For Quick Alerts
ALLOW NOTIFICATIONS  
For Daily Alerts

ಮನೆಯಲ್ಲಿ ಗಣೇಶ ವಿಗ್ರಹ ಸ್ಥಾಪನೆಗೆ ಸೂಕ್ತ ಜಾಗ ಯಾವುದು?

By Hemanth P
|

ಗಣೇಶ ಚತುರ್ಥಿಯು ಗಜಮುಖ ದೇವರಾದ ಗಣೇಶನ ದೈವೀಶಕ್ತಿಯ ಸಂಭ್ರಮಿಸಲು ಆಚರಿಸುವಂತಹ ಹಬ್ಬ. ಈ ಹಬ್ಬದ ಸಂಭ್ರಮದ ವೇಳೆ ಹೆಚ್ಚಿನ ಮನೆಗಳಲ್ಲಿ ಗಣಪತಿ ದೇವರ ಮೂರ್ತಿಯನ್ನಿಟ್ಟು ಪೂಜಿಸಲಾಗುತ್ತದೆ. ಗಣೇಶ ಚತುರ್ಥಿ ವೇಳೆ ಪೂಜಿಸುವ ಗಣಪತಿಯ ಮೂರ್ತಿ ಮತ್ತು ದೇವರ ಕೋಣೆಯಲ್ಲಿ ದಿನಾಲೂ ಪೂಜಿಸುವ ಗಣಪತಿ ಮೂರ್ತಿಗೆ ತುಂಬಾ ವ್ಯತ್ಯಾಸವಿದೆ. ಇದರಿಂದಾಗಿ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಯಾವ ರೀತಿಯಲ್ಲಿಟ್ಟು ಪೂಜಿಸಬೇಕೆಂಬುದು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಈ ಬಾರಿ ಕೊರೊನಾ ಕಾರಣದಿಂದಾಗಿ ಬೀದಿಯಲ್ಲಿ ಗಣಪನ ಕೂರಿಸುವುದಕ್ಕಿಂತ ಮನೆಯಲ್ಲಿ ಕೂರಿಸುವುದೇ ಸುರಕ್ಷಿತ.

ಗಣೇಶನ ಮೂರ್ತಿಯನ್ನು ಸರಿಯಾದ ಜಾಗದಲ್ಲಿಟ್ಟ ಬಳಿಕ ಅದನ್ನು ಯಾವ ರೀತಿಯಲ್ಲಿ ಅಲಂಕರಿಸಬಹುದು ಎಂದು ತಿಳಿಯಬಹುದು. ಕೆಲವು ಜನರು ಗಣೇಶನ ಮೂರ್ತಿಯನ್ನು ಹಾಲ್‌ನಲ್ಲಿ ಅಥವಾ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಾರೆ. ಅದಾಗ್ಯೂ, ವಾಸ್ತು ಬಗ್ಗೆ ಸರಿಯಾಗಿ ತಿಳಿದುಕೊಂಡ ಬಳಿಕವಷ್ಟೇ ಗಣೇಶನ ಮೂರ್ತಿಯನ್ನು ಎಲ್ಲಿ ಪ್ರತಿಷ್ಠಾಪಿಸಬಹುದು ಎನ್ನುವುದನ್ನು ನಿರ್ಧರಿಸಬಹುದು. ನಿಮ್ಮ ಮನೆಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಇಲ್ಲಿ ಕೆಲವೊಂದು ಮಾಹಿತಿಗಳಿವೆ.

ಎಡಗಡೆಗೆ ಮುಖಮಾಡಿರಬೇಕು
ಗಣೇಶನ ಮೂರ್ತಿಯ ಸೊಂಡಿಲು ಎಡಗಡೆಗೆ, ಗೌರಿ(ಆತನ ತಾಯಿ)ಯ ಕಡೆಗೆ ತಿರುಗಿರಬೇಕು. ಹೆಚ್ಚಿನವರು ಗೌರಿ ಮತ್ತು ಗಣೇಶನನ್ನು ಗಣೇಶ ಚತುರ್ಥಿ ವೇಳೆ ಪೂಜಿಸುತ್ತಾರೆ. ಹೀಗಿರುವಾಗ ಗಣೇಶ ಸೊಂಡಿಲು ಗೌರಿ ಕಡೆಗೆ ತಿರುಗಿರಬೇಕೆಂದು ಗಮನಿಸಿ.

Where To Place Ganesha Idol At Home?

ಗಣೇಶನ ಬೆನ್ನು ನಿಮ್ಮ ಮನೆಯ ಯಾವುದೇ ಕೋಣೆಯ ಕಡೆಗೆ ಇರಬಾರದು. ಗಣೇಶ ಸಮೃದ್ಧಿಯ ದೇವರು. ಆದರೆ ಆತನ ಬೆನ್ನು ಬಡತನವನ್ನು ಬಿಂಬಿಸುತ್ತದೆ. ಇದರಿಂದ ಗಣೇಶ ಮೂರ್ತಿಯ ಬೆನ್ನು ನಿಮ್ಮ ಮನೆಯ ಹೊರಗೆ ಮುಖಮಾಡಿರಲಿ.

ದಕ್ಷಿಣಕ್ಕೆ ಬೇಡ
ನಿಮ್ಮ ಮನೆಯ ದಕ್ಷಿಣ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಬೇಡಿ. ನಿಮ್ಮ ಮನೆಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಮೂರ್ತಿಯನ್ನಿಡಲು ಪ್ರಯತ್ನಿಸಿ. ಪೂಜೆಯ ಕೋಣೆಯು ಮನೆಯ ದಕ್ಷಿಣ ದಿಕ್ಕಿನಲ್ಲಿರಬಾರದು.

ಶೌಚಾಲಯ
ಶೌಚಾಲಯಕ್ಕೆ ಹೊಂದಿಕೊಂಡಿರುವ ಗೋಡೆಯ ಬದಿಯಲ್ಲಿ ಗಣೇಶನ ಮೂರ್ತಿಯನ್ನು ಇಡಬೇಡಿ. ಗಣೇಶನ ಮೂರ್ತಿಯನ್ನು ಇಡುವ ಕೋಣೆ ಮತ್ತು ಶೌಚಾಲಯದ ಗೋಡೆ ಒಂದಕ್ಕೊಂದು ಸಂಪರ್ಕಿಸರಬಾರದು.

ಬೆಳ್ಳಿಯ ಗಣೇಶ
ಹೆಚ್ಚಿನವರು ಮನೆಯಲ್ಲಿ ಸಂಪೂರ್ಣ ಬೆಳ್ಳಿಯಿಂದ ಮಾಡಿದ ಗಣೇಶನ ಮೂರ್ತಿ ಪೂಜಿಸುತ್ತಾರೆ. ನಿಮ್ಮ ಮನೆಯಲ್ಲಿ ಲೋಹದ ಮೂರ್ತಿಯಿದ್ದರೆ ಆಗ ಅದನ್ನು ಈಶಾನ್ಯ ಅಥವಾ ನೈಋತ್ಯ ಭಾಗದಲ್ಲಿಡಿ.

ಈಶಾನ್ಯ
ಗಣೇಶನ ಮೂರ್ತಿಯನ್ನಿಡಲು ನಿಮ್ಮ ಮನೆಯ ಈಶಾನ್ಯ ಭಾಗವು ಉತ್ಕೃಷ್ಟವಾದ ಸ್ಥಳ. ಮೇಲಿನ ಎಲ್ಲದಕ್ಕೂ ನಿಮ್ಮ ಮನೆಯ ಈಶಾನ್ಯ ಭಾಗವು ಹೊಂದಿಕೊಳ್ಳುತ್ತಿದ್ದರೆ ಆಗ ಮೂರ್ತಿಯನ್ನು ಅಲ್ಲಿ ಪ್ರತಿಷ್ಠಾಪಿಸಿ.

ಮೆಟ್ಟಿಲುಗಳ ಕೆಳಗೆ
ನೀವು ಬಂಗಲೆಯಲ್ಲಿ ವಾಸವಾಗಿದ್ದರೆ ಆಗ ನೀವು ಗಣೇಶನ ಮೂರ್ತಿಯನ್ನು ಮೆಟ್ಟಿಲುಗಳ ಕೆಳಗಡೆ ಇಡಬೇಡಿ. ಯಾಕೆಂದರೆ ಮೆಟ್ಟಿಲುಗಳಲ್ಲಿ ಜನರು ನಡೆದುಕೊಂಡು ಹೋಗುತ್ತಾರೆ. ಇದರಿಂದ ಗಣೇಶನ ಮೂರ್ತಿಯ ತಲೆಯ ಮೇಲೆ ಅವರು ನಡೆದಂತಾಗುತ್ತದೆ. ಇದು ನಿಮ್ಮ ಮನೆಗೆ ಕೆಟ್ಟದನ್ನು ಉಂಟುಮಾಡಬಹುದು. ಮನೆಯಲ್ಲಿ ಗಣೇಶನ ಮೂರ್ತಿಯನ್ನಿಟ್ಟು ಪೂಜಿಸುವಾಗ ಈ ಮೇಲಿನ ಕೆಲವೊಂದು ಸರಳ ನಿಯಮಗಳನ್ನು ಪಾಲಿಸಿ.

English summary

Ganesh Chaturthi 2020: The Right Way to Place Ganesha Idol at Home

Keeping a decorated Ganesha in your house is different from placing an idol for worship. That is why, its vital to know exactly where you must place the Ganesh idol in your home. These are the basic guidelines for placing the idol of Ganesha in your house.
X
Desktop Bottom Promotion