For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಗುಲಾಬಿ ಗಿಡಗಳ ತೋಟಗಾರಿಕೆಗೆ ಟಿಪ್ಸ್

By Hemanth P
|

ಚಳಿಗಾಲವೆಂದರೆ ಶೀತ ಗಾಳಿ, ಮಂಜು ಬೀಳುವ ಸಮಯ. ಗಿಡ ಹಾಗೂ ಪೊದೆಗಳು ಚಳಿಗಾಲದ ಋತುವಿಗೆ ತುಂಬಾ ಸೂಕ್ಷ್ಮ. ಶೀತ ಹಾಗೂ ಶುಷ್ಕ ಗಾಳಿಯು ಸಸ್ಯಗಳಿಗೆ ಹಾನಿಯುಂಟು ಮಾಡುತ್ತದೆ. ಕೆಲವೊಂದು ಗಿಡಗಳು ಚಳಿಗಾಲಕ್ಕೆ ತುಂಬಾ ಗ್ರಹಣಶಕ್ತಿ ಹೊಂದಿರುತ್ತದೆ. ಗುಲಾಬಿ, ಟೊಮೆಟೊ, ದಾಸವಾಳ ಮತ್ತು ವಿವಿಧ ರೀತಿಯ ಅಲಂಕಾರಿಕ ಸಸ್ಯಗಳು ಚಳಿಗಾಲಕ್ಕೆ ತುತ್ತಾಗುವ ಗಿಡಗಳು.

ಈ ಎಲ್ಲಾ ಗಿಡಗಳಲ್ಲಿ ಗುಲಾಬಿ ಸಸ್ಯಗಳಿಗೆ ಚಳಿಗಾಲದಲ್ಲಿ ಹೆಚ್ಚಿನ ಆರೈಕೆ ಮತ್ತು ರಕ್ಷಣೆ ಬೇಕಾಗುತ್ತದೆ. ಗುಲಾಬಿ ತುಂಬಾ ಸುಂದರ ಹೂ ಮತ್ತು ಇದು ಎಲ್ಲರಿಗೂ ಮೆಚ್ಚುಗೆಯ ಸಸ್ಯವಾಗಿದೆ. ಪ್ರತಿಯೊಂದು ಮನೆಯ ಹೂದೋಟದಲ್ಲಿ ಗುಲಾಬಿ ಗಿಡ ನೋಡಲು ಸಿಕ್ಕೇ ಸಿಗುತ್ತದೆ. ಗುಲಾಬಿ ಗಿಡಗಳು ತುಂಬಾ ಸುಕ್ಷ್ಮ ಹಾಗೂ ಹವಾಮಾನ ಮತ್ತು ಉಷ್ಣತೆ ಬದಲಾಗುವ ಕಾರಣ ಇದರ ಮೇಲೆ ಪರಿಣಾಮವಾಗಬಹುದು.

Gardening of rose flower: Winter Tips

ಚಳಿಗಾಲ ಬಂದಾಗ ನಿಮ್ಮ ಗುಲಾಬಿ ತೋಟವನ್ನು ರಕ್ಷಿಸುವುದು ತುಂಬಾ ಮುಖ್ಯ. ಇತರ ಋತುಗಳಿಗೆ ಹೋಲಿಸಿದರೆ ಗುಲಾಬಿ ಗಿಡಗಳಿಗೆ ಚಳಿಗಾಲದಲ್ಲಿ ಹೆಚ್ಚಿನ ಶ್ರಮ ವಹಿಸಿ ಆರೈಕೆ ಮಾಡಬೇಕಾಗುತ್ತದೆ. ಚಳಿಗಾಲದಲ್ಲಿ ಗುಲಾಬಿ ತೋಟಗಾರಿಕೆಗೆ ಕೆಲವೊಂದು ಉಪಯುಕ್ತ ಟಿಪ್ಸ್ ಗಳಿವೆ. ಈ ಟಿಪ್ಸ್ ಗಳು ನಿಮ್ಮ ಹೂತೋಟದಲ್ಲಿ ಗುಲಾಬಿ ಗಿಡಗಳ ಆರೈಕೆ ಮಾಡಲು ಖಂಡಿತವಾಗಿಯೂ ನೆರವಾಗಲಿದೆ.

ಗುಲಾಬಿ ತೋಟದ ಬಗ್ಗೆ ಇರುವ ಕೆಲವೊಂದು ಸರಳ ಟಿಪ್ಸ್ ಗಳು ಖಂಡಿತವಾಗಿಯೂ ನಿಮಗೆ ನೆರವಾಗಲಿದೆ.

1. ಗಿಡವನ್ನು ಮುಚ್ಚಿ

ಚಳಿಗಾಲದಲ್ಲಿ ಬರುವ ಶೀತ ಗಾಳಿಯು ಗುಲಾಬಿ ಗಿಡಗಳ ಮೇಲೆ ಪರಿಣಾಮ ಬೀರುತ್ತದೆ. ಶುಷ್ಕ ಹಾಗೂ ಶೀತ ಗಾಳಿಯಿಂದ ಗುಲಾಬಿಗಳನ್ನು ರಕ್ಷಿಸಲು ಗಿಡಗಳನ್ನು ಯಾವುದರಿಂದಲೂ ಮುಚ್ಚಿ. ಕಾರ್ಡ್ ಬೋರ್ಡ್ ಬಾಕ್ಸ್ ಅಥವಾ ಪ್ಲಾಸ್ಟಿಕ್ ಬಾಕ್ಸ್ ನಿಂದ ಗುಲಾಬಿ ಗಿಡವನ್ನು ರಕ್ಷಿಸಿ. ಇದು ಗುಲಾಬಿ ಗಿಡವು ಒರಟು ಗಾಳಿಯಿಂದ ರಕ್ಷಿಸುತ್ತದೆ. ಸೂರ್ಯನ ಬೆಳಕು ಬೀಳಲು ಮೇಲಿನ ಭಾಗವನ್ನು ತೆರೆದಿಡಿ.

2. ಸುತ್ತಲಿನ ಪ್ರದೇಶ ಸ್ವಚ್ಛವಾಗಿಡಿ
ಮರಗಳು ಮತ್ತು ಸಸ್ಯಗಳು ಚಳಿಗಾಲದಲ್ಲಿ ಎಲೆಗಳನ್ನು ಉದುರಿಸುತ್ತದೆ. ತೋಟದ ತುಂಬಾ ಒಣಗಿದ ಎಲೆಗಳು, ಮರದ ಕಾಂಡಗಳು ಬಿದ್ದಿರುತ್ತದೆ. ಗುಲಾಬಿ ಗಿಡಗಳು ಸೋಂಕು ಮತ್ತು ರೋಗಕ್ಕೆ ಬೇಗನೆ ಗುರಿಯಾಗುತ್ತದೆ. ಒಣಗಿದ ಎಲೆಗಳು ಮತ್ತು ಕಾಂಡಗಳು ತಮ್ಮೊಳಗೆ ಇರುವ ಕೀಟಗಳನ್ನು ಹೊರಹಾಕುತ್ತದೆ. ಯಾವುದೇ ರೀತಿಯ ಸೋಂಕು ಅಥವಾ ಪರಾವಲಂಬಿ ಜೀವಿ ಬರದಂತೆ ಗುಲಾಬಿ ಗಿಡದ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ. ತೋಟವನ್ನು ಸ್ವಚ್ಛಗೊಳಿಸುವ ಮೂಲಕ ಅದು ಸುಂದರ ಹಾಗೂ ಕ್ರಮಬದ್ಧವಾಗಿ ಕಾಣುತ್ತದೆ.

3. ನೀರು

ಗುಲಾಬಿ ಗಿಡಗಳು ಚಳಿಗಾಲದಲ್ಲಿ ಒಣ ಹಾಗೂ ತೇವಾಂಶರವಹಿತವಾಗುತ್ತದೆ. ಗಿಡಗಳನ್ನು ತಾಜಾ ಮತ್ತು ತೇವಾಂಶಭರಿತವಾಗಿಡಲು ನಿಯಮಿತವಾಗಿ ನೀರು ಹಾಕಿ. ನಿಯಮಿತವಾಗಿ ನೀರು ಹಾಕುವುದರಿಂದ ಗುಲಾಬಿ ಗಿಡದ ಬೇರುಗಳಿಗೆ ತಂಪಾಗಿರುವ ಮಣ್ಣಿನಲ್ಲಿ ನೀರು ಹುಡುಕುವ ಕೆಲಸ ಬೀಳುವುದಿಲ್ಲ. ಎಲ್ಲಾ ಚಟುವಟಿಕೆಗಳಿಗೆ ನೀರು ಪ್ರಮುಖವೆನ್ನುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಗುಲಾಬಿ ಗಿಡಗಳ ಬೆಳವಣಿಗೆ ಮತ್ತು ಹೂ ಬಿಡಲು ಅವುಗಳಿಗೆ ಹೆಚ್ಚಿನ ನೀರು ಬೇಕಾಗಿದೆ.

4. ಬುಡವನ್ನು ರಕ್ಷಿಸಿ

ತಂಪಾದ ಹವಾಮಾನದಲ್ಲಿ ಗುಲಾಬಿ ಗಿಡಗಳನ್ನು ಮಣ್ಣು ಮತ್ತು ಗೊಬ್ಬರ ಹಾಕಿ ರಕ್ಷಿಸಿ. ಇದು ಗಿಡಗಳಿಗೆ ಬಲ ಮತ್ತು ಬಿಸಿ ನೀಡುತ್ತದೆ. ಕಾಂಡದ ಆರಂಭಿಕ ಭಾಗವನ್ನು ಇದರ ಮೂಲಕ ರಕ್ಷಿಸುವುದು ತುಂಬಾ ಮುಖ್ಯ. ಇದು ಒಳ್ಳೆಯ ಗುಲಾಬಿ ತೋಟಗಾರಿಕೆಯ ಟಿಪ್ಸ್. ಆದರೆ ಇದಕ್ಕಾಗಿ ತುಂಬಾ ಶ್ರಮ ಬೇಕಾಗುತ್ತದೆ. ಚಳಿಗಾಲ ತುಂಬಾ ತೀವ್ರವಾಗಿದ್ದರೆ ಬುಡವನ್ನು ಮತ್ತಷ್ಟು ಮಣ್ಣು ಮತ್ತು ಗೊಬ್ಬರ ಹಾಕಿ ರಕ್ಷಿಸಿ. ಭೂಗತ ಕಂದಕ ಮಾಡಿ ನೀವು ಗುಲಾಬಿ ಗಿಡಗಳನ್ನು ರಕ್ಷಿಸಬಹುದು. ಭೂಗತ ಕಂದಕದಲ್ಲಿ ಗುಲಾಬಿ ಗಿಡವನ್ನು ಮುಚ್ಚಿಟ್ಟಾಗ ಎಲೆ ಮತ್ತು ಮೊಗ್ಗುಗಳು ಮಾತ್ರ ಕಾಣಿಸುತ್ತದೆ.

5. ಒಳಾಂಗಣ ತೋಟಗಾರಿಕೆ
ಚಳಿಗಾಲದ ಶೀತವನ್ನು ಗುಲಾಬಿ ಗಿಡಗಳಿಗೆ ತಡೆದುಕೊಳ್ಳಲು ತುಂಬಾ ಕಷ್ಟವಾದರೆ ಆಗ ಗುಲಾಬಿ ಗಿಡಗಳನ್ನು ಮನೆಯ ಒಳಗಡೆ ಕೊಂಡುಹೋಗಿ. ಮನೆಯ ಒಳಗಡೆ ಗುಲಾಬಿ ಗಿಡಗಳನ್ನು ಇಟ್ಟರೆ ಆಗ ಹೆಚ್ಚಿನ ನಿರ್ವಹಣೆ ಬೇಕಾಗುತ್ತದೆ. ಮನೆಯೊಳಗೆ ಗುಲಾಬಿ ಗಿಡಗಳನ್ನು ಇಡುವುದರಿಂದ ಗಿಡಗಳಿಗೆ ಬೇಕಾಗಿರುವ ಬಿಸಿ ಮತ್ತು ಚಳಿಗಾಲದ ಗಾಳಿಯಿಂದ ಇದರನ್ನು ರಕ್ಷಿಸುತ್ತದೆ. ಸೂರ್ಯನ ಬೆಳಕು ಬೀಳುವ ಸ್ಥಳದಲ್ಲಿ ಗುಲಾಬಿ ಗಿಡಗಳನ್ನು ಇಡಿ. ಬಾಗಿಲು ಮತ್ತು ಕಿಟಕಿ ಗಿಡದ ಹತ್ತಿರ ಗುಲಾಬಿ ಗಿಡಗಳನ್ನು ಇಡಿ. ಇದಕ್ಕೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಿ.

English summary

Gardening of rose flower: Winter Tips

Winter season has harsh cold winds and breezes. Plants and shrubs are also sensitive to winter season. The cold and dry winds cause damage to plants as well. Some plants are a lot more perceptive to winter season. Roses, tomatoes, hibiscus and various ornamental plants are examples of plants that are susceptible to cold.
Story first published: Saturday, December 21, 2013, 10:16 [IST]
X
Desktop Bottom Promotion