For Quick Alerts
ALLOW NOTIFICATIONS  
For Daily Alerts

ಮನೆಯನ್ನು ಮಿತವ್ಯಯದಲ್ಲಿ ಅಲಂಕರಿಸಲು ಬ್ಯಾಚುಲರ್ಸ್‌ಗೆ ಸಲಹೆಗಳು

|

ಪ್ರಸ್ತುತ ಕಾಲ ಘಟ್ಟದಲ್ಲಿ ನಮ್ಮ ಸುತ್ತಲಿನ ಅಥವಾ ನಿಮ್ಮಂತಹ ಬ್ಯಾಚುಲರ್‌ಗಳು ಓದಲು, ಕೆಲಸ ಮಾಡಲು ಅಥವಾ ಮತ್ತಿನ್ಯಾವುದಾದರು ಮಹತ್ವಾಕಾಂಕ್ಷೆಯನ್ನು ಸಾಧಿಸಲು ತಮ್ಮ ತವರೂರಿನಿಂದ ದೂರ ಮನೆ ಮಾಡುವಂತಹ ಪರಿಸ್ಥಿತಿ ಬಂದೆ ಬರುತ್ತದೆ. ವಿವಾಹವಾಗದ ಗಂಡಸರು ಸದಾ ಸಂಚಾರಿಗಳು ಮತ್ತು ಸ್ವತಂತ್ರರು ಆಗಿರಲು ಬಯಸುತ್ತಾರೆ. ಅದರಲ್ಲು ಇನ್ನೂ ವ್ಯಾಸಂಗ ಮಾಡುತ್ತಿರುವ ಬ್ಯಾಚುಲರುಗಳು ಹಣಕ್ಕಾಗಿ ತಮ್ಮ ಮನೆಯವರ ಅಥವಾ ಪೋಷಕರ ಮೇಲೆ ಅವಲಂಬಿತರಾಗಿರುತ್ತಾರೆ.

ಅದಕ್ಕಾಗಿಯೇ ಈ ಬ್ಯಾಚುಲರುಗಳು ಮನೆಯನ್ನು ಮಾಡಬೇಕಾಗಿ ಬಂದಾಗ ಒಂದು ಗುಂಪಿನ ಜೊತೆಗೆ ಹೋಗಿ ಮನೆಯನ್ನು ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಏಕೆಂದರೆ ಆಗ ಅವರ ಖರ್ಚಿನ ಭಾರವು ಸಮನಾಗಿ ಇತರರೊಂದಿಗೆ ಹಂಚಿ ಹೋಗುತ್ತದೆ. ಇಂತಹ ಮನೆಗಳನ್ನು ಮಾಡಿದಾಗ ಎಲ್ಲರೂ ಆಲೋಚಿಸುವುದು ಒಂದು ವಿಷಯವನ್ನು. ಬ್ಯಾಚುಲರುಗಳ ಮನೆಯೆಂದರೆ ಅವ್ಯವಸ್ಥೆಗಳ ಆಗರವೆಂದು, ಅವರ ಮನೆಯಲ್ಲಿ ಅಂದ ಚಂದ ಎಲ್ಲವೂ ಮಂಗ ಮಾಯವಾಗಿರುತ್ತದೆ ಎಂಬ ಆಲೋಚನೆ ಎಲ್ಲರಲ್ಲು ಮೂಡುವುದು ಸಹಜ.

ಏಕೆಂದರೆ ಈ ವಯಸ್ಸಿನ ಹುಡುಗರಲ್ಲಿ ಮನೆ ಎಂದರೆ ಮನೆ, ರೂಮ್ ಎಂದರೆ ಅದು ಬ್ಯಾಚುಲರ್ ರೂಮ್ ಹೇಗಿದ್ದರು ನಡೆದೀತು ಮತ್ತು ಹೇಗಿದ್ದರು ಚೆನ್ನ, ಅಲ್ಲದೆ ಅದು ಹಾಗೆ ಇದ್ದರೆ ಚೆನ್ನ ಎಂಬ ಅನಿಸಿಕೆಗಳು ಸಹಜವಾಗಿ ಮನೆಮಾಡಿರುತ್ತದೆ. ಆದರೆ ಅದಕ್ಕೆಲ್ಲ ಮುಖ್ಯ ಕಾರಣ ಹಣಕಾಸಿನ ತೊಂದರೆ. ಅವರಲ್ಲಿರುವ ಹಣ, ಅವರ ಖರ್ಚಿಗೆ ಸಾಕಾಗುವುದಿಲ್ಲ, ಇನ್ನು ಮನೆಯನ್ನು ಹೇಗೆ ತಾನೇ ಸಿಂಗರಿಸಲು ಸಾಧ್ಯ. ಆದರೂ ಸಹ ಮನಸ್ಸು ಮಾಡಿದರೆ ಕಡಿಮೆ ವೆಚ್ಚದಲ್ಲಿಯೇ ಇವರ ಮನೆಗಳನ್ನು ಸಿಂಗರಿಸಬಹುದು.

ಈ ಮನೆಯನ್ನು ಅಲಂಕರಿಸಲು ಮೊದಲು ಮಾಡಬೇಕಾದ ಕೆಲಸ ನಿಮ್ಮ ಮನೆಯಲ್ಲಿನ ಎಲ್ಲಾ ಅನುಪಯುಕ್ತ ವಸ್ತುಗಳನ್ನು ಮೊದಲು ಖಾಲಿ ಮಾಡಿ, ಗಲೀಜು, ಕಸ ಮುಂತಾದವುಗಳು ಇರಲೇಬಾರದು. ಆಗ ದೊರೆಯುವ ಸ್ಥಳದಲ್ಲಿ ನೀವು ನಿಮ್ಮ ಸ್ನೇಹಿತರೊಂದಿಗೆ ಕಾಲ ಕಳೆಯಲು ಬಳಸಬಹುದು. ಇಲ್ಲಿ ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೀವಿ, ಅದರ ಪ್ರಕಾರ ನಿಮ್ಮ ಬ್ಯಾಚುಲರ್ ಮನೆಯನ್ನು ಅಲಂಕರಿಸಿಕೊಳ್ಳಿ.

ಪೀಠೋಪಕರಣಗಳು

ಪೀಠೋಪಕರಣಗಳು

ಇವು ಮನೆಯಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ಅಪೇಕ್ಷಿಸುವ ವಸ್ತುಗಳಾಗಿವೆ. ಹಾಗಾಗಿ ಪೀಠೋಪಕರಣಗಳನ್ನು ಖರೀದಿಸುವಾಗ ವಿವಿದೋದ್ದೇಶಕ್ಕೆ ಬಳಕೆಯಾಗುವ ಪೀಠೋಪಕರಣಗಳನ್ನು ಖರೀದಿಸಿ. ಆಗ ಇವು ಸ್ಥಳವನ್ನು ಉಳಿಸುವುದರ ಜೊತೆಗೆ ಹೆಚ್ಚು ಹೆಚ್ಚು ಬಳಕೆಯು ಆಗುತ್ತದೆ. ನಿಮ್ಮ ಖರ್ಚು ಉಳಿಯುತ್ತದೆ.

ಸಾಫ್ಟ್ ಕಾರ್ಪೆಟ್‍ಗಳು

ಸಾಫ್ಟ್ ಕಾರ್ಪೆಟ್‍ಗಳು

ನಿಮ್ಮ ಮನೆಯ ಫ್ಲೋರಿಂಗ್ಸ್ ನೋಡಲು ಚೆನ್ನಾಗಿದ್ದರು ಒಮ್ಮೆ ನೆಲಹಾಸು ಹಾಕಲು ಪ್ರಯತ್ನಿಸಬಹುದು. ಇದರಿಂದ ನಿಮ್ಮ ಮನೆಯ ನೆಲವನ್ನು ನಿರ್ವಹಿಸುವ ಕಾಲವನ್ನು ಉಳಿಸಬಹುದು. ಸಾಫ್ಟ್ ಕಾರ್ಪೆಟ್‍ಗಳು ನೋಡಲು ಆಕರ್ಷಕವಾಗಿ ಕಾಣಿಸುವುದರ ಜೊತೆಗೆ ಬಾಳಿಕೆ ಮತ್ತು ನಿರ್ವಹಣೆಗು ಸಹಕಾರಿ. ಅದರಲ್ಲು ಬ್ಯಾಚುಲರ್ ಮನೆಯಲ್ಲಿ ಹೆಚ್ಚಿನ ಜನರು ಇದ್ದರೆ, ಕುಳಿತುಕೊಳ್ಳಲು ಇದು ಅನುಕೂಲಕರವಾಗಿರುತ್ತದೆ.

ಅಡುಗೆ ಮನೆ

ಅಡುಗೆ ಮನೆ

ಕಾರ್ಯನಿರತ ಅಥವಾ ವಿದ್ಯಾರ್ಥಿ ಬ್ಯಾಚುಲರ್ ಯಾರೇ ಆಗಿರಲಿ ಊಟ - ತಿಂಡಿಯ ಅಗತ್ಯತೆಗಳು ಎಲ್ಲರಿಗು ಇರುತ್ತವೆ. ಆದರೆ ಇಲ್ಲಿ ನಿಮ್ಮ ಮನೆಯ ರೀತಿಯಲ್ಲಿ ಎಲ್ಲಾ ಸಾಮಾನುಗಳನ್ನು ತಂದು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅದರಲ್ಲು ಬ್ಯಾಚುಲರುಗಳು ಕನಿಷ್ಠ ಅಡುಗೆ ಮಾಡಿಕೊಳ್ಳುವ ನಿಯಮಕ್ಕೆ ಅಂಟಿಕೊಂಡಿರುತ್ತಾರೆ. ಹಾಗಾಗಿ ಅನಗತ್ಯ ಪಾತ್ರೆಗಳನ್ನು ಕೊಂಡು ಕೊಳ್ಳಬೇಡಿ. ಇದರಿಂದ ದುಡ್ಡು ವ್ಯರ್ಥ, ತೊಳೆಯುವುದು ಕಷ್ಟ.

ಗೋಡೆಗಳು

ಗೋಡೆಗಳು

ಗೋಡೆಗಳಿಗೆ ಬಣ್ಣ ಬಳಿಯುವುದು ಬಜೆಟ್ ದೃಷ್ಟಿಯಿಂದ ದುಬಾರಿ, ಅದಕ್ಕಾಗಿ ನೀವು ಚಿತ್ರ ರಚಿಸುವಿರಾದರೆ ಚಿತ್ರ ಬರೆದು ಗೋಡೆಗಳಿಗೆ ತೂಗು ಹಾಕಿ. ಇಲ್ಲವಾದಲ್ಲಿ ನಿಮ್ಮ ಫೋನ್ ಅಥವಾ ಡಿಜಿಟಲ್ ಕ್ಯಾಮೆರಾದಿಂದ ಸುಂದರ ದೃಶ್ಯಗಳನ್ನು ಸೆರೆಹಿಡಿದು ಮನೆಯ ಅಲಂಕಾರಕ್ಕೆ ಬಳಸಿ. ಇದರಿಂದ ಮನೆಯ ಸೊಬಗು ಹೆಚ್ಚುತ್ತದೆ. ದುಡ್ಡು ಅಷ್ಟೇನು ಬೇಕಾಗುವುದಿಲ್ಲ.

ಸೌಂದರ್ಯಕ್ಕೆ ಆಧ್ಯತೆ ನೀಡಿ

ಸೌಂದರ್ಯಕ್ಕೆ ಆಧ್ಯತೆ ನೀಡಿ

ಮನೆಯ ಸೌಂದರ್ಯದ ಗುಟ್ಟು ಅಡಗಿರುವುದೇ ಕನಿಷ್ಠ ಪರಿಕರಗಳಲ್ಲಿ. ಈ ನಿಯಮವು ನಿಮ್ಮ ಜೇಬನ್ನು ಕಾಪಾಡುವುದರ ಜೊತೆಗೆ ಮನೆಯ ಸೊಬಗನ್ನು ಹೆಚ್ಚಿಸುತ್ತದೆ. ಹಾಗಾಗಿ ಮನೆಯಲ್ಲಿ ಕಂಡ ಕಂಡದ್ದನ್ನೆಲ್ಲ ತಂದು ತುರುಕಬೇಡಿ.

ಲೈಟಿಂಗ್

ಲೈಟಿಂಗ್

ಬ್ಯಾಚುಲರ್ ಮನೆಗಳಿಗೆ ಫ್ಯಾನ್ಸಿ ಶಾಂಡೇಲಿಯರ್ ಅಥವಾ ಲೈಟಿಂಗ್ ಮೆಟಿರಿಯಲ್‍ಗಳು ದುಬಾರಿಯಾಗುತ್ತವೆ. ಅದರ ಬದಲಿಗೆ ನೀವೆ ಕಡಿಮೆ ವೆಚ್ಚದಲ್ಲಿ ಲೈಟ್ ಶೆಡ್‍ಗಳನ್ನು ತಯಾರಿಸಬಹುದು. ಹಳೆಯ ಎಕ್ಸ್-ರೇ ಶೀಟ್ ಅಥವಾ ಬೇಕಿಂಗ್ ಶೀಟುಗಲನ್ನು ಬಳಸಿ ಈ ಶೆಡ್‍ಗಳನ್ನು ತಯಾರಿಸಿಕೊಳ್ಳಬಹುದು. ಇದರ ಬಗ್ಗೆ ಯೂ ಟ್ಯೂಬ್‍ನಲ್ಲಿ ಪ್ರಾತ್ಯಕ್ಷಿಕೆಗಳು ದೊರೆಯುತ್ತವೆ ನೋಡಿ ಕಲಿತು ತಯಾರಿಸಿಕೊಳ್ಳಿ.

X
Desktop Bottom Promotion