For Quick Alerts
ALLOW NOTIFICATIONS  
For Daily Alerts

ಮನೆಯ ಅಂದ ಚಂದವನ್ನು ಹೆಚ್ಚಿಸಲು ನಮ್ಮ ಸಲಹೆಗಳು!

By Hemanth P
|

ಮನೆಯ ಅಂದ-ಚಂದವನ್ನು ಹೆಚ್ಚಿಸಲು ಬಯಸುತ್ತಿದ್ದೀರಾ? ಹಾಗಾದರೆ ಅದಕ್ಕೆ ಸಿಕ್ಕಾಪಟ್ಟೆ ಸಮಯ ಮತ್ತು ಹಣದ ಅವಶ್ಯಕತೆ ಇರಬೇಕಾಗುತ್ತದೆ ಎಂದು ಭಾವಿಸುತ್ತಿದ್ದೀರಾ? ಖಂಡಿತ ಇಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಲು ನಾವು ನಿಮಗಾಗಿ ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದೇವೆ. ಇವುಗಳನ್ನು ಪಾಲಿಸಿ ವಾರಾಂತ್ಯದಲ್ಲಿ ನಿಮ್ಮ ಕೋಣೆಗಳಿಗೆ ಹೊಚ್ಚ ಹೊಸದಾದ ಆಕರ್ಷಕ ರೂಪವನ್ನು ನೀಡಿ.

ಆರಾಮದಾಯಕ ಮನೆಗಳಿಗೆ ಐದು ಹಂತಗಳು

ಪೀಠೋಪಕರಣಗಳನ್ನು ಮರು ಸಜ್ಜುಗೊಳಿಸಿ

ಪೀಠೋಪಕರಣಗಳನ್ನು ಮರು ಸಜ್ಜುಗೊಳಿಸಿ

ಗೋಡೆಗೆ ಹೊರಗಿಕೊಂಡಿರುವ ನಿಮ್ಮ ಮನೆಯ ಪೀಠೋಪಕರಣಗಳನ್ನು ಸ್ವಲ್ಪ ಮುಂದೆ ಎಳೆಯಿರಿ. ವಿವಿಧ ಕೋನಗಳಲ್ಲಿ ಅವುಗಳನ್ನು ಜೋಡಿಸಲು ಪ್ರಯತ್ನಿಸಿ. ನಿಮ್ಮ ಮನೆಯ ಕೋಣೆಗಳ ಉದ್ದ ಅಗಲಕ್ಕೆ ತಕ್ಕಂತೆ ನಿಮ್ಮ ಮನೆಯ ಪೀಠೋಪಕರಣಗಳನ್ನು ಜೋಡಿಸುವ ಪ್ರಯೋಗವನ್ನು ಶುರು ಮಾಡಿ. ಉದ್ದಕ್ಕೆ ,ಅಡ್ಡಕ್ಕೆ ಮತ್ತು ಲಂಬಕೋನಾಕಾರವಾಗಿ ಹೀಗೆ ವಿವಿಧ ಬಗೆಯಲ್ಲಿ ಜೋಡಿಸಿ.ಒಟ್ಟಿನಲ್ಲಿ ನಿಮ್ಮ ಮನೆಯ ಅಂದವು ಹೆಚ್ಚಬೇಕು.

ಬಣ್ಣ ಹಚ್ಚಿ ಮತ್ತು ಸ್ವಚ್ಛಗೊಳಿಸಿ

ಬಣ್ಣ ಹಚ್ಚಿ ಮತ್ತು ಸ್ವಚ್ಛಗೊಳಿಸಿ

ನಿಮ್ಮ ಮನೆಯ ಒಂದು ಕೋಣೆಗೆ ಅಥವಾ ಪೂರ್ತಿ ಮನೆಗೆ ಹೊಸ ಬಣ್ಣವನ್ನು ಬಳಿಯುವುದರಿಂದ ನೀವೇ ಅಚ್ಚರಿಗೊಳಗಾಗುತ್ತೀರಿ. ಬೇಸ್ ಬೋರ್ಡ್, ಮೋಲ್ಡಿಂಗ್ ಮತ್ತು ಬಾಗಿಲುಗಳನ್ನು ಯಾವುದೇ ಕಾರಣಕ್ಕು ಮರೆಯಬೇಡಿ. ನಿಮ್ಮ ಮನೆಗೆ ಸರಿಹೊಂದುವ ಉಪಕರಣಗಳನ್ನು ನಿಮ್ಮ ಮನೆಯ ಸಮೀಪದ ಅಂಗಡಿಗಳಲ್ಲಿ ನೋಡಿ ಖರೀದಿಸಲು ಮರೆಯಬೇಡಿ.

ಗೋಡೆಗೆ ಒಂದೇ ಬಣ್ಣ ಬಳಿಯಿರಿ

ಗೋಡೆಗೆ ಒಂದೇ ಬಣ್ಣ ಬಳಿಯಿರಿ

ಯಾವುದಾದರು ಒಂದು ಪ್ರಮುಖ ಗೋಡೆಗೆ ನಿಮ್ಮ ಮೆಚ್ಚಿನ ಬಣ್ಣವನ್ನು ಬಳಿಸುವುದರಿಂದ ಅಮೋಘವಾದ ಬದಲಾವಣೆಯನ್ನು ಕಾಣಬಹುದು. ಆ ಗೋಡೆಗೆ ಆಕರ್ಷಕವಾದ ಪೇಂಟಿಂಗ್ ಅನ್ನು ನೇತು ಹಾಕಿ. ಒಂದು ಉತ್ತಮವಾದ ಪೀಠೋಪಕರಣವನ್ನು ಅಲ್ಲಿಗೆ ಸ್ಥಳಾಂತರಿಸಿ.

ಗಿಡಗಳನ್ನು ಒಳಗೆ ತನ್ನಿ

ಗಿಡಗಳನ್ನು ಒಳಗೆ ತನ್ನಿ

ಯಾವುದೇ ಕೋಣೆಯ ಮಾಲಿನ್ಯವನ್ನು ಕಳೆಯುವುದರ ಜೊತೆಗೆ ಅದರ ಕಳೆಯನ್ನು ಹೆಚ್ಚಿಸುವ ಗುಣ ಗಿಡಗಳಿಗಿದೆ. ಒಂದು ವೇಳೆ ನಿಮ್ಮ ಬಳಿ ಹಸಿರು ಗಿಡಗಳು ಇಲ್ಲದಿದ್ದಲ್ಲಿ, ರೇಷ್ಮೆಯ ಗಿಡ ಅಥವಾ ಮರಗಳನ್ನು ಬಳಸಿ. ಇವುಗಳ ಗುಣಮಟ್ಟವು ಚೆನ್ನಾಗಿರುತ್ತದೆ ಹಾಗು ಇವುಗಳು ನೈಜವಾದ ಗಿಡಗಳ ರೀತಿಯಲ್ಲಿಯೇ ಕಾಣಿಸುತ್ತವೆ. ಯಾರಿಗೂ ಇವುಗಳ ವ್ಯತ್ಯಾಸ ಗುರುತಿಸಲು ಆಗುವುದಿಲ್ಲ.

ಬಣ್ಣಗಳ ಜೊತೆ ಆಟವಾಡಿ

ಬಣ್ಣಗಳ ಜೊತೆ ಆಟವಾಡಿ

ಹೊಳೆಯುವ ಬಣ್ಣಗಳು ಮತ್ತು ಒಳ್ಳೆಯ ದೀಪಾಲಂಕಾರವು ಜೊತೆಗೂಡಿದರೆ ಸೌಂದರ್ಯ ತನ್ನಷ್ಟಕ್ಕೆ ತಾನೇ ಹುಟ್ಟಿಕೊಳ್ಳುತ್ತದೆ. ಇದು ತಕ್ಷಣ ಲವಲವಿಕೆಯನ್ನು ತಂದು ಕೊಡುವ ಗುಣವನ್ನು ಹೊಂದಿರುತ್ತದೆ.

ಬೆಳಕಿಗೆ ಆಧ್ಯತೆ ನೀಡಿ

ಬೆಳಕಿಗೆ ಆಧ್ಯತೆ ನೀಡಿ

ಆದಷ್ಟು ಸ್ವಾಭಾವಿಕ ಬೆಳಕಿಗೆ ಮನ್ನಣೆಯನ್ನು ನೀಡಿ. ಸ್ವಾಭಾವಿಕ ಬೆಳಕು ಸಹಜವಾಗಿ ಹೆಚ್ಚು ಕಡಿಮೆಗಳನ್ನು ಹೊಂದಿರುತ್ತದೆ. ಇದು ಕೋಣೆಯ ಅಂದವನ್ನು ಪ್ರಕೃತಿಯ ವಾತಾವರಣಕ್ಕೆ ತಕ್ಕಂತೆ ರೂಪಿಸುತ್ತದೆ.

ಅಲಂಕಾರ ಮಾಡಿ

ಅಲಂಕಾರ ಮಾಡಿ

ನಿಮ್ಮ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ಮೋಲ್ಡಿಂಗ್‍ಗಳು, ಫ್ಯಾಬ್ರಿಕ್‍ಗಳು, ಜೊತೆಗೆ ಪೇಟಿಂಗ್‍ಗಳಿಂದ ಅಲಂಕರಿಸಿ. ಮರ, ಸಿಂಥೆಟಿಕ್ ಅಥವಾ ಮತ್ತಿನ್ಯಾವುದಾದರು ಸರಿ ನಿಮ್ಮ ಮನೆಯ ಆವರಣಕ್ಕೆ ಸರಿಹೊಂದುವ ವಸ್ತುಗಳನ್ನು ನೀವು ನಿಮ್ಮ ಮನೆಯ ಸಮೀಪದ ಅಂಗಡಿಗಳಿಂದ ಖರೀದಿಸಿ ತಂದು ಅಲಂಕಾರ ಮಾಡಿ.

ಚಿತ್ರಗಳನ್ನು ತೂಗು ಹಾಕಿ

ಚಿತ್ರಗಳನ್ನು ತೂಗು ಹಾಕಿ

ನಿಮ್ಮ ಮನೆಯ ಗೊಡೆಗಳಿಗೆ ಸರೊಹೊಂದುವ ಚಿತ್ರಗಳನ್ನು, ಕನ್ನಡಿಗಳನ್ನು ತೂಗು ಹಾಕಿ. ಇವುಗಳು ಮನೆಯ ಸೊಬಗನ್ನು ನಿಸ್ಸಂಶಯವಾಗಿ ಹೆಚ್ಚಿಸುತ್ತದೆ.

ರತ್ನಗಂಬಳಿಗಳು

ರತ್ನಗಂಬಳಿಗಳು

ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಜಮಖಾನೆಗಳು ಮತ್ತು ರತ್ನಗಂಬಳಿಗಳು ಹಿಂದೆ ಬೀಳುವುದಿಲ್ಲ. ಟೀಪಾಯಿ ಅಥವಾ ಹಾಲ್‍ನ ಮುಖ್ಯಭಾಗದಲ್ಲಿ ಇವುಗಳನ್ನು ಹಾಸಿ. ಸೌಂದರ್ಯ ತನ್ನಷ್ಟಕ್ಕೆ ತಾನು ಬಂದು ಇದರ ಮೇಲೆ ಕುಳಿತುಕೊಳ್ಳುವುದನ್ನು ನೀವೇ ನೋಡಿ.

ನಿಮ್ಮ ಮನೆಯ ದೀಪಾಲಂಕಾರವನ್ನು ಬದಲಾಯಿಸಿ

ನಿಮ್ಮ ಮನೆಯ ದೀಪಾಲಂಕಾರವನ್ನು ಬದಲಾಯಿಸಿ

ದೀಪಗಳು ಮನೆಯ ಮೆರಗನ್ನು ಹೆಚ್ಚಿಸುವ ಸಾಧನಗಳು. ಹಳೆಯ ಮತ್ತು ಮಾಸಿದ ದೀಪಗಳನ್ನು ಬದಲಾಯಿಸಿ. ಹೊಸ ದೀಪಗಳು ಮನೆಗೆ ಹೊಸತನವನ್ನು ನೀಡುತ್ತವೆ.

ಅಲಂಕಾರಿಕ ದಿಂಬುಗಳು

ಅಲಂಕಾರಿಕ ದಿಂಬುಗಳು

ಕೋಣೆಯ ಅಲಂಕಾರವನ್ನು ಹೆಚ್ಚಿಸಲು ಅಲಂಕಾರಿಕ ದಿಂಬುಗಳು ಉತ್ತಮ ಕಾಣಿಕೆಯನ್ನು ನೀಡುತ್ತವೆ. ಸೋಪಾ ಇರಲಿ, ಕುರ್ಚಿ ಇರಲಿ ಅಥವಾ ದಿವಾನ್ ಆಗಿರಲಿ ಅದಕ್ಕೆ ಹೊಸ ಆಕರ್ಷಣೆಯನ್ನು ನೀಡಲು ಈ ದಿಂಬುಗಳು ತಮ್ಮ ಕಾಣಿಕೆಯನ್ನು ನೀಡುತ್ತವೆ.

ಕ್ಯಾಂಡಲ್ ಅಥವಾ ಕ್ಯಾಂಡಲ್ ಹೋಲ್ಡರ್‌ಗಳನ್ನು ತನ್ನಿ

ಕ್ಯಾಂಡಲ್ ಅಥವಾ ಕ್ಯಾಂಡಲ್ ಹೋಲ್ಡರ್‌ಗಳನ್ನು ತನ್ನಿ

ಮನೆಯ ಅಂದವನ್ನು ಹೆಚ್ಚಿಸಲು ಮೇಣದ ಬತ್ತಿ ಅತ್ಯಾವಶ್ಯಕ. ಅದರಲ್ಲೂ ಕ್ಯಾಂಡಲ್ ಹೋಲ್ಡರ್ ಇದ್ದರಂತೂ ಇನ್ನೂ ಚಂದ. ಆದಷ್ಟು ಎರಡು ಕ್ಯಾಂಡಲ್ ಹೋಲ್ಡರ್ ತನ್ನಿ, ಇದು ಅಂದವನ್ನು ಸಮತೋಲನದಲ್ಲಿಡಲು ಸಹಾಯವಾಗುತ್ತದೆ.

ಒಂದು ಚಿತ್ರ ಅಥವಾ ಶಿಲ್ಪವನ್ನು ಇಡಿ

ಒಂದು ಚಿತ್ರ ಅಥವಾ ಶಿಲ್ಪವನ್ನು ಇಡಿ

ಮನಸೆಳೆಯುವ ಚಿತ್ರಗಳನ್ನು ಅಥವಾ ಶಿಲ್ಪಗಳನ್ನು ಮನೆಯಲ್ಲಿ ತಂದಿರಿಸುವುದರಿಂದ ಅಲಂಕಾರವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಅಂದವನ್ನು ಹೆಚ್ಚಿಸಿಕೊಳ್ಳಬಹುದು.

English summary

Ideas for perfect home decoration

Not all home decorating ideas require a heavy investment of time and money. If you're looking for a few affordable home interior decorating ideas to freshen up a room over a weekend, Make your home distinct with these little accents:
X
Desktop Bottom Promotion