For Quick Alerts
ALLOW NOTIFICATIONS  
For Daily Alerts

ಮನೆಯ ವಾಸ್ತು ದೋಷವನ್ನು ಸುಲಭವಾಗಿ ದೂರಗೊಳಿಸುವುದು ಹೇಗೆ?

|

ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತವೆ ಹೀಗಾದ ಸಂದರ್ಭದಲ್ಲಿ ಇದಕ್ಕೆ ಪರಿಹಾರ ಸುಲಭವಾಗಿರುತ್ತದೆ ಆದರೆ ಸಮಸ್ಯೆಯ ಮೂಲವೇ ತಿಳಿಯದ ಸಂದರ್ಭದಲ್ಲಿ ಪರಿಹಾರವಾದರೂ ಹೇಗೆ ಕಂಡುಹಿಡಿಯಲು ಸಾಧ್ಯ. ಹೀಗೆ ನಿಮ್ಮ ಜೀವನದಲ್ಲೂ ಹಲವು ಬಾರಿ ಯಾವುದೇ ಸರಿಯಾದ ಕಾರಣವಿಲ್ಲದೆ ಸಮಸ್ಯೆಗಳು ಎದುರಾಗಿರಬಹುದು.

ಯಾವುದೇ ವೈದ್ಯರಲ್ಲಿ ಹೋದರೂ ಅನಾರೋಗ್ಯವೇ ಗುಣವಾಗುವುದಿಲ್ಲ, ಯಾವುದೇ ವ್ಯವಹಾರದಲ್ಲೂ ಲಾಭವಾಗುವುದಿಲ್ಲ ಹೀಗೆ ಅನೇಕ ವೇಳೆ ಏನೇ ಮಾಡಿದರೂ ನಷ್ಟವೇ ಆಗುತ್ತಿರಬಹುದು. ನಿಮ್ಮ ಪ್ರಯತ್ನದ ಹೊರತಾಗಿಯೂ ನಿಮ್ಮ ಯಶಸ್ಸಿನಲ್ಲಿ ನಿಮ್ಮ ಕೈ ಹಿಡಿಯುವ ಇನ್ನೂ ಅನೇಕ ವಿಷಯಗಳಿವೆ.

ಪ್ರಾಚೀನ ಭಾರತೀಯ ಋಷಿ-ಮುನಿಗಳು ಕಠೋರ ಪರಿಶ್ರಮದಿಂದ ವಾಸ್ತುಶಾಸ್ತ್ರದ ಸಂಶೋಧನೆ ಮಾಡಿದ್ದಾರೆ. ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡುವುದು:

ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡುವುದು:

ಮನೆಯಲ್ಲಿನ ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡಿ ಉಳಿದ ವಸ್ತುಗಳನ್ನು ಸುವ್ಯವಸ್ಥಿತವಾಗಿ ಇಡಬೇಕು.

ಮನೆಯ ಶಯನ ಗೃಹ:

ಮನೆಯ ಶಯನ ಗೃಹ:

ಮನೆಯ ಶಯನ ಗೃಹದಲ್ಲಿ ನೀರು ಅಥವಾ ಜಲಪಾತದ ಚಿತ್ರಗಳನ್ನು ಇಡಬೇಡಿ. ಇವು ನಿಮ್ಮ ಮನೆಗೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ.

ಮನೆಯ ಮಧ್ಯಭಾಗ:

ಮನೆಯ ಮಧ್ಯಭಾಗ:

ಮನೆಯ ಮಧ್ಯಭಾಗ ನಿಮ್ಮ ಮನೆಯ ಮುಖ್ಯ ಭಾಗವಾಗಿದ್ದು ಇಲ್ಲಿಂದ ಮನೆಯ ಎಲ್ಲಾ ಮುಖ್ಯ ಕೆಲಸ ಕಾರ್ಯಗಳು ನಡೆಯುತ್ತವೆ. ಇದು ಯಾವಾಗಲೂ ತೆರೆದಿರಬೇಕು ಹಾಗೂ ಅಡೆ ತಡೆ ರಹಿತವಾಗಿರಬೇಕು. ಇಲ್ಲಿ ಗೋಡೆ ಇದ್ದರೆ ಉದರ ಸಂಬಂಧಿ ಹಾಗೂ ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗಾಗಿ ಇಲ್ಲಿ ಒಂದು ಝೀರೋ ವಾಲ್ಟ್ ನ ನೀಲಿ ಬಣ್ಣದ ಒಂದು ಬಲ್ಪನ್ನು ಹಚ್ಚಿಡಿ ಹಾಗೂ ಇದು ದಿನ ಇಪ್ಪತ್ತನಾಲ್ಕು ಗಂಟೆಯೂ ಬೆಳಗುತ್ತಿರಲಿ.

ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ:

ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ:

ನಿಮ್ಮ ಮನೆಯ ಮಧ್ಯಭಾಗದಲ್ಲಿ ನಿಲ್ಲಿ ಹಾಗೂ ಕೈಯಲ್ಲಿ ಕಂಪಾಸನ್ನು ಹಿಡಿದುಕೊಳ್ಳಿ ಹಾಗೂ ನಿಮ್ಮ ಮನೆಯ ದಿಕ್ಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿಯಿರಿ. ನಿಮ್ಮ ಮನೆಯ ಮುಖ್ಯ ದ್ವಾರ ನಿಮ್ಮ ಮನೆಯ ಬಾಯಿಯಾಗಿದ್ದು ಅದು ನಿಮ್ಮ ಮನೆಗೆ ಶಕ್ತಿಯನ್ನು ತರುತ್ತದೆ. ಮನೆಯ ನೈಋತ್ಯ ಭಾಗಕ್ಕೆ ಮುಖ್ಯದ್ವಾರ ಇರುವ ಮನೆಯನ್ನು ಎಂದೂ ಆರಿಸಿಕೊಳ್ಳಬೇಡಿ. ಇದರಿಂದಾಗಿ ಮನೆಗೆ ದುಷ್ಟ ಶಕ್ತಿಗಳ ಆಗಮನವಾಗಿ ಮನೆಯಲ್ಲಿ ಅಶಾಂತಿ ಮನೆ ಮಾಡುತ್ತದೆ. ಈಗ ನೀವಿರುವ ಮನೆಯಲ್ಲಿ ಮುಖ್ಯದ್ವಾರ ನೈಋತ್ಯ ದಿಕ್ಕಿನಲ್ಲಿಯೇ ಇದೆ ಎಂದಾದರೆ ಎರಡು ಹನುಮಾನ್ ಟೈಲ್ಸ್‌ ಗಳನ್ನು ಹಾಕಿ ಹಾಗೂ ವ್ಯತ್ಯಾಸ ಗಮನಿಸಿ.

English summary

Tips to increase happiness in home

1t is a popular belief that if you keep your home and the things in it in coherence with vastu tips then prosperity and happiness will surely be there in your life.
X
Desktop Bottom Promotion