For Quick Alerts
ALLOW NOTIFICATIONS  
For Daily Alerts

ಗಣೇಶನ ವಿಗ್ರಹವನ್ನು ಅಲಂಕರಿಸಲು ಸೃಜನಾತ್ಮಕ ಸಲಹೆಗಳು

By Viswanath S
|

ಗಣೇಶನು ಪುನರ್ಜನ್ಮ ಪಡೆದ ದಿವಸವನ್ನು ಗಣೇಶ ಚತುರ್ಥಿ ಅಥವ ವಿನಾಯಕ ಚತುರ್ಥಿಯೆಂದು ಆಚರಿಸುತ್ತಾರೆ. ಈ ಹಬ್ಬದ ಆಚರಣೆಯ ಸಮಯದಲ್ಲಿ ಗಣೇಶನು ತನ್ನ ಅಸ್ತಿತ್ವವನ್ನು ಭೂಮಿಯ ಮೇಲೆ ಉದ್ಯಾಪನೆಗೊಳ್ಳುತ್ತಾನೆಂದು ಭಕ್ತರು ನಂಬಿದ್ದಾರೆ. ಭಕ್ತರು ತಮಗೆ ವಿದ್ಯಾಬುದ್ಧಿ, ಅಭ್ಯುದಯ ಮತ್ತು ಉತ್ತಮ ಭವಿಷ್ಯವನ್ನು ಕರುಣಿಸಲೆಂದು ಪೂಜಿಸುತ್ತಾರೆ. ಹಬ್ಬದ ಆಚರಣೆಯಲ್ಲಿ ಗಣೇಶನನ್ನು ಎಲ್ಲಾ ಆಕಾರಗಳು ಮತ್ತು ಗಾತ್ರಗಳಲ್ಲಿ ಸಿಗುತ್ತವೆ ಮತ್ತು ಅವನಿಗೆ ತಮ್ಮ ಪ್ರೀತಿ ಮತ್ತು ಒಲವನ್ನು ಪ್ರದರ್ಶಿಸಲು ಅಲಂಕಾರಮಾಡುತ್ತಾರೆ.

ಹಬ್ಬದ ಆಚರಣೆಯಲ್ಲಿ ಗಣೇಶನ ವಿಗ್ರಹವನ್ನು ಅತ್ಯಂತ ಉತ್ತಮವಾಗಿ ಆಸಕ್ತಿಯಿಂದ ಅಲಂಕರಿಸುವುದು ವಾಡಿಕೆಯಾಗಿದೆ. ಗಣೇಶನ ವಿಗ್ರಹಗಳು ಅಥವ ಪ್ರತಿಮೆಗಳನ್ನು ಸಾಮಾನ್ಯವಾಗಿ ಕಂಚು, ಲೋಹ, ಮರ, ಅಮೃತಶಿಲೆ, ಗಾಜು ಮತ್ತು ಜೇಡಿಮಣ್ಣು ಇವುಗಳಿಂದ ತಯಾರಿಸುತ್ತಾರೆ. ಒಂದು ನಿಯಮದಂತೆ ಗಣೇಶನ ವಿಗ್ರಹದ ಅಲಂಕರಣದಲ್ಲಿ ಚಿನ್ನ, ಬೆಳ್ಳಿ, ತಾಮ್ರ ಇವುಗಳ ಲೇಪನಗಳೊಗೊಂಡಿರುತ್ತವೆ.

ಅನೇಕ ಭಕ್ತರು ತಮ್ಮ ತಮ್ಮ ಸೃಜನಶೀಲತೆಯ ಪ್ರಕಾರ ಅಲಂಕಾರ ಮಾಡಲು ಇಷ್ಟಪಡುತ್ತಾರೆ. ಗಣೇಶನ ವಿಗ್ರಹ ಅಥವ ಪ್ರತಿಮೆಗಳು ವಿವಿಧ ರೀತಿಯ ಆಕಾರಗಳು, ರಚನೆಗಳು ಹಾಗೂ ವಿವಿಧ ಭಂಗಿಗಳಲ್ಲಿ ಅಂದರೆ ನಿಂತಿರುವ, ಚಿಂತನೆ ಮಾಡುತ್ತಿರುವಂತೆ, ಹಿಂದೆ ಒರಗಿಕೊಂಡು ಆರಾಮಿಸುತ್ತಿರುವಂತೆ, ಇತ್ಯಾದಿ ರೂಪಗಳಲ್ಲಿ ಲಭ್ಯವಿರುತ್ತದೆ. ಗಣೇಶನ ಹಬ್ಬವನ್ನು ಶುಭ್ರಪರಿಸರದ ದೃಷ್ಟಿಯಿಂದ ಮನೆಯಲ್ಲಿ ಯಾವ ಯಾವ ರೀತಿಯಲ್ಲಿ ಅಲಂಕರಿಸಬಹುದೆಂಬುದಕ್ಕೆ ಕೆಲವು ಸಲಹೆಗಳನ್ನು ಇಲ್ಲಿ ಕೆಳಗೆ ಕೊಟ್ಟಿದ್ದೇವೆ.

ಮನೆಯಲ್ಲಿ ಗಣೇಶ ವಿಗ್ರಹ ಸ್ಥಾಪನೆಗೆ ಸೂಕ್ತ ಜಾಗ ಯಾವುದು?

ರಂಗೋಲಿ

ರಂಗೋಲಿ

ರಂಗೋಲಿ ಬಿಡಿಸುವುದು ಯಾವುದೇ ಪೂಜೆಯ ಒಂದು ಮುಖ್ಯ ಭಾಗ. ಕೋಲಂ ರಂಗೋಲಿ ಪುಡಿಯನ್ನು ಬಳಸಿ ಸುಂದರವಾದ ಮತ್ತು ಆಕರ್ಷಕ ಗಣೇಶನ ಚಿತ್ರವನ್ನು ಮಧ್ಯದಲ್ಲಿ ಬಿಡಿಸಿ ಅದರ ಸುತ್ತಲೂ ಮತ್ತೆ ಕೋಲಂ ಪುಡಿಯಿಂದ ಅಲಂಕಾರವಾಗಿ ರಂಗೋಲಿ ಬಿಡಿಸಬಹುದು. ಈ ಕೋಲಂ ಪುಡಿಯು ಸಾಮಾನ್ಯವಾಗಿ ಎಲ್ಲಾ ಹಿಂದೂ ಜನಾಂಗದವರ ಮನೆಗಳಲ್ಲಿ ಕಾಣಬಹುದು. ಹೀಗೆ ರಂಗೋಲಿ ಬಿಡಿಸುವಾಗ ಮನೆಯಲ್ಲಿರುವರೆಲ್ಲರ ಜೊತೆ ಸಂಬಂಧಬೆಳೆಸಲು ಒಳ್ಳೆಯ ಅವಕಾಶವಾಗಿರುತ್ತದೆ.

ಚಿನ್ನ ಮತ್ತು ಬೆಳ್ಳಿ ಆಭರಣಗಳು

ಚಿನ್ನ ಮತ್ತು ಬೆಳ್ಳಿ ಆಭರಣಗಳು

ಆಭರಣಗಳನ್ನು ಬಳಸಿ ಗಣೇಶನ ವಿಗ್ರಹವನ್ನು ಅಲಂಕಾರ ಮಾಡಬಹುದು ಮತ್ತು ಅವನನ್ನು ಭವ್ಯವಾಗಿ ಕಾಣುವಂತೆ ಮಾಡಬಹುದು. ಇದು ಮನೆಯಲ್ಲಿ ಗಣೇಶನ ವಿಗ್ರಹವನ್ನು ಅಲಂಕರಿಸುವ ಒಂದು ಉತ್ತಮ ಸಲಹೆ. ಹೀಗೆ ಅಲಂಕಾರ ಮಾಡಿದಲ್ಲಿ ಗಣೇಶನು ನಿಜಕ್ಕೂ ದಿವ್ಯವಾಗಿ ಕಾಣುತ್ತಾನೆ. ಗಣೇಶನು ಸಾಮಾನ್ಯವಾಗಿ ಉತ್ತಮವಾಗಿ ಅಲಂಕಾರ ಮಾಡಿಕೊಳ್ಳುತ್ತಾನೆಯೆಂದು ಒಂದು ಜನರ ಕಲ್ಪನೆ. ಹಾಗೆಯೇ ಅವನನ್ನು ಆದಷ್ಟೂ ಅತ್ಯುತ್ತಮ ಆಭರಣಗಳಿಂದ ಅಲಂಕಾರಮಾಡಿ ನಿಮ್ಮ ಕಲ್ಪನೆಯನ್ನು ಸಾದರಪಡಿಸಿಕೊಳ್ಳಿ.

ಚೆಂಡು ಮಲ್ಲಿಗೆ ಹೂಗಳು

ಚೆಂಡು ಮಲ್ಲಿಗೆ ಹೂಗಳು

ಚೆಂಡು ಹೂಗಳನ್ನು ಬಳಸಿ ಮನೆಯಲ್ಲಿ ಗಣೇಶನನ್ನು ಅಲಂಕರಿಸುವುದು ಸಲಹೆಗಳಲ್ಲಿ ಒಂದಾಗಿದೆ. ಚೆಂಡುಹೂವು, ಅದರಲ್ಲೂ ಕಿತ್ತಳೆಬಣ್ಣದ ಹೂಗಳು ಗಣೇಶನಿಗೆ ಪ್ರಿಯವೆಂದು ಹೇಳುತ್ತಾರೆ. ಆದ್ದರಿಂದ ನೀವು ಆ ಹೂಗಳಿಂದ ಹಾರವನ್ನು ಮಾಡಿ ಅವನ ಇಡೀ ಡೊಳ್ಳು ಹೊಟ್ಟೆಯು ಮುಚ್ಚುವಂತೆ ಹಾಕಿ ಅಲಂಕರಿಸಿ. ಹೀಗೆ ಮಾಡಿದಲ್ಲಿ ಗಣೇಶನು ನಿಜಕ್ಕೂ ರಾಜನಂತೆ ಕಾಣುತ್ತಾನೆ.

ಪೇಟ ಅಥವ ಕಿರೀಟ

ಪೇಟ ಅಥವ ಕಿರೀಟ

ನೀವು ಗಣೇಶನನ್ನು ಅಲಂಕರಿಸಲು ಒಂದು ಕಿರೀಟವನ್ನು ಬಳಸಬಹುದು. ಪೇಟ ಕಟ್ಟಲು ಒಂದು ಜರಿ ಅಂಚಿನ ಅಲಂಕಾರಿಕ ತುಣುಕು ಬಟ್ಟೆಯಿದ್ದರೆ ಸಾಕು. ಆದರೆ ಇದನ್ನು ಪಡೆಯಲು ಸ್ವಲ್ಪ ಕಷ್ಟವಾಗಬಹುದು. ಅವನ ತಲೆಯ ಮೇಲೆ ಒಂದು ಕಿರೀಟವನ್ನಿಟ್ಟು ಅಲಂಕರಿಸಿದರೆ ಅದರಿಂದ ಅವನ ದೃಶ್ಯ ಭವ್ಯವಾಗಿರುತ್ತದೆ. ಗಣೇಶನನ್ನು ಅಲಂಕರಿಸುವುದಕ್ಕೆ ಸಲಹೆಗಳಲ್ಲಿ ಇದೊಂದು ಸಲಹೆ.

ಪರದೆಗಳು ಮತ್ತು ಪೀಠ

ಪರದೆಗಳು ಮತ್ತು ಪೀಠ

ಗಣೇಶನು ಯಾವಾಗಲೂ ಒಂದು ಸಿಂಹಾಸನದ ಮೇಲೆ ಕುಳಿತಿರುತ್ತಾನೆಂದು ಪರಿಗಣಿಸಿರುವುದರಿಂದ ನೀವು ಅವನನ್ನು ಒಂದು ಎತ್ತರದ ಪೀಠದ ಮೇಲೆ ಕೂಡಿಸಬಹುದು. ಆತನ ಪೀಠದ ಹಿಂಭಾಗದಲ್ಲಿ ಒಂದು ಆಕರ್ಷಕ ಪರದೆ ಹಾಕಿದರೆ ಅವನ ಹಿನ್ನೆಲೆ ಮತ್ತೂ ರೋಮಾಂಚಕವಾಗಿ ಕಾಣುವ ಹಾಗೆ ಮಾಡುವುದೂ ಒಂದು ಸಲಹೆ.


English summary

Creative top Tips To Decorate Ganesha Idol For Chaturthi

The rebirth of Lord Ganesha is celebrated as Ganesh Chaturthi or Vinayaka Chaturthi. During this festival, devotees believe that Lord Ganesha bestows His presence on earth. Most people like to do the decoration themselves according to their creativity.
X
Desktop Bottom Promotion