For Quick Alerts
ALLOW NOTIFICATIONS  
For Daily Alerts

ಬಿಳಿ ಗೋಡೆಗಳ ಅಲಂಕಾರಕ್ಕೆ 5 ಸಲಹೆಗಳು

By Poonima hegde
|

ಮನೆಗಳಲ್ಲಿ ಯಾವುದೇ ಭಾಗಗಳಲ್ಲಿ ಬಳಸಬಹುದಾದ ಒಂದು ಬಣ್ಣ ಬಿಳಿ. ಬಿಳಿ ಗೋಡೆಗಳು, ಬಿಳಿ ಪೀಠೋಪಕರಣಗಳು ಮತ್ತು ಬಿಳಿ ಮಹಡಿಗಳು ಗಣ್ಯ ಮತ್ತು ಸೊಗಸಾದ ನೋಟವನ್ನು ನೀಡುತ್ತವೆ. ನಿಮ್ಮ ಮನೆಯ ಗೋಡೆಗಳಿಗೆ ಬಿಳಿ ಬಣ್ಣವನ್ನು ಬಳಸಿದಾಗ ಅವುಗಳ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಅವುಗಳನ್ನು ಅಲಂಕರಿಸುವುದು ಒಳ್ಳೆಯದು. ಬಿಳಿ ಸೌಂದರ್ಯದ ಚಿಹ್ನೆಯಾಗಿದ್ದು, ಬಿಳಿ ಗೋಡೆಯ ಹಿನ್ನೆಲೆಯಲ್ಲಿ ಯಾವುದೇ ಅಲಂಕಾರವನ್ನು ಮಾಡಿದರೆ ಸುಂದರವಾಗಿಯೇ ಕಾಣುತ್ತದೆ.

ಬಿಳಿ ಗೋಡೆಗಳಿಗೆ ಬಳಸಬಹುದಾದ ಹಲವಾರು ಅಲಂಕಾರಗಳು ಮತ್ತು ಮನೆಯ ಒಳಾಂಗಣ ಅಲಂಕಾರಗಳು ಇವೆ.ಇತ್ತೀಚಿನ ದಿನಗಳಲ್ಲಿ ಮನೆಯ ಅಲಂಕಾರ ಮತ್ತು ಒಳಾಂಗಣ ಅಲಂಕಾರಗಳಿಗೆ ಜನರು ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿದ್ದು ತಮ್ಮ ಮನೆಗಳಿಗೆ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಲು ಬಯಸುತ್ತಾರೆ.

ಆದ್ದರಿಂದ, ಬಿಳಿ ಗೋಡೆಗಳು ಹಿನ್ನೆಲೆ(ಬ್ಯಾಕ್ ಗ್ರೌಂಡ್) ರೀತಿಯಲ್ಲಿ ಯಾವಾಗಲೂ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಒಂದು ಉಪಾಯ ಉತ್ತಮವೆನಿಸದಿದ್ದರೆ ನಿಮ್ಮ ಕಲ್ಪನೆಗೆ ತಕ್ಕ ಹಾಗೆ ಮನೆಯನ್ನು ಅಲಂಕರಿಸಲು ಹಲವಾರು ಯೋಜನೆಗಳಿವೆ.

ಬಿಳಿ ಗೋಡೆಗಳನ್ನು ನಾನಾ ಬಗೆಯ ವಸ್ತುಗಳು, ವರ್ಣರಂಜಿತ ವರ್ಣಚಿತ್ರಗಳು ಮತ್ತು ಕೊಲಾಜ್ ಬಳಸಿ ಅಲಂಕರಿಸಬಹುದು. ನೀವು ಮಾಡುವ ಅಲಂಕಾರ, ಮನೆಯ ಪ್ರದೇಶವನ್ನು ಆಧರಿಸಿರಬೇಕು. ಮತ್ತು ಈ ರೀತಿಯಲ್ಲೇ ಥೀಮ್/ ವಸ್ತುಗಳನ್ನು ಬಳಸಿ ಅಲಂಕಾರ ಮಾಡಬೇಕಾಗುತ್ತದೆ. ಬಿಳಿ ಗೋಡೆಗಳನ್ನು ಅಲಂಕರಿಸಲು ಕೆಲವು ವಿಧಾನಗಳನ್ನು ಈ ಕೆಳಗೆ ಕೊಡಲಾಗಿದೆ: -

1.ಕನ್ನಡಿಗಳು

1.ಕನ್ನಡಿಗಳು

ಕನ್ನಡಿಗಳು ಸದಾ ಸರಳ - ಸುಂದರ. ಅವು ಸರಳತೆ ಮತ್ತು ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ಕನ್ನಡಿಯು ಖಂಡಿತವಾಗಿಯೂ ಬಿಳಿ ಗೋಡೆಗಳನ್ನು ತುಂಬಲು ಸಹಕಾರಿಯಾಗಿವೆ. ಕನ್ನಡಿಗಳನ್ನು ಕೊಠಡಿ ಹಾಗೂ ಅತಿಥಿ ಕೊಠಡಿಗಳಲ್ಲಿ ಮಲಗುವ ಕೋಣೆಗಳಲ್ಲಿರುವ ಬಿಳಿ ಗೋಡೆಗಳನ್ನು ಅಲಂಕರಿಸಲು ಬಳಸಬಹುದು. ವಿವಿಧ ಆಕಾರ ಮತ್ತು ಗಾತ್ರಗಳ ಕನ್ನಡಿಗಳ ರಚನೆಗಳು ಮತ್ತು ವಿನ್ಯಾಸಗಳನ್ನು ಒಟ್ಟಾಗಿ ಬಳಸಬಹುದು. ನೀವು ಗಾಢ ಬಣ್ಣಗಳನ್ನು ಹೊಂದಿರುವ ಕನ್ನಡಿಗಳನ್ನು ಬಳಸಬಹುದು. ಇಂತಹ ಕನ್ನಡಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

2.ಫೋಟೋಗಳು

2.ಫೋಟೋಗಳು

ಬಿಳಿಯ ಗೋಡೆಗಳ ಮೇಲೆ ಚಿತ್ರಗಳನ್ನು ಮತ್ತು ಭಾವಚಿತ್ರಗಳನ್ನು ಬಳಸಿ ಸಂಪೂರ್ಣವಾಗಿ ಅಲಂಕೃತಗೊಳಿಸಬಹುದು. ನಿಮ್ಮ ಹಳೆಯ ಚಿತ್ರಗಳು, ಸ್ನೇಹಿತರೊಂದಿಗೆ ಕಳೆದ ಮಧುರ ಕ್ಷಣಗಳು, ಮತ್ತು ಕುಟುಂಬದವರ ಚಿತ್ರಗಳನ್ನು ಬಳಸಬಹುದು. ನಿಮಗೆ ಇಷ್ಟವಾಗುವ ಥೀಮ್/ ವಿಷಯಗಳನ್ನು ಹೊಂದಿರುವ ಫೋಟೋಗಳನ್ನೂ ಸಹ ಬಳಸಬಹುದು. ನಿಮ್ಮ ಮನೆಯನ್ನು ಯಾವ ಫೋಟೋಗಳಿಂದ ಅಲಂಕರಿಸಬೇಕು ಎಂಬುದನ್ನು ನಿರ್ಧರಿಸಿ ನಂತರ ವಿವಿಧ ಬಗೆಯ ಫ್ರೇಮ್ ಗಳನ್ನು ಖರೀದಿಸಿ ಅಥವಾ ಪೋಟೋಗಳನ್ನು ಕೊಲಾಜ್ ಮಾಡಿಯೂ ಗೋಡೆಗಳಿಗೆ ತೂಗುಹಾಕಬಹುದು. ನಿಮ್ಮ ಆಯ್ಕೆಯನ್ನು ಅನುಸರಿಸಿ ನಿಮ್ಮ ಫೋಟೋ, ಥೀಮ್ ಮತ್ತು ಫ್ರೇಮ್ (ಚೌಕಟ್ಟು) ಗಳು ಇರಬೇಕು ಎಂಬುದನ್ನು ಮರೆಯಬೇಡಿ. ನಿಮ್ಮಲ್ಲಿ ಮರದ ಪೀಠೋಪಕರಣಗಳಿದ್ದರೆ, ಅಥವಾ ನಿಮ್ಮ ಮಕ್ಕಳು ಮಲಗುವ ಕೋಣೆಯಲ್ಲಿ ಪೋಟೋವನ್ನು ಇಡುತ್ತಿದ್ದರೆ ಮರದ ಫ್ರೇಮ್ ಗಳನ್ನು ಬಳಸಬಹುದು.

3.ಸಾಂಪ್ರದಾಯಿಕ ವಸ್ತುಗಳನ್ನು ಬಳಸಿ

3.ಸಾಂಪ್ರದಾಯಿಕ ವಸ್ತುಗಳನ್ನು ಬಳಸಿ

ನಿಮ್ಮ ಬಿಳಿ ಗೋಡೆಗಳಿಗೆ ಸ್ವಲ್ಪ ಭಾರತೀಯ ಛಾಯೆಯನ್ನು ತರಲು ಭಾರತೀಯ ಸಂಸ್ಕೃತಿ ಮತ್ತು ಕರಕುಶಲ ಬಿಂಬಿಸುವ ನೇತಾಡುವ ಗೋಡೆಯ ಚಿತ್ರಗಳನ್ನು/ ವಸ್ತುಗಳನ್ನು ಬಳಸಿ. ನೀವು ಈ ಉದ್ದೇಶಕ್ಕಾಗಿ ವಾಣಿ ಕಲೆಯ ವರ್ಣಚಿತ್ರಗಳ ಮತ್ತು ಮರದ ಕೆತ್ತನೆಗಳನ್ನು ಗೋಡೆಗೆ ತೂಗುಹಾಕಬಹುದು. ನೀವು ಭಾರತೀಯ ನೋಟ ಬಯಸುವುದಾದರೆ ಬಿಳಿ ಗೋಡೆಗಳ ಅಲಂಕಾರ ಅತ್ಯಂತ ಕಠಿಣವೇನಲ್ಲ. ಗೋಡೆಗೆ ತೂಗುಹಾಕುವ ಮರದ ಕೆತ್ತನೆಗಳು, ಮಣಿಗಳು, ಕನ್ನಡಿಗಳು ಮತ್ತು ಅನೇಕ ಅಲಂಕಾರಿಕ ತುಣುಕುಗಳು ಮಾರುಕಟ್ಟೆಯಲ್ಲಿ ಸಾಕಷ್ಟು ದೊರೆಯುತ್ತವೆ. ಮಣ್ಣಿನಿಂದ ತಯಾರಿಸಲಾಗುವ ಅಲಂಕಾರ ವಸ್ತುಗಳು ಸಹ ಉತ್ತಮ ಸೌಂದರ್ಯವನ್ನು ನೀಡುತ್ತವೆ. ಆದರೆ ನೀವು ಮನೆಯಲ್ಲಿ ಬಳಸಲಾಗಿರುವ ಪೀಠೋಪಕರಣ ಮತ್ತು ಇತರ ವರ್ಣಚಿತ್ರಗಳಿಗೆ ಸರಿಹೊಂದುವಂತೆ ಇವುಗಳನ್ನು ಬಳಸಬೇಕು.

4.ವರ್ಣಚಿತ್ರಗಳು

4.ವರ್ಣಚಿತ್ರಗಳು

ವರ್ಣಚಿತ್ರಗಳು, ಸುಂದರ ಮತ್ತು ಸೊಗಸಾದ ವರ್ಣಚಿತ್ರಗಳು ಸಂಪೂರ್ಣವಾಗಿ ಬಿಳಿ ಗೋಡೆಗಳಿಗೆ ಒಂದು ಬೆರಗುಗೊಳಿಸುವ ನೋಟವನ್ನು ನೀಡುತ್ತವೆ. ನೀವು ಪ್ರಸಿದ್ಧ ಕಲಾವಿದರ ವರ್ಣಚಿತ್ರಗಳು ಮತ್ತು ರೇಖಾಚಿತ್ರಗಳನ್ನು ಅಥವಾ ನಿಮ್ಮ ಮಗು ಮಾಡಿದ ಚಿತ್ರಗಳಿಗೆ ಫ್ರೇಮ್ ಹಾಕಿ ಗೋಡೆಗಳಲ್ಲಿ ತೂಗುಹಾಕಬಹುದು. ವರ್ಣಚಿತ್ರಗಳು ಬಿಳಿ ಅಲಂಕಾರ ಗೋಡೆಗಳಿಗೆ ಸುರಕ್ಷಿತ ಆಯ್ಕೆಯಾಗಿವೆ.

5.ದೀಪಗಳು

5.ದೀಪಗಳು

ಬಿಳಿಯ ಗೋಡೆಗಳನ್ನು ದೀಪಗಳಿಂದಲೂ ಸಹ ಅಲಂಕಾರ ಮಾಡಬಹುದು. ಗೋಡೆಗೆ ಪ್ರಕಾಶಮಾನವಾದ ನೀಲಿ, ಹಳದಿ ಅಥವಾ ಕೆಂಪು ದೀಪಗಳನ್ನು ಬೆಳಸಬಹುದು. ಹಾಗೆಯೇ, ನೀವು ಚಿಕ್ಕ ಬೆಳಕಿನ ಬಲ್ಬ್ ಗಳನ್ನು ವ್ಯವಸ್ಥಿತವಾಗಿ ಬಳಸಿ ಗೋಡೆಯನ್ನು ಇನ್ನಷ್ಟು ಅಲಂಕರಿಸಬಹುದು.

English summary

Ways to decorate white walls

White is one color which can be used anywhere in the house. White walls, white furniture and white floors can be used to give an elite and classy look
Story first published: Friday, January 10, 2014, 16:38 [IST]
X
Desktop Bottom Promotion