ದಸರಾ ವಿಶೇಷ-ಗೊಂಬೆ ಹಬ್ಬದ ಮೆರುಗನ್ನು ಕಣ್ತುಂಬಿಕೊಳ್ಳಿ....

By: Jaya subramanya
Subscribe to Boldsky

ಅಕ್ಟೋಬರ್ ಮಾಸ ಬಂದಿತೆಂದರೆ ಸಾಕು ಹಬ್ಬಗಳ ಸಾಲೇ ಆರಂಭವಾಗುತ್ತದೆ. ದೀಪಾವಳಿಗೂ ಮುನ್ನವೇ ದಸರಾ ಹಬ್ಬದ ಸಂಭ್ರಮ ದೇಶಾದ್ಯಂತ ಸಂಭ್ರಮದಿಂದಲೇ ಆರಂಭಗೊಳ್ಳುತ್ತಿದ್ದು ಒಂಭತ್ತು ದಿನಗಳ ಕಾಲ ದುರ್ಗೆಯ ಆರಾಧನೆಯೇ ಇದರಲ್ಲಿ ಮುಖ್ಯವಾಗಿರುತ್ತದೆ. ಕೆಟ್ಟದ್ದರ ಮೇಲೆ ಒಳ್ಳೆಯದ್ದರ ವಿಜಯ ಎಂಬುದರ ಸಂಕೇತವಾಗಿ ವಿಜಯ ದಶಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ದೇಶದಲ್ಲೇ ಪ್ರಮುಖ ಹಬ್ಬವಾಗಿ ನವರಾತ್ರಿಯನ್ನು ಆಚರಿಸಲಾಗುತ್ತದೆ. ನಾಡ ಹಬ್ಬ ದಸರಾಕ್ಕೆ ಗೊಂಬೆಗಳ ತೇರು....   

Dasara Doll
 

ಕರ್ನಾಟಕದಲ್ಲಿ ದಸರಾ ಸಂಭ್ರಮಕ್ಕೆ ಹೆಚ್ಚಿನ ಮೆರುಗನ್ನು ನೀಡುವುದು ಗೊಂಬೆ ಪ್ರದರ್ಶನವಾಗಿದೆ. ಆಚರಣೆಗೆ ಅನುಸಾರವಾಗಿ ಗೊಂಬೆಗಳನ್ನು ಮನೆಗಳಲ್ಲಿ ವಿದ್ಯುಕ್ತವಾಗಿ ಕೂರಿಸುತ್ತಾರೆ. ರಾಜ, ರಾಣಿ, ದೇವತೆಗಳು, ಪ್ರಾಣಿಗಳು, ಪಕ್ಷಿಗಳು ಹೀಗೆ ಪ್ರಕೃತಿಯ ಒಂದೊಂದು ವಿಸ್ಮಯವನ್ನು ಗೊಂಬೆಯ ರೂಪದಲ್ಲಿ ಸಾಲಾಗಿ ಜೋಡಿಸುತ್ತಾರೆ. ಇಂದಿನ ಲೇಖನದಲ್ಲಿ ಮನೆಯಲ್ಲಿ ಜೋಡಿಸುವ ಗೊಂಬೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ.....

ಹಬ್ಬದ ಗೊಂಬೆಗಳು
ಸಾಂಪ್ರದಾಯಿಕವಾಗಿ, ಹಬ್ಬದ ಗೊಂಬೆಗಳು ಅಥವಾ ದಸರಾ ಗೊಂಬೆಗಳನ್ನು ಮರದಿಂದ ತಯಾರಿಸಲಾಗುತ್ತದೆ ಅಂತೆಯೇ ಅವುಗಳನ್ನು ಬಣ್ಣದ ಕಾಗದಗಳಿಂದ ಮತ್ತು ರೇಷ್ಮೆಯಿಂದ ಅಲಂಕರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ರಾಜ್ಯ ಬಣ್ಣಗಳಿಂದ ಕಂಗೊಳಿಸುವಂತೆ ಕಾಣುತ್ತದೆ ಮತ್ತು ಆಕರ್ಷಕ ಮಾದರಿಯಲ್ಲಿ ಸಿಂಗರಿಸಲಾದ ದೇವತೆಗಳ ಗೊಂಬೆಗಳನ್ನು ನಿಮಗೆ ಕಾಣಬಹುದಾಗಿದೆ.

ಪಟ್ಟದ ಬೊಂಬೆ
ಕರ್ನಾಟಕದಲ್ಲಿ ಹಬ್ಬದ ಸಮಯದಲ್ಲಿ ಮುಖ್ಯವಾಗಿ ಈ ಬೊಂಬೆಯನ್ನು ಇರಿಸಲಾಗುತ್ತದೆ. ಪಟ್ಟದ ಬೊಂಬೆ ಎಂದರೆ ಜೋಡಿ ಬೊಂಬೆಗಳು. ಗಂಡ ಹೆಂಡತಿಯ ಪ್ರತೀಕವಾಗಿ ಇವನ್ನು ಇರಿಸಲಾಗುತ್ತದೆ. ಹೊಸ ವಧುವು ತನ್ನ ತವರು ಮನೆಯಿಂದ ಪಟ್ಟದ ಬೊಂಬೆಯನ್ನು ತರುತ್ತಾಳೆ.

Dasara Doll
 

ಸಿದ್ಧತೆ ಹೇಗಿರುತ್ತದೆ
ತಮ್ಮ ಆಚರಣೆ ಮತ್ತು ಸಂಪ್ರದಾಯಕ್ಕೆ ಅನುಸಾರವಾಗಿ ದಸರಾ ಹಬ್ಬದಂದು ಗೊಂಬೆಗಳನ್ನು ಇರಿಸಲಾಗುತ್ತದೆ. ಮೆಟ್ಟಿಲುಗಳು ಮತ್ತು ಶ್ರೇಣಿ ಮಾದರಿಯಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ. ಒಂಬತ್ತು ಸಾಲು ಅಥವಾ ಶ್ರೇಣಿಗಳನ್ನು ನಿರ್ಮಿಸಿ ಅಲ್ಲಿ ಗೊಂಬೆಗಳನ್ನು ಕೂರಿಸುತ್ತಾರೆ.

ಒಂಬತ್ತು ಮೆಟ್ಟಿಲು ಅಥವಾ ಶ್ರೇಣಿ
ದಸರಾ ಆಚರಣೆಯಲ್ಲಿ ಗೊಂಬೆಗಳನ್ನು ಕೂರಿಸಲು ಒಂಭತ್ತು ಶ್ರೇಣಿ ಅಥವಾ ಮೆಟ್ಟಿಲುಗಳನ್ನು ನಿರ್ಮಿಸುತ್ತಾರೆ. ಮೊದಲ ಮೂರು ಮೆಟ್ಟಿಲುಗಳನ್ನು ದೇವತೆಗಳಿಗಾಗಿ ಮೀಸಲಾಗಿರಿಸಲಾಗಿರುತ್ತದೆ. ಅಂತೆಯೇ 4 ರಿಂದ 6 ಸಾಲುಗಳನ್ನು ರಾಜ, ರಾಣಿ, ಅರೆ ದೇವತೆ, ಸಾಧು ಸಂತರಿಗಾಗಿ ಮೀಸಲಾಗಿರಿಸಲಾಗುತ್ತದೆ. ಏಳನೆಯ ಮೆಟ್ಟಿಲನ್ನು ಹಿಂದೂ ಸಂಪ್ರದಾಯ ಮತ್ತು ಆಚರಣೆಗಾಗಿ ಇರಿಸಲಾಗಿರುತ್ತದೆ. ಎಂಟನೆಯ ಮೆಟ್ಟಿಲನ್ನು ಮನೆಗಳು, ಅಂಗಡಿಗಳು, ಪಾರ್ಕ್ ಮತ್ತು ಇತರ ಅಲಂಕಾರಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಒಂಭತ್ತನೆಯ ಹಂತವು ಜೀವಿಸಿರುವ ಅಂಶಗಳಿಗಾಗಿ ಇರಿಸಲಾಗಿರುತ್ತದೆ.

Dasara Doll
 

ಥೀಮ್
ದಸರಾ ಸಂಭ್ರಮದಲ್ಲಿ ಗೊಂಬೆಗಳನ್ನು ಇರಿಸುವಾಗ ಜನರು ಹಲವಾರು ಆಚರಣೆಗಳನ್ನು ಪಾಲಿಸುತ್ತಾರೆ. ಕೆಲವಾರು ಜನರು ಹಳೆಯ ಸಂಪ್ರದಾಯವನ್ನು ಪಾಲಿಸಿದರೆ ಇನ್ನು ಹಲವರು ಹೆಚ್ಚಿನ ಗೊಂಬೆಗಳನ್ನು ಬಳಸಿಕೊಳ್ಳುತ್ತಾರೆ. ರಾಮಾಯಣ ಮತ್ತು ಮಹಾಭಾರತದ ಗೊಂಬೆಗಳನ್ನು ಬಳಸಿಕೊಳ್ಳುತ್ತಾರೆ. ಮೈಸೂರಿನ ಇತಿಹಾಸ, ಭೂಮಿಯನ್ನು ಉಳಿಸಿ, ನೀರು ಉಳಿಸಿ ಅಂತೆಯೇ ವಾಯು ಮಾಲಿನ್ಯ ನಿಲ್ಲಿಸಿ ಮೊದಲಾದ ಥೀಮ್‌ಗಳನ್ನು ಬಳಸಿಕೊಂಡು ಜನರು ಗೊಂಬೆಗಳನ್ನು ಕೂರಿಸುತ್ತಾರೆ.

Dasara Doll
 

ಸಂಗ್ರಹಣೆಗೆ ಹೆಚ್ಚಿನ ಗೊಂಬೆಗಳನ್ನು ಸೇರಿಸಿಕೊಳ್ಳಿ
ಪ್ರತೀ ವರ್ಷವೂ ಸಂಗ್ರಹಣೆಗೆ ಹೊಸ ಹೊಸ ಗೊಂಬೆಗಳನ್ನು ಸೇರಿಸಲಾಗುತ್ತದೆ. ಕುಟುಂಬದ ನಂತರದ ತಲೆಮಾರಿಗೆ ಗೊಂಬೆಗಳ ರವಾನೆಯಾಗುವುದು ವಾಡಿಕೆ. ಕರ್ನಾಟಕದಲ್ಲಿಯೇ, ನೂರು ವರ್ಷಗಳಿಗಿಂತಲೂ ಹಳೆಯದಾಗಿರುವ ಗೊಂಬೆಗಳನ್ನು ಹೊಂದಿರುವ ಕುಟುಂಬಗಳಿವೆ.      ನವರಾತ್ರಿ ವಿಶೇಷ: ನವದುರ್ಗೆಯರಿಗೆ 'ನವ ನೈವೇದ್ಯ'

English summary

Different Ways Dasara Doll Festival Is Celebrated

Navaratri, the festival for worshipping goddess Durga, culminates on the tenth day, Dasara. Usually, this festival falls in the month of September-October and is celebrated with high devotion across India. Dussehra is considered as the success of goodness over evil. As India has different states with varied culture and tradition, the festival is also celebrated in different ways.
Please Wait while comments are loading...
Subscribe Newsletter