ಈ ದೀಪಾವಳಿಗೆ ದೀಪಗಳನ್ನು ನೀವೇ ತಯಾರಿಸಿ ಹಬ್ಬ ಆಚರಿಸಿ

By: Jaya subramanya
Subscribe to Boldsky

ದೀಪಾವಳಿ ಹಬ್ಬಕ್ಕೆ ಮನೆಮಂದಿಯೆಲ್ಲಾ ಸಂಭ್ರಮದಿಂದ ಆಚರಿಸುತ್ತಾರೆ. ದೀಪಗಳ ಹಬ್ಬದಲ್ಲಿ ದೀಪಗಳು ಹೆಚ್ಚು ಪ್ರಾಮುಖ್ಯವಾದುದು. ಆದ್ದರಿಂದಲೇ ಮಣ್ಣಿನ ದೀಪಗಳನ್ನು ಮನೆಯ ಸುತ್ತಲೂ ಹಚ್ಚಿ ಬೆಳಕಿನ ಹಬ್ಬವನ್ನು ಸ್ವಾಗತಿಸುತ್ತಾರೆ. ಮಣ್ಣಿನ ದೀಪಗಳು ಸಂಪ್ರದಾಯಬದ್ಧವಾಗಿರುವುದರಿಂದ ಇದಕ್ಕೆ ಹೆಚ್ಚು ಪ್ರಾಶಸ್ತ್ಯ. 

Diyas
 

ಇತ್ತೀಚಿನ ದಿನಗಳಲ್ಲಿ ಗೂಡು ದೀಪ, ವಿದ್ಯುತ್ ದೀಪಗಳು ಇವುಗಳ ಸ್ಥಾನವನ್ನು ಪಡೆದುಕೊಂಡು ಇನ್ನಷ್ಟು ವಿಜೃಂಭಣೆಯಿಂದ ಹಬ್ಬವನ್ನು ಆಚರಣೆ ಮಾಡಲು ಸಹಾಯಕವಾಗಿವೆ. ಆದರೆ ಇಂದಿನ ಲೇಖನದಲ್ಲಿ ದೀಪಗಳ ತಯಾರಿಯನ್ನು ನೀವೇ ಸಿದ್ಧಪಡಿಸಿ ಈ ದೀಪಾವಳಿಯನ್ನು ಇನ್ನಷ್ಟು ನೆನಪಿನಲ್ಲುಳಿಯುವಂತೆ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.   ಈ ಹಣತೆಗಳ ಚೆಲುವನ್ನು ಒಮ್ಮೆ ನೋಡಿರಣ್ಣಾ...   

Diyas
 

ಫ್ಲೋರ್ ದೀಪಗಳು
ಹಿಟ್ಟನ್ನು ನಾದಿ ನೀವು ದೀಪಗಳನ್ನು ತಯಾರಿಸಬಹುದಾಗಿದೆ. ನಂತರ ಇವುಗಳನ್ನು ಕಾಯಿಸಿ ಇದಕ್ಕೆ ಗಾಢವಾದ ಕೆಂಪು, ಹಳದಿ ಮತ್ತು ಹಸಿರು ಬಣ್ಣವನ್ನು ಹಚ್ಚಿ ತದನಂತರ ಚಿಕ್ಕ ಚಿಕ್ಕ ಮಣಿ ಮತ್ತು ಕನ್ನಡಿಗಳ ಅಲಂಕಾರವನ್ನು ಮಾಡಬಹುದಾಗಿದೆ.  

Diyas
 

ಮಣ್ಣಿನ ಹಣತೆಗಳು
ಮಣ್ಣನ್ನು ಬಳಸಿಕೊಂಡು ಇದರಿಂದ ದೀಪಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಇದಕ್ಕೆ ಯಾವುದೇ ಆಕಾರವನ್ನು ನೀಡಿ. ಚಾಕುವನ್ನು ಬಳಸಿ ಇದರ ಮೇಲೆ ವಿನ್ಯಾಸವನ್ನು ಚಿತ್ರಿಸಬಹುದು. ಸಣ್ಣ ಸಣ್ಣ ತೂತುಗಳನ್ನು ರಚಿಸಬಹುದು ಇದರಿಂದ ಅವುಗಳು ಇನ್ನಷ್ಟು ಪ್ರಕಾಶಮಾನವಾಗಿ ಉರಿಯುತ್ತದೆ. ಚೆನ್ನಾಗಿ ಒಣಗಲು ಬಿಡಿ.

Diyas
 

ಸಿಡಿ ದೀಪಗಳು
ಹಳೆಯ ಸಿಡಿಗಳನ್ನು ಬಳಸಿಕೊಂಡು ಅದರಿಂದ ದೀಪವನ್ನು ಸಿದ್ಧಮಾಡಬಹುದಾಗಿದೆ. ಸಿಡಿಗಳ ಮಧ್ಯಭಾಗದಲ್ಲಿ ಟಿ ಲೈಟ್‎ಗಳನ್ನು ಇನ್‎ಸ್ಟಾಲ್ ಮಾಡಿಕೊಳ್ಳಿ. ತದನಂತರ ಸಿಡಿಗಳನ್ನು ಬೀಡ್ಸ್, ಸೀಕ್ವನ್ಸ್, ಕುಂದನ್ ಬಳಸಿ ಸಿಂಗರಿಸಿ. ಸಿಲ್ವರ್, ಗೋಲ್ಡನ್ ಥ್ರೆಡ್ಸ್ ಮತ್ತು ಬ್ರೈಟ್ ಕಲರ್‎ಗಳನ್ನು ಬಳಸಿಕೊಳ್ಳಿ. ನಿಮ್ಮ ಪೂಜೆಯ ಕೊಠಡಿಯಲ್ಲಿ ಇವುಗಳನ್ನು ಸಿದ್ಧಪಡಿಸಿ. ನಂತರ ರಂಗೋಲಿಯೊಂದಿಗೆ ಸಿಂಗರಿಸಿ.  ದೀಪಗಳ ಹಬ್ಬ ದೀಪಾವಳಿಯಲ್ಲಿ ದೀಪಗಳಿಗೇಕೆ ಹೆಚ್ಚು ಪ್ರಾಶಸ್ತ್ಯ  
 

Diyas

ಪೇಪರ್ ಹಣತೆಗಳು
ನೀವು ಪೇಪರ್ ಹಣತೆಗಳನ್ನು ಕ್ರಿಯಾತ್ಮಕವಾಗಿ ರಚಿಸಿಕೊಳ್ಳಬಹುದಾಗಿದೆ. ಬಣ್ಣದ ಕಾಗದಗಳಿಂದ ತಾವರೆಗಳನ್ನು ತಯಾರಿಸಿ ಇದರೊಳಗೆ ಸಣ್ಣ ಟಿ ಲೈಟ್ ಕ್ಯಾಂಡಲ್ ಅನ್ನು ಇರಿಸಿ. ಕತ್ತಲೆ ಕೊಠಡಿಯಲ್ಲಿ ಈ ದೀಪಗಳ ಝಲಕ್ ಅನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

Diyas
 

ಫ್ಲೋಟಿಂಗ್ ಹಣತೆಗಳು
ರಿನ್‎ಸ್ಟೋನ್ಸ್ ಮತ್ತು ಫೋಮ್ ಶೀಟ್‎ನಿಂದ ಫ್ಲೋಟಿಂಗ್ ದೀಪಗಳನ್ನು ಮಾಡಬಹುದಾಗಿದೆ. ಅಂಟಿನ ಸಹಾಯದಿಂದ ಟಿ ಲೈಟ್ ಕ್ಯಾಂಡಲ್ ಅನ್ನು ದೀಪಗಳ ಮಧ್ಯಭಾಗದಲ್ಲಿ ಇರಿಸಿ. ಇದಕ್ಕೆ ಸಿಲ್ವರ್ ಮತ್ತು ಗೋಲ್ಡನ್ ಬೀಡ್ಸ್ ಬಳಸಿ ಇನ್ನಷ್ಟು ಸುಂದರಗೊಳಿಸಬಹುದಾಗಿದೆ.

English summary

How to Prepare Diyas At Your Home for Diwali

Diwali is one of the festivals that kids cherish the most. If you engage them in making diyas, they will love to help you with uplifted spirit. You will be surprised to see their creativities too. How to make homemade diyas for Diwali? You will get ideas about several types of handmade diyas, which you can decorate in your house wonderfully. To make your Diwali exclusive this year and receive applauds from your guests, try handmade diyas. Read on to know more about homemade diyas:
Please Wait while comments are loading...
Subscribe Newsletter