For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕರ್ಟನ್ ಬಣ್ಣಗಳನ್ನು ಆಯ್ಕೆಮಾಡುವುದು ಹೇಗೆ?

|

ಪ್ರತಿಯೊಬ್ಬರ ಮನೆಯಲ್ಲಿರುವ ಕರ್ಟನ್‍ಗಳು ಆ ಮನೆಯ ನೈಜ ಸೌಂದರ್ಯವನ್ನು ವಿವರಿಸುತ್ತವೆ. ನಿಜವಾಗಿ ಹೇಳಬೇಕೆಂದರೆ ಮನೆಯ ಸೌಂದರ್ಯವು ಅಭಿವ್ಯಕ್ತಗೊಳ್ಳುವುದೇ ಈ ಕರ್ಟನ್‍ಗಳಲ್ಲಿ. ಕಿಟಕಿ ಮತ್ತು ಬಾಗಿಲಿಗೆ ನೇತು ಹಾಕಲ್ಪಡುವ ಈ ಕಲಾತ್ಮಕ ಬಟ್ಟೆಗಳು ಮನೆಯ ಅಂದವನ್ನು ದ್ವಿಗುಣಗೊಳಿಸುತ್ತವೆ.

ಹಾಗೆಂದು ಇವು ಬರೀ ಅಂದಕ್ಕೆ ಮಾತ್ರ ಪ್ರಯೋಜನಕ್ಕೆ ಬರುವ ಬಟ್ಟೆಗಳು ಎಂದು ಭಾವಿಸಬೇಡಿ. ಚಳಿಗಾಲದ ನಡುಗಿಸುವ ಚಳಿಯ ದಿನಗಳಲ್ಲಿ ಮನೆಯನ್ನು ಬೆಚ್ಚಗಿಡುವ ಕೆಲಸವನ್ನು ಈ ಕರ್ಟನ್‍ಗಳು ಮಾಡುತ್ತವೆ.

How to Select the Curtain colors for a winter home

ಅದಕ್ಕಾಗಿ ಚಳಿಗಾಲಕ್ಕೆ ಒಪ್ಪುವ ಫ್ಯಾಬ್ರಿಕ್‍ ಕರ್ಟನ್‍ಗಳನ್ನು ಕೊಳ್ಳುವುದು ಉತ್ತಮ. ಹಾಗೆಂದು ಯಾವುದೆಂದರೆ ಆ ಬಣ್ಣದ ಕರ್ಟನ್‍ಗಳನ್ನು ಕೊಳ್ಳುವ ಮೊದಲು ಸ್ವಲ್ಪ ಯೋಚಿಸಿ, ಬಣ್ಣಗಳು ಕೇವಲ ಅಂದಕ್ಕೆ ಅಷ್ಟೇ ಅಲ್ಲ, ಅವುಗಳು ಶಕ್ತಿಯನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿರುತ್ತವೆ. ಇಲ್ಲಿ ನಾವು ನಿಮಗಾಗಿ ಚಳಿಗಾಲದಲ್ಲಿ ನಿಮ್ಮ ಮನೆಗೆ ಒಪ್ಪುವ ಕೆಲವು ಕರ್ಟನ್ ಬಣ್ಣಗಳನ್ನು ಸೂಚಿಸಿದ್ದೇವೆ, ಇಷ್ಟವಾದರೆ ತಡ ಮಾಡಬೇಡಿ!

ಮರೂನ್ ಬಣ್ಣದ ಮೆರಗನ್ನು ನೀಡಿ
ಮರೂನ್ (ಕುಂಕುಮ ಬಣ್ಣ) ಬಣ್ಣವು ನಿಮ್ಮ ಮನೆಯ ಪೀಠೋಪಕರಣಗಳಿಗೆ ನಿಸ್ಸಂಶಯವಾಗಿ ಹೊಂದಿಕೊಳ್ಳುವ ಬಣ್ಣವಾಗಿರುತ್ತದೆ. ನಿಮ್ಮ ಮನೆಯಲ್ಲಿನ ದೀಪಗಳು ಮತ್ತು ಕರ್ಟನ್‍ಗಳು ಸಹ ಹೊಂದಿಕೊಂಡು ನಿಮ್ಮ ಕೋಣೆಗಳ ಸೊಬಗನ್ನು ಹೆಚ್ಚಿಸುತ್ತವೆ. ಈ ಬಣ್ಣವು ಬೆಳಕನ್ನು ಹೀರಿಕೊಂಡು ಉಷ್ಣವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದ ಬಣ್ಣವಾಗಿರುತ್ತದೆ.

ಕಿತ್ತಳೆ
ಇದು ಚಳಿಗಾಲಕ್ಕೆಂದು ಹೇಳಿ ಮಾಡಿಸಿದ ಬಣ್ಣವಾಗಿದೆ. ಇದರಿಂದ ನಿಮ್ಮ ಮನೆಗೆ ಒಂದು ಬಗೆಯ ನ್ಯೂ ಲುಕ್ ನೀಡಿದಂತಾಗುತ್ತದೆ. ಕಿತ್ತಳೆ ಬಣ್ಣವು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಕಿತ್ತಳೆ ಬಣ್ಣಗಳು ಉಷ್ಣವನ್ನು ಹಿಡಿದಿಡುವ ಗುಣಗಳನ್ನು ಹೊಂದಿವೆ. ಮನೆಯಲ್ಲಿ ಉಂಟಾಗುವ ಅಲರ್ಜಿಯನ್ನು ತಪ್ಪಿಸಲು ಸಲಹೆಗಳು

ಕೆಂಪು ಬಣ್ಣಕ್ಕೆ ಆಧ್ಯತೆ ನೀಡಿ
ಕೆಂಪು ಬಣ್ಣದ ಕರ್ಟನ್‍ಗಳು ಯಾವಾಗಲು ಉತ್ತಮವಾದ ಮೆರಗನ್ನು ನೀಡುತ್ತಿರುತ್ತವೆ. ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದ ಬಣ್ಣವಾಗಿದ್ದು, ನಿಮಗೆ ಅಗತ್ಯವಾಗಿರುವ ಸೌಂದರ್ಯವನ್ನು ನೀಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ಕೋಣೆಗಳನ್ನು ಬೆಚ್ಚಗಿಡುವಂತಹ ಕೆಂಪು ಬಣ್ಣದ ಪರದೆಗಳನ್ನು ಖರೀದಿಸಿ.

ಮಣ್ಣಿನ ಬಣ್ಣಗಳಿಗೆ ಒತ್ತು ನೀಡಿ
ಕೆಲವು ಬಣ್ಣಗಳು ಭೂಮಿಯ ಬಣ್ಣವನ್ನು ಹೋಲುತ್ತವೆ, ಈ ಬಣ್ಣಗಳು ನಮ್ಮ ಕೋಣೆಗಳ ಸೊಬಗನ್ನು ಹೆಚ್ಚು ಮಾಡುತ್ತವೆ. ಒಂದು ವೇಳೆ ನಿಮ್ಮ ಗೋಡೆಗಳ ಬಣ್ಣವೇನಾದರು ತೆಳ್ಳಗೆ ಇದ್ದಲ್ಲಿ ಈ ಬಣ್ಣಗಳು ನಿಸ್ಸಂಶಯವಾಗಿ ನಿಮ್ಮ ಕೋಣೆಗಳಿಗೆ ಒಪ್ಪುತ್ತದೆ. ಅದರಲ್ಲೂ ನೀವು ಪ್ಲೇನ್ ಆಗಿರುವ ಬಣ್ಣಗಳ ಬದಲು ಪ್ಯಾಟ್ರನ್ ಇರುವ ಬಣ್ಣಗಳನ್ನು ಬಳಸುವುದು ಉತ್ತಮ. ಮನೆಯನ್ನು ಸಿಂಗರಿಸುವಲ್ಲಿ ಕರ್ಟನ್‍ಗಳು ವಿಶೇಷವಾದ ಪಾತ್ರವನ್ನು ನಿರ್ವಹಿಸುತ್ತವೆ. ಅದರಲ್ಲು ಚಳಿಗಾಲದಲ್ಲಿ ಇವುಗಳ ಪಾತ್ರವು ಅತ್ಯಾವಶ್ಯಕ.

ಬೋಲ್ಡ್ ಬಣ್ಣದ ಕರ್ಟನ್‍ಗಳು
ನಿಮ್ಮ ಗೋಡೆಯ ಬಣ್ಣಗಳು ಮಂಕಾಗಿದ್ದರೆ, ಬೋಲ್ಡ್ ಲುಕ್ ನೀಡುವ ಕರ್ಟನ್‍ಗಳನ್ನು ಖರೀದಿಸುವುದು ಉತ್ತಮ. ಇವು ನಿಮ್ಮ ಗೋಡೆಗಳಿಗೆ ಅಗತ್ಯವಾಗಿರುವ ಕಾಂಟ್ರಸ್ಟ್ ಅನ್ನು ನೀಡಿ ಅದರ ಸೊಬಗನ್ನು ಹೆಚ್ಚಿಸುತ್ತವೆ. ಈ ಬಣ್ಣಗಳು ಸಹ ನಿಮ್ಮ ಕೋಣೆಯನ್ನು ಬೆಚ್ಚಗಿಡಲು ಸಹಕರಿಸುತ್ತವೆ.

English summary

How to Select the Curtain colors for a winter home

If you are trying to select window treatments for your home but are unsure of where to start, there are a few pointers that will help make finding the right window curtains much easier.
Story first published: Tuesday, December 16, 2014, 16:45 [IST]
X
Desktop Bottom Promotion