ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸುವ ಉದ್ಯಾನದ ಅಲಂಕಾರ ಟಿಪ್ಸ್

By: Jaya subramanya
Subscribe to Boldsky

ದೀಪಗಳ ಹಬ್ಬ ದೀಪಾವಳಿ ಸಂಭ್ರಮವನ್ನು ನಮ್ಮ ಮನೆ ಮನದಲ್ಲಿ ಪಸರಿಸುತ್ತದೆ. ಅಜ್ಞಾನವೆಂಬ ಅಂಧಕಾರವನ್ನು ಜ್ಞಾನದ ಬೆಳಕಿನಿಂದ ದೂರಾಗಿಸುವ ಹಬ್ಬವಾಗಿ ದೀಪಾವಳಿ ದೇಶದೆಲ್ಲೆಡೆ ಆಚರಿಸಲ್ಪಡುತ್ತದೆ. ಮಣ್ಣಿನ ಹಣತೆಗಳನ್ನು ಹಚ್ಚಿಟ್ಟು ದೀಪಾವಳಿಯನ್ನು ಆಚರಿಸುವುದು ವಾಡಿಕೆ. ಆದರೆ ಇತ್ತೀಚೆಗೆ ಆಧುನೀಕತೆಯ ಪರಿಣಾಮವೆಂಬಂತೆ ಅತ್ಯಾಧುನಿಕ ಮಾದರಿಯ ನವೀನ ವಿನ್ಯಾಸವುಳ್ಳ ಗೂಡುದೀಪಗಳನ್ನು ಹಬ್ಬದ ಸಂಭ್ರಮದಲ್ಲಿ ಬಳಸುತ್ತಾರೆ.   ಈ ದೀಪಾವಳಿಗೆ 8 ಸೂಪರ್ ರಂಗೋಲಿ ಐಡಿಯಾ

ಮನೆಗೆ ಮಾತ್ರವಲ್ಲದೆ ಉದ್ಯಾನವನಕ್ಕೂ ದೀಪಗಳ ಅಲಂಕಾರವನ್ನು ಮಾಡುವ ರೂಢಿ ಈಗ ಜನರಲ್ಲಿ ಮೂಡಿದೆ. ಕಡಿಮೆ ಖರ್ಚಿನಲ್ಲಿ ಈ ದೀಪಗಳನ್ನು ಬಳಸಿಕೊಂಡು ದೀಪಾವಳಿಯನ್ನು ಇನ್ನಷ್ಟು ಸಂಭ್ರಮದಿಂದ ನಮಗೆ ಆಚರಿಸಬಹುದಾಗಿದೆ. ಹಾಗಿದ್ದರೆ ನಿಮ್ಮ ಮನೆಯೊಂದಿಗೆ ಉದ್ಯಾನವನ್ನು ಅಲಂಕರಿಸುವ ದೀಪಗಳ ಬಗ್ಗೆ ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿದ್ದೇವೆ.

Diwali lights
 

ರೋಪ್ ಲೈಟ್ಸ್‎
ಹಗ್ಗದ ಮಾದರಿಯಲ್ಲಿ ಸಣ್ಣ ಸಣ್ಣ ಬಲ್ಬ್‎ಗಳನ್ನು ಇದು ಹೊಂದಿದೆ. ಉದ್ಯಾನವನಕ್ಕೆ ಇಂತಹ ಮಾದರಿಯ ದೀಪಗಳನ್ನು ಬಳಸುವುದು ಉತ್ತಮ ಉಪಾಯವಾಗಿದೆ. ಕೆಂಪು, ಹಳದಿ, ಹಸಿರು ಮತ್ತು ನೇರಳೆ ಬಣ್ಣಗಳಲ್ಲಿ ವಿಧ ವಿಧ ಮಾದರಿಯಲ್ಲಿ ಈ ದೀಪಗಳನ್ನು ನಿಮಗೆ ಖರೀದಿಸಿಕೊಳ್ಳಬಹುದಾಗಿದೆ. ಅಂತೆಯೇ ಬಹುವಿಧಗಳ ಬಣ್ಣದ ಬಲ್ಬ್‎ಗಳನ್ನು ಬಳಸಿಕೊಂಡು ಉದ್ಯಾನವನ್ನು ನಿಮಗೆ ಅಲಂಕರಿಸಬಹುದಾಗಿದೆ. ಮರದ ಕಾಂಡವನ್ನು ಅಥವಾ ಕೊಂಬೆಗಳನ್ನು ರೋಪ್ ಲೈಟ್ ಬಳಸಿ ಅಲಂಕರಿಸಬಹುದಾಗಿದೆ. ಗಿಡದ ಹಂದರಗಳನ್ನು ಇನ್ನಷ್ಟು ಹೊಳೆಯುವಂತೆ ಮಾಡಲು ಈ ಬಲ್ಬ್‎ಗಳ ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ.

ಫೇರಿ ಲೈಟ್ಸ್
ಈ ಲೈಟ್‎ಗಳನ್ನು ಬಳಸಿಕೊಂಡು ಇನ್ನಷ್ಟು ಮೆರುಗನ್ನಾಗಿ ಉದ್ಯಾನವನ್ನು ಅಲಂಕರಿಸಬಹುದಾಗಿದೆ. ಇದು ಸಣ್ಣ ಗಾತ್ರದಲ್ಲಿದ್ದು ಸಣ್ಣ ಬಲ್ಬ್‎ಗಳನ್ನು ಒಳಗೊಂಡಿರುತ್ತವೆ. ನಿಮ್ಮ ಉದ್ಯಾನವನ್ನು ಅಲಂಕರಿಸಲು ಇದು ಅತ್ಯಂತ ಸೂಕ್ತವಾದುದು. ಈ ದೀಪಾವಳಿಗೆ ಫೇರಿ ಲೈಟ್‎ಗಳನ್ನು ಬಳಸಿಕೊಂಡು ಇನ್ನಷ್ಟು ಸ್ಟೈಲಿಶ್ ನೋಟವನ್ನು ಉದ್ಯಾನವನಕ್ಕೆ ನಿಮಗೆ ನೀಡಬಹುದಾಗಿದೆ. ಮರದ ಕೊಂಬೆಗಳಿಗೆ ಈ ಲೈಟ್‎ಗಳನ್ನು ನೇತಾಡಿಸಿ ಅಂತೆಯೇ ಸಣ್ಣ ಗಿಡ ಮತ್ತು ಪೊದೆಗೂ ಇದನ್ನು ಬಳಸಿಕೊಳ್ಳಬಹುದಾಗಿದೆ. ಫೇರಿ ಲೈಟ್‎ಗಳನ್ನು ಸಾಲಾಗಿ ನೆಲದಲ್ಲಿ ನಿಮಗೆ ಜೋಡಿಸಲೂಬಹುದಾಗಿದೆ. ಅತಿಥಿಗಳು ಬರುವ ದಾರಿಯಲ್ಲಿ ಈ ಲೈಟ್‎ಗಳನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

ಲಾಟೀನ್‎ಗಳು
ಈ ದೀಪಾವಳಿಗೆ ಸಾಂಪ್ರದಾಯ ಲೋಕವನ್ನು ನೀಡಲು ಈ ಲಾಟೀನ್‎ಗಳು ಸಹಕಾರಿಯಾಗಿದೆ. ಬೇರೆ ಬೇರೆ ಗಾತ್ರಗಳು ಮತ್ತು ಆಕಾರಗಳಲ್ಲಿ ಈ ದೀಪಗಳು ಲಭ್ಯ. ಪೇಪರ್ ಲ್ಯಾಟೀನ್ ಅಥವಾ ಹ್ಯಾಂಗಿಂಗ್ ಗ್ಲಾಸ್ ಲ್ಯಾಟೀನ್ ಬಳಸಿ ನೀವು ಉದ್ಯಾನವನ್ನು ಅಲಂಕರಿಸಬಹುದಾಗಿದೆ. ನೀವು ಕ್ಯಾಂಡಲ್ ಇಲ್ಲವೇ ಇಲೆಕ್ಟ್ರಿಕ್ ಲ್ಯಾಟೀನ್‎ಗಳನ್ನು ಬಳಸಿ ಉದ್ಯಾನವನ್ನು ಅಲಂಕರಿಸಬಹುದಾಗಿದೆ. ಕ್ಯಾಂಡಲ್‎ಗಳಿಗಿಂತಲೂ ಇಲೆಕ್ಟ್ರಿಕ್ ಲ್ಯಾಟೀನ್‎ಗಳನ್ನು ಬಳಸಿ. ನೀವು ತೂಗುಹಾಕುವುದು ಇಲ್ಲವೇ ಲ್ಯಾಟೀನ್ ಸ್ಟ್ಯಾಂಡ್‎ಗಳನ್ನು ಬಳಸಿಕೊಳ್ಳಬಹುದಾಗಿದೆ. ದೀಪಾವಳಿಗೆ ಲಕ್ಷ್ಮಿಯನ್ನು ಸ್ವಾಗತಿಸಲು ಮನೆ ಅಲಂಕಾರ     

lights
 

ಹಣತೆ
ದೀಪಗಳ ಹಬ್ಬ ದೀಪಾವಳಿಯಲ್ಲಿ ಹಣತೆಗಳನ್ನು ಪ್ರತೀ ಮನೆಯಲ್ಲೂ ಬಳಸಿಕೊಳ್ಳುತ್ತಾರೆ. ಉದ್ಯಾನವನ್ನು ಅಲಂಕರಿಸಲು ನೀವು ಬೇರೆ ಬೇರೆ ಗಾತ್ರ ಮತ್ತು ಆಕಾರಗಳಲ್ಲಿರುವ ಹಣತೆಗಳನ್ನು ಬಳಸಿಕೊಳ್ಳಬಹುದಾಗಿದೆ. ಹಣತೆ ಆಕಾರದಲ್ಲಿರುವ ಸಾಮಾನ್ಯ ಹಣತೆಗಳು ಅಥವಾ ಇಲೆಕ್ಟ್ರಿಕ್ ಲೈಟ್‎ಗಳನ್ನು ಬಳಸಿಕೊಳ್ಳಬಹುದಾಗಿದೆ. ಇದು ಸಂಪ್ರದಾಯಬದ್ಧವಾಗಿದ್ದು ನಿಮ್ಮ ಉದ್ಯಾನವನಕ್ಕೆ ಮೆರುಗನ್ನು ನೀಡುತ್ತವೆ.ಈ ದೀಪಾವಳಿಗಾಗಿ ಇಂತಹ ಮಾದರಿಯ ದೀಪಗಳನ್ನು ಬಳಸಿಕೊಂಡು ನಿಮ್ಮ ಉದ್ಯಾನವನ್ನು ಸುಂದರಗೊಳಿಸಿ.

Story first published: Monday, October 24, 2016, 23:42 [IST]
English summary

Diwali Decoration: Decorating Garden With Lights....

Diwali is a festival of lights and this Diwali, you can decorate your garden with different types of lights to add glow to the greenery. Light decorations in the gardens give a different look at the night while defining the beauty of the garden plants. Here are the best types of lights for garden decorations this Diwali. Take a look.
Please Wait while comments are loading...
Subscribe Newsletter