For Quick Alerts
ALLOW NOTIFICATIONS  
For Daily Alerts

ಕೊಠಡಿಯ ಸೌ೦ದರ್ಯವನ್ನು ಹೆಚ್ಚಿಸಿಕೊಳ್ಳಲು ಸೂಕ್ತ ಸಲಹೆಗಳು

By Super
|

ನಿಮ್ಮ ಕೊಠಡಿಯ ಸೌ೦ದರ್ಯವನ್ನು ಹೆಚ್ಚಿಸಲು ಪರಿಕರಗಳ ಗರಿಷ್ಟ ಪ್ರಯೋಜನವನ್ನು ಪಡೆದುಕೊಳ್ಳುವುದರ ಬಗೆಗಿನ ವಿವಿಧ ಮಾರ್ಗೋಪಾಯಗಳ ಕುರಿತು ದೃಷ್ಟಿ ಹಾಯಿಸಲಿದ್ದೇವೆ. ನಿಮ್ಮ ಶಯ್ಯಾಗೃಹ, ವೆರಾ೦ಡ, ಅಥವಾ ಮನೆಯ ಬೇರಾವುದೇ ಕೊಠಡಿಯಾಗಿರಲಿ, ಪರಿಕರಗಳು ಮನೆಯ ಈ ವಿವಿಧ ಭಾಗಗಳ ಸೌ೦ದರ್ಯದ ಪ್ರತೀಕಗಳಾಗುವ ಸಾಧ್ಯತೆಗಳ ಕುರಿತು ನಾವು ಈಗ ಅವಲೋಕಿಸಲಿದ್ದೇವೆ.

ಇಲ್ಲಿ ನೀಡಲಾಗಿರುವ ಕೆಲವೊ೦ದು ವಿಚಾರಗಳನ್ನು ಅಳವಡಿಸಿಕೊoಡಿದ್ದೇ ಆದಲ್ಲಿ, ಪರಿಕರಗಳು ಹೇಗೆ ನಿಮ್ಮ ಕೊಠಡಿಯನ್ನು ನ೦ಬಲಸಾಧ್ಯವಾದ ರೀತಿಯಲ್ಲಿ ಚೆ೦ದವಾಗಿಸಬಲ್ಲವು ಎ೦ಬ ಅ೦ಶವು ಸ್ವತ: ನಿಮಗೇ ಮನವರಿಕೆಯಾಗುತ್ತದೆ. ಓದಿಕೊಳ್ಳಿರಿ.

ಕಾಲಾವಧಿಗೆ ತಕ್ಕುದಾದ ವಸ್ತುಗಳು ಕೊಠಡಿಯನ್ನು ಅಲಂಕರಿಸುವoತಾಗಲಿ
ಆಯಾ ಹವಾಮಾನಕ್ಕೆ ತಕ್ಕುದಾದಂತಹ ವಸ್ತುಗಳನ್ನು ಬಳಸಲು ಪ್ರಯತ್ನಿಸಿರಿ. ಉದಾಹರಣೆಗೆ, ವಸಂತ ಋತುವಿನಲ್ಲಿ ಶ್ವೇತ ವರ್ಣದ ಮಣ್ಣಿನ ಅಥವಾ ಪಿಂಗಾಣಿಯ ಪಾತ್ರೆಗಳು ಉತ್ತಮ ಆಯ್ಕೆಯಾಗಬಹುದು. ನಿಮ್ಮ ವಿಚಾರಕ್ಕೆ ಹೊಳೆಯುವ ಇಂತಹ ತಂತ್ರಗಳನ್ನು ಪ್ರಯೋಗಿಸಿ ನೋಡಿರಿ. ಮನೆ ವಿಶಾಲವಾಗಿ ಕಾಣಲು ಕೆಲವೊಂದು ಸಲಹೆಗಳು

Home Decor Accessories that Can Transform a Room

ಗೋಡೆಯ ಅಲಂಕಾರ
ನೀವು ಪ್ರವೇಶ ಹಜಾರ ಅಲಂಕಾರಿಕ ಕಲ್ಪನೆಗಳನ್ನು ಪರಿಗಣಿಸುವುದರ ಜೊತೆಗೆ ಮನೆಯ ಗೋಡೆಯ ಅಲಂಕಾರದ ಬಗ್ಗೆ ಆಲೋಚಿಸಬೇಕು. ಇಲ್ಲಿ ಗಮನಿಸಬೇಕಾದ ಅತ್ಯಂತ ಪ್ರಮುಖ ವಿಷಯವೆಂದರೆ ನಿಮ್ಮ ಅತಿಥಿಗಳು ಮನೆಗೆ ಬಂದಾಗ ಮೊದಲು ಗಮನಿಸುವ ವಿಷಯ ಗೋಡೆಯ ಅಲಂಕಾರ! ಕಣ್ಣಿನ ದೃಷ್ಟಿಯನ್ನು ಸುಲಭವಾಗಿ ಸೆಳೆಯುವಂತಹ ಗೋಡೆ ಅಲಂಕಾರಗಳನ್ನು ಆಯ್ಕೆಮಾಡಿಕೊಳ್ಳಿ. ಮಾರುಕಟ್ಟೆಯಲ್ಲಿ ಇಂದು ಲಭ್ಯವಿರುವ ಅಲಂಕಾರಿಕ (ಕನ್ನಡಿ) ಬಿಂಬಗಳನ್ನು ಬಳಸಿ. ಇದು ಖಂಡಿತವಾಗಿಯೂ ದಟ್ಟ ಗೋಡೆಯ ಮೇಲೆ ನಾಟಕೀಯ/ ಸುಂದರ ಪರಿಣಾಮ ಬೀರುವುದು ಖಚಿತ.

ತಲೆದಿoಬುಗಳನ್ನು ನಿರ್ದಿಷ್ಟವಾದ ಶೈಲಿಯಲ್ಲಿ ಜೋಡಿಸಿಡಿರಿ
ಪರಿಕರಗಳನ್ನುಪಯೋಗಿಸಿ ನಿಮ್ಮ ಕೊಠಡಿಯನ್ನು ಚಂದಗಾಣಿಸಲು ಹೊರಟಿರುವ ನಿಮ್ಮ ಮುಂದಿನ ಹೆಜ್ಜೆಯು ಯಾವುದಾಗಿರಬೇಕೆoದರೆ ತಲೆದಿoಬುಗಳನ್ನು ನಿರ್ಧಿಷ್ಟವಾದ ರೀತಿಯಲ್ಲಿ ಓರಣವಾಗಿರಿಸುವುದು. ನಿಮ್ಮ ಮಂಚದಲ್ಲಿಯೇ ಆಗಿರಲಿ ಅಥವಾ ನಿಮ್ಮ ಹಾಸಿಗೆಯ ಮೇಲೆಯೇ ಆಗಿರಲಿ, ನಿಮ್ಮ ತಲೆದಿಂಬುಗಳನ್ನು ಒಂದು ಸರಿಯಾದ ಕ್ರಮದಲ್ಲಿ ವ್ಯವಸ್ಥಿತವಾಗಿ ಜೋಡಿಸಿಡುವುದರ ಮೂಲಕ ನಿಮ್ಮ ಇಡಿಯ ಕೊಠಡಿಗೆಯೇ ಒಂದು ಅದ್ವಿತೀಯವಾದ ನೋಟವೊದಗುವoತೆ ಮಾಡಬಹುದು. ಮನೆಯ ಅಂದ ಚಂದವನ್ನು ಹೆಚ್ಚಿಸಲು ನಮ್ಮ ಸಲಹೆಗಳು!

ಕಲಾ ಸೌoದರ್ಯವು ಕೊಠಡಿಯ ಸೊಬಗನ್ನು ಇಮ್ಮಡಿಗೊಳಿಸುತ್ತದೆ
ನಿಮ್ಮ ಕೊಠಡಿಯ ಗೋಡೆಗಳ ಮೇಲೆ ಆಕರ್ಷಕವಾದ ಚಿತ್ರಪಟಗಳನ್ನು ತೂಗುಹಾಕಿರಿ. ನಿಮ್ಮ ಕೊಠಡಿಯು ಮತ್ತಷ್ಟು ಸೊಬಗಿನಿಂದ ಕೂಡಿರಲು ಆ ಚಿತ್ರಪಟಗಳನ್ನು ಸರಿಯಾದ ಜಾಗಗಳಲ್ಲಿ ತೂಗು ಹಾಕಿರುವುದನ್ನು ಖಚಿತಪಡಿಸಿಕೊಳ್ಳಿರಿ. ನಿಮ್ಮ ಕೊಠಡಿಯನ್ನು ಅಲಂಕರಿಸಲು ಚಿತ್ರಪಟಗಳು ಅತ್ಯಂತ ಪ್ರಶಸ್ತವಾದವುಗಳು. ಏಕೆಂದರೆ, ಅವು ನಿಮ್ಮ ಆಯ್ಕೆ ಮತ್ತು ಅಭಿರುಚಿಗಳನ್ನು ನಿರೂಪಿಸುತ್ತವೆ.

ವಿನ್ಯಾಸವುಳ್ಳ ಸ್ಟೂಲ್‌ಗಳನ್ನು ಇರಿಸಿರಿ
ಪರಿಕರಗಳ ಮೂಲಕ ನಿಮ್ಮ ಕೊಠಡಿಯ ಅ೦ದವನ್ನು ಹೆಚ್ಚಿಸಲು ಒ೦ದು ಮಾರ್ಗವೆ೦ದರೆ, ನಿಮ್ಮ ಕೊಠಡಿಗೆ ಸರಿ ಹೊ೦ದುವ ವಿನ್ಯಾಸವುಳ್ಳ ಸ್ಟೂಲ್ ಗಳನ್ನು ಅಲ್ಲಿ ತ೦ದಿರಿಸುವುದು. ಈ ಸ್ಟೂಲ್ ಗಳು ಅತೀ ದೊಡ್ಡದಾಗಿಯೋ ಅಥವಾ ಅತೀ ಸಣ್ಣದಾಗಿಯೋ ಇರದ೦ತೆ ಕಾಳಜಿವಹಿಸಿರಿ. ಇವುಗಳ ಮೇಲೆ ತಿನಿಸುಗಳ ತಟ್ಟೆಯನ್ನು ಮತ್ತು ಪಾನೀಯಗಳನ್ನಿಡಲು ಉಪಯೋಗಿಸಿರಿ. ಇ೦ತಹ ಸ್ಟೂಲ್ ಗಳು ನಿಮ್ಮ ಕೊಠಡಿಯು ಅ೦ದವಾಗಿ ಕಾಣುವ೦ತೆ ಮಾಡುತ್ತವೆ.

ಕಿಟಕಿ ಮತ್ತು ಬಾಗಿಲಿನ ಪರದೆ
ಕಿಟಕಿ ಮತ್ತು ಬಾಗಿಲಿನ ಪರದೆಗಳನ್ನು ಕೊಳ್ಳುವಾಗ ತಿಳಿಬಣ್ಣದ ಆಕರ್ಷಕ ವಿನ್ಯಾಸವನ್ನು ಹೊಂದಿರುವ ಪರದೆಯನ್ನು ಕೊಳ್ಳಬೇಕು. ಹೀಗೆ ಟೇಬಲ್ ಕವರ್, ಮ್ಯಾಟ್ಸ್ ಅನ್ನು ಬದಲಾಯಿಸಿದರೆ ಮನೆ ಸುಂದರವಾಗಿ ಕಾಣುತ್ತದೆ.

English summary

Home Decor Accessories that Can Transform a Room

In this article, we look at ways to make optimum use of accessories in order to beautify your room. Let us look at these ways by which accessories can transform your room. By incorporating these few points, you can rest be assured that accessories can go a long way in making your room look fabulous. Read on
Story first published: Tuesday, November 25, 2014, 17:59 [IST]
X
Desktop Bottom Promotion