For Quick Alerts
ALLOW NOTIFICATIONS  
For Daily Alerts

ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಉಪಯುಕ್ತ ಸಲಹೆಗಳು!

By Arpitha Rao
|

ದೀಪಾವಳಿ ಎಂದರೆ ಕುಟುಂಬ ಮತ್ತು ಸ್ನೇಹಿತರ ಜೊತೆ ಸೇರಿ ಹಬ್ಬ ಆಚರಿಸುತ್ತೇವೆ.ಆದರೆ ಕೆಲವರು ಏಕಾಂತದಲ್ಲಿ ಜನಜಂಗುಳಿಯಿಂದ ದೂರವಿರಲು ಬಯಸುತ್ತಾರೆ. ಪ್ರವಾಸಿ ಕೇಂದ್ರಗಳಿಂದ ಮತ್ತು ಜನಜಂಗುಳಿಯಿಂದ ದೂರ ಉಳಿದರೂ ಕೂಡ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಬಹುದು. ದೀಪಾವಳಿ ಹಬ್ಬ ಆಚರಿಸಲು ಇನ್ನಷ್ಟು ಸಲಹೆಗಳು ಈ ಕೆಳಗಿವೆ.

ನಿಮ್ಮ ಮನೆಯನ್ನು ಅಲಂಕರಿಸಿ
ಎಲ್ಲಾ ಉಪಕರಣಗಳು ಮತ್ತು ಪೆಟ್ಟಿಗೆಗಳನ್ನು ತೆಗೆದು ಮನೆಯನ್ನು ಶುದ್ಧಗೊಳಿಸುವುದರ ಜೊತೆಗೆ ಅದನ್ನು ಅಲಂಕರಿಸಿ. ಹೊಸ ಗಿಡಗಳನ್ನು ನೆಡಿ. ಪರಿಮಳಯುಕ್ತ ದೀಪ ಮತ್ತು ಕ್ಯಾಂಡಲ್‌ಗಳನ್ನು ಮನೆಯ ಎಲ್ಲಾ ಕಡೆಗಳಲ್ಲಿ ಅಲಂಕರಿಸಿ.ಇದರ ಜೊತೆಗೆ ಹೂವುಗಳನ್ನೂ ಕೂಡ ಅಲಂಕಾರಕ್ಕೆ ಬಳಸಿ.

Spice up your Diwali staycation

ಮನೆಯಲ್ಲಿ ಅಡುಗೆ ತಯಾರಿಸಿ
ಇದುವರೆಗೆ ನೀವು ತಯಾರಿಸಿರದ ಅಡುಗೆಗಳನ್ನು ಮಾಡಿ ಸಂಗಾತಿ ಅಥವಾ ಇತರರೊಂದಿಗೆ ಹಂಚಿ ತಿನ್ನಿ. ಅಡುಗೆ ಮನೆಯಲ್ಲಿ ಹೊಸ ಅಡುಗೆಯನ್ನು ಮಾಡಲು ಹೊಸ ಪಾತ್ರೆಗಳನ್ನು ತಂದು ಬಳಸಿ ನೋಡಿ. ಡೈನಿಂಗ್ ಟೇಬಲ್ ಅನ್ನು ಮೇಣದಬತ್ತಿ ಮತ್ತು ಹೊಸ ಮ್ಯಾಟ್ ಬಳಸಿ ಅಲಂಕರಿಸಿ. ಇದಕ್ಕೂ ಚಂದವೆಂದರೆ ಮ್ಯಾಟ್ ತೆಗೆದುಕೊಂಡು ನೀವು ಮಾಡಿದ ಅಡುಗೆಯನ್ನು ಟೆರಾಸ್ ಅಥವಾ ಹೂತೋಟಕ್ಕೆ ತೆಗೆದುಕೊಂಡು ಹೋಗಿ ಕುಟುಂಬದವರೊಂದಿಗೆ ಕುಳಿತು ತಿನ್ನುವುದು.

ಮೇಕಪ್ ಓವರ್ ಮಾಡಿಕೊಳ್ಳಿ ದೀಪಾವಳಿ ಬಳಿಕವೂ ಮನೆ ಸ್ವಚ್ಛವಾಗಿರಲಿ
ನಿಮ್ಮ ಇಷ್ಟದ ಸೆಲೆಬ್ರಿಟಿಗಳ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ನೋಡಿ ಅವರಂತೆಯೇ ಹೇರ್ ಕಟ್ ಮಾಡಿಸಿಕೊಂಡು, ಕೂದಲಿಗೆ ಬಣ್ಣ ಹಚ್ಚಿ ಅಲಂಕರಿಸಿಕೊಳ್ಳಿ. ಸ್ಪಾ ಮತ್ತು ಮಸಾಜ್ ಮಾಡಿಸಿಕೊಂಡು ಆನಂದಿಸಿ. ಸ್ನೇಹಿತರೊಂದಿಗೆ ಸೇರಿ ಹೊಸ ಬಟ್ಟೆಗಳನ್ನು ತೆಗೆದುಕೊಳ್ಳಲು ಶಾಪಿಂಗ್‌ಗೆ ಹೋಗಿ ಇದರಿಂದ ನೀವು ದೀಪಾವಳಿ ಫೋಟೋ ತೆಗೆದುಕೊಂಡಾಗ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಬಹುದು.

ನಿಮ್ಮ ಸಿಟಿಯನ್ನು ಸುತ್ತಾಡಿ
ನಿಮ್ಮ ಕುಟುಂಬದವರೊಂದಿಗೆ ಹೊರಗೆ ಹೋಗದಿದ್ದರೇನಂತೆ? ಮೂಲೆಯಲ್ಲಿ ಬಿದ್ದ ನಿಮ್ಮ ಸೈಕಲ್ ತೆಗೆದುಕೊಂಡು ಸಿಟಿಯನ್ನು ಸುತ್ತಾಡಿ. ಟ್ರಾಫಿಕ್ ಮತ್ತು ಜನಜಂಗುಳಿಯಿಂದ ದೂರ ಹೋಗಿ ಆನಂದಿಸಿ.

ಸ್ನೇಹಿತರೊಂದಿಗೆ ಗೆಟ್ ಟುಗೆದರ್
ಸ್ನೇಹಿತರನ್ನು ಆಹ್ವಾನಿಸಿ ಗೆಟ್ ಟುಗೆದರ್ ಮಾಡಿ. ಮ್ಯೂಸಿಕ್ ಹಾಕಿಕೊಂಡು ಬೋರ್ಡ್ ಗೇಮ್ ಆಡುತ್ತಾ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ.

ಸಿನಿಮಾ ನೋಡಿ
ನೀವು ನೋಡಲು ಮಿಸ್ ಮಾಡಿಕೊಂಡಿರುವ ಸಾಕಷ್ಟು ಸಿನಿಮಾಗಳನ್ನು ಈ ಕುಟುಂಬದವರೊಂದಿಗೆ ಕುಳಿತು ನೋಡುವ ಪ್ಲಾನ್ ಮಾಡಿ. ಪಾಪ್ಕಾರ್ನ್ ,ಐಸ್ ಟೀ ಇವುಗಳನ್ನು ಮಾಡಿಟ್ಟುಕೊಂಡು ಒಂದಾದ ನಂತರ ಒಂದು ಸಿನಿಮಾ ನೋಡಬಹುದು.

ಸೃಜನಾತ್ಮಕವಾಗಿರಿ
ಆನ್‌ಲೈನ್ ವಿಡಿಯೋ ಮತ್ತು ಆರ್ಟಿಕಲ್ ಓದುವುದರ ಮೂಲಕ ಸೃಜನಾತ್ಮಕ ಕಲೆಗಳನ್ನು ನೀವೂ ಕಲಿಯಬಹುದು. ಪಾಟ್ ಪೇಂಟಿಂಗ್, ಪರಿಮಳಯುಕ್ತ ಕ್ಯಾಂಡಲ್ ಮಾಡುವುದು, ಇನ್ನಿತರ ಮನೆ ಅಲಂಕಾರ ಮಾಡುವ ವಿಧಾನಗಳನ್ನು ನೀವು ಕಲಿತುಕೊಳ್ಳಬಹುದು.

English summary

Spice up your Diwali staycation

Diwali, the festival for diyas is an occassion to come together with family and frieds. But some people opt to stay alone from crowded situations. So here's what you can do to add some more spice to your staycation:
Story first published: Tuesday, October 21, 2014, 16:27 [IST]
X
Desktop Bottom Promotion