For Quick Alerts
ALLOW NOTIFICATIONS  
For Daily Alerts

ಮನೆಯ ಅಂದ-ಚೆಂದ ಹೆಚ್ಚಿಸುವ ಬಣ್ಣಗಳ ಆಯ್ಕೆ ಹೀಗಿರಲಿ

By Jaya subramanya
|

ನಿಮ್ಮ ಕನಸಿನ ಮನೆಯ ನಿರ್ಮಾಣ ಎಂದರೆ ಅದರಲ್ಲಿ ನಿಮ್ಮ ಅಭಿರುಚಿ ಮತ್ತು ಆಯ್ಕೆಯ ವಿಶೇಷತೆ ಬೆರೆತಿರುತ್ತದೆ. ನೂರಾರು ಕನಸುಗಳನ್ನೇ ಕಂಡು ಮನೆಯ ನಿರ್ಮಾಣವನ್ನು ನೀವು ಮಾಡುತ್ತೀರಿ. ಕೊಠಡಿ ಹೀಗಿರಬೇಕು, ಗಾಳಿ ಬೆಳಕು ಚೆನ್ನಾಗಿ ಬರುವಂತಿರಬೇಕು, ಮನೆಯನ್ನು ಎಲ್ಲರೂ ಮೆಚ್ಚಿಕೊಳ್ಳುವಂತಿರಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುತ್ತೀರಿ ಅಲ್ಲವೇ? ಅದಕ್ಕಾಗಿಯೇ ಶ್ರಮ ವಹಿಸಿ ಅತಿಮುತುವರ್ಜಿಯಿಂದ ಮನೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತೀರಿ.

ಆದರೆ ಮನೆಯ ನೋಟವನ್ನು ಇಮ್ಮಡಿಗೊಳಿಸುವ ಗೋಡೆಯ ಬಣ್ಣಕ್ಕೆ ನೀವು ಸೂಕ್ತ ಕಾಳಜಿ ವಹಿಸಿಲ್ಲ ಎಂದಾದಲ್ಲಿ ನಿಮ್ಮ ಶ್ರಮ ಎಲ್ಲಾ ವ್ಯರ್ಥವಾದಂತೆಯೇ ಎಂಬ ಎಚ್ಚರಿಕೆಯನ್ನು ಇಂದಿನ ಲೇಖನದಲ್ಲಿ ನೀಡುತ್ತಿದ್ದೇವೆ. ಹೌದು ಮನೆಯ ಅಂದಚೆಂದದಲ್ಲಿ ಇತರ ಎಲ್ಲಾ ಅಂಶಗಳಿಗೂ ಹೇಗೆ ಪ್ರಾಮುಖ್ಯತೆ ಇದೆಯೋ ಅಂತೆಯೇ ಗೋಡೆಯ ಬಣ್ಣಕ್ಕೂ ಅದರದ್ದೇ ಆದ ವಿಶೇಷತೆ ಇದೆ ಎಂಬುದನ್ನು ನೀವು ತಿಳಿದುಕೊಂಡಿರಬೇಕು. ಮಾರುಕಟ್ಟೆಯಲ್ಲಿ ದುಬಾರಿ ಬಣ್ಣಗಳೂ ದೊರೆಯುತ್ತಿದ್ದರೂ ಜಾಹೀರಾತಿಗೆ ಮಾರು ಹೋಗಿ ಈ ಬಣ್ಣಗಳ ಆಯ್ಕೆಯನ್ನು ನೀವು ಮಾಡಬಾರದು.

Things to remember while you paint your home

ಮನೆಯ ಸುಂದರ ನೋಟಕ್ಕೆ ಒಪ್ಪುವ ಅಂದದ ಬಣ್ಣವನ್ನೇ ನೀವು ಆಯ್ಕೆಮಾಡಬೇಕು. ಇದಕ್ಕಾಗಿ ನೀವು ಕೊಂಚ ಶ್ರಮ ವಹಿಸಿ ಸಮಯವನ್ನು ಖರ್ಚು ಮಾಡಿದರೂ ತೊಂದರೆಯಿಲ್ಲ ಆದರೆ ಮನೆಯ ಗೋಡೆಗಳ ಬಣ್ಣ ಮಾತ್ರ ಆಕರ್ಷಕವಾಗಿರಬೇಕು ಎಂದೇ ನಾವಿಲ್ಲಿ ಹೇಳುವ ಕಿವಿಮಾತು. ಹಾಗಿದ್ದರೆ ಮನೆಯ ಗೋಡೆಗಳ ಅಂದಕ್ಕಾಗಿ ಸೂಕ್ತವಾದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಿಂದ ತಿಳಿದುಕೊಳ್ಳಿ.

ಬೆಳಕನ್ನು ಪ್ರತಿಫಲಿಸುವ ಬಣ್ಣ ಆಯ್ಕೆಮಾಡಿ
ಇದು ಅತಿಮುಖ್ಯವಾದ ಅಂಶವಾಗಿದೆ. ನಗರಗಳಲ್ಲಿ ಅಚ್ಚುಕಟ್ಟಾಗಿ ಕಡಿಮೆ ಪ್ರದೇಶದಲ್ಲೇ ಮನೆ ನಿರ್ಮಿಸುವ ಸಂಕಷ್ಟ ಇರುತ್ತದೆ. ಇನ್ನು ಮನೆಯ ಬಣ್ಣ ಬೆಳಕಿಗೆ ಪ್ರತಿನಿಧಿಸುವಂತಿದ್ದರೆ ಅದರ ಸೊಬ್ಬಗು ಇನ್ನಷ್ಟು ಹೆಚ್ಚುವುದು ಖಂಡಿತ. ದಂತದ ಬಣ್ಣ, ಲಿಂಬೆ ಹಳದಿ, ಪೀಚ್, ತಿಳಿನೀಲಿ ಮೊದಲಾದ ಬಣ್ಣಗಳ ಆಯ್ಕೆಯನ್ನು ಮಾಡಿಕೊಳ್ಳಿ. ಸಾಕಷ್ಟು ಬೆಳಕನ್ನು ಪ್ರತಿಬಿಂಬಿಸಿ ಇಲ್ಯೂಶನ್‎ನಂತೆ ಕಾರ್ಯನಿರ್ವಹಿಸಿ ಹೆಚ್ಚಿನ ಸ್ಥಳಾವಕಾಶವನ್ನು ಖಾಲಿ ಮಾಡದೇ ಅಚ್ಚುಕಟ್ಟಾಗಿ ಮನೆಯ ಸೌಂದರ್ಯವನ್ನು ಎದ್ದುಗಾಣಿಸುತ್ತದೆ.

ಸ್ಥಳಕ್ಕೆ ಹೊಂದುವ ವಿನ್ಯಾಸಗಳು ಮತ್ತು ರಚನೆಗಳನ್ನು ಆಯ್ಕೆಮಾಡಿಕೊಳ್ಳಿ
ಬಣ್ಣಗಳ ಆಯ್ಕೆ ವಿನ್ಯಾಸ ಮತ್ತು ರಚನೆಗಳಲ್ಲಿ ನಮ್ಮದೇ ಆದ ಆಸೆಗಳು ನಮಗಿರುತ್ತದೆ. ಯಾವುದು ಚೆನ್ನಾಗಿ ಕಾಣುತ್ತದೆ ಎಂಬ ಜಿಜ್ಞಾಸೆ ನಮ್ಮ ಮನದಲ್ಲಿರುತ್ತದೆ. ರಚನೆಗಳನ್ನು ಆಯ್ಕೆಮಾಡುವುದು ಅವುಗಳದ್ದೇ ಆದ ಲಕ್ಷ್ಯವನ್ನು ಹೊಂದಿರುವುದರಿಂದ ಮನೆಯ ಅಂದವನ್ನು ಹೆಚ್ಚಿಸುವ ಇತರ ಅಂಶಗಳತ್ತಲೂ ಗಮನ ನೀಡಿ. ಪೀಠೋಪಕರಣಗಳು, ಅಲಂಕಾರಿಕ ಸಾಮಾಗ್ರಿಗಳು, ಪೇಂಟಿಂಗ್ಸ್ ಮೊದಲಾದವುದಕ್ಕೆ ಆದ್ಯತೆ ನೀಡಿ. ಇವುಗಳು ಮನೆಯ ಗೋಡೆಗೆ ಅಂದವನ್ನು ನೀಡುತ್ತವೆ. ಮನೆಯ ಗೋಡೆಯ ಅಂದವನ್ನು ಹಾಳುಗೆಡವುವ ಅಂಶಗಳನ್ನು ಆಯ್ಕೆಮಾಡಿಕೊಳ್ಳಬೇಡಿ.

ಒಂದೇ ಬಣ್ಣವನ್ನೇ ಸಂಪೂರ್ಣ ಮನೆಗೆ ಬಳಸಬೇಡಿ
ನಿಮ್ಮ ಮನೆಯ ಪ್ರತಿಯೊಂದು ಕೊಠಡಿಗೂ ಒಂದೇ ಬಣ್ಣವನ್ನು ಬಳಸುವುದು ನಿಜಕ್ಕೂ ನೋಟವನ್ನು ಹಾಳುಗೆಡವಬಹುದು. ಮನೆಯ ಅಡುಗೆ ಕೋಣೆ, ಮಲಗುವ ಕೋಣೆ, ಅಧ್ಯಯನ ಕೊಠಡಿ, ಮಕ್ಕಳ ಕೊಠಡಿ, ನಡುಮನೆ ಹೀಗೆ ನೋಡುಗರನ್ನು ಆಕರ್ಷಿಸುವ ಬಣ್ಣವನ್ನು ನಿಮ್ಮ ಮನೆಯ ಗೋಡೆಗೆ ಮಾಡಿ.

English summary

Things to remember while you paint your home

With several new types of colours, textures and patterns available in home paints, we indeed get quite ambitious about getting our homes painted. Other than the normal wrapping your furniture to protect them from dust and water-proofing the walls before the paint, these three simple things will help your newly-painted home look fabulous.
Story first published: Friday, March 18, 2016, 20:23 [IST]
X
Desktop Bottom Promotion