For Quick Alerts
ALLOW NOTIFICATIONS  
For Daily Alerts

ಮನೆಯ ಪ್ರವೇಶದ್ವಾರದ ವಾಸ್ತುವಿನ ಕುರಿತು ನಿಮಗೇನಾದರೂ ತಿಳಿದಿದೆಯೇ ?

By GuruRaj
|

ಮನೆಯ ಮುಖ್ಯದ್ವಾರ ಅಥವಾ ಹೆಬ್ಬಾಗಿಲು, ಮನೆಯೊಳಗಿನ ಮುಖ್ಯ ಚೈತನ್ಯ ವಾಹಕವಾಗಿರುತ್ತದೆ. ಮನೆಯ ಮುಖ್ಯದ್ವಾರ ಅಥವಾ ಹೆಬ್ಬಾಗಿಲಿನ ವಾಸ್ತುವಿನ ಕುರಿತು ಅರಿಯಲು ಇದನ್ನು ಓದಿರಿ.
ಮನೆಯ ಮುಖ್ಯದ್ವಾರ ಅಥವಾ ಹೆಬ್ಬಾಗಿಲು, ಮನೆಯ ಪ್ರಮುಖವಾದ ಭಾಗಗಳಲ್ಲೊoದಾಗಿದೆ. ಸುಧಾರಿತ Feng Shui & Pyravastu ತಜ್ಞರಾದ ಡಾ. ಸ್ನೇಹಾಲ್ S. ದೇಶಪಾಂಡೆಯವರು ಈ ಕುರಿತು ಮತ್ತಷ್ಟು ವಿವರಿಸುತ್ತಾರೆ.

ಮನೆಯ ಮುಖ್ಯ ಪ್ರವೇಶದ್ವಾರ ಅಥವಾ ಹೆಬ್ಬಾಗಿಲು, ಮನೆಯ ಬಾಯಿಯಿದ್ದಂತೆ. ಅವಶ್ಯಕವಾದ ಅತೀ ಮುಖ್ಯ ಚೈತನ್ಯವಾಹಿನಿಯು ಈ ಹೆಬ್ಬಾಗಿಲಿನಿoದಲೇ ಮನೆಯನ್ನು ಪ್ರವೇಶಿಸುತ್ತದೆ. ಹೆಬ್ಬಾಗಿಲಿನ ಕುರಿತು ಪಾಲಿಸಬೇಕಾದ ಮತ್ತು ಮಾಡಬಾರದ ಕೆಲವು ನಿಯಮಗಳ ಬಗ್ಗೆ ಈ ಕೆಳಗೆ ಪ್ರಸ್ತಾವಿಸಲಾಗಿದೆ.

ನೈಋತ್ಯ ದಿಕ್ಕಿನಲ್ಲಿ ಮುಖ್ಯದ್ವಾರವನ್ನು ಹೊಂದಿರುವ ಮನೆಯನ್ನು ತ್ಯಜಿಸುವುದು ಒಳಿತು. ಏಕೆಂದರೆ, ಈ ದಿಕ್ಕಿನಲ್ಲಿರುವ ಪ್ರವೇಶದ್ವಾರವು, ದುಷ್ಟಶಕ್ತಿಯ ಪ್ರವೇಶಕ್ಕೆ ಹೇತುವಾಗಿದ್ದು, ಮನೆಯೊಳಗೆ ನಿತ್ಯ ಜಗಳ ಮತ್ತು ದುರಾದೃಷ್ಟವನ್ನು ಒಳತರುತ್ತದೆ. ಸುಧಾರಿತ Feng Shui ಶಾಸ್ತ್ರದ ಪ್ರಕಾರ, ಇಂತಹ ಒಂದು ಮನೆಯಲ್ಲಿ ಸಂಪತ್ತಿನ ಸಮೃದ್ಧಿಯು ಉತ್ತಮವಾಗಿದ್ದರೂ ಕೂಡ, ಮನೆಯೊಡೆಯನು ಆರಂಭದ 3 ರಿಂದ 4 ವರ್ಷಗಳವರೆಗೆ ಮಾತ್ರವೇ ಅಭ್ಯುದಯವನ್ನು ಸಾಧಿಸಬಹುದು.

Vaastu tips for your home's main entrance

ಆದರೆ, ನಂತರದ ದಿನಗಳಲ್ಲಿ ಅತೀ ಶೀಘ್ರವೇ ಅಧೋಮುಖಿಯಾಗುತ್ತಾನೆ. ಒಂದು ವೇಳೆ ನಿಮ್ಮ ಮನೆಯು ಈಗಾಗಲೇ ನೈರುತ್ಯದಿಕ್ಕಿನಲ್ಲಿ ದ್ವಾರವನ್ನು ಹೊಂದಿದ್ದರೆ, ಬಾಗಿಲಿನ ಹೊರಭಾಗದಲ್ಲಿ, 2 ಹನುಮಂತ ದೇವರ (ಎಡಗೈಯಲ್ಲಿ ಗದೆಯನ್ನು ಹಿಡಿದಿರುವ) ಫಲಕಗಳನ್ನು (tiles) ಅಳವಡಿಸಿರಿ ಮತ್ತು ವ್ಯತ್ಯಾಸವನ್ನು ಗಮನಿಸಿರಿ. ತಜ್ಞರ ಸಲಹೆಯ ಮೇರೆಗೆ ಹಳದಿ ಕಲ್ಲು, ಭೂಸ್ಪಟಿಕಗಳು, ಸೀಸದಂತಹ ಕೆಲವು ಹರಳುಗಳು ಮತ್ತು ಲೋಹ, ಈ ದುಷ್ಟಶಕ್ತಿಯ ತೀವ್ರತೆಯನ್ನು ಮತ್ತಷ್ಟು ಕಡಿಮೆ ಮಾಡಬಲ್ಲದು. ಆದರೂ ಕೂಡ, ಸಾಧ್ಯವಾದಷ್ಟರ ಮಟ್ಟಿಗೆ ಅಂತಹ ಗೃಹಗಳನ್ನು ತ್ಯಜಿಸುವುದೇ ಒಳ್ಳೆಯದು.

ಆಗ್ನೇಯ ದಿಕ್ಕಿನತ್ತ ಮುಖಮಾಡಿರುವ ಪ್ರವೇಶದ್ವಾರವು ಅನಾರೋಗ್ಯ, ಸಿಟ್ಟು, ಮತ್ತು ಕೋರ್ಟು, ಕಛೇರಿಗಳ ವ್ಯಾಜ್ಯಗಳನ್ನು ತರುವ ಬಾಗಿಲೆಂದು ಹೇಳಲಾಗಿದೆ. ಒಂದು ವೇಳೆ ಈ ದಿಕ್ಕಿನಲ್ಲೇನಾದರೂ ಪ್ರವೇಶ ದ್ವಾರವು ಇದ್ದರೆ, ಬಾಗಿಲಿನ ಹೊರಗಡೆ ಎರಡೂ ಬದಿಗಳಲ್ಲಿ, ಗಾಯತ್ರಿ ಮಂತ್ರದ ಸ್ಟಿಕ್ಕರ್ ಗಳನ್ನು ಅಂಟಿಸಬೇಕು. ಸೂಕ್ತ ಸಲಹೆಯ ಮೇರೆಗೆ ಹವಳ, ಹಳದಿ ಕಲ್ಲು ಇತ್ಯಾದಿ ಮತ್ತು ತಾಮ್ರದಂತಹ ಹರಳುಗಳು ಮತ್ತು ಲೋಹವನ್ನು ಉಪಯೋಗಿಸುವುದರ ಮೂಲಕ ಈ ದ್ವಾರದ ದೋಷಗಳನ್ನು ಮತ್ತಷ್ಟು ತಗ್ಗಿಸಬಹುದು.

ದಕ್ಷಿಣ ದಿಕ್ಕಿನತ್ತ ಮುಖ ಮಾಡಿರುವ ಪ್ರವೇಶದ್ವಾರವು ಬಹಳ ತೀಕ್ಷ್ಣವಾದ ಚೈತನ್ಯವನ್ನು ಮನೆಯೊಳಗೆ ತರುವಂತಹದ್ದಾಗಿದ್ದು, ಇದು ಮನೆಯ ಸಕಾರಾತ್ಮಕ ಶಕ್ತಿ ಕ್ಷೇತ್ರವನ್ನು ಹದೆಗೆಡಿಸುತ್ತದೆ. ಈ ದಿಕ್ಕಿನಲ್ಲಿ ಪ್ರವೇಶದ್ವಾರವಿದೆಯೆಂದರೆ, ಅದು ಅತೀ ಚಟುವಟಿಕೆಯ ಸಾಮಾಜಿಕ ಜೀವನವೆಂದರ್ಥ. ಕೆಲವೊಮ್ಮೆ ಈ ದ್ವಾರವು ವಾದವಿವಾದಗಳನ್ನೋ ಅಥವಾ ಭಿನ್ನಾಭಿಪ್ರಾಯಗಳನ್ನೋ ಹೊತ್ತುಕೊಂಡು ಬರಬಹುದು.

ಮತ್ತೊಮ್ಮೆ, ಈಗಾಗಲೇ ಮೇಲೆ ಸೂಚಿಸಿರುವಂತೆ, ಬಾಗಿಲಿನ ಹೊರಗಡೆ, 2 ಹನುಮಂತ ದೇವರ ಫಲಕಗಳ ಅಳವಡಿಕೆಯು ಸಹಕಾರಿಯಾಗಿದೆ. ಸೀಸ, ಬೆಕ್ಕಿನ ಕಣ್ಣು ಇತ್ಯಾದಿಗಳನ್ನು ಉಪಯೋಗಿಸುವುದರ ಮೂಲಕ ಈ ದ್ವಾರದ ದುಷ್ಪರಿಣಾಮಗಳಿಂದ ಮತ್ತಷ್ಟು ರಕ್ಷಣೆಯನ್ನು ಪಡೆಯಬಹುದು. ಆದರೆ, ಒಂದು ವೇಳೆ ಈ ದಿಕ್ಕಿನಲ್ಲಿರುವ ದ್ವಾರವು 4 ನೆಯ ಪಾದದಲ್ಲಿದ್ದರೆ, ಮನೆಯ ಯಜಮಾನನಿಗೆ ಇದರಿಂದ ಬಹಳಷ್ಟು ಒಳಿತಾಗುತ್ತದೆ.

ವಾಸ್ತು ಪ್ರಕಾರ ಮನೆಗೆ ದೋಷ ತರುವ ವಸ್ತುಗಳು!

ಪಶ್ಚಿಮ ದಿಕ್ಕಿನತ್ತ ಮುಖಮಾಡಿರುವ ದ್ವಾರವೂ ಕೂಡ ತರುಣರ ಪಾಲಿಗೆ ಒಳ್ಳೆಯದೇ ಆಗಿದೆ. ಕಾರಣ, ಈ ದಿಕ್ಕಿನ ದ್ವಾರವು ಚಟುವ ಟಿಕೆಯಿಂದ ಕೂಡಿದ ಚೈತನ್ಯ ಮತ್ತು ಉತ್ಸಾಹದ ಶಕ್ತಿಯನ್ನು ಒಳತರುತ್ತದೆ. ಈ ಕಾರಣಕ್ಕಾಗಿಯೇ ಜಪಾನ್ ದೇಶದಲ್ಲಿ Geisha ಮನೆಗಳು ಯಾವಾಗಲೂ ಪಶ್ಚಿಮದತ್ತ ಮುಖಮಾಡಿರುತ್ತವೆ.

ವಾಯುವ್ಯ ದಿಕ್ಕಿನತ್ತ ಮುಖ ಮಾಡಿರುವ ದ್ವಾರವೂ ಕೂಡ ಅಷ್ಟೇನೂ ಕೆಟ್ಟದ್ದಲ್ಲ. ಇತರ ವಾಸ್ತು ನಿಯಮಗಳನ್ನು ಪಾಲಿಸಿವುದರ ಮೂಲಕ ವಾಯುವ್ಯ ದಿಕ್ಕಿನಲ್ಲಿ ಅಳವಡಿಸಲಾದ ದ್ವಾರವು ಆರೋಗ್ಯ, ಸಂಪತ್ತು, ಮತ್ತು ಅಭ್ಯುದಯವನ್ನು ತರಬಲ್ಲದು. ಇಂತಹ ಬಾಗಿಲಿಗೆ ಸಂಬಂಧಪಟ್ಟಂತೆ ಇರುವ ಒಂದು ವಿಚಾರವೇನೆಂದರೆ, ಒಂದು ವೇಳೆ ದ್ವಾರವು ಪಶ್ಚಿಮಾಭಿಮುಖವಾಗಿದ್ದರೆ, ಮನೆಯ ಯಜಮಾನನು ದೀರ್ಘಕಾಲದವರೆಗೆ ಮನೆಯಿಂದ ಹೊರಗುಳಿಯುವಂತಾಗಬಹುದು ಮತ್ತು ಒಂದು ವೇಳೆ ದ್ವಾರವು ಉತ್ತರಾಭಿಮುಖವಾಗಿದ್ದರೆ, ಗೃಹಿಣಿಯು ಸುಧೀರ್ಘಕಾಲ, ಮನೆಯಿಂದ ಹೊರಗುಳಿಯುವಂತಾಗಬಹುದು.

ಮನೆಯ ವಾಸ್ತು ದೋಷವನ್ನು ಸುಲಭವಾಗಿ ದೂರಗೊಳಿಸುವುದು ಹೇಗೆ?

ಸಾಮಾನ್ಯವಾಗಿ, ಪೂರ್ವ, ಉತ್ತರ, ಹಾಗೂ ಈಶಾನ್ಯ ದಿಕ್ಕುಗಳತ್ತ ಮುಖಮಾಡಿರುವ ಬಾಗಿಲುಗಳು, ಒಳ್ಳೆಯ ಬಾಗಿಲುಗಳೆಂದು ಪರಿಗಣಿತವಾಗಿವೆ. ಆದರೂ ಕೂಡ, ಪುನಃ ಬಾಗಿಲಿನ ಕೆತ್ತನೆಗಳು, ವಿಸ್ತೃತಿಗಳು, ಸoಪುಗಳು (ನೆಲದ ತಳಬಾಗದಲ್ಲಿರುವ ತೊಟ್ಟಿ), ಮನೆಯ Feng Shui (ಚಲನಶೀಲ ನಕ್ಷತ್ರಗಳ ಕೋಷ್ಟಕ) ಇವೇ ಮುಂತಾದ ಅನೇಕ ಅಂಶಗಳು ಮನೆಯ ಯಜಮಾನನ ಸಂಪತ್ತು ಮತ್ತು ಆರೋಗ್ಯವನ್ನು ನಿರ್ಣಯಿಸುತ್ತವೆ.

English summary

Vaastu tips for your home's main entrance

The entrance of the house brings in the main energy. Read on to find out more about the vaastu of the main entrance. he main entrance is the mouth of a house which brings in main energy and here are certain rules about the dos and don'ts regarding the door.
Story first published: Saturday, July 5, 2014, 16:32 [IST]
X
Desktop Bottom Promotion