For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ನಿಮ್ಮ ಮನೆಯ ಸ್ವಚ್ಛತೆಗೆ 6 ಸಲಹೆಗಳು

|

ಮನೆಯನ್ನೂ ಎಲ್ಲಾ ಕಾಲದಲ್ಲೂ ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯವಶ್ಯಕವಾಗಿದೆ. ನಮ್ಮ ಮನೆ ಚೆನ್ನಾಗಿ ಶುಚಿಯಾಗಿದ್ದರೆ ನಮ್ಮ ಆರೊಗ್ಯ ಕೂಡ ಉತ್ತಮವಾಗಿರುತ್ತದೆ. ಆದ್ದರಿಂದಲೇ ಮನೆ ನಿರ್ಮಿಸುವಾಗ ಅದರ ಸ್ವಚ್ಛತೆಗೂ ಗಮನ ನೀಡಲು ಸಾಧ್ಯವಾಗುವಂತಹ ಮನೆಯನ್ನು ನಿರ್ಮಾಣ ಮಾಡಬೇಕು.

ಮನೆಯನ್ನು ನಿತ್ಯವೂ ಸ್ವಚ್ಛವಾಗಿಟ್ಟುಕೊಳ್ಳಲು ಸಾಧ್ಯವಿಲ್ಲದಿದ್ದರೂ ದಿನ ಬಿಟ್ಟು ದಿನ ಮನೆಯನ್ನು ನೀಟಾಗಿಟ್ಟುಕೊಳ್ಳುವ ಯೋಜನೆಯನ್ನು ನೀವು ಹಾಕಿಕೊಳ್ಳಬೇಕು. ಅದರಲ್ಲೂ ಮಳೆಗಾಲದಲ್ಲಂತೂ ನಿಮಗೆ ಸಾಧ್ಯವಾದಷ್ಟು ಸಮಯ ನಿಮ್ಮ ಮನೆಯ ಸ್ವಚ್ಛತೆಗೆ ನೀವು ಮನಸು ಮಾಡಬೇಕು.

Tips to keep your home clean during rainy seasons

ಮಳೆಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಮನೆಯ ಸ್ವಚ್ಛತೆಯ ಮೇಲೂ ಇದು ಪರಿಣಾಮವನ್ನು ಬೀರುತ್ತದೆ. ನೆಲ ಶೀತ ಬರುವುದು, ಗೋಡೆ ಹಸಿಯಾಗುವುದು, ಜಾರುವುದು ಹೀಗೆ ಪ್ರತಿ ದಿನ ಸಮಸ್ಯೆಗಳೇ ಎದುರಾಗಿರುತ್ತದೆ. ಇನ್ನು ಮಕ್ಕಳಿದ್ದರಂತೂ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಸಾಹಸವೇ ಸರಿ.

ಆದರೂ ನೀವು ಮುಖ್ಯವಾಗಿ ಮನೆಯ ಸ್ವಚ್ಛತೆಯತ್ತ ಗಮನ ಹರಿಸುವಾಗ ತೆಗೆದುಕೊಳ್ಳಬೇಕಾದ ಕೆಲವೊಂದು ಕ್ರಮಗಳನ್ನು ಈ ಲೇಖನದಲ್ಲಿ ನಾವು ನಿಮಗಾಗಿ ತಿಳಿಸಿಕೊಡುತ್ತಿದ್ದೇವೆ. ಈ ವಿಧಾನಗಳು ನಿಮಗೆ ಸುಲಭವಾಗಿ ಮನೆಯನ್ನು ಸ್ವಚ್ಛಗೊಳಿಸುವಲ್ಲಿ ಸಹಕಾರಿಯಾಗಿದೆ ಮತ್ತು ಮನೆಯಲ್ಲಿ ಮಳೆಗಾಲದ ಸಮಯಕ್ಕೆ ಉಂಟಾಗುವಂತಹ ಗಬ್ಬುನಾತವನ್ನು ಹೊಡೆದೋಡಿಸುವಲ್ಲಿ ಕೂಡ ಸಹಕಾರಿಯಾಗಲಿದೆ. ಹಾಗಿದ್ದರೆ ಮನೆಯನ್ನು ಮಳೆಗಾಲದಲ್ಲಿ ಸ್ವಚ್ಛಗೊಳಿಸುವುದು ಹೇಗೆಂಬುದನ್ನು ತಿಳಿದುಕೊಳ್ಳೋಣ.

1. ಮನೆಯ ಟೈಲ್ಸ್ ನೆಲಕ್ಕೆ ಆದ್ಯತೆ
ನಿಮ್ಮ ಮನೆಯ ನೆಲವು ಟೈಲ್ಸ್ ಅನ್ನು ಹೊಂದಿದ್ದರೆ ಅಲ್ಲಿ ನೀರು ಬೀಳದಂತೆ ಎಚ್ಚರವಹಿಸಿ. ನೀರು ಅಥವಾ ಒದ್ದೆಯಾದ ಕೂಡಲೇ ನೆಲವನ್ನು ಒಣಗಿದ ಬಟ್ಟೆಯಿಂದ ಒರೆಸುತ್ತಿರಿ. ಇಲ್ಲದಿದ್ದಲ್ಲಿ ಜಾರುವುದು, ಗಾಯವುಂಟಾಗುವುದು ಮೊದಲಾದ ಅಪಾಯಗಳು ಉಂಟಾಗುತ್ತಿರುತ್ತವೆ.

2. ಸ್ವಚ್ಛತೆಗೆ ಬಿಸಿ ನೀರು ಬಳಸಿ
ನಿಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಿರುವಾಗ ಬಳಸುವ ನೀರು ಕೊಂಚ ಬಿಸಿಯಾಗಿರಲಿ ಮತ್ತು ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ. ಇದರಿಂದ ನಿಮ್ಮ ಮನೆಯನ್ನು ಪ್ರವೇಶಿಸುವ ವಿಷ ಜಂತುಗಳಿಗೆ ಇದು ಪ್ರತಿರೋಧಕದಂತೆ ಕೆಲಸ ಮಾಡುತ್ತದೆ.

3. ಹತ್ತಿಯ ಮ್ಯಾಟ್ ಬಳಸಿ
ಮಳೆಗಾಲದಲ್ಲಿ ನೀವು ಹತ್ತಿಯ ಮ್ಯಾಟ್ ಅನ್ನು ಕಾಲೊರೆಸಲು ಬಳಸುವುದರಿಂದ ಮನೆಯನ್ನು ಪ್ರವೇಶಿಸುವ ಅಧಿಕ ನೀರಿನ ಅಂಶ ಕಡಿಮೆಯಾಗುತ್ತದೆ. ಇದರಿಂದ ಮನೆಯಲ್ಲಿ ಅನಾವಶ್ಯಕ ಶೀತ ಉಂಟಾಗುವುದು ತಪ್ಪುತ್ತದೆ.

4. ಸೋರುತ್ತಿರುವ ಛಾವಣಿ
ಮೊದಲಿಗೆ ನಿಮ್ಮ ಮನೆಯ ಛಾವಣಿ ಸೋರುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಂಡು ಅದರ ರಿಪೇರಿಯತ್ತ ಗಮನ ನೀಡಿ. ಸೋರುತ್ತಿರುವ ಮಾಡು ಮನೆಯಲ್ಲಿ ಅಧಿಕ ನೀರಿನ ಅಂಶವನ್ನು ಉಂಟುಮಾಡಬಹುದು.

5. ಮಕ್ಕಳ ಸ್ವಚ್ಛತೆ
ನಿಮ್ಮ ಮನೆಯ ಮಕ್ಕಳ ಕಡೆಗೆ ಗಮನ ಕೊಡುವುದು ಅಗತ್ಯವಾಗಿದೆ. ಅವರು ಹೊರಗೆ ಆಟವಾಡಿ ಬಂದೊಡನೆ ಕಾಲುಗಳನ್ನು ಸೋಪು ಅಥವಾ ಡೆಟಾಲ್‌ನಿಂದ ತೊಳೆದುಕೊಳ್ಳುವಂತೆ ಅವರಿಗೆ ಸೂಚನೆ ನೀಡಿ.

6. ಬಾತ್‌ರೂಮ್ ಟಾಯ್ಲೆಟ್ ಸ್ವಚ್ಛತೆ
ನಿಮ್ಮ ಮನೆಯನ್ನು ಸ್ವಚ್ಛಗೊಳಿಸಿದಂತೆ ಬಾತ್‌ರೂಮ್ ಮತ್ತು ಟಾಯ್ಲೆಟ್ ಅನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಮುಖ್ಯವಾಗಿದೆ. ರಾಸಾಯನಿಕ ಪದಾರ್ಥಗಳನ್ನು ಬಳಸಿ ನಿಮ್ಮ ಬಚ್ಚಲು ಮನೆ ಹಾಗೂ ಶೌಚದ ಸ್ವಚ್ಛತೆಯತ್ತ ಗಮನ ನೀಡಿ.

Story first published: Saturday, June 28, 2014, 15:53 [IST]
X
Desktop Bottom Promotion