For Quick Alerts
ALLOW NOTIFICATIONS  
For Daily Alerts

ಮನೆಯ ಅಂದ ಹೆಚ್ಚಿಸುವ ಪೀಠೋಪಕರಣಗಳ ಆಯ್ಕೆ ಹೀಗಿರಲಿ...

By Deepak
|

ಮನೆ ಎಂದರೆ ನಾಲ್ಕು ಗೋಡೆಗಳು, ಒಂದು ಹಾಲ್, ಒಂದು ಕೋಣೆ, ಅಡುಗೆಮನೆ, ಬಚ್ಚಲು ಮನೆ ಮತ್ತು ದೇವರು ಮನೆ ಇದ್ದರೆ ಮುಗಿಯಿತಾ? ಮನೆಯೆಂದ ಮೇಲೆ ಹಲವಾರು ಕೆಲಸ ಮಾಡಲು, ಹಲವಾರು ವಸ್ತುಗಳು ಬೇಕಾಗುತ್ತವೆ. ಅದರಲ್ಲಿ ಪೀಠೋಪಕರಣಗಳ ಪಾತ್ರ ದೊಡ್ಡದು. ಸುಮಾರು ಜನ ತಮ್ಮ ಮನೆಗೆ ಯಾರಾದರು ಬಂದರೆ ಕೂರಲು ಸರಿಯಾದ ಸೋಫಾ ಇಲ್ಲ ಎಂದು ತಮ್ಮ ಮನೆಗೆ ನೆಂಟರನ್ನು ಕರೆಯುವುದನ್ನೆ ಬಿಟ್ಟು ಬಿಟ್ಟಿರುತ್ತಾರೆ.

 Choosing The Right Furniture For Your Home

ಇಂತಹ ಪರಿಸ್ಥಿತಿ ಸುಮಾರು ಸಲ ಎಲ್ಲರ ಮನೆಯಲ್ಲೂ ನಡೆದಿರುತ್ತದೆ. ಪುಸ್ತಕಗಳು ಮನೆ ತುಂಬಾ ಇದ್ದರೂ, ಅದನ್ನು ಜೋಡಿಸಿಡಲು ಒಂದು ಲೈಬ್ರರಿ ರ‍್ಯಾಕ್ ಇರುವುದಿಲ್ಲ. ಪಾತ್ರೆಗಳನ್ನು ಜೋಡಿಸಲು ಕ್ಯಾಬಿನೆಟ್ ಇರುವುದಿಲ್ಲ. ಹಾಗೆಂದು ಪೀಠೋಪಕರಣಗಳನ್ನು ಹೀಗೆ ಹೋಗಿ ಹಾಗೆ ತೆಗೆದುಕೊಂಡು ಬರಲು ಆಗುವುದಿಲ್ಲ. ಅದಕ್ಕಾಗಿ ಸ್ವಲ್ಪ ಎಚ್ಚರಿಕೆ ಇರುವ ಅಗತ್ಯವಿರುತ್ತದೆ. ಇವುಗಳನ್ನು ಖರೀದಿಸಲು ಒಂದು ಪದ್ಧತಿ ಇದೆ. ಮನೆಯ ಹಳೆಯ ಪೀಠೋಪಕರಣಗಳಿಗೆ ಹೊಸ ಲುಕ್ ನೀಡಿ!

ಅದನ್ನು ಅನುಸರಿಸಿ ತೆಗೆದರೆ ನಿಮ್ಮ ಮನೆಗೆ ಸರಿಹೊಂದುವ ಪೀಠೋಪಕರಣ ದೊರೆಯುತ್ತದೆ. ಇಲ್ಲವೇ ನಿಮ್ಮ ಮನೆಯ ಮೂಲೆಯನ್ನು ತುಂಬುವ ಒಂದು ವಸ್ತುವಾಗಿ ಅದು ಪ್ರಯೋಜನಕ್ಕಿಲ್ಲದ ವಸ್ತುವಾಗುತ್ತದೆ. ಬನ್ನಿ ಪೀಠೋಪಕರಣಗಳನ್ನು ಖರೀದಿಸುವಾಗ ಯಾವ ಯಾವ ಅಂಶಗಳನ್ನು ನೆನಪಿನಲ್ಲಿಡಬೇಕೆಂಬ ವಿಚಾರವನ್ನು ನೋಡೋಣ.

ಕಲ್ಪನೆ ಬೇಡ
ಪೀಠೋಪಕರಣ ಹೀಗೆ ಇರಬೇಕು, ಹಾಗೆ ಇರಬೇಕು ಎಂಬ ಕಲ್ಪನೆ ಬೇಡ. ನಿಮಗೆ ಸಿಗುವುದರಲ್ಲಿಯೇ ಅತ್ಯುತ್ತಮವಾದುದನ್ನು ಪಡೆಯಿರಿ. ನಿಮಗೆ ಶಾಪಿಂಗ್ ಮಾಡಲು ಕಷ್ಟವಾದರೆ ಈಗ ಪೀಠೋಪಕರಣಗಳು ಆನ್‌ಲೈನಿನಲ್ಲಿ ದೊರೆಯುತ್ತದೆ, ಅಲ್ಲಿಯೇ ಖರೀದಿಸಿ. ನಿಮ್ಮ ಅಗತ್ಯವನ್ನು ಪರಿಗಣಿಸಿ ಅದಕ್ಕೆ ತಕ್ಕಂತಹ ಪೀಠೋಪಕರಣವನ್ನು ಕೊಂಡುಕೊಳ್ಳಿ.

ನಿರ್ಮಾಣವನ್ನು ಪರಿಗಣಿಸಿ
ನಿಮ್ಮ ಪೀಠೋಪಕರಣವನ್ನು ಕೊಳ್ಳುವಾಗ ಅಲ್ಯೂಮಿನಿಯಂಗಿಂತ ಬಾಳಿಕೆ ಬರುವ ಮರದ ಪೀಠೋಪಕರಣವನ್ನು ಬಳಸಿ. ಮರದ ಪೀಠೋಪಕರಣವು ದೀರ್ಘ ಕಾಲ ಬಾಳಿಕೆ ಬರುತ್ತದೆ ಮತ್ತು ನಿಮ್ಮ ಮನೆಗೆ ಇದು ಅಂದವನ್ನು ಸಹ ನೀಡುತ್ತದೆ. ನಿಮಗೆ ಬೇಕಾದಲ್ಲಿ ನಯಗೊಳಿಸಿದ ಪೀಠೋಪಕರಣವನ್ನು ಕೊಂಡುಕೊಳ್ಳಬಹುದು. ಮರದ ಪೀಠೋಪಕರಣಗಳ ನಿರ್ವಹಣೆ ಹೇಗಿರಬೇಕು?

ನಿಮ್ಮ ಬಜೆಟ್ ಪರಿಗಣಿಸಿ
ನಿಮ್ಮ ಮನೆಗೆ ಪೀಠೋಪಕರಣವನ್ನು ಕೊಳ್ಳುವಾಗ, ಅಂದಕ್ಕೆ ಆದ್ಯತೆ ನೀಡುವಂತೆ, ಬಜೆಟ್‌ಗು ಸಹ ಆಧ್ಯತೆ ನೀಡಿ. ಎಷ್ಟು ಹಣವನ್ನು ವಿನಿಯೋಗಿಸಬಹುದು ಎಂಬ ಲೆಕ್ಕಾಚಾರವನ್ನು ಮಾಡಿಕೊಳ್ಳಿ. ಅಧಿಕವಾದ ಹಣವನ್ನು ನಿಮ್ಮ ಪೀಠೋಪಕರಣಗಳನ್ನು ಕೊಳ್ಳಲು ಬಳಸಬೇಡಿ.

ವಿನ್ಯಾಸ ಆರಿಸಿ
ಪೀಠೋಪಕರಣವನ್ನು ಆರಿಸುವಾಗ ವಿನ್ಯಾಸವನ್ನು ನೋಡಿ ಆರಿಸಿಕೊಳ್ಳಿ. ಒಂದು ವಿಚಾರ ನೆನಪಿಡಿ, ನಿಮ್ಮ ಪೀಠೋಪಕರಣವು ಯಾವುದೇ ಕಾರಣಕ್ಕು ನಿಮ್ಮ ಮನೆಯ ಆ ಜಾಗವನ್ನು ಪೂರ್ತಿ ಮಾಡುವುದಿಲ್ಲ. ಅದು ಅಲ್ಲಿ ಬಂದು ಕೂರುತ್ತದೆಯೇ ಹೊರತು, ಆ ಜಾಗವನ್ನು ಸಂಪೂರ್ಣವಾಗಿ ಬದಲಾಯಿಸುವುದಿಲ್ಲ. ಹಾಗಾಗಿ ಅಲ್ಲಿ ಅಲಂಕಾರ ಮತ್ತು ಅವಶ್ಯಕತೆ ಪೂರೈಸಲು ಒಂದು ಪೀಠೋಪಕರಣವನ್ನು ಬಳಸಿ. ಅಗತ್ಯವಿದ್ದಲ್ಲಿ, ವಿಂಟೇಜ್-ಲುಕ್ ಇರುವ ಪೀಠೋಪಕರಣವನ್ನು ಬಳಸಬಹುದು.

ಥೀಮ್ ಬಳಸಿ
ತಜ್ಞರು ನಿಮ್ಮ ಮನೆಯು ಅಂದ ಕಾಣಲು ಒಂದು ಥೀಮ್ ಬಳಸಿ ಎಂದು ಹೇಳುತ್ತಾರೆ. ವಿಕ್ಟೋರಿಯನ್, ಮಹಾರಾಜರ ಕಾಲದ್ದು, ಕಲಾತ್ಮಕವಾದದ್ದು, ಇತ್ಯಾದಿ ಬಗೆಯ ಥೀಮ್ ಅನ್ನು ಆರಿಸಿಕೊಂಡು ಮನೆಯನ್ನು ಅಲಂಕರಿಸಿ.

English summary

Choosing The Right Furniture For Your Home

How to decide the best furniture for your home? You have to be very careful in doing so. For example, you have a cozy living area. If you think of buying a large designer sofa set, it would look odd and make your living area appear clumsy. So, to get the best tips to select the right furniture, you can talk to any specialist interior decorator.
Story first published: Wednesday, June 1, 2016, 20:19 [IST]
X
Desktop Bottom Promotion