For Quick Alerts
ALLOW NOTIFICATIONS  
For Daily Alerts

ನಿಮ್ಮ ಪ್ರೀತಿಪಾತ್ರರ ಮನಗೆಲ್ಲುವ ನವರಾತ್ರಿ ಕೊಡುಗೆಗಳು!

By Staff
|

ಹೆಚ್ಚು ಉತ್ಸಾಹದಿಂದ ನವರಾತ್ರಿಯನ್ನು ಆಚರಿಸುವುದಲ್ಲದೆ, ಈ ಹಬ್ಬದ ಸಮಯದಲ್ಲಿ ತಮ್ಮ ತಮ್ಮ ಪ್ರೀತಿಪಾತ್ರರಿಗೆ ಮೆಚ್ಚಿಸುವ ಸಲುವಾಗಿ ಉಡುಗೊರೆಗಳನ್ನು ಕೊಡುವುದಕ್ಕೆ ಇಷ್ಟಪಡುತ್ತಾರೆ. ಅಂಗಡಿಯಿಂದ ತಯಾರಾದ ಉಡುಗೊರೆಗಳನ್ನು ತರುವುದರ ಬದಲು, ನೀವೇ ಸ್ವತಃ ಕೈಯಿಂದ ನಿಮ್ಮದೇ ಆದ ವಿಶೇಷ ಉಡುಗೊರೆಗಳನ್ನು ತಯಾರಿಸಿ ನಿಮ್ಮ ಪ್ರೀತಿಪಾತ್ರರಿಗೆ ಕೊಡಬಹುದು.

2014ನೇ ವರ್ಷದ ನವರಾತ್ರಿ ಉಡುಗೊರೆಗಳಲ್ಲಿ ವರ್ಣರಂಜಿತ ಶುಭಾಶಯ ಪತ್ರಗಳು, ಮಣ್ಣಿನಿಂದ ತಯಾರಿಸಿದ ಹಣತೆಗಳು ಸೇರಿರುತ್ತವೆ. ಸೃಜನಶೀಲ ವ್ಯಕ್ತಿಗಳು ಮನೆಯಲ್ಲೇ ಸುಲಭವಾಗಿ ದೊರಕುವ ವಸ್ತುಗಳನ್ನು ಮರುಬಳಕೆ ಮಾಡಿ ಕ್ರಿಯಾಶೀಲತೆಯನ್ನು ಪ್ರದರ್ಶಿಸಬಹುದು. ಉದಾಹರಣೆಗೆ ಕೈಯಿಂದ ಮಾಡಿದ ಶುಭಾಶಯ ಪತ್ರಕ್ಕೆ ಮನೆಯಲ್ಲಿರುವ ಉಪಯೋಗಕ್ಕೆ ಬಾರದ ಬಟ್ಟೆಯನ್ನು ಬಳಸಿ ಪತ್ರಕ್ಕೆ ಮತ್ತೂ ಸುಂದರವಾಗಿ ಕಾಣುವಂತೆ ಅಲಂಕಾರಮಾಡಬಹುದು.

ಹಣತೆಗಳಿಗೆ ಬಣ್ಣಹಚ್ಚಿದ ಕಾಳುಗಳನ್ನು ಜೋಡಿಸಿ ಅಲಂಕಾರಮಾಡಬಹುದು ಮತ್ತು ಹಾಗೆಯೇ ಇನ್ನೂ ಇತರ ಉಡುಗೊರೆಗಳನ್ನು ಯೋಜಿಸಬಹುದು. ನವರಾತ್ರಿಗೆ ಹೀಗೆ ಮಾಡಿದ ಕರಕುಶಲ ಉಡುಗೊರೆಗಳು ವಿಶಿಷ್ಟವಾಗಿರುತ್ತವೆ. ನಿಮಗೆ ಅಗತ್ಯವಿರುವ ಹೆಚ್ಚು ಅಂಟು, ರಟ್ಟು ಮತ್ತು ಮರುಬಳಿಕೆಮಾಡಲಾಗುವ ವಸ್ತುಗಳು. ಇಂತಹ ವಸ್ತುಗಳನ್ನು ಒಂದು ಸೃಜನಶೀಲ ರೀತಿಯಲ್ಲಿ ಬಳಕೆ ಮಾಡಬಹುದು.
ನವರಾತ್ರಿ ಕೊಡುಗೆ ಕಲ್ಪನೆಗಳನ್ನು ಮಾಡಲು ಕೆಲವೇ ಸಲಹೆಗಳನ್ನು ನೋಡೋಣ ಬನ್ನಿ:

ದುರ್ಗಾ ಪೂಜೆಯ ಮಹತ್ವವನ್ನು ಸಾರುವ 9 ಆಚರಣೆಗಳು

Awesome Handmade Gifts For Navratri

ವರ್ಣರಂಜಿತ ಲಾಟೀನುಗಳು
ವರ್ಣರಂಜಿತ ಲಾಟೀನುಗಳನ್ನು ಆಸಕ್ತಿಯಿಂದ ಕೈಯಲ್ಲಿ ಮಾಡಿ, ನಿಮ್ಮ ಆತ್ಮೀಯರಿಗೆ ಕೊಡುವ ನವರಾತ್ರಿ ಉಡುಗೊರೆಗಳಲ್ಲಿ ಇದೂ ಕೂಡ ಒಂದಾಗಿದೆ. ಇದನ್ನು ತಯಾರಿಸಲು ನಿಮಗೆ ಬಣ್ಣದ ಕಾಗದ, ಅಂಟು, ರಟ್ಟು ಮತ್ತು ಒಂದು ರೇಖಾಚಿತ್ರಗಳ ಅಗತ್ಯವಿದೆ. ಲಾಟೀನು ತಯಾರಿಸಲು ರಟ್ಟನ್ನು ವಿವಿಧ ಆಕಾರಗಳಲ್ಲಿ ಕತ್ತರಿಸಿ. ನಿಮ್ಮ ಕ್ರಿಯಾಶೀಲತೆಯನ್ನು ಉಪಯೋಗಿಸಿ ಲಾಟೀನು ಮತ್ತೂ ಸುಂದರವಾಗಿ ಕಾಣುವಂತೆ ಅಲಂಕರಿಸಿ.

ಕುಂಕುಮ ಭರಣಿ
ಎಲ್ಲಾ ಭಾರತೀಯ ವಿವಾಹಿತ ಮಹಿಳೆಯರು ಕುಂಕುಮವನ್ನು ಬಳಸುತ್ತಾರೆ. ಆದ್ದರಿಂದ ಹೊಸದಾಗಿ ವಿವಾಹವಾದ ಮಹಿಳೆಗೆ ಒಂದು ಮಿನುಗು ಬಟ್ಟು ಹರಡಿದ ಕುಂಕುಮ ಭರಣಿಯನ್ನು ಅತ್ಯಂತ ಉತ್ತಮ ನವರಾತ್ರಿ ಉಡುಗೊರೆಯಾಗಿ ನೀಡುವುದು ಒಳ್ಳೆಯದು. ಒಂದು ಪ್ಲಾಸ್ಟಿಕ್ ಡಬ್ಬಿಯನ್ನು ತೆಗೆದುಕೊಂಡು ಅದಕ್ಕೆ ಕಾಂತಿಯುತ ಬಣ್ಣದ ನೆಲೆ ಲೇಪಿಸಿ ಅದರ ಮೇಲೆ ಮಿನುಗುವ ಬಟ್ಟುಗಳನ್ನು ಅಂಟಿಸಿದರೆ ಒಂದು ಹೊಳೆಯುತ್ತಿರುವ ಕುಂಕುಮ ಭರಣಿ ತಯಾರಾಗುತ್ತದೆ.

ಬಳೆಗಳಿಡುವ ಡಬ್ಬಿ
ಹಳೆಯ ರಟ್ಟಿನ ಪೆಟ್ಟಿಗಳನ್ನು ಬಳಸಿ ಬಳೆಗಳಿಡುವ ದಬ್ಬಿಗಳನ್ನು ಮಾಡಬಹುದು. ನೀವು ಸೆರಾಮಿಕ್ (ಪಿಂಗಾಣಿ) ಬಟ್ಟಲನ್ನು ಬಳಸಿ ಬಳೆ ಡಬ್ಬಿಯನ್ನು ನಿಮ್ಮದೇ ವಿನ್ಯಾಸದಲ್ಲಿ ಮಾಡಿ ನಿಮ್ಮ ಪತ್ನಿ ಅಥವ ನಿಮ್ಮ ಗೆಳತಿಗೆ ಉಡುಗೊರೆಯಾಗಿ ಕೊಡಬಹುದು. ಇದು ನವರಾತ್ರಿಗೆ ಒಂದು ಅತ್ಯುತ್ತಮವಾದ ಕೊಡುಗೆಗಳಲ್ಲಿ ಒಂದಾಗಿದೆ.

ಮಣ್ಣಿನ ಹಣತೆಗಳು
ಹಣತೆಗಳಿಂದ ನಿಮ್ಮ ಮನೆಯನ್ನು ಬೆಳಗಬಹುದು. ನೀವು ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ನಿಮ್ಮ ಪ್ರೀತಿಯ ಬಂಧನವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ದೀಪದ ಹಣತೆಗಳಿಂದ ಅಲಂಕರಿಸಬಹುದು. ಒಂದು ಸಾಮಾನ್ಯ ಮಣ್ಣಿನ ಹಣತೆಯನ್ನು ಕೊಂಡು ನಿಮ್ಮ ಕಲ್ಪನೆಯನ್ನು ಬಳಸಿ ಅದು ಮುದ್ದಾಗಿ ಮತ್ತು ವಿಶಿಷ್ಟವಾಗಿ ಕಾಣುವಂತೆ ಮಾಡಿ. ದೀಪಗಳನ್ನು ನಿಮ್ಮ ಸ್ನೇಹದ ಕುರುಹು, ಉಲ್ಲೇಖಗಳು ಮತ್ತು ಇತರ ಕಲ್ಪನೆಗಳಿಂದ ಅಲಂಕರಿಸಬಹುದು.

ವೈವಿಧ್ಯಮಯ ಸಂಗ್ರಹ
ವಿಭಿನ್ನ ಶೈಲಿಗಳಿಗೆ ಎಂದೂ ಕೊನೆಯಿಲ್ಲ. ಅದು ನವರಾತ್ರಿಗೆ ಕೈಯಿಂದ ಮಾಡಿದ ಅತ್ಯುತ್ತಮ ಉಡುಗೊರೆಗಳಲ್ಲೊಂದಾಗಿದೆ. ಮನೆಯಲ್ಲಿ ವೈವಿಧ್ಯಮಯ ಸಂಗ್ರಹವನ್ನು ಹೇಗೆ ಮಾಡಬಹುದೆಂಬುದನ್ನು ನೋಡೋಣ ಬನ್ನಿ:

ಹೊಸಶೈಲಿಯ ಹೂದಾನಿ
ಹಳೆಯ ಬಾಟಲಿಗಳನ್ನು ಮರುಬಳಕೆಮಾಡಿ ಸುಂದರವಾದ ಹೂದಾನಿಗಳಾಗಿ ಪರಿವರ್ತಿಸಬಹುದು. ಪ್ಲಾಸ್ಟಿಕ್ ಮತ್ತು ಗಾಜಿನ ಲೋಟಗಳನ್ನು ಮರುಬಳಕೆಮಾಡಿ ಅತ್ಯುತ್ತಮ ಕೈಕುಶಲದ ಉಡುಗೊರೆಗಳಾಗಿ 2014 ನೇ ಇಸವಿಯ ನವರಾತ್ರಿಗೆ ತಯಾರಿಸಬಹುದು. ಅದರ ತಳಕ್ಕೆ ಒಂದು ಒಳ್ಳೆಯ ನೆಲೆನೀಡಿ ನಂತರ ಪರಿವರ್ತಿಸಲು ನಿಮ್ಮ ಕುಶಲತೆಯನ್ನು ಪ್ರಯೋಗಿಸಿ. ಬಾಟಲಿನ ಮೇಲೆ ಒಂದು ಆಕರ್ಷಕ ರೇಖಾಚಿತ್ರ, ಜೊತೆಗೆ ಹೊಳೆಯುವ ಪದಾರ್ಥ ಅಥವಾ ಹೂವುಗಳ ಚಿತ್ರವಿರುವ ಪೇಪರ್ ಬಳಸಿ ಹೂದಾನಿ ಮಾಡಿದರೆ ಅದು ಒಂದು ಅತ್ಯಂತ ಸೂಕ್ತ ಉಡುಗೊರೆಯಂತೆ ಕಾಣುವುದು ಖಚಿತ.

English summary

Awesome Handmade Gifts For Navratri

Other than celebrating Navratri with much enthusiasm, people like to pamper their loved ones with gifts during this festive season. Instead of giving gifts bought from shops, you can make your own special handmade gifts for your loved ones.
X
Desktop Bottom Promotion