For Quick Alerts
ALLOW NOTIFICATIONS  
For Daily Alerts

ಕಸದಿಂದ ರಸ - ಮನೆಯ ವಾಲ್ ಹ್ಯಾಂಗಿಂಗ್ ಹೀಗಿರಲಿ

|

ಸೃಜನಶೀಲತೆಗೆ ಯಾವಾಗಲು ಒಂದು ಅತ್ಯುನ್ನತ ಸ್ಥಾನ ಕಾದು ಕುಳಿತಿರುತ್ತದೆ. ಇದು ನಿಮ್ಮ ಬಳಿ ಇದ್ದಲ್ಲಿ, ದುಬಾರಿ ವಸ್ತುಗಳನ್ನು ನೀವು ಮಾರುಕಟ್ಟೆಗೆ ಹೋಗಿ ಖರೀದಿಸುವ ಅಗತ್ಯವಿರುವುದಿಲ್ಲ. ಸುತ್ತ-ಮುತ್ತ ಇರುವ ಪ್ರತಿಯೊಂದು ಅಂಶದಲ್ಲಿಯೂ ನೀವು ಅಲಂಕಾರಿಕ ವಸ್ತುಗಳನ್ನು ನೋಡಬಹುದು.

ಜಪಾನ್ ಜನರು ಕಸದಲ್ಲಿಯೂ ಸಹ ರಸವನ್ನು ತೆಗೆಯುವಷ್ಟು ಚಾಲಾಕಿಗಳು. ಅವರು ತಮ್ಮ ಬಳಿಯಿರುವ ತ್ಯಾಜ್ಯಗಳ ಮೂಲಕ, ಅಲಂಕಾರಿಕ ವಸ್ತುಗಳನ್ನು ಮನೆಗೆ ತಯಾರಿಸಿಕೊಳ್ಳುತ್ತಾರೆ. ಇದಕ್ಕೆ ಸ್ವಲ್ಪ ಆಲೋಚನೆ ಮತ್ತು ಒಂದಿಷ್ಟು ಸೃಜನಶೀಲತೆಯ ಅಗತ್ಯವಿರುತ್ತದೆ.

ವಾಲ್ ಹ್ಯಾಂಗಿಂಗ್‌ಗಳನ್ನು ಸಾಮಾನ್ಯವಾಗಿ ತ್ಯಾಜ್ಯ ವಸ್ತುಗಳಿಂದ ತಯಾರಿಸಲಾಗುತ್ತದೆ. ಇವುಗಳನ್ನು ಮಾಡುವುದು ಸುಲಭ ಮತ್ತು ಇವುಗಳನ್ನು ನೋಡಲು ಸುಂದರವಾಗಿರುತ್ತವೆ. ಆದರೆ ಇವುಗಳನ್ನು ಹೀಗೆ ತಯಾರಿಸಿಕೊಳ್ಳಲು ನಿಮಗೆ ಒಂದಿಷ್ಟು ಸೃಜನಶೀಲ ಸಲಹೆಗಳು ತಿಳಿದಿರಬೇಕಾದ ಅಗತ್ಯವಿರುತ್ತದೆ. ಆಗ ನೀವು ನಿಮ್ಮ ಮನೆಯಲ್ಲಿರುವ ಹಳೆಯ ವಸ್ತುಗಳನ್ನು ಸಹ ಸುಂದರವಾದ ಕಲಾಕೃತಿಗಳನ್ನಾಗಿ ಮಾಡಿ ನಿಲ್ಲಿಸಬಹುದು. ಇದೂ ಹಳೆಯದಾದರೆ ಆಗ ಹೊಸ ಆಲೋಚನೆಗೆ ಕೈ ಹಾಕಬಹುದು. ಗೋಡೆಗಡಿಯಾರವನ್ನು ತೂಗು ಹಾಕುವಾಗ ವಾಸ್ತುಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಿ!

Ways to Make Wall Hanging From House Hold Scrap

ಮನೆಯ ಗೋಡೆಗಳಿಗೆ ವಾಲ್ ಹ್ಯಾಂಗಿಂಗ್ ನಿರ್ಮಿಸಿಕೊಳ್ಳಲು ಕಷ್ಟವಾಗುವುದಿಲ್ಲ. ಏಕೆಂದರೆ ಇದು ನಿಮ್ಮ ಕಲ್ಪನಾಶಕ್ತಿಯ ಪ್ರಕಾರ ನಿರ್ಮಾಣಗೊಳ್ಳುತ್ತದೆ. ಇದನ್ನು ನಿರ್ಮಿಸಲು ಕಷ್ಟ ಮತ್ತು ಬೇಗ ಎಂಬ ನಿಯಮಗಳು ಯಾವುದೂ ಇರುವುದಿಲ್ಲ. ಆದರೂ ಇದರ ಫಲಿತಾಂಶವು ಸುಂದರವಾಗಿರುತ್ತದೆ ಮತ್ತು ಅದೇ ಸಮಯಕ್ಕೆ ನಿಮಗೆ ತೃಪ್ತಿಯನ್ನು ತರುತ್ತದೆ. ಏಕೆಂದರೆ ಇದನ್ನು ನೀವು ಸ್ವತಃ ತಯಾರಿಸಿರುತ್ತೀರಿ.

ಕಸದಿಂದ ವಾಲ್ ಹ್ಯಾಂಗಿಂಗ್ ಮಾಡುವುದು ಕೆಲವರ ಪಾಲಿಗೆ ಹವ್ಯಾಸ ಇದರಿಂದ ಅವರು ಹಣವನ್ನು ಸಹ ಮಾಡಿಕೊಳ್ಳುತ್ತಾರೆ. ಈ ಅಂಕಣವು ನಿಮಗೆ ಮನೆಯಲ್ಲಿ ಕಸದಿಂದ ವಾಲ್ ಹ್ಯಾಂಗಿಂಗ್ ಮಾಡಿಕೊಳ್ಳುವ ಬಗೆಯನ್ನು ತಿಳಿಸಿಕೊಡುತ್ತದೆ. ಈ ಮೂಲ ಸಲಹೆಗಳನ್ನು ಇಟ್ಟುಕೊಂಡು ನಿಮ್ಮ ಕಲ್ಪನೆಯ ಜೊತೆ ಆಟವಾಡಿ, ನಿಮಗೆ ಒಪ್ಪಿಗೆಯಾಗುವಂತಹ ವಾಲ್ ಹ್ಯಾಂಗಿಂಗ್‌ಗಳನ್ನು ತಯಾರಿಸಿಕೊಳ್ಳಿ. ಬನ್ನಿ ಎಂತಹ ವಸ್ತುಗಳನ್ನು ತಯಾರಿಸಬಹುದು ಎಂದು ತಿಳಿದುಕೊಳ್ಳೋಣ.

ಉಪಯೋಗಿಸದ ಬಟ್ಟೆಯಿಂದ ಲೆಟರ್ ಪೌಚ್
ಮನೆಯೆಂದ ಮೇಲೆ ಲಗ್ನ ಪತ್ರಿಕೆಗಳಿಂದ ಹಿಡಿದು ಬ್ಯಾಂಕಿನಿಂದ ಬರುವ ಪತ್ರಗಳವರೆಗೆ ಹಲವಾರು ಪತ್ರಗಳು ಬರುತ್ತಾ ಇರುತ್ತವೆ. ಇವುಗಳನ್ನು ಅಲ್ಲಿ-ಇಲ್ಲಿ ಬಿಸಾಡುವ ಬದಲಿಗೆ ಒಂದು ಕಡೆ ಇಡಲು ಉಪಯೋಗಿಸದೆ ಇರುವ ಒಂದು ಬಟ್ಟೆಯಿಂದ ಅದಕ್ಕೆ ಚೀಲವನ್ನು ಮಾಡಿ, ಮನೆಯ ಗೋಡೆಗೆ ನೇತು ಹಾಕಿ. ಇದು ನೋಡಲು ಶೋ-ಪೀಸ್ ರೀತಿಯೂ ಇರುತ್ತದೆ. ಪತ್ರಗಳ ಜೊತೆಗೆ ಮೊಬೈಲ್ ಚಾರ್ಜರ್, ಇಯರ್ ಫೋನ್ ಇತ್ಯಾದಿಗಳನ್ನು ಸಹ ಅದರಲ್ಲಿ ಹಾಕಿ ಇಡಲು ಸಹಾಯವಾಗುತ್ತದೆ. ಇದಕ್ಕೆ ಸ್ವಲ್ಪ ದಪ್ಪನಾದ ಬಟ್ಟೆಯನ್ನು ಬಳಸಿ. ಹತ್ತಿಯ ಬಟ್ಟೆಯಾದರೆ ಇನ್ನೂ ಒಳ್ಳೆಯದು. ಬಟ್ಟೆಯನ್ನು ನಿಮಗೆ ಬೇಕಾದ ಗಾತ್ರಕ್ಕೆ ಕತ್ತರಿಸಿಕೊಳ್ಳಿ.

ಅದರ ಹಂಚುಗಳನ್ನು ನೋಡಲು ಚೆನ್ನಾಗಿರುವಂತೆ ಹೊಲಿಯಿರಿ. ಗೋಡೆಗೆ ನೇತು ಹಾಕಲು ಒಂದು ದಾರವನ್ನು ಸಹ ಇದಕ್ಕೆ ಸೇರಿಸಿ. ಒಂದು ವೇಳೆ ನೀವು ತಿಳಿ ಬಣ್ಣದ ಬಟ್ಟೆಯನ್ನು ಬಳಸುತ್ತಿದ್ದಲ್ಲಿ, ಗಾಢ ಬಣ್ಣದ ಬಟ್ಟೆಯನ್ನು ಅಂಚಿಗೆ ಹೊಲೆಯಿರಿ. ಇದರಿಂದ ಇದು ಮತ್ತಷ್ಟು ಸುಂದರವಾಗಿ ಕಾಣುತ್ತದೆ. ನಿಮ್ಮ ಬಳಿ ಎಂಬ್ರಾಯಿಡಿಂಗ್ ಮಾಡಿದ, ಗುಂಡಿಗಳಿರುವ ಅಥವಾ ಕನ್ನಡಿಗಳು ಅಥವಾ ಮಣಿಗಳು ಇರುವ ಹಳೆಯ ಸೀರೆ ಅಥವಾ ಸಲ್ವಾರ್ ಇದ್ದಲ್ಲಿ ಅದರಲ್ಲಿನ ಅಲಂಕಾರಿಕ ಭಾಗವನ್ನು ಕತ್ತರಿಸಿ ಇದಕ್ಕೆ ಅಂಟಿಸಿ. ಗೋಡೆಗೆ ನೇತು ಹಾಕಿದಾಗ ಇದು ನೋಡಲು ಚೆನ್ನಾಗಿ ಕಾಣುತ್ತದೆ. ಮನೆಯ ಅಂದ ಚಂದವನ್ನು ಹೆಚ್ಚಿಸಲು ನಮ್ಮ ಸಲಹೆಗಳು!

ಹೂ ಕುಂಡ
ಒಡೆದ ಗಾಜಿನ ಚೂರುಗಳು ಮತ್ತು ಕನ್ನಡಿಯ ಚೂರುಗಳನ್ನು ಮನೆಯಿಂದ ಹೊರಗೆ ಎಸೆಯುವ ಬದಲಿಗೆ, ಒಂದು ತೂಗು ಹಾಕುವ ಹೂ ಕುಂಡವನ್ನು ತೆಗೆದುಕೊಂಡು ಬನ್ನಿ. ಇದಕ್ಕೆ ಗ್ಲೂ ಹಾಕಿ ಈ ಕನ್ನಡಿಗಳನ್ನು ಅಥವಾ ಗಾಜಿನ ಬಳೆಗಳನ್ನು ಅಂಟಿಸಿ. ಇದರಿಂದ ನೋಡಲು ಸುಂದರವಾಗಿರುವ ವಾಲ್ ಹ್ಯಾಂಗಿಂಗ್ ಪಾಟ್ ನಿಮಗೆ ದೊರೆಯುತ್ತದೆ.

ಐಸ್ ಕ್ರೀಮ್ ಅಥವಾ ಬಿದಿರು ಕಡ್ಡಿಗಳಿಂದ ಪೆಯಿಂಟಿಂಗ್‌ಗಳು
ಬಳಸದೆ ಇರುವ ಒಂದು ಕಾರ್ಡ್‌ಬೋರ್ಡ್ ಶೀಟ್ ತೆಗೆದುಕೊಳ್ಳಿ, ಅದನ್ನು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಅದರ ಮೇಲೆ ಸ್ವಲ್ಪ ಗಾಢ ಬಣ್ಣದ ಪೇಪರ್‌ಗಳನ್ನು ಅಥವಾ ಚಾರ್ಟ್ ಅನ್ನು ಇಡಿ. ಈಗ ಅದರ ಮೇಲೆ ಬಳಸಿ ಎಸೆದ ಐಸ್-ಕ್ರೀಮ್ ಅಥವಾ ಬಿದಿರಿನ ಕಡ್ಡಿಗಳಿಂದ ಕಾಲ್ಪನಿಕ ಪೆಯಿಂಟಿಂಗ್ ಮಾಡಿ.

English summary

Ways to Make Wall Hanging From House Hold Scrap

Creativity has always its special place. It is not needed to buy expensive articles to bring out the creativity in you. You can use things around you that you think are unimportant and make several decorative articles. The Japanese seem to be very efficient in making the best use of crap. Even you can use your brains and make beautiful home decors from house hold crap.
Story first published: Wednesday, May 20, 2015, 11:59 [IST]
X
Desktop Bottom Promotion