಿದ್ದರೆ ಆಗ ಮಣ್ಣು ತನ್ನ ಪೋಷಕಾಂಶಗಳನ್ನು ಕಳಕೊಳ್ಳುತ್ತದೆ. ತರಕಾರಿ ಬದಲಾವಣೆಯಿಂದ ಕೀಟಗಳು ಹಾನಿ ಉಂಟು ಮಾಡುವುದನ್ನು ತಡೆಯಬಹುದು. ಪ್ರತೀ ಋತುವಿನಲ್ಲಿ ನೀವು ಭಿನ್ನ ಬೆಳೆ ಮಾಡಬೇಕಾಗುತ್ತದೆ.

3. ತಡೆ ಹಾಕಿ
ಚಳಿಗಾಲದ ತರಕಾರಿಗಳನ್ನು ಶೀತ ಮತ್ತು ಶುಷ್ಕ ಗಾಳಿಯಿಂದ ತಡೆಯಬೇಕು. ಹೀಗೆ ಮಾಡಲು ನೈಸರ್ಗಿಕ ತಡೆಗೋಡೆ ಹಾಕಿ. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಮರಗಳನ್ನು ನೆಡಿ. ಪೊದೆಗಳನ್ನು ಇದಕ್ಕೆ ಬಳಸಿ. ಗಾಳಿಯನ್ನು ತಡೆಯುವಂತೆ ಮನೆಯ ಗೋಡೆಯಿದ್ದರೆ ಅದರ ಹಿಂದುಗಡೆ ತರಕಾರಿ ಬೆಳೆಯಿರಿ. ತಡೆ ಕೇವಲ ಗಾಳಿಗೆ ಮಾತ್ರ ಸೂರ್ಯನ ಕಿರಣಗಳಿಲ್ಲ ಎನ್ನುವುದು ನೆನಪಿರಲಿ.

4. ನೈಸರ್ಗಿಕ ಗೊಬ್ಬರ ಬಳಸಿ
ಸಾವಯವ ಕೃಷಿಯೆಂದರೆ ನೈಸರ್ಗಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸುವುದು. ಸಾವಯವ ಕೃಷಿಯಲ್ಲಿ ರಾಸಾಯನಿಕ ಕ್ರಿಮಿನಾಶನ ಮತ್ತು ಗೊಬ್ಬರ ನಿಷಿದ್ಧ. ಈ ಗೊಬ್ಬರಗಳು ಮಣ್ಣಿಗೆ ಹಾನಿಯುಂಟು ಮಾಡಿ ಅದು ಪೋಷಕಾಂಶ ಕಳಕೊಳ್ಳುವಂತೆ ಮಾಡುತ್ತದೆ. ಚಳಿಗಾಲದ ತರಕಾರಿಗಳನ್ನು ಸಾವಯವ ಕೃಷಿ ಮೂಲಕ ಬೆಳೆಸುವುದಾದರೆ ನೈಸರ್ಗಿಕ ಗೊಬ್ಬರಗಳಾದ ಅಳಿದುಳಿದ ಆಹಾರಪದಾರ್ಥಗಳು ಮತ್ತು ಮೇವು, ಪ್ರಾಣಿಯ ಮಲ, ಬೇರೆ ಕಡೆಗಳಲ್ಲಿ ಕೊಯ್ಲು ಮಾಡಿದ ಬೆಳೆಗಳ ಅವಶೇಷ ಹೀಗೆ ಇನ್ನಿತರ ವಸ್ತುಗಳನ್ನು ಗೊಬ್ಬರವಾಗಿ ಬಳಸಬಹುದು. ಇದರಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ ಮತ್ತು ಸಸ್ಯಗಳಿಗೆ ಇದು ತುಂಬಾ ಉಪಯೋಗಿ. ರಾಸಾಯನಿಕ ಕೀಟನಾಶಗಳ ಬದಲಿಗೆ ನೈಸರ್ಗಿಕ ಕ್ರಿಮಿನಾಶಗಳನ್ನು ಬೆಳೆಗಳಿಗೆ ಬಳಸಬೇಕು.

5. ಹಸಿಗೊಬ್ಬರ ಮತ್ತು ಮಿಶ್ರ ಗೊಬ್ಬರ
ಹಸಿಗೊಬ್ಬರ ಮತ್ತು ಮಿಶ್ರಗೊಬ್ಬರ ಸಾವಯವ ಕೃಷಿಯ ಎರಡು ವಿಧಾನಗಳು. ಹಸಿಗೊಬ್ಬರವೆಂದರೆ ಬೀಜ ಬಿತ್ತನೆ ಮಾಡುವ ಮೊದಲು ಹಸಿರು ಎಲೆ, ಉಳಿದ ತರಕಾರಿ ಮತ್ತು ಮಣ್ಣಿನ ಸಣ್ಣ ಪದರ ಮಾಡುವುದು. ಇದು ಸೂಕ್ಷ್ಮಾಣು ಜೀವಿಗಳನ್ನು ಹೆಚ್ಚಿಸುತ್ತದೆ ಮತ್ತು ಬೆಳೆ ಬೇಗನೆ ಬೆಳೆಯಲು ನೆರವಾಗುತ್ತದೆ. ಚಳಿಗಾಲದಲ್ಲಿ ಸಸ್ಯಗಳನ್ನು ಬೆಚ್ಚಗಿರಿಸುತ್ತದೆ. ಸಾವಯವ ಕೃಷಿಯಲ್ಲಿ ಮಿಶ್ರ ಗೊಬ್ಬರವನ್ನು ಬಳಸುವುದರಿಂದ ಸಸ್ಯಗಳು ಬೇಗನೆ ದೊಡ್ಡದಾಗಲು ನೆರವಾಗುತ್ತದೆ. ಸಸ್ಯಗಳ ತ್ಯಾಜ್ಯ, ಪ್ರಾಣಿಗಳ ಮಲಮೂತ್ರ ಮತ್ತು ಇತರ ಕೆಲವು ವಸ್ತುಗಳನ್ನು ಬಳಸಿಕೊಂಡು ಮಿಶ್ರ ಗೊಬ್ಬರ ತಯಾರಿಸಲಾಗುತ್ತದೆ.

ಸಾವಯವ ಕೃಷಿ ಮೂಲಕ ಚಳಿಗಾಲದ ತರಕಾರಿ ಬೆಳೆಯಲು ಇವು ಕೆಲವೊಂದು ಟಿಪ್ಸ್ ಗಳು. ಸಾವಯವ ಕೃಷಿ ಮೂಲಕ ಮಾಡಿದ ಆಹಾರದಲ್ಲಿ ಹೆಚ್ಚಿನ ಪೋಷಕಾಂಶಗಳು ಮತ್ತು ರುಚಿಯಿರುತ್ತದೆ. ನಿಮ್ಮ ಹಿತ್ತಲಿನಲ್ಲಿ ತರಕಾರಿ ಬೆಳೆಯಲು ಈ ಟಿಪ್ಸ್ ಗಳನ್ನು ಪ್ರಯತ್ನಿಸಿ ನೋಡಿ.

English summary

Tips to grow winter vegetables organically

Winter Vegetables like carrots, asparagus, sprouts, spinach, lettuce; onions, etc. either grow under the soil or need less sunlight for growth. These plants are sown during the end of monsoon and are harvested during winters. These plants can be grown in your garden or backyard.
Story first published: Tuesday, December 3, 2013, 9:23 [IST]
X
Desktop Bottom Promotion