For Quick Alerts
ALLOW NOTIFICATIONS  
For Daily Alerts

ನೆಲ ಫಳ-ಫಳ ಹೊಳೆಯಬೇಕೆ? ಇಲ್ಲಿದೆ ಟಿಪ್ಸ್

|

ನೆಲ ಫಳ-ಫಳ ಅನ್ನುಲು ಬರೀ ನೀರಿನಿಂದ ಒರೆಸಿದರೆ ಮಾತ್ರ ಸಾಲದು. ಮನೆ ಶುಚಿ ಮಾಡಲು ಅನೇಕ ಟಿಪ್ಸ್ ಇವೆ. ಕೆಮಿಕಲ್ ಇರುವ ಹೌಸ್ ಕ್ಲೀನಿಂಗ್ ವಸ್ತುಗಳನ್ನು ಬಳಸಿದರೆ ನೆಲ ಬೇಗನೆ ಶುಚಿಯಾಗಿ ಫಳ-ಫಳ ಅನ್ನುವುದು. ಸಮಸ್ಯೆಯಂದರೆ ಚಿಕ್ಕ ಮಕ್ಕಳಿರುವ ಮನೆಯಲ್ಲಿ ನೆಲ ಒರೆಸುವಾಗ ಸ್ವಲ್ಪ ಕೆಮಿಕಲ್ ಕಮ್ಮಿಯಿರುವ ವಸ್ತುಗಳನ್ನು ನೀರಿಗೆ ಹಾಕಿ ನೆಲ ಒರೆಸುವುದು ಒಳ್ಳೆಯದು.

ಇಲ್ಲಿ ನಾವು ಕೆಲವು ನೈಸರ್ಗಿಕವಾದ ವಸ್ತುಗಳ ಬಗ್ಗೆ ಹೇಳಿದ್ದೇವೆ. ಇವುಗಳು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ, ನೆಲವನ್ನೂ ಫಳ-ಫಳವಾಗಿಸುತ್ತದೆ. ಬನ್ನಿ ಆ ವಸ್ತುಗಳು ಯಾವುವು ಎಂದು ನೋಡೋಣ:

Natural Cleaners To Get Sparkling Floors

ವೈಟ್ ವಿನಿಗರ್
ವೈಟ್ ವಿನಿಗರ್ ಅನ್ನು ಅರ್ಧ ಬಕೆಟ್ ನೀರಿಗೆ ಹಾಕಿ, ಆ ನೀರು ಬಳಸಿ ನೆಲವನ್ನು ಉಜ್ಜಿ. ಹೀಗೆ ಮಾಡಿದರೆ ಚಿಕ್ಕ ಬ್ಯಾಕ್ಟೀರಿಯಾಗಳು ನಾಶವಾಗುವುದು, ನೆಲದ ಹೊಳಪು ಹೆಚ್ಚುವುದು.

ವಿನಿಗರ್
ನೀರಿಗೆ ಸ್ವಲ್ಪ ವಿನಿಗರ್ ಮತ್ತು ನಿಂಬೆ ರಸ ಹಾಕಿ ತಿಕ್ಕಿದರೆ ಟೈಲ್ಸ್ ನೆಲದಲ್ಲಿ ಅಂಟಿ ಹಿಡಿದ ಕಲೆಗಳು ಹೋಗುವುದು. ಹಾಗೂ ಮನೆಯೂ ಸುವಾಸನೆಯಿಂದ ಕೂಡಿರುತ್ತದೆ.

ಮರದ ಹಲಗೆ ಇರುವ ನೆಲಕ್ಕೆ
ಮರದ ಹಲಗೆ ಬಳಸಿ ಮಾಡಿದ್ದ ನೆಲವನ್ನು ಶುಚಿ ಮಾಡಲು ಡಿಟರ್ಜೆಂಟ್ ಅನ್ನು ಬಿಸಿ ನೀರಿಗೆ ಹಾಕಿ ಮಿಕ್ಸ್ ಮಾಡಿ ನೆಲವನ್ನು ಉಜ್ಜಿ, ನಂತರ ಬರೀ ನೀರಿನಿಂದ ಉಜ್ಜಿದರೆ ಶುಚಿಯಾಗುವುದು.

ಅಡುಗೆ ಸೋಡಾ ಮತ್ತು ನೀಲ ಗಿರಿ ಎಣ್ಣೆ
ಮನೆಯ ನೆಲ ಶುಚಿ ಮಾಡಲು ಇದು ಮತ್ತೊಂದು ನೈಸರ್ಗಿಕವಾದ ವಿಧಾನವಾಗಿದೆ. ಬಿಸಿ ನೀರಿಗೆ ಅಡುಗೆ ಸೋಡಾ ಮತ್ತು ನೀಲಗಿರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ ನೆಲವನ್ನು ಉಜ್ಜಿದರೆ ನೆಲದಲ್ಲಿ ಅಂಟಿ ಹಿಡಿದ ಕಲೆಗಳು ಹೋಗಿ, ನೆಲದ ಹೊಳಪು ಹೆಚ್ಚುವುದು.

English summary

Natural Cleaners To Get Sparkling Floors | Tips For Home Cleaning | ನೆಲ ಫಳ-ಫಳ ಹೊಳೆಯಲು ನೈರ್ಗಿಕ ವಿಧಾನ | ಮನೆ ಶುಚಿತ್ವಕ್ಕೆ ಕೆಲ ಸಲಹೆಗಳು

This is when natural cleaners can be used to get sparkling & clean floors and they are safe too! Check out some homemade natural cleaners that can be used for mopping the floors.
X
Desktop Bottom Promotion