For Quick Alerts
ALLOW NOTIFICATIONS  
For Daily Alerts

ಕಸದಿಂದ ರಸ ತಯಾರು ಮಾಡಲು ಒಂದಿಷ್ಟು ಸರಳ ಟಿಪ್ಸ್

By Jaya Subramanya
|

ಮನೆಯಲ್ಲಿರುವ ಹಳೆಯ ಸಾಮಾಗ್ರಿಗಳಿಂದ ಮನೆ ಕೆಟ್ಟದಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಕೆಲಸ ಕೂಡ ಹೆಚ್ಚು. ಆದರೆ ಈ ವಸ್ತುಗಳು ನಿಮ್ಮೊಂದಿಗೆ ಒಂದಿಲ್ಲೊಂದು ನೆನಪುಗಳನ್ನು ಬಂಧಿಸಿದ್ದರೆ ಅವುಗಳನ್ನು ಹೊರಗೆ ಎಸೆಯಲು ಮನಸ್ಸು ಬರುವುದು ಇಲ್ಲ. ಹಾಗಿದ್ದರೆ ಅವುಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸಿ ಮನೆಯ ಅಲಂಕಾರಕ್ಕಾಗಿ ಬಳಸಬಹುದು ಅಲ್ಲವೇ?

ಹೌದು ನೀವು ನಿರುಪಯೋಗಿ ಎಂದು ಭಾವಿಸಿರುವ ಹಲವು ವಸ್ತುಗಳನ್ನು ಬಳಸಿಕೊಂಡು ಮನೆಯ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಬನ್ನಿ ಇವುಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳೋಣ....

Bottles

ಹಳೆಯ ಬಾಟಲಿಗಳು
ನಿಮ್ಮ ಸ್ಟೋರ್ ರೋಮ್‌ನಲ್ಲಿ ಹಳೆಯ ಬಾಟಲಿಗಳು ಶೇಖರಣೆಗೊಂಡಿವೆ ಎಂದಾದಲ್ಲಿ ಅವುಗಳಿಂದ ಅದ್ಭುತವಾದುದನ್ನು ನಿಮಗೆ ರಚಿಸಿಕೊಳ್ಳಬಹುದಾಗಿದೆ. ಹಳೆಯ ಬೀರ್, ವೈನ್ ಅಥವಾ ಸ್ಪಿರಿಟ್ ಬಾಟಲಿಗಳನ್ನು ಸಂಗ್ರಹಿಸಿಕೊಂಡು ಸುಂದರವಾಗಿ ಪೇಂಟ್ ಮಾಡಿ. ಸ್ಟ್ರಿಂಗ್‌ನಿಂದ ಅವುಗಳನ್ನು ಸುತ್ತಿ ಅಲಂಕಾರಿಕ ವಸ್ತುಗಳು ಅಥವಾ ಕ್ಯಾಂಡಲ್ ಹೋಲ್ಡರ್ ಅನ್ನಾಗಿ ರೂಪಿಸಬಹುದಾಗಿದೆ.

ಹಳೆಯ ಸಿಡಿಗಳು
ಹಳೆಯ ಸಿಡಿಗಳಿಂದ ಕೂಡ ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಅವುಗಳನ್ನು ಸಂಗ್ರಹಿಸಿಕೊಳ್ಳಿ ಕೋಸ್ಟರ್‌ಗಳು, ಆಕರ್ಷಕ ಗಾಜಿನ ಫ್ರೇಮ್‌ಗಳು ಮೊದಲಾದವುಗಳನ್ನು ತಯಾರಿಸಿಕೊಳ್ಳಬಹುದಾಗಿದೆ.

ಹಳೆಯ ಬೇಕಿಂಗ್ ಶೀಟ್ಸ್
ಹೊಸ ಬೇಕಿಂಗ್ ಶೀಟ್ ಅನ್ನು ಖರೀದಿಸಿದ್ದೀರಾ? ಹಾಗಿದ್ದರೆ ಹಳೆಯದನ್ನು ಎಸೆಯುವ ಮುನ್ನ ಅದರಲ್ಲಿ ಇನ್ನೊಂದಷ್ಟು ಕಲಾತ್ಮಕತೆಯನ್ನು ರೂಪಿಸೋಣ. ನೋಟ್ ಸ್ಟಿಕ್ ಮಾಡಲು, ಅಲಂಕಾರಿಕ ಸರ್ವಿಂಗ್ ಟೇಬಲ್, ಆಭರಣ ಮತ್ತು ಅಲಂಕಾರಿಕ ಸಾಮಾಗ್ರಿಗಳ ಹೋಲ್ಡರ್‌ನಂತೆ ಇರಿಸಿಕೊಳ್ಳಬಹುದಾಗಿದೆ.

ಹಳೆಯ ವೈನ್ ಕಾರ್ಕ್ಸ್
ಹಳೆಯ ವೈನ್ ಕಾರ್ಕ್ಸ್ ಅನ್ನು ಬಳಸಿಕೊಂಡು ಅದರಿಂದ ಕಲಾಕಾರಿಕ ವಸ್ತುಗಳನ್ನು ತಯಾರಿಸಿ. ಬಣ್ಣಗಳು, ಅಸಂಪೂರ್ಣವಾಗಿರುವ ಮರದ ಫ್ರೇಮ್, ವೈನ್ ಕಾರ್ಕ್ಸ್ ಅನ್ನು ತೆಗೆದುಕೊಳ್ಳಿ ಮತ್ತು ಬಿಸಿ ಗ್ಲ್ಯೂ ಗನ್ ಬಳಸಿ. ಫ್ರೇಮ್‌ಗೆ ಇಷ್ಟದ ಬಣ್ಣವನ್ನು ಬಳಸಿ ಪೇಂಟ್ ಮಾಡಿ ಇದನ್ನು ಒಣಗಲು ಬಿಡಿ. ಪ್ರತಿ ಕಾರ್ಕ್ ಅನ್ನು 1/4 ಇಂಚಿನಂತೆ ಕತ್ತರಿಸಿಕೊಂಡು ಬೇರೆ ಬೇರೆ ಬಣ್ಣಗಳಿಂದ ಪೇಂಟ್ ಮಾಡಿ ಮತ್ತು ಒಣಗಲು ಬಿಡಿ. ಅಂಟನ್ನು ಬಳಸಿಕೊಂಡು ಫ್ರೇಮ್ ಅಂಚುಗಳನ್ನು ಕಾರ್ಕ್ ಸ್ಲೈಸ್‌ಗಳಿಂದ ಕವರ್ ಮಾಡಿ. ನಿಮಗೆ ಬೇಕಾದ ಮಾದರಿಯಲ್ಲಿ ಸ್ಲೈಸ್‌ಗಳನ್ನು ಸ್ಟಿಕ್ ಮಾಡಿ

ಹಳೆಯ ಸೋಡಾ ಕ್ಯಾನ್ಸ್
ಹಳೆಯ ಸೋಡಾ ಕ್ಯಾನ್‌ಗಳನ್ನು ಒಗೆಯದಿರಿ. ಇದನ್ನು ಬಳಸಿಕೊಂಡು ನಿಮ್ಮ ಮಕ್ಕಳ ಮುಖದಲ್ಲಿ ಮಂದಹಾಸವನ್ನು ತರಬಹುದಾಗಿದೆ. ಪೆನ್ಸಿಲ್ ಅಥವಾ ಪೆನ್ ಹೋಲ್ಡರ್ ಇದರಲ್ಲಿ ರೂಪುಗೊಳ್ಳುತ್ತದೆ. ಮೊದಲಿಗೆ ಕ್ಯಾನ್ ಅನ್ನು ಚೆನ್ನಾಗಿ ತೊಳೆದುಕೊಳ್ಳಿ. ನಂತರ ಅದನ್ನು ಒಣಗಲು ಬಿಡಿ. ಕ್ಯಾನ್ ಓಪ್ನರ್ ಅನ್ನು ಬಳಸಿಕೊಂಡು ಕ್ಯಾನ್ ಮುಚ್ಚಳವನ್ನು ತೆಗೆಯಿರಿ ಅಥವಾ ಸೋಡಾ ಕ್ಯಾನ್‌ನ ಅರ್ಧಭಾಗವನ್ನು ಕತ್ತರಿಸಿ. ನಿಮಗೆ ಈಗ ದೊಡ್ಡ ಓಪನಿಂಗ್ ದೊರೆಯುತ್ತಿದ್ದಂತೆ, ನಿಮ್ಮ ಪೆನ್ ,ಪೆನ್ಸಿಲ್ ಅಥವಾ ಇತರ ಬರವಣಿಗೆ ಸಾಮಾಗ್ರಿಗಳನ್ನು ಇದರಲ್ಲಿ ಇರಿಸಬಹುದಾಗಿದೆ. ನಿಮ್ಮ ಇಷ್ಟದ ಸ್ಟಿಕ್ಕರ್‌ಗಳನ್ನು ಬಳಸಿಕೊಂಡು ಕ್ಯಾನ್ ಅನ್ನು ಅಲಂಕರಿಸಿಕೊಳ್ಳಬಹುದಾಗಿದೆ.

ಹಳೆಯ ಸುದ್ದಿಪತ್ರಿಕೆ
ಹಳೆಯ ಸುದ್ದಿಪತ್ರಿಕೆಯನ್ನು ತೆಗೆದುಕೊಂಡು ಬೇರೆಬೇರೆ ಗಾತ್ರ ವಿನ್ಯಾಸವುಳ್ಳ ಗಿಫ್ಟ್ ವ್ರಾಪರ್‌ಗಳನ್ನು ತಯಾರಿಸಿಕೊಳ್ಳಬಹುದಾಗಿದೆ. ಮಗುವಿಗೆ ಗಿಫ್ಟ್ ವ್ರಾಪರ್ ಬೇಕು ಎಂದಾದಲ್ಲಿ ಪತ್ರಿಕೆಯ ಕಾರ್ಟೂನ್ ಪುಟವನ್ನು ಆರಿಸಿಕೊಳ್ಳಿ, ನಿಮ್ಮ ಸ್ನೇಹಿತರು ಫ್ಯಾಶನ್ ಪ್ರಿಯರು ಎಂದಾದಲ್ಲಿ ಸುದ್ದಿಪತ್ರಿಕೆಯ ಫ್ಯಾಷನ್ ಪುಟವನ್ನು ಆರಿಸಿಕೊಳ್ಳಿ.

ಹಳೆಯ ಟಯರ್‌ಗಳು
ನಿಮ್ಮ ಕಾರಿನ ಹಳೆಯ ಟಯರ್‌ ಅನ್ನು ಬಳಸಿಕೊಂಡು ಸುಂದರವಾದ ಫ್ಲವರ್ ಪಾಟ್ ಅನ್ನು ಅದರಲ್ಲಿ ರಚಿಸಿ ನಿಮ್ಮ ಮನೆಯ ಗ್ಯಾರೇಜ್ ಅಥವಾ ಬಾಲ್ಕನಿಯಲ್ಲಿ ತೂಗು ಹಾಕಬಹುದಾಗಿದೆ. ಹಳೆಯ ಟವರ್‌ಗೆ ಪೇಂಟ್ ಮಾಡಿ. ಪೆಟುನಿಯಾ ಅಥವಾ ಬೆಗೊನಿಯಾಸ್ ಹೂವುಗಳನ್ನು ತೆಗೆದುಕೊಳ್ಳಿ ಟಯರ್‌ನೊಳಗೆ ಮಣ್ಣು ತುಂಬಿಸಿ ಅದರಲ್ಲಿ ನೆಡಿ. ನಂತರ ತೂಗು ಹಾಕಿ ಈ ಆಕರ್ಷಕ ಪಾಟ್ ಎಲ್ಲರನ್ನೂ ಆಕರ್ಷಿಸುವುದು

English summary

Crafts That You Can Make With Household Items

Following are a few creative, exciting and easy craft ideas which you can try for yourself or even inspire your kids to make some of these. These simple and innovative craft ideas will not only help you to recycle your household waste, but it will also impress the visitors visiting your home. So, get your creative caps on andhave a look at these items that you could recreate to bring out the artist in you.
Story first published: Tuesday, November 22, 2016, 19:37 [IST]
X
Desktop Bottom Promotion