For Quick Alerts
ALLOW NOTIFICATIONS  
For Daily Alerts

ಕಡಿಮೆ ನೀರು ಬಳಸಿ ಬೆಳೆಯುವ ಸುಂದರ ಗಿಡಗಳು

|

ಹೂಗಿಡಗಳಿದ್ದರೆ ಮನೆಯ ಅಂದ ಹೆಚ್ಚುವುದು. ಮನೆಯನ್ನು ಎಷ್ಟೇ ಚೆಂದ ಕಟ್ಟಿಸಿ, ಆದರೆ ಮನೆ ಮುಂದೆ ಹೂ ಗಿಡ ನೆಡಲಿಲ್ಲ ಅಂದರೆ ಮನೆಯ ಅಂದದಲ್ಲಿ ಏನೋ ಕೊರತೆ ತೋರುತ್ತದೆ. ಹಾಗಂತ ನಗರ ಪ್ರದೇಶದಲ್ಲಿ ಒಂದು ಚದರ ಅಡಿಗೆ ಲಕ್ಷಾಂತರ ರುಪಾಯಿ ಸುರಿಯಬೇಕಾಗಿರುವಾಗ ಮನೆ ಮುಂದೆ ಹೂ ತೋಟ ಮಾಡುವುದು ಸಾಮಾನ್ಯ ವ್ಯಕ್ತಿಗಳಿಗೆ ಸಾಧ್ಯವಾಗುವ ಮಾತಲ್ಲ.

ಅದರೆ ಹೂಗಿಡಗಳನ್ನು ಹೂಕುಂಡದಲ್ಲಿ ನೆಟ್ಟು ಬೆಳೆಸಬಹುದು. ಇದಕ್ಕೆ ಹೆಚ್ಚಿನ ಜಾಗದ ಅವಶ್ಯಕತೆಯಿಲ್ಲ. ಈ ಹೂಗಿಡಗಳನ್ನು ಹೂಕುಂಡದಲ್ಲಿ ನೆಟ್ಟರೆ ಮನೆ ಬದಲಾಯಿಸುವುದಾದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವುದು ಸುಲಭವಾಗುತ್ತದೆ. ಇಲ್ಲಿ ಸುಲಭವಾಗಿ ಬೆಳೆಯಬಹುದಾದ ಕೆಲವು ಗಿಡಗಳ ಬಗ್ಗೆ ಹೇಳಲಾಗಿದೆ. ಇವುಗಳಿಗೆ ನೀರು ಸ್ವಲ್ಪ ಸಾಕಾಗಿರುವುದರಿಂದ ನಗರ ಪ್ರದೇಶಗಳಿಗೆ ತುಂಬಾ ಸೂಕ್ತವಾಗಿವೆ. ಇವುಗಳನ್ನು ನೆಟ್ಟರೆ ಮನೆ ಸೌಂದರ್ಯ ಹೆಚ್ಚಾಗುವುದರ ಜೊತೆಗೆ ಅದನ್ನು ನೋಡುವಾಗ ಮನಸ್ಸಿಗೆ ಆನಂದವೂ ದೊರೆಯುತ್ತದೆ.

ಹಾವು ಗಿಡ:

ಹಾವು ಗಿಡ:

ಈ ಗಿಡವನ್ನು ಸ್ನ್ಯಾಕ್ ಪ್ಲಾಂಟ್ ಅಥವಾ ಹಾವಿನ ಗಿಡ ಎಂದು ಕರೆಯಲಾಗುವುದು. ಇದನ್ನು ಬಿಸಿಲಿರುವ ಜಾಗದಲ್ಲಿ ಹಾಗೂ ತಂಪಾದ ಜಾಗದಲ್ಲಿ ಎರಡೂ ಕಡೆ ಬೆಳೆಯಬಹುದು. ಈ ಗಿಡನ್ನು ನೆಟ್ಟರೆ ಪ್ರತಿದಿನ ನೀರು ಹಾಕಬೇಕಾದ ಅವಶ್ಯಕತೆ ಕೂಡ ಇಲ್ಲ. ವಾರದಲ್ಲಿ ಎರಡು ಬಾರಿ ಹಾಕಿದರೂ ಸಾಕು.

ಲೋಳೆಸರ:

ಲೋಳೆಸರ:

ಈ ಗಿಡವನ್ನು ಮನೆಯಲ್ಲಿ ಬೆಳೆಯಲು ಮರೆಯಬೇಡಿ. ಈ ಗಿಡ ನೆಟ್ಟರೆ ನೋಡುವುದಕ್ಕೆ ಆಕರ್ಷಕ ಮಾತ್ರವಲ್ಲ ಅನೇಕ ಔಷಧೀಯ ಗುಣವನ್ನು ಹೊಂದಿದೆ.

ಜೇಡರ ಗಿಡ:

ಜೇಡರ ಗಿಡ:

ಈ ಗಿಡವನ್ನು ಹೆಚ್ಚಿನ ಮನೆಗಳಲ್ಲಿ ಕಾಣಬಹುದು. ಇದು ಹಸಿರು ಬಣ್ಣದಲ್ಲಿ ಮಾತ್ರವಲ್ಲದೆ ಅನೇಕ ಬಣ್ಣದಲ್ಲಿ ದೊರೆಯುತ್ತದೆ. ಈ ಗಿಡ ನೆಟ್ಟರೆ ಮಣ್ಣು ತಂಪಾಗಿ ಇರುವಂತೆ ನೋಡಿಕೊಳ್ಳಬೇಕು. ಆದರೆ ಅಧಿಕ ನೀರಿನ ಅವಶ್ಯಕತೆಯಿಲ್ಲ.

ರಬ್ಬರ್ ಗಿಡ:

ರಬ್ಬರ್ ಗಿಡ:

ಇದರ ಎಲೆ ದೊಡ್ಡದಾಗಿ ಹಸಿರು ಬಣ್ಣದಿಂದ ಕೂಡಿರುತ್ತದೆ. ಈ ಗಿಡವನ್ನು ಬಿಸಿಲು ಬೀಳುವ ಕಡೆ ಇಡಬೇಕು. ಈ ಗಿಡ ನಿಮ್ಮ ಮನೆಯ ಹಾಗೂ ಹೂತೋಟದ ಅಂದವನ್ನು ಹೆಚ್ಚಿಸುವುದು.

ಕ್ರೋಟನ್ ಗಿಡ:

ಕ್ರೋಟನ್ ಗಿಡ:

ಈ ಗಿಡವನ್ನು ಸುಲಭದಲ್ಲಿ ಬೆಳೆಯಬಹುದು. ಈ ಗಿಡ ಕೂಡ ಅನೇಕ ಆಕರ್ಷಕ ಬಣ್ಣದಲ್ಲಿ ದೊರೆಯುತ್ತದೆ. ಇದಕ್ಕೆ ಅಧಿಕ ನೀರಿನ ಅವಶ್ಯಕತೆ ಕೂಡ ಇಲ್ಲ.

ಜಡೆ ಗಿಡ:

ಜಡೆ ಗಿಡ:

ಈ ಗಿಡಕ್ಕೂ ಅಧಿಕ ನೀರಿನ ಅವಶ್ಯಕತೆಯಿಲ್ಲ. ಇದರ ಎಲೆ ಚಿಕ್ಕದಾಗಿ ಅದರಲ್ಲಿ ನೀರಿನಂಶ ಅಧಿಕವಿರುತ್ತದೆ. ಈ ಗಿಡದಲ್ಲಿ ಕೆಂಪು ಹೂ ಬಿಟ್ಟಾಗ ಈ ಗಿಡ ಮತ್ತಷ್ಟು ಆಕರ್ಷಕವಾಗಿ ಕಾಣುತ್ತದೆ.

English summary

6 Easy Grow Plant In Your Home | Tips For Gardening | ಮನೆಯಲ್ಲಿ ಬೆಳೆಯಲು 6 ಅತ್ಯುತ್ತಮ ಗಿಡಗಳು | ಕೈ ತೋಟದಲ್ಲಿ ಪಾಲಿಸಬಹುದಾದ ಸಲಹೆಗಳು

You always tend love the jobs that are easy for you to do. Even in the case of your hobbies you seek some relaxation. So, if gardening is what you love to do and yet do not have enough time for it, then here are some easy to grow houseplants.
X
Desktop Bottom Promotion