For Quick Alerts
ALLOW NOTIFICATIONS  
For Daily Alerts

ಮರದ ಪೀಠೋಪಕರಣಗಳ ನಿರ್ವಹಣೆ ಹೇಗಿರಬೇಕು?

|

ನಮ್ಮಲ್ಲಿ ಕೆಲವರಿಗೆ ಲೋಹದ ಪೀಠೋಪಕರಣಗಳು ಪ್ರಿಯವಾದರೂ ಕೂಡ, ಬಹುತೇಕರಿಗೆ ಈಗಲೂ ಸಹ ಮರದ ಪೀಠೋಪಕರಣಗಳೇ ಇಷ್ಟ. ಲೋಹದ ಪೀಠೋಪಕರಣಗಳಿಗೆ ಹೋಲಿಸಿದರೆ, ಮರದ ಪೀಠೋಪಕರಣಗಳ ಬಾಳಿಕೆ ಕಮ್ಮಿ ಎಂಬುದು ಒಂದು ವಾದವಾಗಿದೆ. ಆದರೂ ಕೂಡ ಮರದ ಪೀಠೋಪಕರಣಗಳು ಮನೆಗೆ ವಿಶೇಷ ಸೊಬಗು ನೀಡುತ್ತದೆ.

ಹಿಂದಿನ ಕಾಲದ ಮರದ ಪೀಠೋಪಕರಣಗಳಿಗೆ ಇಂದಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಪ್ರತಿಯೊಬ್ಬರು ಇದನ್ನು ಇಷ್ಟಪಡುತ್ತಾರೆ. ಆದರೆ ಮರದ ಪೀಠೋಪಕರಣಗಳ ಒಂದು ಸಮಸ್ಯೆಯೆಂದರೆ ಅದರ ನಿರ್ವಹಣೆ. ಮರದ ಪೀಠೋಪಕರಣಗಳ ನಿರ್ವಹಣೆ ಮತ್ತು ಶುಚಿಗೊಳಿಸುವುದು ಅತೀ ಕಠಿಣ ಕೆಲಸ.

ಪೀಠೋಪಕರಣಗಳಿಗೆ ಗೆದ್ದಲು, ಧೂಳು ಹಿಡಿಯುವುದು ಮತ್ತು ಕಲೆಯಾಗುವುದು ಇದರ ಸಮಸ್ಯೆಗಳು. ಸಮಯ ಕಳೆದಂತೆ ಮರದ ಪೀಠೋಪಕರಣಗಳು ಬಣ್ಣ ಕಳಕೊಳ್ಳುತ್ತದೆ. ಇಂತಹ ಪೀಠೋಪಕರಣಗಳ ಮೇಲೆ ಬೇಗನೆ ಕಲೆಗಳಾಗುತ್ತದೆ. ಚಹಾ, ಕಾಫಿ, ಪಾನೀಯಗಳು ಮತ್ತು ಆಹಾರದ ಕಲೆಗಳನ್ನು ತೆಗೆಯುವುದು ಮತ್ತು ಶುಚಿಗೊಳಿಸುವುದು ತುಂಬಾ ಕಠಿಣ. ಮರ ಪೀಠೋಪಕರಣಗಳಿಗೆ ನಿಯಮಿತ ನಿರ್ವಹಣೆ ಮತ್ತು ಸ್ವಚ್ಛಗೊಳಿಸುವ ಅಗತ್ಯವಿದೆ.

How to Polish and Shine Wood Furniture

ನಿಮ್ಮ ಮನೆಯ ಪೀಠೋಪಕರಣಗಳು ಹೊಳೆಯಲು ಮತ್ತು ಕಲೆಗಳಿಲ್ಲದಂತೆ ಮಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ. ಕೆಲವೊಂದು ವಿಧಾನಗಳಿಂದ ಪೀಠೋಪಕರಣಗಳ ಮೇಲೆ ಇರುವ ಕಲೆಗಳನ್ನು ತೆಗೆಯಬಹುದು ಮತ್ತು ಅದು ಹೊಳೆಯುವಂತೆ ಮಾಡಬಹುದು. ಆ ವಿಧಾನಗಳು ಇಲ್ಲಿವೆ...

ಮಿನರಲ್ ಎಣ್ಣೆ ಮತ್ತು ಲಿಂಬೆ
ಮಿನರಲ್ ಎಣ್ಣೆ ಮತ್ತು ಕೆಲವು ಹನಿ ನಿಂಬೆ ರಸದ ಮಿಶ್ರಣ ಬಳಸಿಕೊಂಡು ಮರದ ಪೀಠೋಪಕರಣ ಮತ್ತು ಕಲಾಕೃತಿಗಳನ್ನು ಒರೆಸಬಹುದು. ಈ ಮಿಶ್ರಣವು ಪೀಠೋಪಕರಣಗಳ ಮೇಲೆ ಅಂಟಿಕೊಂಡಿರುವ ಕೊಳೆ ತೆಗೆದು ಅದಕ್ಕೆ ಮತ್ತೆ ಹೊಳಪು ನೀಡುತ್ತದೆ. ನಿಂಬೆಯು ಶುಚಿಕಾರವಾಗಿ ಕೆಲಸ ಮಾಡಿ ಪೀಠೋಪಕರಣಗಳ ಮೇಲೆ ಇರುವ ಎಲ್ಲಾ ರೀತಿಯ ಕೊಳೆ ತೆಗೆಯುತ್ತದೆ. ಮೃದುವಾದ ಬಟ್ಟೆಗೆ ಈ ಮಿಶ್ರಣ ಹಾಕಿ ಮತ್ತು ಪೀಠೋಪಕರಣಗಳ ಕೆತ್ತನೆಗಳನ್ನು ಎಚ್ಚರಿಕೆಯಿಂದ ಒರೆಸಿ. ಪೀಠೋಪಕರಣದ ಯಾವುದೇ ಭಾಗವನ್ನು ಬಿಡದೆ ಒರೆಸಿ. ಸರಿಯಾದ ಹೊಳಪು ಬರಲು ಎರಡು ಅಥವಾ ಮೂರು ಸಲ ಇದನ್ನು ಪುನರಾವರ್ತಿಸಿ.

ಪೆಟ್ರೋಲಿಯಂ ಜೆಲ್ಲಿ
ಪೆಟ್ರೋಲಿಯಂ ಜೆಲ್ಲಿಯಲ್ಲಿರುವ ಎಣ್ಣೆಯ ಅಂಶವು ಮನೆಯಲ್ಲಿನ ಒಣ ಹಾಗೂ ಕಳೆಗುಂದಿದ ಮರದ ಪೀಠೋಪಕರಣಗಳಿಗೆ ತೇವಾಂಶ ನೀಡುವ ಗುಣ ಹೊಂದಿದೆ. ಜೆಲ್ಲಿಯನ್ನು ಕೈಗೆ ಹಾಕಿ ಅದನ್ನು ಮರದ ಪೀಠೋಪಕರಣಗಳ ಮೇಲೆ ಸವರಿ. ಜೆಲ್ಲಿಯಿಂದ ಸಂಪೂರ್ಣ ಪೀಠೋಪಕರಣ ಮುಚ್ಚಿ ಹೋಗುವಂತೆ ಮಾಡಬೇಡಿ. ನಿರ್ದಿಷ್ಟ ಪ್ರಮಾಣದಲ್ಲಿ ಅದನ್ನು ಬಳಸಿ ಮತ್ತು ಪ್ರತಿಯೊಂದು ಕಡೆಗೂ ಜೆಲ್ಲಿ ಸವರಿದ್ದೀರಾ ಎನ್ನುವುದನ್ನು ದೃಢಪಡಿಸಿಕೊಳ್ಳಿ. ಜೆಲ್ಲಿ ತುಂಬಾ ಗಟ್ಟಿಯಾಗಿದ್ದರೆ ಆಗ ಅದಕ್ಕೆ ಸ್ವಲ್ಪ ನೀರು ಹಾಕಿ. ಮರದ ಪೀಠೋಪಕರಣಗಳ ಧೂಳನ್ನು ಒರೆಸಿದ ಬಳಿಕ ಜೆಲ್ಲಿ ಹಚ್ಚಿ. ಇದರಿಂದ ಮರದ ಪೀಠೋಪಕರಣಗಳಿಗೆ ಹೊಳಪು ಬರುತ್ತದೆ.

ಟರ್ಪಂಟೈನ್ ಮತ್ತು ಜೇನುಮೇಣ
ಟರ್ಪಂಟೈನ್ ಮತ್ತು ಜೇನುಮೇಣವನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಮರದ ಪೀಠೋಪಕರಣಗಳನ್ನು ಸರಿಯಾಗಿ ಶುಚಿಗೊಳಿಸಬಹುದು. ಇದರಿಂದ ಪೀಠೋಪಕರಣಗಳಿಗೆ ಗೆದ್ದಲು ಮತ್ತು ಇತರ ಕೀಟಗಳು ಹಿಡಿಯುವುದಿಲ್ಲ. ಟರ್ಪಂಟೈನ್ ಮತ್ತು ಜೇನುಮೇಣ ಸೇರಿಸಿ ಪೇಸ್ಟ್ ಮಾಡಿ, ಇದನ್ನು ಹಚ್ಚುವ ಮೊದಲು ಪೀಠೋಪಕರಣಗಳನ್ನು ಒದ್ದೆ ಬಟ್ಟೆಯಲ್ಲಿ ಒರೆಸಿ. ಬಳಿಕ ಒಣಗಿದ ಬಟ್ಟೆಯನ್ನು ಈ ಮಿಶ್ರಣದಲ್ಲಿ ಮುಳುಗಿಸಿ ಮತ್ತು ಪೀಠೋಪಕರಣಗಳನ್ನು ಒರೆಸಿ. ಪೀಠೋಪಕರಣಗಳನ್ನು ಸ್ವಚ್ಛ ಮತ್ತು ಹೊಳೆಯುವಂತೆ ಮಾಡಲು ಇದು ತುಂಬಾ ಪರಿಣಾಮಕಾರಿ ವಿಧಾನ.

ಮೇಯನೇಸ್
ಸಲಾಡ್ ಮತ್ತು ಪಾಸ್ತಾಗಳ ರುಚಿ ಹೆಚ್ಚಿಸುವ ಮೇಯನೇಸ್ ನಲ್ಲಿ ಮರದ ಪೀಠೋಪಕರಣಗಳ ಮೇಲಿರುವ ಕಲೆಗಳನ್ನು ತೆಗೆಯುವ ಸಾಮರ್ಥ್ಯವಿದೆ. ಪಾನೀಯಗಳು, ನೀರು, ಆಹಾರ, ಪೆನ್ನಿನಿಂದ ಆದ ಕಲೆ ಮತ್ತು ಇತರ ಕಲೆಗಳನ್ನು ಮೇಯನೇಸ್ ತೆಗೆಯಬಲ್ಲದು. ಬಟ್ಟೆಯಲ್ಲಿ ಸ್ವಲ್ಪ ಮಯೊ ಸೇರಿಸಿ ಮತ್ತು ಕಲೆ ಇರುವ ಕಲೆ ಇದನ್ನು ಉಜ್ಜಿ. ಕಲೆ ಒರೆಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಅಂತಿಮವಾಗಿ ಕಲೆ ಮಾಯವಾಗುತ್ತದೆ. ಮರದ ಪೀಠೋಪಕರಣಗಳ ಮೇಲೆ ಇರುವ ಕಲೆಗಳನ್ನು ತೆಗೆಯಲು ಮಯೊ ಅತ್ಯುತ್ತಮ ವಿಧಾನ.

ಆಲಿವ್ ತೈಲ
ಆಲಿವ್ ಎಣ್ಣೆ ಮರದ ಪೀಠೋಪಕರಣಗಳನ್ನು ಹೊಳೆಯುವಂತೆ ಮಾಡಲು ಅತ್ಯುತ್ತಮವಾದ ವಸ್ತು. ಮರದ ಪೀಠೋಪಕರಣದ ಮೇಲೆ ಸ್ವಲ್ಪ ಆಲಿವ್ ಎಣ್ಣೆ ಸಿಂಪಡಿಸಿ ಮತ್ತು ಅಷ್ಟೇ ಪ್ರಮಾಣದ ತೈಲವನ್ನು ಫರ್ನಿಚರ್ ಮೇಲೆ ಹಚ್ಚಿ. ಪೀಠೋಪಕರಣಗಳಲ್ಲಿ ಇರುವ ಕೆತ್ತನೆಯ ಭಾಗಗಳ ಬಗ್ಗೆ ಎಚ್ಚರಿಕೆ ವಹಿಸಿ.

English summary

How to Polish and Shine Wood Furniture

Wooden furniture needs continuous maintenance and cleaning. To keep your furniture shining and stainless, you need to follow a few tips. A few methods that would help you to clean the stains and keep the furniture shining are mentioned below
Story first published: Tuesday, March 24, 2015, 19:55 [IST]
X
Desktop Bottom Promotion